ಭಾನುವಾರ

ಬಲ್ಲೀರೇನಯ್ಯಾ ಸಂಬಂಧಗಳ ಮೂಲವ?

ಅಕ್ಕಾ,ಒಂದು ಮೊಳ ಮಲ್ಲಿಗೆ ಕೊಡಲಾ? ಅಂದಳು ಅವಳು,ಹೂ ಮಾರುವವಳು.'ಅಕ್ಕಾ' ಎಂದು ಕರೆಯುವದರ
 ಮೂಲಕ, ಆಕೆಯ ಅರಿವಿಗೆ ಬರದ, ನನ್ನ ಪರಿಧಿಗೂ  ಬರದ ಸಂಬಂಧದ ಎಳೆಯೊಂದನ್ನು  ಕಟ್ಟಿಬಿಟ್ಟಿದ್ದಳು.ನಾನು ಮೊಳ ಮಲ್ಲಿಗೆ ಕೊಂಡೆನೋ, ಬಿಟ್ಟೆನೋ ಅದು ಈ  ಲೇಖನದ ವ್ಯಾಪ್ತಿಗೆ ಹೊರತಾಗಿದ್ದು.


ಸಂಬಂಧಗಳೆ ಹಾಗೆ! ಕ್ಷಣದಲ್ಲಿ ಹುಟ್ಟಿಬಿಡುತ್ತವೆ,ಪೋಷಿಸಿದಲ್ಲಿ ಬೆಳೆಯುತ್ತವೆ,ತೀರಾ ಸೂಕ್ಷ್ಮವಾಗಿ ಗುರ್ತಿಸುತ್ತಾ, ಅವರವರ ಮನೋಗುನಕ್ಕನುಗುಣವಾಗಿ ಸ್ಪಂದಿಸುತ್ತಾ ಇದ್ದರೆ ಅಂತಹ ಸಂಬಂಧಗಳು ಬತ್ತದ ಅನುಭಾವದ ಪಯೋನಿಧಿಯೇ ಸರಿ.ನಡುವೆ ತೇಪೆ ಹಾಕುವದು,ಕತ್ತರಿಸುವದು,ಇತ್ಯಾದಿ ಎಲ್ಲ ತರಹದ ನಿಯಂತ್ರಣಗಳು ನಮ್ಮ ಕೈಯಲ್ಲಿರ ಬೇಕಾದುದು ಅಗತ್ಯ,ಅದು ಬೇರೆ ವಿಷಯ.

ಪಕ್ಕದ ಮನೆಯ ಪುಟ್ಟ ಕೂಸು'ರಕ್ಷಾ'  ನಮ್ಮ ಮನೆಗೆ ದೋಸೆ ತಿನ್ನಲು ಪ್ರತಿದಿನ ಬರುತ್ತಿದ್ದಳು,ಬೆಳಿಗ್ಗೆ ದೇವರಪೂಜೆಯ ಗಂಟೆಯ ಶಬ್ಧ ಆಕೆಗೆ ಕೇಳಿದ ಕೂಡಲೇ  ಆಕೆಯ ಅಮ್ಮನ ಸೀರೆ ಎಳೆದು ನಮ್ಮ ಮನೆಯ ದಿಕ್ಕಿನತ್ತ ಕೈ ತೋರಿಸುತ್ತಿದ್ದಳಂತೆ,ಅವಳ ಅಮ್ಮ ನಮ್ಮ ಮನೆಗೆ ಕಳಿಸಿಬಿಟ್ಟರೆ ಆಯಿತು,ಅಂಬೆಗಾಲಿಕ್ಕುತ್ತಾ, ದೋಚೆ ಮಮ್ ಮಮ್ ಎಂದು ಪುಟ್ಟ ಬಾಯಿಯಲ್ಲಿ  ಆಕೆ ನಗುತ್ತಿದ್ದರೆ ನನ್ನ ಅಮ್ಮನಿಗೂ ದೋಸೆ ಮಾಡಲು ಉತ್ಸಾಹ.ಬೆಲ್ಲ ತುಪ್ಪದಲ್ಲಿ ಅದ್ದಿದ ದೋಸೆ ಯನ್ನು ತಿಂದು, ನಮ್ಮೊಟ್ಟಿಗೆ ಸ್ವಲ್ಪ ಆಟವಾಡಿ,ಸವಾರಿ ಮನೆಯತ್ತ  ತಿರುಗಿಬಿಡುತ್ತಿತ್ತು..ಆಕೆ ಬರದೇ ಇದ್ದರೆ ನಮಗೆಲ್ಲ ಒಂದು ತರಹದ  ಕಸಿವಿಸಿ,ಅಮ್ಮನಂತೂ,ಕೂಸು ಬೈಂದೆ ಇಲ್ಯಪ,ನೀನಾದ್ರೂ ಹೋಗಿ ದೋಸೆ ಕೊಟ್ಟಿಕ್ಕೆ ಬಾ' ಎಂದು ನನ್ನನ್ನು ಆಕೆಯ ಮನೆಗೆ ಕಳಿಸುತ್ತಿದ್ದರು.ಈ ಪುಟ್ಟ ಕೂಸು ನಮಗಾವ ಬಂಧುವು ಅಲ್ಲ.ಆಕೆಯ ಬೊಚ್ಚುಬಾಯ ನಗೆ,ತುಂಟಾಟಗಳಿಂದ ನಮ್ಮ ಜೊತೆಗೊಂದು ಬಂಧ ಗಟ್ಟಿಗೊಳಿಸಿದ್ದಳು.
ಹಾಮ್..ಹೀಗೆ ಹುಟ್ಟಿಬಿಡುತ್ತದೆ ಸಂಬಂಧದ ಎಳೆಯೊಂದು!
ಮಾನವ ಸಮಾಜಮುಖಿ,ಬಂಧ,ಬಂಧನ ಮನುಷ್ಯನ ಮೂಲಭೂತ ತುಡಿತ;
ದಿನವೂ ಅದೇ ಬಸ್ಸಿನಲ್ಲಿ ಆಕೆ ಸಿಕ್ಕಾಗ,ನಮ್ಮ್ ಕಣ್ಣುಗಳು ಆಕೆಯನ್ನ ಗುರುತಿಸಿಬಿಡುತ್ತವೆ,ಒಂದು ಚಿಕ್ಕ ನಗೆ ನಗದೇ ಮುಂದೆ ಹೋಗಲು ಬಿಡಡು ಈ ಮನ,ಹಾನ್,ಸಂಶೋಧನೆಯೊಂದರ ಪ್ರಕಾರ ಅಪರಿಚಿತ ಪರಿಚಿತ ನಗೆ ನಗಲು ಅಂದರೆ,ಅದೇ ಬಸ್ಸಿನಲ್ಲಿ ದಿನವೂ ಸಿಗುವ ಆಕೆಯತ್ತ ಪರಿಚಯದ ನಗೆ ಬೀರಲು ೪-೫ ದಿನಗಳು ಸಾಕಂತೆ.(ಮಾತಾಡಲು, ಸುದ್ದಿ ಹೇಳಲು ಎಷ್ಟು ದಿನಗಳು
ಬೇಕು ಅದೆಲ್ಲ ನನಗೆ ಗೊತ್ತಿಲ್ಲಾಪ್ಪ..)


ಇನ್ನೊಂದು ವರ್ಗವಿದೆ, ಅದು ಮಿಸ್ಡ್ ಕಾಲ್ ಸಂಬಂಧಗಳು.
ಆಕೆಯನ್ನ ದಿನವೂ ಗಮನಿಸುತ್ತಿದ್ದೆ,ಫೋನಿನಲ್ಲಿ ತಾಸುಗಟ್ಟಲೇ ಹರಟುತ್ತಿದ್ದಳು ,Bio Data ಗಳ ವಿನಿಮಯ ನಡೆಯುತ್ತಿತ್ತು, ಒಂದು ಸಾರೇ ಆಗಿದ್ದರೆ ಓಕೇ , ಆಕೆಗೆ ಹತ್ತೋ ಹನ್ನೊಂದು ಮಿಸ್ಡ್ ಕಾಲ್ ಸ್ನೇಹಿತರುಗಳಿದ್ದರು. ಇಂತಹವರನ್ನೆಲ್ಲ ಹೇಗೆ ನಂಬಿಕೊಳ್ತಾರೋ ಜನರು,ಸುಮ್ಮನೇ ಟೈಮ್ ಪಾಸ್ ಮಾಡುವ ಮಾರ್ಗವಿರಬೇಕು ಅಂದು ಕೊಂಡಿದ್ದೆ.ಆಕೆಯ ಮನೆಯ ವಾತಾವರಣ ಸರಿ ಇಲ್ಲದಿದ್ದು ದು ಇನ್ನೊಂದು ಕಾರಣ ಅನ್ನಿಸಿತ್ತು ನನಗೆ.ಇನ್ನೊಮ್ಮೆ ಬರೆಯೋಣ ಇದರ ಬಗ್ಗೆ.

ನನ್ನ ಹಲವು ಸ್ನೇಹಿತರಿದ್ದಾರೆ, ನಮ್ಮ ಮನೆಗಳ ಸುದ್ದಿ ಹಂಚಿಕೊಳ್ಳುತ್ತೇವೆ, ಸಮಸ್ಯೆಗಳು ಬಂದಾಗ ಸಲಹೆ ಪಡೆಯುತ್ತೇವೆ, ನೋಡೇ ಇವತ್ತು  ಒಂದು ಕೂಸನ್ನು ನೋಡಲೇ ಹೋಗಿದ್ದೆ, ಎಂದು  ಸ್ನೇಹಿತನೊಬ್ಬ ಆಕೆಯ ಫೋಟೋ ವನ್ನು ಮೈಲ್ ಮಾಡುತ್ತಾನೆ,ಮದುವೆಗೆ ಎರಡು ದಿನ ಮುಂಚೇನೆ ಬರೋ ಎಂದು ಆಕೆ ಒತ್ತಾಯಿಸುತ್ತಾಳೆ, ಇವರಾರು ರಕ್ತ ಸಂಬಂಧಿಗಳಲ್ಲ, ಆದರೂ ಬಂಧುಗಳು  ಅದೇ ಗಾದೆಯಿದೆಯಲ್ಲ, 'ಸಮಯಕ್ಕಾದವರೇ ಬಂಧುಗಳು' ಅನ್ನಿಸಿಬಿಡುತ್ತದೆ.

ಒಂದುತರ ರಾಬಿನ್‌ಸನ್ ಮತ್ತು ಕ್ರಸೋ ಕತೆಯನ್ನ ಹೋಲುತ್ತದೆ ನಮ್ಮ ಈ ಬದುಕು. ಪರಿಚಯವಿಲ್ಲ, ನಾನು ಕರ್ನಾಟಕದವಳು, ನಾನು ಬಿಹಾರಿ, ನಾನು ಭಾರತೀಯ,ನೀನು ಪರಂಗಿಯವ  ಅನ್ನುವ ಮಾತೇ ಇಲ್ಲ, ಯಾಕೆ ಗೊತ್ತಾ ಮಾತನಾಡಲು ಮಾತೇ ತಿಳಿದಿಲ್ಲ. ಹೀಗಿದ್ದಾಗಲು, ಹೇಳಬೇಕೆನಿಸಿದ್ದನ್ನ ಹೇಳುತ್ತ, ಕೇಳಿಸಿಕೊಳ್ಳುತ್ತ, ನಮ್ಮದೇ ಲೋಕ ಕಟ್ಟುತ್ತಾ, ಪರಿಚಯದ ಬಂಧಗಳಿಸುತ್ತಾ ಜೀವನದಲ್ಲಿ ಮುನ್ನಡೆಯುತ್ತೇವಲ್ಲ ಇಂತಹ ಸಂಬಂಧಗಳಿಗೆ  ಎಣೆಯುಂಟೆ?ಬೆಲೆಕಟ್ಟಲಾದೀತೇ?
ಇಂತಹ ಸಂಬಂಧಗಳ ಮೂಲ ಹುಡುಕುವದು ವ್ಯರ್ಥ ಪ್ರಯತ್ನವೇ ಸರಿ,ಅಲ್ಲವ?

ಶುಕ್ರವಾರ

ಸೆಳೆವ ಸ್ನಿಗ್ಧತೆ ಆ ನೀಲಿ ಮಾಟಗಾತಿಯಲ್ಲಿ !

ನೀಲಿ ಬಣ್ಣದ ವಸ್ತ್ರದ ಅಲಂಕಾರ,ಅದರೊಳಗೆ  ಚಿನ್ನದ ಬಣ್ಣದ ಇನ್ನೊಂದು ಅಂಗಿ, ಸಾಥ್ ಕೊಡಲಿಕ್ಕೆಂದೇ ಬಿಳಿಯ ಬಣ್ಣ,  ಚಿಕ್ಕದು ,ದೊಡ್ಡದು,ಇನ್ನೂ ದೊಡ್ಡದು ,ಹೀಗೆ ತಹೇವಾರಿ ಗಾತ್ರಗಳಲ್ಲಿ.. ನೀಲಿ ಬಣ್ಣದ್ದು,ಬಂಗಾರದ ಬಣ್ಣದ್ದು
ಒಮ್ಮೆ ನೋಡಿದರೆ ಮತ್ತೆ ತಿರುಗದೆಯೆ ಹಾಗೆ ಹೋಗಲಿಕ್ಕಾಗುವದಿಲ್ಲ,ಅಂತಹ ಸೆಳೆತ ಆ ನೀಲಿ ಮಾಟಗಾತಿಯದು. ಸುಂದರಿ ಅನ್ನಲಿಕ್ಕಾಗದಿದ್ದರು ಸೆಳೆವ ಸ್ನಿಗ್ಧತೆ ಆ ನೀಲಿ ಮಾಟಗಾತಿಯಲ್ಲಿ ,ಅದೇಕೋ ಏನೋ ,ನೋಡುವವರು ಕುರುಬಿಯಾರೆಂದೋ ಏನೋ ಈ ಮಾಟಗಾತಿ ಯ ಬಣ್ಣ ಕಪ್ಪು- ಅಮ್ಮ ಹೇಳೋ ಹಾಗೆ, ಅದೇ ಕಾಫೀ  ಕಲರ್ರು. 'ಕಬ್ಬು ಡೊಂಕಾದರೆ ಸಿಹಿ ಡೊಂಕೆ' ಅನ್ನುವ ಗಾದೆ ಇದೆಯಲ್ಲಾ,ಅದೇ ತರ ಓಡಳೊಳಗೆ ಮುಗಿಯಲಾರದಷ್ಟು ಸಿಹಿ ಹಾಂ..ಡಬ್ಬಿ ತುಂಬಿಸಿಡುವಷ್ಟು .
ಪುಟ್ಟಿ ನೀನು ಊಟ  ಬೇಗ ಮಾಡ್ಬಿಟ್ರೆ, ಹೋಮ್‌ವರ್ಕ್ ಎಲ್ಲ ಬೇಗ ಮುಗ್ಸಿ ಬಿಟ್ರೆ, ಹಟ ಮಾಡದೇ ಇದ್ರೆ ...ಎನ್ನುವ ಎಲ್ಲ  'ಟ್ರೇ,ದ್ರೆ' ಗಳಿಗೆ ಪರಿಹಾರ ಆ ಮಾಟಗಿತ್ತಿಯೇ ...ನಂಗೂ ಅಮ್ಮಂಗೂ ಎಂದಿಗೂ ಗೊತ್ತಿದ್ದುದು.
ಇನ್ನೊಂದು ಮತ್ತೊಂದು ,ಈ ಕೈಗೊಂದು ಇನ್ನೊಂದು ಕೈಗೆ ಇನ್ನೊಂದು ...ಮುಗಿಯದ ಕತೆ ಎಂದು ಅಮ್ಮ ಅರಿತಾಗ, ನಾಳೆಗೆ ಮತ್ತೊಂದು ಎಂದು ಸಮಾಧಾನ ಮಾಡಿದ್ದು ಅಮ್ಮನ ಜಾಣ್ಮೆ.
ಅದು -------->Cadbury Dairy Milk

ಭಾನುವಾರ

ಮತ್ತೇನೂ ಹಾದಿಯಿಲ್ಲ ಎಂಬೆಡೆಗೆ ವಾಲಿದ್ದೇನೆ


ನನ್ನ ಆಫೀಸಿನ ೧೧ ನೆ ಮಹಡಿಯಲ್ಲಿ ಇರುವದು ನನ್ನ ಡೆಸ್ಕ್,ಒಟ್ಟು 10ಲಿಫ್ಟ್ ಗಳಿದ್ದಾವೆ ಅಲ್ಲಿ .ಬೆಳಿಗ್ಗೆ ೮ ಕ್ಕೆಲ್ಲ ಲಿಫ್ಟ್  ಸುಮಾರಾಗಿ ಖಾಲಿ ಇರುತ್ತದೆ.ಆದ್ದರಿಂದ ನಾನೇರಿದ ಲಿಫ್ಟ್, ಬೇರೆ ಮಹಡಿಗಳಲ್ಲಿ ನಿಲ್ಲದೆ,ಸೀದಾ ೧೧ ನೆ ಮಹಡಿ ತಲುಪಿಬಿಡುತ್ತದೆ.ಆಗಲೇ ನನಗೆ ಒಂದು ತರದ ಸಮಾಧಾನ,ಎಲ್ಲಾಮಹಡಿಗಳಲ್ಲಿ ನಿಲ್ಲುತ್ತಾ ಮೇಲೇರ ತೊಡಗಿದರೆ,ಯಾಕೋ ವಿಪರೀತ ಅಸಮಾಧಾನ.೫ ನಿಮಿಷಕ್ಕೆ ಬರಬೇಕಾದ್ದು,೭ ನಿಮಿಷ ತೆಗೆದುಕೊಂಡರೆ ಅದರ ಬಗ್ಗೆ ಕೆಟ್ಟ ಅಸಮಾಧಾನ.ಲಿಫ್ಟೆ ಇಲ್ಲದಿದ್ದರೆ ಎಂಬುದನ್ನ ಯೋಚಿಸುವದಕ್ಕೂ ಹೋಗುವದಿಲ್ಲ,ಆತುರತೆ 'ಆಧುನಿಕತೆಯ ಉಡುಗರೆಯ?ಇರಬೇಕು .ಜೀವನ ಸರಳವಾದಷ್ಟು ,ಸುಲಭವಾದಷ್ಟು ಮತ್ತೂ ಸುಲಭವಾಗಬೇಕು,ಸರಳವಾಗಬೇಕೆಂಬುದು ದುರಾಸೆ ಅಲ್ಲವ?(ಹ್ಮಮ್, ಇಂದಿನ ಎಲ್ಲಾ ನವನವೀನ ಆವಿಷ್ಕಾರಗಳಿಗೆ ,ಬರುತ್ತಿರುವ ಹೊಸ ಉದ್ಯಮಗಳಿಗೆ ಇದೇ ಮೂಲ)ನಾನೊಬ್ಬಳು ಹುಟ್ಟಾ ಆತುರಗಿತ್ತಿ,ದಡ್ ದಡ್ ಎಂದು ಎಲ್ಲಾ ಆಗಿಬಿಡಬೇಕು,ಕಣ್ಮುಚ್ಚಿ ತೆರೆಯುವಷ್ಟರಲ್ಲಿ ,ಇಲ್ಲದ್ದು ಬಂದುಬಿಡಬೇಕು (ಅದನ್ನು ನಾನು 'Effcient Way' ಅನ್ನುವದು )

ಆದರೂ,ಇತ್ತೀಚಿಗೆ ನನ್ನ ಆತುರ ಪ್ರವ್ರತ್ತಿಗೆ ಕಡಿವಾಣ ಬಿದ್ದಿದೆ (ಮತ್ತೇನು ಹಾದಿಯಿಲ್ಲ ಎಂಬೆಡೆಗೆ ವಾಲಿದ್ದೇನೆ:ಕೊನೆಯಲ್ಲಿ ಅದರ ಬಗ್ಗೆ ಬರೋಣ.)ತುಂಬಿದ ಲಿಫ್ಟ್ ನ ಕನ್ನಡಿಯಲ್ಲಿ ತನ್ನ ಅಲಂಕಾರ ಸರಿಯಾಗಿದೆಯೋ ಇಲ್ಲವೋ ಎಂದು ಪದೇ ಪದೇ   ಕನ್ನಡಿಯತ್ತ ನೋಡುತ್ತಿರುವ ಆ ನೀರೆಯ ನಾಜೂಕು, ಬಿಗಿದುಕೊಂಡ ಕೊರಳ ಪಟ್ಟಿ (ಟೈ ) ಸರಿಪಡಿಸಿಕೊಳ್ಳುವ ಮಹಾನುಭಾವ ,ಕಾಪಿಚಿನೋ ಕೈಯಲ್ಲಿ ಹಿಡಿದು,ಕಣ್ಣು ಕಣ್ಣು ಬಿಡುತ್ತಿರುವ ಚೀನಿ ಯುವಕ,ಯುವತಿ,ಜಗತ್ತೇ ತಲೆಯ ಮೇಲಿದೆಯೇನೋ ಎಂಬ ಮುಖಮಾಡಿ ಕೈಯಲ್ಲಿನ ಬೆರ್ರಿ ಯಲ್ಲಿ ಇ-ಮೇಲ್ ಓದುತ್ತಿರುವ ಗಂಭೀರ ಮುಸುಡಿಯ ಮ್ಯಾನೇಜರ್ ,ತನ್ನದೇ ಫೋಟೋವನ್ನು ಫ್ರೇಮು ಹಾಕಿ ಕುತ್ತಿಗೆಗೆ ನೇತುಹಾಕಿಕೊಂಡಿರುವ ಆತಾ, ಆಕೆ .....ಅಯ್ಯೋ ಇಷ್ಟು ದಿನ ಎಷ್ಟೆಲ್ಲಾ ಮಿಸ್ ಮಾಡಿಕೊಂಡಿದ್ದೆನಲ್ಲ  ಅಂತ ಮೊನ್ನೆ ಅನಿಸಿತ್ತು.

ಮನೆಗೆ ಬಂದು ಬಾಗಿಲು ತೆರೆಯಲು ಐಡಿ ಕಾರ್ಡ್ ಹಿಡಿಯುವದು , ಮಾತಿನಲ್ಲಿ ನೂರುಬಾರಿ 'Issue' ಎಂಬ ಪದ ಬಳಸುವದು ಇವೆಲ್ಲ ವ್ರತ್ತಿ ಕೊಟ್ಟ ವರ.
                              * **** ******* **** **** **** ***
ನಾನು ಮೊದಲೇ ಪ್ರಾಮಿಸ್ ಮಾಡಿದಂತೆ, ಚಿತ್ರಾ ದಿವಾಕರುಣಿ ಯವರ 'One Amazing Thing ' ಕಾದಂಬರಿಯ ಕತೆ ಹೇಳಿಬಿಡುತ್ತೇನೆ;

೯ ಜನರ ತಂಡವೊಂದು, ಅಮೇರಿಕದ ನಗರವೊಂದರಲ್ಲಾದ ಭೂಕಂಪದಿಂದಾಗಿ,ವೀಸಾ ಆಫೀಸ್ ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ:ಉಮಾ (ಅಮೇರಿಕಾದಲ್ಲಿ ಬೆಳೆದ ಭಾರತೀಯ ಕೂಸು) ,ತಾರಿಕ್ (ಬದಲಾದ ಅಮೇರಿಕಾದ ಬಗ್ಗೆ ಕೋಪವುಳ್ಳ ಮುಸ್ಲಿಂ ಯುವಕ), ಮತ್ತೊಬ್ಬ ಮಾಜಿ ಸೈನಿಕ ,ವೀಸಾ ಕಚೇರಿಯ ಅಧಿಕಾರಿ ,ಚೈನೀಸ್ - ಇಂಡಿಯನ್  ಮಹಿಳೆ ಮತ್ತೂ ಆಕೆಯ ಮಗಳು ಲಿಲಿ ,ವಯಸ್ಸಾದ ಬಿಳಿಯ ದಂಪತಿಗಳು, ಇವರೆಲ್ಲ ಕಾದಂಬರಿಯ ಪಾತ್ರಗಳು. ತಮ್ಮನ್ನು ರಕ್ಷಿಸಲು ಬರುವ  ಸಹಾಯ ತಂಡಕ್ಕಾಗಿ ಕಾದುಕುಳಿತಿರುವಾಗ, ಸಮಯ ಕಳೆಯಲು ತಮ್ಮ ಜೀವನದ ಅತಿ ಅದ್ಭುತ ಅನಿಸುವ,
ಅದುವರೆಗೂ ಯಾರಿಗೂ ಹೇಳಿರದ ಘಟನೆಗಳನ್ನು ಹಂಚಿಕೊಳ್ಳುತ್ತಾರೆ.


ಅಮೇರಿಕಾದ 'Houston Univercity' ಯಲ್ಲಿ ಪ್ರೊಫೆಸರ್ ಆಗಿರುವ ಈಕೆಯ ಹಲವು ಸಂದರ್ಶನಗಳನ್ನು ಓದಿದ್ದೇನೆ, ಆಕೆಯಿಂದ ಹಲವು ಮಾರ್ಗದರ್ಶನಗಳನ್ನೂ ಪಡೆದಿದ್ದೇನೆ. ಆಕೆಯ ಬರವಣಿಗೆಯ ಶೈಲಿಯಲ್ಲಿ,ವಸ್ತು ವರ್ಣನೆಯಲ್ಲಿ ಸೂಕ್ಷ್ಮತೆಯನ್ನು ಕಾಣಬಹುದು.ಆಕೆಯ ಸರಳ ಬರಹ ನನಗೆ ತುಂಬಾ ಇಷ್ಟವಾದದ್ದು. ಮುಖ್ಯವಾಗಿ ಅನಿವಾಸಿಗಳ ಜೀವನದ ತುಮುಲಗಳು,ಮಹಿಳೆ, ಆಕೆಯ ಬರಹದ ವಿಷಯಗಳು. ಆಕೆಯ 'Palace Of Illusions'ಇನ್ನೊಂದು ಇಷ್ಟವಾದ ಕೃತಿ(ದ್ರೌಪದಿ ಮತ್ತು ಕರ್ಣನ ಕುರಿತಾದದ್ದು)

                                                    ****************
ಕೊನೆಯದೊಂದು ಪ್ರಶ್ನೆ :

- ನನ್ನ ಮೊದಲಿನ ಜೀವನಕ್ಕೆ ಹಿಂತಿರುಗಲು ಹಾದಿಗಳಿಲ್ಲ- ಕೂಡಿಸುವ ಸೇತುವೆಗಳು ಮುರಿದಿವೆ ;ಅಷ್ಟೇ ಅಲ್ಲ ,ನನಗೆ ನನ್ನಿದುರು ಯಾವ ಹಾದಿಗಳು ಕಾಣುತ್ತಿಲ್ಲ.

ಅವರು ಹೇಳಿದ್ದು :
ಯಾವುದು ಇಲ್ಲ, 'ಹಾದಿ'ಎನ್ನುವದು ನಿನ್ನ ಮನದ ಭ್ರಮೆ.ಮನಸ್ಸಿದೆಯಲ್ಲ, ಅದು ತನ್ನ ಗುರಿಸಾಧಿಸಲು, ಆಸೆ ಪೂರೈಸಿಕೊಳ್ಳಲು ಕನಸುಗಳನ್ನು ಕಾಣುತ್ತಲೇ ಸಾಗುತ್ತದೆ. ಮನಸ್ಸಿನ ಈ ವ್ಯವಹಾರಗಳ ಛಾಯೆಯೇ 'ಹಾದಿ '.ಮೊದಲು ಏನೋ ಬೇಕೆಂದುಕೊಳ್ಳುತ್ತೀಯ,ಸಹಜವಾಗಿ ಅದು ಬೇಕು,ಇದು ಬೇಕು,ಇತ್ಯಾದಿ 'ಬೇಕು'ಗಳ ವ್ಯವಹಾರ ಭವಿಷ್ಯತ್ತಿಗೆ ಸಂಬಂಧಿಸಿದ್ದು.ಭವಿಷ್ಯತ್ ವರ್ತಮಾನದಲ್ಲಿಲ್ಲ, ಹಾಗಂದ ಮೇಲೆ ನಮ್ಮ ಬಳಿ ಇರುವ ಇವತ್ತಿಗೂ, ಇನ್ನೂ ಬಾರದ ನಾಳೆಗೂ ಸೇತುವೆ ಕಟ್ಟಿದೆ ಅನ್ನಿಸಿದರೆ ಅದು ನಿನ್ನ ಕಲ್ಪನೆ,ಭ್ರಮೆ .

ನಿನಗೆ ಎಲ್ಲೂ ಹೋಗುವದಕ್ಕಿಲ್ಲ, ನೀನು ಎಲ್ಲಿ ಹೋಗಬೇ ಕೆಂದಿರುವೆಯೋ ಅಲ್ಲಿಯೇ ಇದ್ದೀಯ,ಅದು ನೀನು ಸಾಧಿಸಿದ್ದಲ್ಲ, ನಿನಗೆ ದಕ್ಕಿದ್ದು .

ಸ್ನೇಹಿತರೇ , ಇವತ್ತು ನನಗೆ ದಕ್ಕಿದ ಸಮಯ ಇಷ್ಟೇ.ಪ್ರೋತ್ಸಾಹಿಸುತ್ತಿರುವ ನಿಮಗೆಲ್ಲರಿಗೂ ಅನಂತ ಕೃತಜ್ಞತೆಗಳು

ಸೋಮವಾರ

ಮತ್ತೆ ಅದೇ ಸಂಭ್ರಮ ! ಇತ್ತ ಬರದೇ ,ಏನನ್ನೂ ಬರೆಯದೇ ದಿನಗಳೆe ಉರುಳಿ ಹೊಗಿವೆ.ಪುರುಸೊತ್ತಿನಲ್ಲಿ, ನಾಲ್ಕಾರು ಪುಸ್ತಕ ಓದಿದ್ದು ಬಿಟ್ಟರೆ,ಫೇಸ್ ಬುಕ್ ನಲ್ಲಿ ಚುಟುಕು ಸಂದೇಶಗಳನ್ನ ಹಾಕುತ್ತಿದ್ದುದನ್ನ ಬಿಟ್ಟರೆ ಮತ್ತೇನನ್ನು ಮಾಡಿಯೇ ಇಲ್ಲ. ಈ ನಡುವೆ ಹೇಳಬೇಕೆಂದುಕೊಂಡಿದ್ದ ಹಲವು ವಿಷಯಗಳು ಹಳೆಯದಾಗಿವೆ,ಹಾಂ ಹೊಸ ವಿಷಯಗಳು ಬಂದು ಸೇರಿವೆ .ಈ ಸಾರೇ ನಾನೋದಿದ ಪುಸ್ತಕಗಳ ಬಗ್ಗೆ ನಿಮಗೆ ಹೇಳಲೇ ಬೇಕು .ಓದಿ ಖುಷಿಯಾಗಿದ್ದು,ಜೋಗಿಯವರ ಸೂಫೀ ಕತೆಗಳನ್ನ,ಚಿತ್ರಾ ದಿವಾಕರುಣಿಯವರ One Amazing Thing,ಮತ್ತು ಇನ್ನೂ ಹಲವು, ಎಷ್ಟು ಓದಿದರು   ಹಳೆಯದೆನಿಸದ ಪ್ರೀತಿಯ ಲಂಗೂಲಾಚಾರ್ಯರದ್ದು .

ನನ್ನ ಮೆಚ್ಚಿನ ಆಕೆ ಇತ್ತೀಚೆಗೆ ಖುಷಿ ಇಂದ ಇದ್ದಾಳೆ,ಮನೆಯಲ್ಲಿ ಮತ್ತೆ ಸಂಭ್ರಮ ಮರುಕಳಿಸಿದೆ .ಮತ್ತೆ ಬರೆಯುತ್ತೇನೆ,ಇವತ್ತು ಲಭ್ಯವಿದ್ದ ಸಮಯ ಇಷ್ಟೇ....

ಗುರುವಾರ

ಕಳೆದದ್ದು ಸಿಕ್ಕಿಲ್ಲಾ


ಬ್ರಾಹ್ಮಣ ಯಾರು? ಕೋಟಿ ತೀರ್ಥದ ಕಟ್ಟೆಯ ಮೇಲೆ ಕುಳಿತು ಶ್ರಾಧ್ಧ ಮಾಡುವಾಗ ಭಟ್ಟರು ಯೊಚಿಸುತ್ತಿದ್ದದು ಇದನ್ನೇ.. ಅವರ ಅಪ್ಪನ ಶ್ರಾಧ್ಧ ಮಾಡುವಾಗ ಭಟ್ಟರನ್ನ ತಾಕುತ್ತಿದ್ದುದು ಅವರಪ್ಪನ ನೆನಪಲ್ಲ, ‘ತೋ ನೀನು ಬ್ರಾಹ್ಮಣನಾಗಿ ಶ್ರಾದ್ಧಮಾಡದೇ ನಿನ್ನ ಅಪ್ಪನನ್ನು ದುರ್ಗತಿಗೀಡು ಮಾಡುವೆಯಾ, ಮಗನಾಗಿ ನಿನಗೆ ಅಷ್ಟು ಯೋಗ್ಯತೆಯೂ ಇಲ್ಲವ ‘ ಎಂದ ಸಂಬಂಧಿಗಳ ಬಿರು ನುಡಿ , ಕೆಲವರ ಹಿತನುಡಿ , ಅಮ್ಮನ ಆಗ್ರಹ....... ಅಮ್ಮನ ನಂಬಿಕೆಗಾಗಿ ತಾನು ಮಾಡುತ್ತಿರುವದಲ್ಲವ ..? ಅಂತೂ ಅಪರ ಕಾರ್ಯಗಳನ್ನು ಸಾಂಗವಾಗಿ ಮುಗಿಸಿದ್ದಾಯಿತು ,ನನ್ನ ಮಗನಿಗೆ ಹೇಳಬೇಕು ,ನಾನು ಸತ್ತಾಗ ಶ್ರಾಧ್ಧ ಮಾಡುವದೆಲ್ಲ ಬೇಡವೆಂದು , ದೇಹವನ್ನ ಯಾವುದಾದರೊಂದು ವೈದ್ಯಕೀಯ ಕಾಲೇಜ್ ಗೆ ದಾನ ಮಾಡಿ ಎನ್ನಬೇಕು ಅಂದುಕೊಂಡಿದ್ದೆ.....ಈಗಂತೂ ದೇಹದಾನ,ನೇತ್ರ ದಾನ ಎಷ್ಟು ಅಮೂಲ್ಯವಾದುದು. ‘ಶ್ರದ್ಧಾ ಇವ ಶ್ರಾದ್ಧಃ’ ಶ್ರದ್ಧೆಯೇ ಶ್ರಾದ್ಧ ಅಲ್ಲವ.ಶ್ರದ್ಧೆಯೇ ಇಲ್ಲದವ ಶ್ರಾದ್ಧ ಮಾಡಿ ಪ್ರಯೋಜನವೇನು? ಪುರೋಹಿತರನ್ನ ಕರೆದು ಕೈಯಲ್ಲಿ ಕಾಸಿಲ್ಲದಿದ್ದರು ಮೈ ತುಂಬಾ ಸಾಲ ಮಾಡಿ ಆ ಜೋಯಿಸ್ರು ಹೇಳಿದ ಕಡೆಯಲ್ಲ ದಕ್ಷಿಣೆ ಇಟ್ಟು ,ಪಂಚೆ ,ತಂಬಿಗೆ,ಅಕ್ಕಿ ದಾನ ಮಾಡಿ ... ಶ್ರಾದ್ಧ ಮುಗಿಸಿ ಕೊನೆಗೆ ಸಾಲ ತೀರಿಸಲು ಅಲೆದಾಡುವವರನ್ನು ನೋಡಿ ಅಯ್ಯೋ ಅನಿಸಿತ್ತು. ಅಲ್ಲ ಸ್ವಾಮಿ, ಇದೆಲ್ಲ ಬೇಕಿತ್ತ ಎಂದರೆ, ನಿನ್ನದೊಂದನ್ನು ನೀನು ನೋಡ್ಕೊಳ್ಳೋ..ಎಂದಿದ್ದ ನನ್ನ ಸ್ನೇಹಿತನೊಬ್ಬ.....
ಶ್ರಾದ್ಧ ಮುಗಿಸಿ ಕುಳಿತ ಭಟ್ಟರನ್ನ ಕಾಡಿದ್ದು ಹಳೆಯ ನೆನಪುಗಳು..
ಅಪ್ಪ ಹಾಗೆ ಅಲ್ಲವ? ಎಲ್ಲವೂ ತನ್ನ ಮೂಗಿನ ನೇರಕ್ಕೇ ಆಗ್ಬೇಕು ಅಂತಿದ್ದೋನು .ಸಾಯುವ ಗಳಿಗೆಯಲ್ಲೂ , ಗಂಗೆಯ ನೀರು ಕೂಡಿದೇ ಉಸಿರು ಬಿಟ್ಟಿದ್ದು ..... ಎಲ್ಲಿ ನೋಡಿದರು ಇದು ಮಡಿ, ಇದು ಮೈಲಿಗೆ ...ಆತನ ಕೂಗಾಟ ಸಹಿಸಲಾಗದೆ ಸುಮ್ಮನೇ ಎದುರಾಡುವದೇಕೆಂದು ಸುಮ್ಮನ್ನಿದ್ದುದಾಗಿತ್ತು. ಆತನೊಂದು ಸರ್ವಾಧಿಕಾರಿಯೇನೋ ಎಂಬಂತೆ ಬದುಕಿದ್ದ... ಮೊನ್ನೆ ಸಾಯುವವರೆಗೂ ,ಕೊನೆಯ ಕ್ಷಣಗಳಲ್ಲೂ ಆತ ಬದಲಾಗಲೇ ಇಲ್ಲ, ಆತ ಬದಲಾಗುತ್ತಾನೆ ಎಂದು ನಿರೀಕ್ಷಿಸಿದ್ದೇ ತನ್ನ ತಪ್ಪೇನೋ ಅನಿಸಿತ್ತು.. ಅಮ್ಮನನ್ನ ನೋಡಿ ತಾನು ಸುಮ್ಮನಿದ್ದುದಾಗಿತ್ತು... ಅಪ್ಪ ಹೇಳಿದ್ದೆಲ್ಲ ಶಿರಸಾವಹಿಸಿ ಮಾಡುತ್ತಿದ್ದಳು ..ಆಕೆಗೆ ಅಪ್ಪನೇ ದೇವರಾಗಿದ್ದ....ಅಪ್ಪನನ್ನ ಬಿಟ್ಟು ಮನೆಯ ಅಂಗಳ ದಾಟಿದ್ದೂ ಇಲ್ಲ... ಅಮ್ಮನಿಗೆ ಅಪ್ಪನೇ ದೈವ ,ಅಪ್ಪನಿಗೋ ಗೋಕರ್ಣಾಧೀಶ್ವ ರನೇ ಮನದ ಒಡೆಯ.. ಇದು ಆದರ್ಶವಾ ? ಗೊತ್ತಿಲ್ಲ...
ಹ್ಮ್... ಎಳೆವೆಯಲ್ಲೇ ಅಪ್ಪನ ಒತ್ತಾಯಕ್ಕೆ ಮಣಿದು ಬನಾರಸ್ಸು ಸೇರಿದ್ದಾಗಿತ್ತು.. ಮನೆಯನ್ನ ,ಮಮತೆಯ ಅಮ್ಮನ ಬಿಟ್ಟು ಹೋಗಲಾರೆ ಎಂದು ಅದೆಷ್ಟು ವಾದಿಸಿದ್ದೆ ತಾನು , ಮೇಲಾಗಿ ,ಸಂಸ್ಕೃತ ಕಲಿಯುವಲ್ಲಿ ,ವೇದಾಧ್ಯಯನ ದಲ್ಲಿ ಆಸಕ್ತಿಯೂ ಅಷ್ಟಕ್ಕಷ್ಟೇ.......ಕೊನೆಗೂ ಅಪ್ಪನದೇ ಮೇಲುಗೈ . ಅಂತೂ ಪಕ್ಕದ ಮನೆಯ ಬಾಲೂ ಭಟ್ಟನನ್ನ ಜೊತೆ ಮಾಡಿ ಬನಾರಸ್ಸು ಸೇರಿಸಿಯೇ ಬಿಟ್ಟಿದ್ದ ಅಪ್ಪ. ಕಾಲೇಜು ಸೇರಿ ವಿಜ್ಞಾನ ಕಲಿಯಬೇಕೆಂಬ ಹಂಬಲವನ್ನ ಮೂಟೆಕಟ್ಟಿ ಇಟ್ಟಿದ್ದೆ ತಾನು ....... ...ನಾನು ಬನಾರಸ್ಸಿನಲ್ಲಿ ಸಂಸ್ಕೃತ ಕಲಿಯೋಕೆ ಹೋದಾಗ ಹಾಂ....ಆಕೆ ಸಿಕ್ಕಿದ್ದು ಅಲ್ಲೇ ಅಲ್ಲವ? ಶುದ್ದ ಮೊಗದ ಗಂಗೆಯೇ ಆಕೆ. ಬನಾರಸ್ಸಿನಲ್ಲ್ಲಿ ಉಳಿದು ೨ ವರ್ಷಗಳಾಗುವವರೆಗೂ ಆಕೆ ತನಗೆ ಕಂಡಿರಲೇ ಇಲ್ಲ. ಒಮ್ಮೆ ಹೀಗೆ ಸುಮ್ಮನೇ ಸ್ನೇಹಿತನ ಬಲವಂತಕ್ಕೆ ತಿರುಗಾಡಲು ಹೋದಾಗ ಆಕೆ ಕಣ್ಣಿಗೆ ಬಿದ್ದಿದ್ದಳು...ಇನ್ನೋರ್ವ ಸ್ನೇಹಿತನ ಒಬ್ಬಳೇ ತಂಗಿ . ಆಕೆಯನ್ನ ಮತ್ತೆ ಮತ್ತೆ ನೋಡುವ ಹಂಬಲ ವಾಗಿತ್ತು . ಆಕೆ ಇನ್ನೂ ‘ಪ್ರಪಂಚವೆಂದರೇ ಬನಾರಸ್ಸು, ಬನಾರಸ್ಸೇಂದರೇ ಪ್ರಪಂಚ’ ಎಂದು ನಂಬಿದ ಮುಗ್ಧೆ. ನಂತರ ಸ್ನೇಹಿತನ ಮನೆಗೂ ಹೋಗಿದ್ದೆ ಹಲವು ಸಾರೇ ,ಆಕೆಯನ್ನ ನೋಡುವ ಸಲುವಾಗಿ. ಆಕೆಯೂ ಜೊತೆಗೆ ಹೆಜ್ಜೆ ಹಾಕುವ ಸೂಚನೆ ಕೊಟ್ಟಿದ್ದಳು. ಹೀಗೆಯೇ ಪ್ರೀತಿ ಸಾಗಿತ್ತು ...ಬರೋಬ್ಬರಿ ೪-೫ ವರುಷ......... ಆಕೆಯ ಜೊತೆಗೂಡಿ ಹಣತೆಹಚ್ಚಿ ನದಿಯಲ್ಲಿ ತೇಲಿಬಿಟ್ಟಿದ್ದೆ ,ನಮ್ಮ ಇಷ್ಟಾರ್ಥ ಸಿದ್ದಿಸಲೆಂದು ಪ್ರಾರ್ಥಿಸಿದ್ದೆ ...ಆ ಹಣತೆಯ ಬೆಳಕಲ್ಲಿ ಎಷ್ಟು ಶುದ್ಧವಾಗಿ ಕಂಡಿದ್ದಳು ಆಕೆ. ಬಾರದ ಭಾಷೆಯಲ್ಲಿ ಪ್ರೀತಿ ಇತ್ತು , ಕಣ್ಣಲ್ಲಿ, ಈ ಗೆಳೆಯ ಎಂದಿಗೂ ಕೈ ಬಿಡಲಾರನೆಂಬ ನಂಬಿಕೆ ಇತ್ತು.. ಅದು ಹೇಗೋ ಬಾಲೂ ಭಟ್ಟನ ಮೂಲಕ ಅಪ್ಪನವರೆಗೂ ಹೋಗಿತ್ತು. ಅಪ್ಪ, ಮಾಣಿಯನ್ನು ಇನ್ನೂ ಅಲ್ಲೇ ಬಿಟ್ಟರೆ ಪೂರ್ತಿ ಕೆಟ್ಟು ಹೋಗಿಬಿಟ್ಟಾನು ,ಯಾವಳನ್ನೊ ಕಟ್ಟಿಕೊಂಡೇ ಬಂದಾನು ಎಂದು ,ಅಮ್ಮನಿಗೆ ಹುಷಾರಿಲ್ಲ ತಕ್ಷಣ ಹೊರಡು ಎಂದು ತಂತಿ ಕಳುಹಿ ಕರೆಸಿ ಕೊಂಡಿದ್ದ...ತಾನು ಇಲ್ಲಿ ಬಂದಾಗ ಎಲ್ಲವೂ ಸರಿಯಾಗಿಯೇ ಇತ್ತು..., ಬಂದಮೇಲೆ, ತನಗೂ ವಯಸ್ಸಾಯಿತು ಇಲ್ಲಿಯೇ ನಿನ್ನ ಪೌರೋಹಿತ್ಯ ನಡೆಸು ಅಲ್ಲಿ ಹೋಗುವದೇ ಬೇಡ ಎಂದು ಬಲವಂತ ಮಾಡಿ ತಿರುಗಿ ಹೋಗದಂತೆ ಮಾಡಿಬಿಟ್ಟಿದ್ದ. ಆಕೆಯನ್ನು ಇಲ್ಲೇ ಕರೆಸಿಕೊಂಡರಾಯಿತೆಂದು ಕೊಂಡಿದ್ದ ನನಗೆ ಬಲವಂತವಾಗಿ ಸುಶೀಲಳನ್ನು ಗಂಟು ಹಾಕಿಸಿ ಬಿಟ್ಟಿದ್ದ. ಬ್ರಾಹ್ಮಣನಾಗಿದ್ದೇ ತಪ್ಪಾ ?ಅನಿಸಿತ್ತಲ್ಲ.......... ಆಕೆಯನ್ನ ಬಿಟ್ಟು ಬರುವಾಗೆಷ್ಟು ನೊಂದಿತ್ತು ತನ್ನ ಮನ..... ಕಾಲ ,ಜನರು ಎಲ್ಲ ಬದಲಾಗಿದಾರೆ ಎನ್ನುತ್ತಾರಲ್ಲ ..ಎಲ್ಲ ಸುಳ್ಳ ? ಹೌದು ತನ್ನ ಮಟ್ಟಿಗೆ ಸುಳ್ಳೇ.. ಕಾಲ ಬದಲಾಗೊಲ್ಲ , ಕಾಲ ಓಡುತ್ತೆ...… ಜನರು ತಮಗೆ ಬೇಕಿದ್ದುದನ್ನ , ಇದು ಸರಿ ಇದು ತಪ್ಪು ಎಂದು ಅಲಿಖಿತ ಒಪ್ಪಂದ ಮಾಡಿಕೊಂಡು ಎಲ್ಲರ ಮೇಲೆ ಬಲವಂತವಾಗಿ ಹೇರುತ್ತಿದ್ದುದು ಸುಳ್ಳಲ್ಲ.... ಆಕೆ ಹೇಗಿದಾಳೋ,ಎಲ್ಲಿದ್ದಾಳೋ ಒಂದೂ ಗೊತ್ತಿಲ್ಲ.... ಬಾಲೂ ಭಟ್ಟನೋ ತಿರುಗಿ ಬಂದು ಬಿಟ್ಟಿದ್ದ.....

ಈಗ, ಹುಟ್ಟಿದ ಮಗನ ಮುಖದಲ್ಲೇ ತನ್ನ ಸುಖ, ಕನಸು ಕಾಣುವದನ್ನ ಬಿಟ್ಟು ಇನ್ನೇನು ಉಳಿದಿಲ್ಲವಾಗಿತ್ತು....ತನ್ನ ಮಗ ಹಾಗಲ್ಲ ಅನುಭವಿಸ ಕೂಡದು, ನನ್ನ ಹಾಗೆ ಸಂಪ್ರದಾಯದ ಕಟ್ಟಳೇ ಬೇಲಿಯ ಒಳಗೆ ಬೆಳೆಯಬಾರದು ....ಇಂದಿನ ದಿನಕ್ಕೆ ಸರಿಯಾಗಿ ಬದುಕಬೇಕು ...ಎಂದೆಲ್ಲ ನನ್ನ ಕನಸು ............ ಮನೆಯಲ್ಲಿ ಎಷ್ಟೆಷ್ಟೋ ಒಳ್ಳೆಯ ಪುಸ್ತಕಗಳನ್ನು ತಂದಿಟ್ಟಿದ್ದೆ,ಚಿಕ್ಕ ಮಗ ಓದುವಂತೆ ಲಕ್ಷ್ಯ ಸೆಳೆಯುತ್ತಿದ್ದೆ..

ತನಗೆ ಹಳೆಯ ಸಂಪ್ರದಾಯಗಳಿಂದ ದೂರ ಓಡಿ ಹೋಗಿ ಗಂಗೆಯ ತಟದಲ್ಲಿ ಬದುಕಬೇಕೆಂದಿತ್ತು, ಕೊನೆಗೂ ಆಗಲೇ ಇಲ್ಲ....ಅದಕ್ಕೆ ಅಲ್ಲವ ಮಗನಿಗೆ ವಿಜ್ಞಾನ ಓದಿಸಿದ್ದು ... ಮಗನಿಗೆ ಮನೆಯಲ್ಲಿ ತಾನು ಹೇಳಿಕೊಟ್ಟುದೇನೂ ಇಲ್ಲ, ಮನೇಪಾಠಕ್ಕೂ ಸೇರಿಸಿಲ್ಲವಾಗಿತ್ತು.. ಈಗ ೧೦ ವರುಷಗಳ ಹಿಂದೆಯೇ ಕುಮಟೆಯ ಬಸ್ಸಿನಲ್ಲಿ ಸಿಕ್ಕ ಯಾಜೀ ಮಾಸ್ತರ್ರು , ‘ನಿಮ್ಮ ಮಗ ಬಿಡಿ , ಶಾಲೆಗೇ ಆದರ್ಶ ವಿದ್ಯಾರ್ಥಿ ಅವನು’ ಎಂದಿದ್ದರು.. ಪಾಠದಲ್ಲಷ್ಟೇ ಅಲ್ಲ, ಏನೇನೂ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ತಂದು ಅಮ್ಮನ ಮುಂದೆ ಹಿಡಿಯುತ್ತಿದ್ದ... ಹತ್ತನೆ ತರಗತಿ ,ಪಿಯುಸಿ ಯಲ್ಲೆಲ್ಲ ೯೭ % ,೯೪ % ಅಂಕಗಳಿಸಿದಾಗ ಇಡೀ ಊರಿಗೇ ಪೇಡೇ ಹಂಚಿದ್ದೆ. ೯೦% ಕ್ಕಿಂತ ಜಾಸ್ತಿ ಮಾಡಿದವರಿಗೆಲ್ಲ ಇಡಗುಂಜಿಯಲ್ಲಿ ಸನ್ಮಾನಿಸುತಾರಂತೆ ... ಹೋಗಿ ಬಾ ಎಂದಾಗ ... ‘ಇಲ್ಲಪ್ಪ ನನಗೆ ಆಸಕ್ತಿ ಇಲ್ಲ’ ಎಂದ ಮಗನಿಗೆ ಕೊಂಚ ಒತ್ತಾಯಿಸಿದ್ದು ಸುಳ್ಳಲ್ಲ. ಇಡಗುಂಜಿಗೆ ಹೋಗಲೇಬೇಕೇನೂ ಅಪ್ಪ.. ಎಂದ , ಮರುಕ್ಷಣದಲ್ಲಿಯೇ ‘ಸರಿ’ ಎಂದು ಹೆಚ್ಚೇನೂ ಹೇಳದೇ ಹೊರಟಾಗ ...ಮಗ ಹೇಳಿದ್ದು ಕೇಳಿದನಲ್ಲ ಎಂದು ಕುಶಿ ಆಗಿತ್ತು ... ಆದರೆ ಮಗ? ಮಗ ಯಾಕೋ ತಿಕ್ಕಲು ಎಂದು ನೆರೆಯವರು ಹೇಳಿದ್ದು ಕೇಳಿದ್ದೆ. ಅದಕ್ಕೆ ಸರಿಯಾಗಿ , ಇಡಗುಂಜಿಗೆ ಹೋಗಬೇಕಿದ್ದವ ,ಮನೆಯಿಂದ ಹೊರಟು ಸಿಗಂಧೂರಿಗೆ ಹೋಗಿ ಬಂದು ಬಿಟ್ಟ........ ಸನ್ಮಾನಗಳೆಲ್ಲಾ ಬೇಡ ತನಗೆ ಎಂದು ಹೋಗಲೇ ಇಲ್ಲ ಎಂದಿದ್ದ...
ಇದ್ದ ಒಬ್ಬ ಮಗನಿಗೆ ವಿಜ್ಞಾನ ಕಲಿಸಿ ಮುಂದೆ ತರಬೇಕೆಂಬ ತನ್ನ ಕನಸು ಅರ್ಧಭಾಗ ಮುಗಿದ ಹಾಗೆ ಎಂದು ಸಂತಸ ಪಟ್ಟಿದ್ದೆ.. ವಿಪರೀತ ಎನ್ನುವಷ್ಟು ಓದುತ್ತಿದ್ದ ಆತನ ಕಂಡು ಅಕ್ಕರೆ ಉಕ್ಕಿ ಬರುತ್ತಿತ್ತು.. ಭೈರಪ್ಪ,ಕಾರಂತ,ತೇಜಸ್ವಿ,ಕಾಳಿದಾಸ,ಭಾಸ, ವ್ಯಾಸ, ಸ್ಟೀಫಾನ್ ಹಾಕಿಂಗ್...ಇನ್ನೂ ನಾನು ಕೇಳರಿಯದ ಹೆಸರುಗಳು….. ನಮ್ಮ ಮನೆಯಲ್ಲಿ ವಿಜ್ಞಾನವನ್ನ ಪ್ರತಿಪಾದಿಸುವ ,ಹಳೆಯ ಗೊಡ್ಡು ಸಂಪ್ರದಾಯಗಳನ್ನು ಖಂಡಿಸಬಲ್ಲ ಕುಡಿಯೊಂದು ಚಿಗುರುತ್ತಿದೆಯಲ್ಲ, ತನಗೆ ಸಿಗದ ಅವಕಾಶ ತನ್ನ ಮಗನಿಗಾದರೂ ಸಿಕ್ಕಿತಲ್ಲ ಎಂದು ಸಂತಸವಾಗಿತ್ತು...

ಅದಕ್ಕೆ ತಕ್ಕಂತೆ ಒಳ್ಳೆಯ ಕಾಲೇಜುಗಳಲ್ಲಿ ಓದಿ ದೂರದ ದೇಶ ಇಂಗ್ಲೆಂಡಿನ ಪ್ರಸಿದ್ದ ಸಂಸ್ಥೆ ಯಲ್ಲಿ ವಿಜ್ಞಾನಿ ಆಗಿ ಸೇರಿದ್ದ.. ೭-೮ ತಿಂಗಳುಗಳು ಆದಾವೆಂದು ತೋರುತ್ತೆ...


