ಮಾತ್ ಮಾತಲ್ಲಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮಾತ್ ಮಾತಲ್ಲಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ

ಪರಿಮಳವೆಂದರೇ ವಾಸನೆ ಇಲ್ಲದ್ದು..!

ಪರಿಮಳವೆಂದರೆ ವಾಸನೆ ಇಲ್ಲದ್ದ ? ಹಾಂಗಂದರೆ ಉತ್ಪ್ರೇಕ್ಷೆ ಏನಿಲ್ಲವಲ್ಲ?ಏಕೆಂದರೆ ಪರಿಮಳೆವೆಂದರೆ ಹಿಗ್ಗುವ ಮೂಗಿನ ಹೊಳ್ಳೆ ,ವಾಸನೆ ಎಂದರೆ ಸಾರಾಸಗಟಾಗಿ ಬೇಡವೇ ಬೇಡ ಎಂದು ತಿರಸ್ಕರಿಸುವದು ಸುಳ್ಳಲ್ಲ... ಅಲ್ಲವ?
ಜಾಜಿ ಮಲ್ಲಿಗೆಯ ಕಂಪು ಇದು ,ಕೆಂಡ ಸಂಪಿಗೆಯ ಕಂಪು ಇದು ,ನೆಹ್ರು ಗುಲಾಬಿ ಇದು,ಇದು ಕೇದಿಗೆಯದೇ ಪರಿಮಳ ,ಕಣ್ಣು ಕಟ್ಟಿದರೂ ಸಲೀಸಾಗಿ ಹೇಳಿಬಿಡಬಹುದಲ್ಲ? ಮೂಗಿನ ಹತ್ತಿರ ಶ್ರೀ ಗಂಧದ ತುಂಡು ಹಿಡಿದು. ಇದು ಸಾಗುವಾನಿ ಎಂದೋ,ಬೀಟೆಯದೆಂದೋ ಹೇಳಿದರೆ ಸುಮ್ಮನೇ ಬಿಟ್ಟೀತೆ ನಿಮ್ಮ ಮೂಗು ?ನನಗೆ ಪರಿಮಳ ಪರಿಚಿತವೆನ್ನುತ್ತೆ...ಅಲ್ಲವ? ಪರಿಮಳ ವನ್ನು ಡಿಫೈನ್ ಮಾಡಬಹುದು,ಹಲವು ರೀತಿಯಲ್ಲಿ ವ್ಯಾಖ್ಯಾನಿಸಬಹುದು ,,, ಪರಿಮಳಕ್ಕೆ ಸುಗಂಧ ,ಸುವಾಸನೆ, ಕಂಪು ಎನ್ನುತ್ತದಲ್ಲ ಸಂಸ್ಕೃತ ,ಕನ್ನಡ ಭಾಷೆಗಳು ...! ಸು ಎಂದರೆ ಒಳ್ಳೆಯ,ಶುಭ,ಎಂದೆಲ್ಲ ಅರ್ಥವಿದೆ ಸಂಸ್ಕೃತದಲ್ಲಿ. ಆದರೆ ನನಗೆ ಈಗಲೇ ತೋರಿಸು ಪರಿಮಳವನ್ನ ಎಂದರೆ? ಪರಿಮಳವನ್ನ ತೋರಿಸೋಕಂತು ಆಗೋಲ್ಲ..(ಪರಿಚಿತರಲ್ಲೆಲ್ಲಾದರೂ ಪರಿಮಳ ಎನ್ನುವವರಿದ್ದರೆ ಅದು ಬೇರೆಯ ಪ್ರಶ್ನೆ!)ಅನುಭವಿಸಿಯೇ ಅರಿಯಬೇಕು ...

ಪಂಚೇಂದ್ರಿಯಗಳಾದ ,ಮೂಗು,ನಾಲಿಗೆ,ಕಣ್ಣು ,ಕಿವಿ, ಚರ್ಮ ಗಳ ನಡುವೆ ಒಂದು ಸಾರೇ ಶೀತಲ ಕಲಹವಾಯಿತಂತೆ, ಎಲ್ಲವಕ್ಕೂ ತಾನು ಮೇಲೆಂಬುದನ್ನು ತೋರ್ಪಡಿಸುವ ಹಮ್ಮು. ತೀರ್ಪುಗಾರರು ನಾರದ ಮುನಿ. ಯಾರು ವಿಜಯೀ ಆದರು ಎಂಬುದನ್ನ ಇಲ್ಲಿ ಪ್ರಸ್ತಾಪಿಸುವ ಅಗತ್ಯ ಇಲ್ಲ. ಆದರೆ ಆ ಸ್ಪರ್ಧೆಯಿಂದ ಅವು ಕಲಿತ ಪಾಠ ಮಾತ್ರ ಶ್ಲಾಘನೀಯ.. ಸ್ಪರ್ಧೆ ಮುಗಿದ ನಂತರ ಒಂದೊಂದು ಇಂದ್ರೀಯವೂ ಮುಖ್ಯವಾದುದು ಎಂಬುದು ನಾರದ ಮುನಿಗಳ ತೀರ್ಪಾಗಿತ್ತು..!
ಆದ್ದರಿಂದ ನಮ್ಮ ಪರಿಮಳ ವನ್ನ ಆಸ್ವಾದಿಸುವ ಮೂಗು ತನಗೆ ಸಿಕ್ಕ ಪ್ರಾಮುಖ್ಯತೆ ಇಂದ ಚೂರು ಕುರುಬಿದ್ದು ಸುಳ್ಳಲ್ಲ... ಎಷ್ಟೆಲ್ಲಾ ಉಪಮೆಗಳಿದ್ದಾವೆ ಪರಿಮಳವನ್ನ ಉದಾಹರಿಸಿ ..ಒಂದು ನನ್ನ ನೆನಪಿಗೆ ಬಂದಿದ್ದು ‘ಕತ್ತೆ ಬಲ್ಲುದೇ ಕಸ್ತೂರಿ ವಾಸನೆ’ ಎಂಬ ನುಡಿ .ಕೆಲವೊಂದು ಸಾರೇ ಪೂರ್ವಾಗ್ರಹ  ಪೀಡಿತರಾಗಿ ತಮ್ಮ ಮನಸಿಗೆ ತೋಚಿದ್ದನ್ನ ಬರೆಯುವವರಿಗೆ,ನುಡಿಯುವವರಿಗೆ,ವಸ್ತು ಒಂದರ ಪ್ರಾಮುಖ್ಯತೆ ಅರಿಯಲು ಶಕ್ತನಲ್ಲದವಗೆ ಈ ಉಪಮೆ ಉತ್ತಮ ಬಲಕೊಡುತ್ತದೆ..

ಪರಿಮಳ ಬೀರುವ ಕುಸುಮಗಳು ,ಮನಕ್ಕೆ ತಂಪನ್ನೀಯುವದಷ್ಟೆ ಅಲ್ಲ ಆರೋಗ್ಯವನ್ನು ಸುಧಾರಿಸುತ್ತದಲ್ಲ...?ಅದಕ್ಕೆಂದೇ ಪರಿಮಳ ಚಿಕಿತ್ಸೆ ಇದೆಯಲ್ಲಾ... ಅಂದಿನ ರಾಜರ ಕಾಲದಲ್ಲಿ ರಾಜ-ರಾಣಿಯರ ಸ್ನಾನದ ಕೊಳಗಳಿಗೆ ,ಮಲ್ಲಿಗೆ ,ಸಂಪಿಗೆ,ಜಾಜಿ,ಸುಗಂಧರಾಜಗಳಂತ ಪರಿಮಳ ಭರಿತ ಹೂಗಳನ್ನ ಹಾಕುತ್ತಿದ್ದರಂತೆ ,ದೇಹಕ್ಕಾದ ದಣಿವು ನಿವಾರಿಸಿ ,ಮನಕ್ಕೆ ಚೈತನ್ಯ ತುಂಬುವ ಶಕ್ತಿ ಇದೆ ಎಂಬುದು ಅವರ ಉದ್ದೇಶ . ದೇವರನ್ನ ನೆನೆಯುವ ಮನ ತಂಪಾಗಿರಲಿ ಎಂದು ಹಚ್ಚುವ ಆಗರ ಬತ್ತಿ,ಪೂಜಿಸಿದ ಮನ ಸದಾ ಸಂತಸದಿಂದ ಇರಲೆಂದು ಸೇವಿಸುವ ಪಚ್ಚಕರ್ಪೂರವನ್ನು ಹಾಕಿದ ತುಳಸಿಯ ತೀರ್ಥ. ಒಂದೆರಡು ದಿನ ಸ್ನಾನ  ಮಾಡದೇ ಇದ್ದರೂ ನಡೆದೀತೆಂದು ಉಪ್ಯೋಗಿಸುವ ಅತ್ತರು,ಪರ್ಫ್ಯೂಮ್ ,ಡಿಯೊ,....ಎಲ್ಲ ಪರಿಮಳದ ಉತ್ಪನ್ನಗಳೇ, ಎಲ್ಲವನು ವಿಷ್ವಲೈಸ್ (visualize ) ಮಾಡುವ ಇಂದಿನ ಯುಗದಲ್ಲಿ ಪರಿಮಳ ವೆಂದರೆ ರೆಕ್ಸೋನ,ಚಾರ್ಲಿ,ಎಂಬೆಲ್ಲಾ ತರಾವರಿ ಪರಿಮಳಗಳು , ವಾಸನೆ ಎಂದರೆ ಗಬ್ಬೆದ್ದು ನಾರುವ ಚರಂಡಿ ನೆನಪಿಗೆ ಬರುತ್ತಾವಲ್ಲ... ಯಾರಿಗಾದರೂ ಮಹಾಭಾರತದ ಯೋಜನಗಂಧಿ ನೆನಪಿಗೆ ಬರುತಾಳ? ಬಂದಿದ್ದರೆ, ನಿಜವಾಗ್ಲೂ ಗ್ರೇಟು ಕಣ್ರೀ ನೀವು .... ದುಡ್ಡಿಗೋ,ಒಡವೆಗೂ,ರಾಜ್ಯಕ್ಕೋ,ಹೆಣ್ಣಿಗೋ,ಹೊಟ್ಟೆಗೆಂದೋ ,ಯುದ್ದಗಳಾಗಿವೆ , ರಕ್ತಪಾತಗಳು ಆಗುತ್ತಲೇ ಇವೆ...,ಆದರೆ ಪರಿಮಳಕ್ಕಾಗಿ ಆಗಿಯೇ ಇಲ್ಲ ಎಂದು ನನ್ನೆಲ್ಲ ತಿಳುವಳಿಕೆಯನ್ನ ಒಟ್ಟಿಗಿತ್ತು ಹೇಳುತ್ತೇನೆ.. ಹಾಂ ವಾಸನೆಯಿಂದ ಆಗಿವೆ ಗೊತ್ತಲ್ಲ, ಕಾರ್ಬನ್ ಡೈಯಾಕ್ಸೈಡ್,ಕ್ಲೋರೋಫಾರ್ಮ್ ,ಸೈಯನೈಡ್ ಎಲ್ಲ ಬದಿಗಿಡಿ, ಪ್ರಾಣವನ್ನೇ ಕಿತ್ತಿದ್ದಾವೆ..

ಈಗ್ಲಾದ್ರೂ ಒಪ್ಕೋ ತೀರಾ? ಪರಿಮಳವೆಂದರೆ ವಾಸನೆ ಇಲ್ಲದ್ದು, ವಾಸನೆ ಅಲ್ಲದ್ದು…..ಪೋಲೀಸ್ ರ ನಾಯಿಯನ್ನ ಬಿಟ್ಟೇಬಿಟ್ಟಿದ್ದೆ..ಅದಕ್ಕೆ ಪರಿಮಳ ವಾಸನೆ ಎರಡೂ ಒಂದೇ! ಬಿಟ್ಟುಬಿಡಿ ಅದರಪಾಡಿಗದನ್ನ !!

ಸೋಮವಾರ

ನಾವು ಎಲ್ಲೋ ಕಳೆದು ಹೋಗ್ತೀವ?


When finally ,we reached the place,

We hardly knew why we were there

The trip had darkened every face..


'ಅಂತೂ ಇಂತೂ ನಮ್ಮ ಗುರಿ ತಲುಪಿದಾಗ,ನಮ್ಮ ಪ್ರಾಜೆಕ್ಟ್ ,ಯೋಜನೆ ಅಂತಹ ಮಹತ್ತರವಾದುದನ್ನೇನು ಸಾಧಿಸಿಲ್ಲ ಎಂಬುದು ಅರಿವಿಗೆ ಬಂದು ಎಲ್ಲರ ಮುಖ ಕಳೆಗುಂದಿರುತ್ತದೆ '.

ಹೀಗೂ ಆಗುತ್ತದಲ್ಲ? ಏನೇನೋ ಪ್ಲಾನು ,ಏನೇನೋ ಉಪಾಯಗಳು ,....ಜೀವನದಲ್ಲಿ ಬೊಗಸೇ ತುಂಬಾ ಕತೆಗಳು ,ವಿಪರೀತ ಎನ್ನುವಸ್ಟು ಮಾತುಗಳು ,ಅಣ್ಣ, ತಮ್ಮ ,ಅಮ್ಮ ಅಪ್ಪನೆಂಬ ಹಲವಾರು ಸಂಬಂಧಗಳು , ನಾನೆಂಬ ಮಾಯೆ,ನಿನ್ನೆಯೆಂಬ ಕನಸು ,ನಾಳೆ ಎಂಬ ಸಚಿತ್ರ ,ನನ್ನದೆಂಬ ಮೋಹ, ಇದು ನನ್ನದಾಗಬೇಕು,ಈಸಾರೇ ಇಷ್ಟೇ % ಮೋಸಮಾಡಬೇಕು ಎಂಬ ದೊಡ್ಡವರ (!?)ವ್ಯವಹಾರಿಕ ನಿಯತ್ತು . ಇಂತಃ ಎಲ್ಲವುಗಳ ಮಧ್ಯ ಬದುಕುತ್ತಾ, ನಲಿಯುತ್ತಾ, (ನಮ್ಮ ಕರ್ಮಕ್ಕೆ ಕೆಲವೊಂದು ಸಾರೇ ಅದನ್ನು ಒಗ್ಗಿಸಿಕೊಳ್ಳುತ್ತ ) ? ಬ್ಲೋಗೆ ಗೆ ಒಂದು ಹೊಸ ಫೋಟೋ ಹಾಕ್ತಾ  (ಪ್ರೊಫೈಲ್ ಗೆ ಒಂದು ಫೋಟೋ ಹಾಕುವದು ನೀವು ಬದುಕಿದ್ದೀರಿ ಎಂಬುದಕ್ಕೆ ಒಂದು ಪ್ರೂಫ್ , ಬ್ಲೋಗ್ ನಂತಹ ಸೋಶಿಯಲ್ ನೆಟ್‌ವರ್ಕಿಂಗ್ ಟೂಲ್ ಗೆ ಮಾತ್ರ ಇದು ಅಪ್ಲಿಕಬಲ್, ಕಾರಣ ಏನಪ್ಪಾ ಅಂದ್ರೆ ಬ್ಲೋಗ್ ಒಂದು ಸೋಶಿಯಲ್ ನೆಟ್ವರ್ಕಿಂಗ್ ಟೂಲ್ ಆಗಿರೋದಕ್ಕೆ ಬ್ಲೋಗ್ ಬರೆಯೋರು ಎಲ್ಲರ ಮುಖವನ್ನ ನೋಡಿರೋದಿಲ್ಲ ,ನಿಜವಾದವರ ,ಇಲ್ಲವ ಎನ್ನುವ ಬಗ್ಗೆ ಒಂದು ಚಿಕ್ಕ ಕ್ಲೂ ಸಿಗಬಹುದು . Cyber ಕ್ರೈಮ್ ನ ತಡೆಗಟ್ಟುವಲ್ಲಿ ಕೊಂಚ ಉಪಯುಕ್ತ ಅಲ್ವಾ?  ಬಾಯೀ ತುಂಬಾ ನಕ್ಕು, ನಿನ್ನ ಯೋಗ್ಯತೆ ಇಷ್ಟೇ ಎಂದು ಹೇಳಿ ಬೈ ಎಂದರೆ .. ನಮಗಾಗಿ ಕಾಯೋಕೆ ನಮ್ಮ ಗುರಿ ಇದೆಯಲ್ಲಾ..we should reach our Aim alva? Han . ಹಾಂ Aim ಅನ್ನೋದಕ್ಕಿಂತ The Ultimate ಎನ್ನುವ ಶಬ್ಧ ಬಹಳ ಸೂಕ್ತ ಎನ್ನಿಸುತ್ತೆ The ultimate is nothing but Fact,Truth,Reality..! ನಾನೇನು ಮುಕ್ತಿಯ ಬಗ್ಗೆ ಮಾತನಾಡುತ್ತಿಲ್ಲ.. ಸತ್ಯ,ವಾಸ್ತವದ ಬಗ್ಗೆ ..ಸತ್ಯ ,ಮಿಥ್ಯ ಎಲ್ಲವೂ ಯಾರು ಹೇಳ್ತಾರೆ ಎನ್ನುವದರ ಮೇಲೆ ಮೇಲೆ ಡಿಪೆಂಡ್ ಆಗಿರುತ್ತೆ............ ಇವೆಲ್ಲವನ್ನ ಮೀರಿ ಬೆಳೆಯೋ ಹೊತ್ತಿಗೆ ನಾವು ಎಲ್ಲೋ ಕಳೆದು ಹೋಗ್ತೀವ?.......... ಮಾಡೋ ಕೆಲಸಾನ enjoy ಮಾಡಬೇಕು ,ಇಲ್ಲಾಂದ್ರೆ ಇಷ್ಟ ಇಲ್ದೇ ಇರೋದನ್ನ ಆನಂದಿಸುವ ಅಥ್ವಾ ಹಾಗಂತ ನಟಿಸುವ ಭರದಲ್ಲಿ –‘ಲೇ ,ನೀನ್ಯಾಕೆ ಹಿಂಗಾದೆ ? ‘ ಅಂತ ನಮ್ಮನ್ನ ನಾವು ಕೇಳುವ stage ಬರುತ್ತದಾ? ನಿಮಗೂ ಹೀಗೆ ಫೀಲ್ ಆಗಿರಬೇಕಲ್ಲ? ನಮ್ಮನ್ನ ನಾವು Prepare ಮಾಡೋ ಅಗತ್ಯ ಇದೆ..

ಮೇಲಿನ ಪದ್ಯದ ಸಾಲುಗಳನ್ನ Nissim Ezekiel ಎಂಬ ‘finest’ Anglo- Indian ಕವಿಯ Enterprise ಎಂಬ ಪದ್ಯದಿಂದ ಆಯ್ದಿದ್ದೇನೆ.. Do you Prepare for realities? ಯಾವುದೇ ಪ್ರಾಜೆಕ್ಟ್ ನ್ನ ಶುರು ಮಾಡುವ ಮುಂಚೆ ನಮ್ಮನ್ನು ನಾವು ಕೇಳಿಕೊಳ್ಳ ಬೇಕಾದ ಪ್ರಶ್ನೆ ಇದು..

ಮುಂದಿನ ಒಂದು ವರುಷಕ್ಕೆ ಸರಿಯಾಗುವ ಪ್ರಾಜೆಕ್ಟ್ ಗಳಿದ್ದಾವೆ ನನ್ನ ಕೈಯಲ್ಲಿ , ಒಂದಿಷ್ಟು ಜಾಸ್ತಿ ಓದು ,ಒಂದು ಚೂರು ಬರಿಯೊದು...ಮಧ್ಯ wakeup call ಕೊಡೋ Exam ಗಳು ಸ್ನೇಹಿತರೊಬ್ಬರಿಗೆ ಕಮರ್ಶಿಯಲ್ website, ಪ್ರಶಾಂತ ಅಣ್ಣ ಗೆ ಎಂದು ಒಂದು ಫೋಟೋ ವೆಬ್ ಸೈಟ್ ಜೊತೆಗೆ ಆಫೀಸ್ ನ ಕೆಲಸ, ಸಂಭ್ರಮಿಸಲು ಮನೆ ಇತ್ಯಾದಿ ಇತ್ಯಾದಿ….


ಶುಕ್ರವಾರ

ಜಸ್ಟ್  ಮಾತ್  ಮಾತಲ್ಲಿ........



ನಿನ್ನೆ ಸಂಜೆ ತುಂಬಾ ತುಂಬಾ ಚೆನ್ನಾಗಿತ್ತು. ರವಿ ಬೆಳಗೆರೆ,ಕನ್ನಡದ ಸುದೀಪ್ ,ಜಸ್ಟ್ ಮಾತ್ ಮಾತಲ್ಲಿ..ಎಂದು ಹಾಡುವ ರಘು ದೀಕ್ಷಿತ್, ಜೊತೆಗೆ ಕಾರ್ಯಕ್ರಮವನ್ನು ನಿರೂಪಿಸಲು ಬಂದ 'ಎವರ್ ಗ್ರೀನ್' ಅಪರ್ಣಾ..!ಎಲ್ಲ ನಮ್ಮ ಕಂಪನೀ ಯ ಆವರಣದಲ್ಲಿ ...!

ಕಾರಣ??
 ಐ ಟಿ ಆವರಣದಲ್ಲಿ ರವೀ ,ಸುದೀಪ್,ರಘು...
ನಮ್ಮಲ್ಲೂ ಕತೆ ,ಕವನ ಬರೆಯುವ ವರಿದ್ದಾರೆ ,ಒಳ್ಳೆಯ ಲೇಖಕರಿದ್ದಾರೆ ...ವೃತ್ತಿ ಬೇರೆ ಪ್ರವೃತ್ತಿ ಬೇರೆ ಅಷ್ಟೇ....
ವಿಸ್ಮಯ ಎನ್ನುವ ಕನ್ನಡ ಹಬ್ಬ ನಮ್ಮ ಕ್ಯಾಂಪಸ್ ನಲ್ಲಿ...

