ಪುಟಗಳು

ಸೋಮವಾರ

ಆಯ್ಕೆ


ಅಕೆಗೆ ಆಯ್ಕೆಯೆಂದರೆ ಏನೆಂಬುದೇ ಗೊತ್ತಿರಲಿಲ್ಲ.
ಹೆಸರಿಲ್ಲದವರೂ ಇರಬಹುದೇನೋ, ಅದರೆ ಅಯ್ಕೆಯಿಲ್ಲದವರು? ಪ್ರಪಂಚ ವಿಶಾಲವಾದುದಲ್ಲ ಇದ್ದರು ಇರಬಹುದಲ್ಲಾ? ಆಂತರ್ಯ ಹೊಕ್ಕಿ ನೋಡಿದವರಾರು?
ಅಂತಹ ಅವಳು ಇಂದು ಒಂದು ಅಮೇರಿಕನ್ ಡೈಮಂಡ ನ ಕಿವಿಯೋಲೆ ಕೊಂಡಿದ್ದಳು. ಆ ಬಂಗಾರದ ಅಂಗಡಿಯಲ್ಲಿ ಅವ ಕೊಟ್ಟ ಕನ್ನಡಿ ಹಿಡಿದು ಕೈಯಲ್ಲಿ ಕಿವಿಯೋಲೆ ಹಿಡಿದು ಮತ್ತೆ ಮತ್ತೆ ಕಿವಿಗಿಟ್ಟು ನೋಡಿಕೊಳ್ಳುತ್ತಿದ್ದಳು. ಆ ಓಲೆಯ ಹರಳಿಗೆ ಸವರಿ ಮತ್ತೆ ಹಿಂದಿರುಗಿದ್ದ ಆ ಬೆಳ್ಳನೆಯ ಬೆಳಕಿಂದ ಆಕೆಯ ಕಣ್ಣು ಹೊಳೆವ ವಜ್ರವಾಗಿತ್ತು ಎಂದರೆ ಅತಿಶಯೋಕ್ತಿಯೇನಿಲ್ಲ.

ಮನೆ ದೊಡ್ಡದಿತ್ತು, ಮನೆ ತುಂಬ ಜನರಿದ್ದರು, ಉಡಲಿಕ್ಕೆ, ಉಣ್ಣಲಿಕ್ಕೆ ಬೇಕಿದ್ದದೆಲ್ಲ ಅಲ್ಲಿತ್ತು.ಆದರೆ ಅಲ್ಯಾರಿಗೂ ದೊಡ್ಡ ಮನಸಿರಲಿಲ್ಲ.ಮಾತಡಲಿಕ್ಕೆ ಜನರಿರಲಿಲ್ಲ.ಹೊಟ್ಟೆತುಂಬ ಉಂಡಿರಲಿಲ್ಲ ಆಕೆ, ಮೆತ್ತನೆಯ ಹಾಸಿಗೆಯಮೇಲೆ ತಲೆ ಇಟ್ಟರು ಕಣ್ತುಂಬ ನಿದ್ದೆ ಇರಲಿಲ್ಲ. ಆಕೆಗೆ ಎಲ್ಲದಕ್ಕೂ ತಲೆ ಆಡಿಸಿ ಗೊತ್ತಿತ್ತೇ ವಿನಃ, ತಲೆ ಎತ್ತಿ ನಡೆದು ಗೊತ್ತೇ ಇರಲಿಲ್ಲ

ಆಕೆ ಇಂದು ಕುಶಿಯಿಂದ ಇದ್ದಾಳೆ, ಬಾಯಿತುಂಬ ನಗುತ್ತಿದ್ದಾಳೆ ಮನಸಿಂದ..

ಕಾಮೆಂಟ್‌ಗಳಿಲ್ಲ: