ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ?
ನೂರಕ್ಕೆ ನೂರು ಹೌದು.
ಇದನ್ನ ಒಪ್ಪಿಕೊಳುವದಕ್ಕೆ ನಮ್ಮ ಮನಸು ಬಹಳ ಸಾರಿ ತಯಾರಿರುವದಿಲ್ಲ. ಯಾಕಂದರೆ ನಾವು ವಾಸ್ತವಕ್ಕೆ ದೂರಾಗಿ ಬದುಕುತ್ತಿರುತ್ತೇವೆ. ಮತ್ತು ಅದನ್ನೇ ಸಾಫಲ್ಯ ಎಂದು ಭ್ರಮಿಸಿರುತ್ತೇವೆ. ನಮ್ಮಷ್ಟಕ್ಕೆ ನಾವು ಸಾಫಲ್ಯವೆಂದರೆ ಹೀಗೆ ಇರುವದು, ಹಾಗೆ ಮಾತನಾಡುವದು, ಎಂದೆಲ್ಲ ಭಾವಿಸಿ ಕಣ್ಣಿಗೆ ಕಾಣದ ಗೋಡೆ ಕಟ್ಟಿರುತ್ತೇವೆ. ಮತ್ತು ಈ ಗೋಡೆ ಎಷ್ಟೋ ತರಹದ ನಡುವಳಿಕೆಗಳಿಗೆ ಕಾರಣವಾಗಿರುತ್ತದೆ.
ವ್ಯಕ್ತಿ, ತನ್ನ ವ್ಯಕ್ತಿತ್ವಕ್ಕೆ ವ್ಯತಿರಿಕ್ತವಾದ ನಡೆ ನುಡಿಯನ್ನ ಅನುಕರಿಸಿರುತ್ತಾ, ಕಾಣದ, ಎಂದೂ ಮುಗಿಯದ, ಅಸಹಜವಾದ, ಜೀವನಕ್ಕೆ ತನ್ನನ್ನು ತಾನು ಒಡ್ಡಿಯಾಗಿರುತ್ತದೆ. ಮತ್ತು ಅದು ವ್ಯಕ್ತಿತ್ವದ ಭಾಗವಾಗಿಬಿಡುತ್ತದೆ.
ಇಂದು ಮಾರುಕಟ್ಟೆಯಲ್ಲಿ ಎಲ್ಲ ತರಹದ ವಸ್ತುಗಳು ದೊರೆಯುತ್ತವೆ, ಹೇಗೆ ಬದುಕಬೇಕು, ಹೇಗೆ ಮಾತನಾಡ್ಬೇಕು , ಹೇಗೆ ಮತ್ತು ಎಷ್ಟು ಊಟಮಾಡಬೇಕು, ಎಂದೆಲ್ಲ ಕಲಿಸುವದಕ್ಕೆ ಪುಸ್ತಕಗಳಿದ್ದಾವೆ, ಜನರಿದ್ದಾರೆ. ಮತ್ತು ಇವೆಲ್ಲುವುಗಳಿಂದ ಜನರನ್ನ ಹೇಗೆ ಗೆಲ್ಲಬಹುದು, ಸುದೀರ್ಘ ಜೀವನನಡೆಸಬಹುದು, ವೃತ್ತಿರಂಗದಲ್ಲಿ ಹೇಗೆ ಎಲ್ಲವನ್ನ ಗೆಲುವಿನತ್ತ ಬದಲಾಯಿಸಬಹುದು ಎಂದೆಲ್ಲ ಪ್ರತಿಪಾದಿಸಲಾಗುತ್ತದೆ.
ಒಂದುಹಂತದವರೆಗೆ ಇವೆಲ್ಲ ಕೆಲಸಕ್ಕೆ ಬರುವದನ್ನು ನಾನು ಗಮನಿಸಿದ್ದೇನೆ. ಆದರೇ, ಇದೇ ಜೀವನವಲ್ಲವಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಉದ್ದೇಶ, ಧ್ಯೇಯ, ಸನ್ನಿವೇಷ ಎಲ್ಲವೂ ಬದಲಾಗುತ್ತಿರುತ್ತವೆ . ಎಲ್ಲದಕ್ಕು ಇದೇ ತಕ್ಕ ಸೂತ್ರ ಅನ್ನುವ ಹಾಗಿಲ್ಲ. ಅಂತೆಯೇ ಹೀಗೆಯೇ ಬದುಕಬೇಕು, ಹಾಗೆ ಮಾತನಾಡಬೇಕು, ಇದನ್ನೇ ಓದಬೇಕು ಎಂದೆಲ್ಲ ನಿರ್ಣಯಿಸುವ ಹಕ್ಕಿಲ್ಲ ಅಲ್ಲವ. ಯಾಕೆಂದರೆ ಹಕ್ಕಿನ ಜೊತೆ ಬಾಧ್ಯತೆಗಳೂ ಇರುತ್ತದವಲ್ಲ.
ಯಾರದೋ ಅನುಭವವೇ ಸರಿಯಾದ ಮಾರ್ಗ ಅನ್ನಲಿಕ್ಕೂ ಆಗುವದಿಲ್ಲ. ನಾನು ನನ್ನ ವ್ಯಾಪ್ತಿಗೆ ಬಂದ ಅನುಭವದ ಮೂಲಕ ಒಂದು ಹಂತಕ್ಕೆ ನಿರ್ಣಯಿಸಬಹುದೇನೋ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