ನಿಜ ಹೇಳಲೇ ಬೇಕು ಎಂದರೆ ಹೇಳುತ್ತೇನೆ ಕೇಳಿ

ನಾನು ರವಿ ಯ ಓ ಮನಸೇಯಿಂದ (ನನ್ನ ಮೊದಲ ಉದ್ದನೆಯ ಲೇಖನ ಪ್ರಕಟ ವಾಗಿದ್ದು ಓ ಮನಸೇ ನಲ್ಲಿ !) ಆಗಾಗ ಒಳ್ಳೆಯ ಲೇಖನ ಗಳನ್ನ ಹೆಕ್ಕಿ ತೆಗೆದು ಓದುತ್ತಿದ್ದೆ.  ಆದರೆ ಬಹಳ ವರುಷಗಳಿಂದ ನನ್ನ ಪ್ರೀತಿಯ 'ಸುಧಾ' ಗೆ ಆತು ಕೊಂಡು ಬಿಟ್ಟಿದ್ದೆ. ಯಾಕೋ ಗೊತ್ತಿಲ್ಲ ಇಂದಿಗೂ ಬಿಟ್ಟಿಲ್ಲ.
ಮಯೂರ ,ಪ್ರಜಾವಾಣಿ ,ಡೆಕ್ಕನ್ ಹೆರಾಲ್ಡ್ ,ಸುಧಾ ,ವರ್ಷಕ್ಕೊಂದೆ ಬರುತ್ತಿದ್ದ ವಿಶೇಷ ಸಂಚಿಕೆ ಇವೆಲ್ಲ ನನ್ನ ಕನ್ನಡ್ಕ್ಕೊಂದು ಕ್ಲ್ಯಾಸಿಕ್ ಟಚ್ ಕೊಡುವಲ್ಲಿ ತುಂಬಾ ಸಹಾಯ  ಮಾಡಿದ್ದವು..ಬಂಡ್ಲ್ ಗಟ್ಟಲೆ ಸಣ್ಣ ಕತೆಗಳನ್ನ, ಬೇರೆ ಬೇರೆ ದೇಶದ ಕತೆಗಳನ್ನ ಟಾಲ್ ಸ್ಟಾಯ್ ನಂತಹ ಮಹಾನ್ ಲೇಖಕನ Anna Kerenina,'ವಾರ್ n ಪೀಸ್' ಕೃತಿಗಳನ್ನ ,'Just Lather That's All 'ಕತೆ  ಓದಿದ್ದು ಮಯೂರ ದಲ್ಲಿ .(ಮಯೂರ ದಲ್ಲಿ ಬರುತ್ತಿದ್ದ ಕ್ಲಾಸಿಕ್ ಶೈಲಿಯ ಸಣ್ಣ ಕತೆಗಳ ಅಭಿಮಾನಿ ನಾನು) ..,ಅಮೃತ ಪ್ರೀತಂ ರಂತ ಲೇಖಕಿಯರ ( ಲೇಖಕರ) ನಿವೇದನೆಗಳನ್ನ.,ರಾಮಾಯಣ,ಮಹಾಭಾರತ, ದಂತಹವನ್ನ 'B K S ವರ್ಮ' ರ ಚಿತ್ರಗಳ ಸಮೇತ ಧಾರಾವಾಹಿಯಾಗಿ ಬಂದಿದ್ದನ್ನ ಓದಿದ್ದೆ..ನನ್ನ ಕಣ್ಮುಂದೆಯೇ ಮಹಾಭಾರತ ನಡೆಯುತ್ತಿದೆಯೇನೋ ,ನನ್ನ ಕಣ್ಮುಂದೆಯೇ ಸೀತೆಯ ಅಪಹರಣನಡೆಯಿತೇನೋ ಎನ್ನುವ ಮಟ್ಟಿಗೆ ಆ ಧಾರಾವಾಹಿಗಳು ನಮ್ಮ ಮಹಾನ್ ಕೃತಿಗಳ ದರ್ಶನ ಮಾಡಿಸಿದ್ದವು ..ಕೃಷ್ಣನ ಗೀತೋಪದೇಶ ನನ್ನ ಕಣ್ಮುಂದೆ ಇಂದಿಗೂ ಇದೆ...