ಕಳೆದ ತಿಂಗಳು ಕೆಲ್ಸಾ ಸೇರಿ ಮೊದಲ ಬಾರಿಗೆ ಊರಿಗೆ ಬಂದಿದ್ದ,ಇನ್ನೇನು ಹೊರಡುವ ದಿನ ಹತ್ತಿರ ಬಂದು ಬಿಟ್ಟಿತಲ್ಲ ಎಂದು ಕೊಂಡಾಗ, ಅಪ್ಪ ನಿಮ್ಮ ಹತ್ತಿರ ಸ್ವಲ್ಪ ಮಾತನಾಡಬೇಕು ಎಂದ. ಸರಿ ಏನಪ್ಪಾ ಹೇಳು ...ಎಂದೆ. ಅಪ್ಪಾ... ನಾನು ಸನ್ಯಾಸ ಸ್ವೀಕರಿಸುತ್ತೇನೆ. ಮಗ ಗಟ್ಟಿ ನಿರ್ಧಾರ ಮಾಡಿ ಹೇಳಿದಂತೆ ಇತ್ತು........... ಸನ್ಯಾಸ ಅಂದರೆ ಸುಲಭ ಎಂದು ಕೊಂಡೆಯ? ಯಾವುದೇ ಜೀವ ಕಣಕ್ಕೂ ತೊಂದರೆ ಆಗದ ಹಾಗೆ ಬದುಕಬೇಕು,ತಾನೆಂಬುದನ್ನ ಮರೆತು ಸರ್ವಜನ ಹಿತಕ್ಕಾಗಿ ಬದುಕಬೇಕು , ಅದರಲ್ಲೂ ರಾಜ ಸನ್ಯಾಸ ಸುಲಭದ್ದಲ್ಲ, ನೂರಾರು ಸಾವಿರಾರು ಜನರು ನಿನ್ನ ನಂಬಿರುತ್ತಾರೆ.ಅಲ್ಲ ಮೊನ್ನೆ ಆ ನಿತ್ಯಾನಂದನ ವ್ಯವಹಾರ ನೋಡಿ , ಹೇಳುತ್ತಿದ್ದೇಯಲ್ಲ...ಕಾಕಿ ,ಖಾವಿ,ಖಾದಿ ಎಲ್ಲವೂ ಪ್ರಶ್ನಾತೀತವಾಗಿದ್ದಾವೆ ,ಶಕ್ತಿಯನ್ನೇ ಮರೆತಿದ್ದಾವೆ ,ಮೋಹದಲ್ಲಿ ಬಿದ್ದಿದ್ದಾರೆ ಅಂತ.. ಮತ್ತೆ ನೀನು ವಾಲುತ್ತಿರುವದು ಯಾಕೆ? ಅಲ್ಲ ಮಗನೇ ಸನ್ಯಾಸ ಸ್ವೀಕಾರದಿಂದ ಎಲ್ಲವೂ ಮುಗಿಯುವದಿಲ್ಲ. ಅಲ್ಲ ವ್ಯಕ್ತಿ ಯೋರ್ವ ಶಕ್ತಿಯಾಗುವದು ಎಷ್ಟು ಕಷ್ಟದ ಜವಾಬ್ದಾರಿ ಗೊತ್ತಾ ಮಗು ........ ಅದೊಂದು ಪುನರ್ಜನ್ಮ,ಪೂರ್ವಾಶ್ರಮ ದೊಂದಿಗೆ ನಿನ್ನ ಸಂಬಂಧ ಪೂರ್ತಿ ಇಲ್ಲವಾಗುತ್ತೆ. ನಾನು ಮಠಮಾನ್ಯಗಳ ವಿರುದ್ದವಿದ್ದಿದ್ದು ಗೊತ್ತಿತ್ತು ಮಗನಿಗೆ. ಅಪ್ಪ... ಮೊಹವೇ ಮುಖ್ಯವಾಗಬಾರದಪ್ಪ,ಅದರ ಹೊರತಾಗಿಯೂ ಜೀವನವಿದೆ.ಅದನ್ನ ಹುಡುಕುತ್ತಾ ಹೊರಡುತ್ತಿದ್ದೇನೆ..ಇತಿಹಾಸ ಮರುಕಳಿಸುತ್ತದೆಯಂತೆ.. ಧರ್ಮ ಗ್ಲಾನಿ ಆದಾಗಲೆಲ್ಲ ಮತ್ತೆ ಮಾರ್ಗದರ್ಶಕರು ಬೇಕಾಗುತ್ತಾರೆ ಅಂದಿದ್ದ. ಅಪ್ಪ ನಾವು ಕೆಲಸ ಮಾಡುವದೆಲ್ಲ ಏತಕ್ಕೆ,ಪರದೇಶದವರನ್ನ ಉದ್ಧರಿಸುವದಕ್ಕ?ನನ್ನ ಅವರು ಕೂಲಿಯ ತರ ನೋಡುವದಕ್ಕ? ಇಲ್ಲಪ್ಪ.. ನನಗೆ ಧರ್ಮ ಕೊಡುವ ಶಾಂತಿಯನ್ನ ಬೇರಾವದೋ ಕೊಡಲಿಕ್ಕೆ ಸಾಧ್ಯವೇ ಇಲ್ಲ....... ‘ಧರ್ಮ’ ಎಂದರೆ ಬದುಕೋ ಮಾರ್ಗ ಅಲ್ವಾ ಅಪ್ಪ ಯಾಕೆ ಈ ಜನ ಹೋಡ್ಕೊಂಡು ಸಾಯ್ತಾರೆ ? ಅಂತ ಮೊನ್ನೆ ಪಕ್ಕದ ಶಿವಮೊಗ್ಗ ಗಲಭೆಯ ಸಮಯದಲ್ಲಿ ಫೋನಿನಲ್ಲಿ ಹೇಳಿದ್ದು ನೆನಪಿಗೆ ಬಂತು... ಆತನ ವಾದದಲ್ಲಿ ತಪ್ಪೇನೂ ಇರಲಿಲ್ಲ........

ನಾನು ಅಷ್ಟು ಹೇಳುವಷ್ಟರಲ್ಲಿ ಸುಶೀಲಾ ಕಣ್ಣೀರು ಹಾಕುತ್ತಿದ್ದಳು ....ಮಗ ವಿಜ್ಞಾನಿಯಂತೆ ,ಪರದೇಶಗಳಲ್ಲಿ ತನ್ನ ಅಧ್ಯಯನದ ಮೇಲೆಲ್ಲ ತರಬೇತಿಗಳನ್ನು ನಡೆಸುತ್ತಾನಂತೆ ,ಮುಂದೆ ಒಂದು ದಿನ ತನ್ನನ್ನು ಕರೆದೊಯ್ಯ ಬಹುದು, ತಾನು ಮೊಮ್ಮಗುವನ್ನ ಆಡಿಸುತ್ತಾ ನಾಲ್ಕು ದಿನ ಹೆಚ್ಚು ಬದುಕಬಹುದು ....... ಮಗ ಈ ಸಾರೇ ಬಂದಾಗ ಮದುವೆ ಮಾಡಿಯೇ ಬಿಡಬೇಕೆಂದೂ ನಿರ್ಧರಿಸಿದ್ದಳು ... ಮೊನ್ನೆ ನಾದಿನಿಯ ಮಗನ ಮದುವೆಗೆ ಹೋದಾಗ ಹೆಣ್ಣಿನ ಕಡೆಯವರಿಬ್ಬರು ಮಗನಿಗೆ ಜಾತಕ ಕೊಡುವದಕ್ಕೆ ಬರುತ್ತೇನೆಂದಿದ್ದರು... ಎಂದು ನನ್ನ ಹತ್ತಿರ ಸಂಭ್ರಮದಿಂದ ಹೇಳಿಕೊಂಡಿದ್ದಳು , ಊರಿಗೆ ಬಂದ ಮಗನಿಗೆ ೨ ಹೆಣ್ಣುಮಕ್ಕಳ ಛಾಯಾಚಿತ್ರವನ್ನತೋರಿಸಿಯೂ ಇದ್ದಳು , ನಾವಿಬ್ರೂ ಇಷ್ಟು ಕಷ್ಟಪಟ್ಟಿದ್ದು ನಿನ್ನ ಸ್ವಾಮಿಯಾಗಿ ನೋಡಲಿಕ್ಕಲ್ಲ, ನಾವು ಹುಡುಕಿದ್ದು ಇಷ್ಟವಾಗಿಲ್ಲವಾದರೆ, ನೀನೆ ಹುಡುಗಿಯನ್ನ ಹುಡುಕು ,ಮದುವೆ ಮಾಡೋಣಾ ನೀನೇ ಯಾವುದಾದರೂ ಹುಡುಗಿಯನ್ನ ಮೆಚ್ಚಿ ಮದುವೆ ಆಗುವದಾದರೆ ನಮಗೆ ಸ್ವಲ್ಪವೂ ಬೇಸರಿಕೆ ಇಲ್ಲ,..... ಕೂದಲು ಕಿತ್ತುಕೊಂಡು , ತಲೆ ಬೋಳಿಸಿಕೊಂಡು , ದಂಡ ಹಿಡಿದು, ಕೇಸರಿ ಬಟ್ಟೆಯಲ್ಲಿ ನಿನ್ನ ನೆನೆಸಲೂ ಆಗದು ನನ್ನಲ್ಲಿ ... … ಮಾಣಿ ನೀ ಎಂತಕ್ಕೆ ಹಿಂಗೆ ಮಾಡ್ತೆ , ಎಂದೆಲ್ಲ ಬಿಕ್ಕಿಬಿಕ್ಕಿ ಅತ್ತಿದ್ದಳು ………. ಅಮ್ಮನ ಕಣ್ಣೀರಿಗೆ ಸ್ವಲ್ಪ ಕರಗಿದಂತೆ ತೋರಿದ್ದ......... ಅಮ್ಮ ನೀನು ಅಳಬೇಡ... ನೋಡೋಣ ಹೇಗೆ ಸಾಗುತ್ತದೆ ಜೀವನ ...ಎಂದು ಹೇಳಿ ಹೊರಟೇ ಹೋಗಿದ್ದ...