  ಬನ್ನoಜೆ ಗೋವಿಂದಾಚಾರ್ಯ, ಕೃಷ್ಣ ಶಾಸ್ತ್ರಿ, ಜೊತೆಯಲ್ಲಿ ವಂಶೀ, ತುಶ್ವಿನು ,ನನ್ನ ಪಕ್ಕದ ಊರು ಸಾಗರದ ನಾಡಿಸೋಜ, ಮುಂತಾದವರೆಲ್ಲ ಜಗತ್ತು ನೋಡಲು ಶುರು ಮಾಡಿದ್ದ ನನಗೆ ಸಾತ್ ಕೊಟ್ಟಿದ್ದವು ..ನಾಡಿಸೋಜ ರಿಂದ (ಈಗರ್ಜಿಯ ಸುತ್ತಲಿನ ಹತ್ತು ಮನೆಗಳು etc) Christian ರ ಸಮಾಜದ ಆಗು ಹೋಗುಗಳ ಬಗ್ಗೆ , ಡ್ಯಾಮ್ ಕಟ್ಟಿ ಮುಳುಗಿಸಿದಾಗ ಅಲ್ಲಿನ ಜನರಿಗೆ ಬಂದೆರಗಿದ್ದ ಆಪತ್ತು ಗಳು ,ಅವರ ಜೀವದ ತುಮುಲಗಳು, ಮುಳುಗಡೆಯ ಭೀತಿ ,ಶರಾವತಿ ಹಿನ್ನೀರಿನ ಜನರ ಪಾಡು,ಕ್ಷಣ ಕ್ಷಣಕ್ಕೂ ಬದಲಾಗುವ ಅಲ್ಲಿನ ಜನರ ಕಾರ್ಪಣ್ಯಗಳು  ಇವೆಲ್ಲವನ್ನ  ಅರುಂಧತಿ ರಾಯ್ ರ 'ಗ್ರೇಟರ್ ಕಾಮನ್ ಗುಡ್ '  ಗಿಂತಲೂ ಚೆನ್ನಾಗಿ ಅರ್ಥ ಮಾಡಿಸಿದ್ದು ನಾಡಿಸೋಜ  .........ನನಗೆ ದಕ್ಷಿಣ ಕನ್ನಡ ದ ಬಂಟ್ಸ್ ಸಮಾಜ ದ ಬಗ್ಗೆ ,ಜಗತ್ತಿನ ಎಲ್ಲ ಆಗುಹೋಗುಗಳ ಬಗ್ಗೆ, ವೀರಪ್ಪನ್ ,ಕ್ರಪಾಕರ ಸೇನಾನಿ ಇವರೆಲ್ಲರನ್ನು ನನಗೆ ಪರಿಚಯಿಸಿದ್ದು 'ಸುಧಾ'.. .....ಫಾಂಟಮ್ ನಂತಹ ಎಂದು ಮುಗಿಯದ ಚಿತ್ರಕತೆಗಳು, ತಲೆ ಗೊಂಚುರು ಕಾಟ ಕೊಡುವ ಪಧಬಂಧ.,ಮಕ್ಕಳ ಪುಟಗಳು etc etc ..

ನಾನು ಓದಿದ್ದ ಮೊದಲ ಕಾದಂಬರಿ 'ದೌಲತ್' (ಆಗ ನಾನು ನಾಲ್ಕನೇಯದೋ  ,೫ದನೇಯದೋ  ತರಗತಿ ಯಲ್ಲಿದ್ದೆ.) ಇತಿಹಾಸಿಕ ಘಟನೆಗಳನ್ನ ಒಳಗೊಂಡ ಟಿಪ್ಪು,ಹೈದರಾಲಿ ಯರ ಕುರಿತಾದ ಒಳ್ಳೆಯ ಕಾದಂಬರಿ ... ಮಗುವಾಗಿ ಹಾವು ಹುಟ್ಟು ವ (ಮಹಿಳೆಯ ಹೊಟ್ಟೆಯಿಂದ ಹಾವು ತೆಗೆದದ್ದು ನಾನು ನೋಡಿದ್ದೇನೆ, ನಮ್ಮೂರಿನ ಸರಕಾರಿ ಆಸ್ಪತ್ರೆಯಲ್ಲಿ ಇನ್ನೂ ಇದೆ,ಹಾವಿನ ಮೊಟ್ಟೇ ಹೊಟ್ಟೆಯೊಳಕ್ಕೆ ಸೇರಿ.. ) ಒಂದು ರೀತಿಯ ಕತೆ, ಸಿನೆಮಾ ಜೀವನ(movie 'ಫ್ಯಾಶನ್' ಗೆ ಹೋಲುವಂತ್ ದೇ ಒಂದು ಕತೆ ಯ ಎಳೆ ) ಕಿತ್ತೂರಿನ ಚನ್ನಮ್ಮಳ ಕತೆ, ಎಲ್ಲವೂ ನಾನು ಓದಿದ್ದು ಸುಧಾ ದಲ್ಲಿ..,       ನೇಮಿಚಂದ್ರರ ಹ್ಯಾನ ,ಅನೇಕ ಥ್ರಿಲಿಂಗ್ ಅನ್ನಿಸುವ ಪತ್ತೇದಾರಿ ಕತೆಗಳು (ಗುಪ್ತಚರ ವಿಭಾಗಕ್ಕೆ ಸಂಬಂಧಿಸಿದ್ದು ),ಡಬ್ಲ್ ಕ್ರಾಸ್ ಎನ್ನುವ ಶಬ್ಧ ಪರಿಚಯ ವಾಗಿದ್ದೆ ಅಲ್ಲಿಂದ..
ಈಗ ಕೆ ಎನ್ ಗಣೇಶಯ್ಯ.. ಇತ್ತೀಚೆಗೆ ಬರುತ್ತಿರುವ ಕೆ ಎನ್ ಗಣೇಶಯ್ಯನವರ ಇತಿಹಾಸಿಕ, ತಾರ್ಕಿಕ ಕಾದಂಬರಿಗಳು ....ವಾವ್ ...ನಿಜಕ್ಕೂ ನನಗೆ ಸ್ವಾಮಿ ವೆಂಕಟೇಶ್ವರನಲ್ಲಿ ಬುದ್ಧಕಾಣುತ್ತಿದ್ದಾನೆ..
ಅದ್ಭುತ ಎನ್ನಬಹುದಾದ ಕ್ಲಾಸಿಕ್ ಗಳು ಅವು ..ನಿಜಕ್ಕೂ ಅಲ್ಲಿನ ತರ್ಕಗಳು ನಮ್ಮ ಧೀ ಶಕ್ತಿಗೆ ಒಳ್ಳೆಯ ಕಸರತ್ತು ಕೊಡುತ್ತಿದೆ..ಥ್ಯಾಂಕ್ ಯೂ ಗಣೇಶಯ್ಯನವರೇ..

ಓಹ್ ತುಂಬಾ ಸುದ್ದಿ ಹೇಳಿಬಿಟ್ಟೆ ಅಲ್ಲವ?.............'ಓ ಮನಸೆಯನ್ನ' ನೆನಪು ಮಾಡಿಕೊಂಡಾಗ ಇವೆಲ್ಲ ನನ್ನ ಮನದಲ್ಲಿ ಹಾಗೆ ತೇಲಿ ಬಂದಿದ್ದು  ಸುಳ್ಳಲ್ಲ.

ನಾನು, ಪಾಚು ಪ್ರಪಂಚ ಬ್ಲೋಗಿನ ಪಾಚು ಅಣ್ಣ , ಮಲೆನಾದ ಕರಾವಳಿ ಬ್ಲೋಗಿನ ಭಟ್ಟ, ಹುಡುಕಾಟದ ಯಜ್ಞೇಶ್ ಮತ್ತು ಹಲವಾರು ಸೇರಿ ಒಂದೆಡೆ ಕುಳಿತು ವಿಸ್ಮಯ ಕಾರ್ಯ ಕ್ರಮ ನೋಡಿದ್ದು ಒಂದು ವಿಶೇಷ..ಕನ್ನಡ ದ ಒಳ್ಳೆಯ ನಟ 'ಸುದೀಪ್' ತುಂಬಾ ಚೆನ್ನಾಗಿ ಹಾಡು ಹೇಳಿ ,ಚಿಂತನಾಶೀಲ, ಸಮಯೋಚಿತ ಮಾತುಗಳನ್ನು ಆಡಿದ್ದರು.. ನಾನು ಕೇವಲ ೧.೫ ಘಂಟೆ ಮಾತ್ರ ಇದ್ದೇ.. ಮೀಟಿಂಗ್ ಮಿಸ್ ಮಾಡುವಂತೆ ಇರಲಿಲ್ಲ ,ಸುದೀಪ್,ರವೀ ಎದ್ದು ಹೊರಟ ಮೇಲೆ ನನ್ನ ಡೆಸ್ಕ್ ಗೆ ಬಂದು  'ಜಸ್ಟ್ ಮಾತ್ ಮಾತಲ್ಲಿ' ಎಂದು ಹಾಡಿಕೊಳ್ಳುತ್ತ ಮತ್ತೆ ಕೆಲಸ ಶುರು ಮಾಡಿಕೊಂಡೆ....

ಚಿತ್ರ ಕೃಪೆ;ಅಂತರ್ಜಾಲ

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...