ನಮ್ಮ ಕನಸುಗಳನ್ನ ನಮ್ಮ ಮಕ್ಕಳಲ್ಲಿ ಕಾಣುವದು ತಪ್ಪಾ?.....ನಮ್ಮ ಮಕ್ಕಳ ಮೂಲಕ ನನಸಾಗಿಸಲು ಯತ್ನಿಸಿದ್ದರಲ್ಲಿ ನನಗೆ ತಪ್ಪೇನೂ ಕಾಣಲಿಲ್ಲ... ನನಗಾದ ಹಾಗೆ ನನ್ನ ಮಗನಿಗಾಗಬಾರದು ಎಂದಲ್ಲವೇ ತಾನು ಇಷ್ಟೆಲ್ಲಾ ಶ್ರಮ ಪಟ್ಟಿದ್ದು.... ಮಗ ವಿಜ್ಞಾನಿ ಆಗುತ್ತಾನೆಂದು ಎಷ್ಟು ಕನಸ ಕಟ್ಟಿದ್ದೆ...... ಎಳೆವೆಯಲ್ಲೇ ,ಆತ ತೋರಿದ್ದ ಪ್ರತಿಭೆಯೇನು ಚಿಕ್ಕದ? ಹ್ಮ್...

                    -2-
ಸುಶೀಲಾ ,ಬಾಗಿಲು ಹಾಕಿಕೋ ,ಇಲ್ಲೇ ಅಂಗಡಿಗೆ ಹೋಗಿ ಬರುತ್ತೇನೆ ...ಮನೆಯಲ್ಲಿಯೇ ಕೂತು ಕೂತು ಬೇಜಾರಾಗಿದೆ ಎಂದು ಹೊರಡುತ್ತಿದ್ದಂತೆಯೇ , ಪಕ್ಕದ ಮನೆಯ ಬಾಲೂ ಭಟ್ಟ ಹೇಳಿದ ಸುದ್ದಿ ಕೇಳಿ ತಡೆಯಲಾರದೇ ಅಲ್ಲೇ ಕುಸಿದು ಕುಳಿತರು ಭಟ್ಟರು....
ಅಲ್ಲ ,ನಿನ್ನ ಮಗನಿಂದ ಏನೂ ಸುದ್ದಿಯಿಲ್ಲವೆಂದು ಚಿಂತಿಸುತ್ತಿದ್ದೇಯಲ್ಲ ,ನೋಡು ಎಂತಹ ದೊಡ್ಡ ಸುದ್ದಿಯನ್ನೇ ತಂದಿದ್ದೇನೆ ನಾನು ಎಂದು ಅವನು ಅಲ್ಲೇ ಕಟ್ಟೆಯ ಮೇಲೆ ಕುಳಿತ .ನಮ್ಮ ಮಠ “ಚಕ್ರ ವಟೀ'' ಯಲ್ಲಿ ನಿನ್ನ ಮಗ ಸನ್ಯಾಸ ದೀಕ್ಷೆ ತೆಗೆದುಕೊಂಡನಂತೆ .... ಒಂದು ದಿನ ಅಲ್ಲಿನ ಮುಖ್ಯ ಸ್ವಾಮೀಜಿಯನ್ನ ಭೇಟಿ ಆಗಿದ್ದನಂತೆ.. ಸನ್ಯಾಸ ಸ್ವೀಕಾರಕ್ಕೆ ಅಂದೇ ನಿರ್ಧರಿಸಿದ್ಧ ಎಂದು ನೀನು ಹೇಳುತ್ತಿದ್ದೇಯಲ್ಲ ಅಲ್ಲವ... ..ಮಠದ ಹಿರಿಯ ಸ್ವಾಮಿಗಳು ,ಮತ್ತೊಮ್ಮೆ ಯೋಚಿಸುವಂತೆ ಹೇಳಿದರಂತೆ ...ಆ ನಿನ್ನ ಮಗನೇ ಸ್ವಇಚ್ಛೆಯಿಂದ ಬಂದಿದ್ದೇನೆ ಅಂದನಂತೆ ..
ಹೆಚ್ಚಿನ ಅಧ್ಯಯನಕ್ಕಾಗಿ ಆತ ಬನಾರಸ್ಸಿಗೆ ತೆರಳುತ್ತಿದ್ದಾನಂತೆ.....ವೇದ,ಜೋತಿಷ್ಯ ,ಎಲ್ಲ ಅಧ್ಯ ಮಾಡುತ್ತಾನಂತೆ..ನಿನ್ನ ಮಗನ ದೃಢ ಸಂಕಲ್ಪ ನೋಡಿ ಹಿರಿಯ ಸ್ವಾಮಿಗಳಿಗೆ ಅಪರಿಮಿತ ಆನಂದವಾಗಿದೆಯಂತೆ .....ಹೀಗೆ ಹೇಳುತಲೇ ಇದ್ದ ಬಾಲು ಭಟ್ಟ.... ಹಮ್



‘ಕಳೆದದ್ದು ಸಿಕ್ಕಲೇ ಇಲ್ಲವ’ ಎಂದು ಹೇಳಿದ ಭಟ್ಟರ ಕಣ್ಣು ಮಂಜಾಗಿತ್ತು...

ಭಾನುವಾರ

ಅನನ್ಯ,ಅನೂಹ್ಯ, ಎಂಬಂತ ಲೋಕವೊಂದು ಸೃಷ್ಠಿ ಆಗಿಬಿಡುತ್ತದೆ



ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ....
ಸೋ ಎಂದು ಶ್ರುತಿ ಹಿಡಿದು ಸುರಿಯುತ್ತಿತ್ತು
ಅದಕೇ ಹಿಮ್ಮೇಳವನು ಸೋಸಿಬಹಾಸುಳಿಗಾಳಿ
ತೆಂಗುಗರಿಗಳ ನಡುವೆ ನುಸುಳುತ್ತಿತ್ತು ....

ಮುಂಜಾವು,ಸೋನೆಮಳೆ, ಎಂತಹವರನ್ನೂ ಕಟ್ಟಿ ಹಾಕಿಬಿಡುತ್ತೆ, ಆ ಗಳಿಗೆ, ಕೊನೆಯವರೆಗೂ ಉಳಿಯಬಾರದಿತ್ತ, ಎನ್ನುವ 'ಹ್ಯಾಂಗೋವರ್' ಉಳಿಸಿಬಿಡುತ್ತೆ ಅಲ್ಲವಾ?ಓ ಭಾಸ್ಕರ ಬಂದನಾ?ಇಲ್ಲ; ಮೂಡಣದಲ್ಲಿ ಮಂಗಳಕಾರವಾದ ಕಾಂತಿಯೊಂದು ಹೊಳೆಯುತ್ತಿತ್ತು ಎಂಬುದರ ಮೂಲಕ ಎಂದು ಕವಿ ಪರೋಕ್ಷವಾಗಿ ಹೇಳುತ್ತಾರೆ. ಎಷ್ಟು ಅದ್ಭುತವಾದ ಕಲ್ಪನೆ.....

ಮರೆತೀರಾ, ಇದು ಬಿರುಗಾಳಿಯಲ್ಲ,ಬಿರುಮಳೆಯ ಸನ್ನಿವೇಶವಲ್ಲ . 'ತುಂತುರು' ಮಳೆಯ ಸಮಯ. ತೆಂಗುಗರಿಗಳ ಅಲುಗಾಟ ಸುಳಿಗಾಳಿಯ ಅಸ್ತಿತ್ವಕ್ಕೊಂದು ಆಧಾರ. ವಿಶೇಷವೇನು ಗೊತ್ತಾ, ಹಸಿರು ಚಿಗುರುಹುಲ್ಲಿನ ತುದಿಯಲ್ಲಿ ಕುಳಿತ ಹನಿಗಳು ,ಹೂವ ಎಸಳಿನ ತೆಕ್ಕೆಬಿದ್ದ ಮುತ್ತಿನಂತ ಹನಿಗಳು,ಮನೆಯ ಮಾಡಿನಿಂದ ಲಯಬದ್ಧವಾಗಿ ತೊಟ್ಟಿಕ್ಕುವ ಮಳೆ ನೀರು, ಹನಿ ಹನಿಯಲ್ಲಿಯೂ ಜೀವತುಂಬಿಕೊಂಡಿದೆಯೇನೋ ಎಂಬಷ್ಟು ಅಚ್ಚು ಮೂಡಿಸುತ್ತವೆ.ಜತನವಾಗಿ ಕಾಪಿಡಬೇಕಾದ ಭಾವಗಳ ಅಲೆಯೊಂದನ್ನು ಸೃಷ್ಠಿಸುತ್ತವೆ.

ಕೈಯಲ್ಲೊಂದು ಲೋಟ ಬಿಸಿ ಬಿಸಿಯಾದ ಕಷಾಯ ಹಿಡಿದು ಇವುಗಳ ವೀಕ್ಷಣೆಗೆ ಕುಳಿತರೆ ಕಾಲ ನಿಂತೇ ಹೋದಂತೆ ಭಾಸವಾದೀತಲ್ಲ?ಕ್ಷಣ ಕಳೆದಂತೆ,ಮುಂಜಾವಿನ ಮಳೆಯ ಗತಿ ಲಂಬಿಸುತ್ತಾ ಅಬ್ಬರ ಜೋರಾಗುತ್ತದೆ. ಸುಮ್ಮನೆ ಮಳೆ ಬೀಳ್ವದನ್ನ ನೋಡುತ್ತಾ ಕುಳಿತಿದ್ದರೆ,ಅಲ್ಲೇ ಒಂದು 'ಅನನ್ಯ,ಅನೂಹ್ಯ', ಎಂಬಂತ ಲೋಕವೊಂದು ಸೃಷ್ಠಿ ಆಗಿಬಿಡುತ್ತದೆ.ಜೋರಾಗಿ ಸುರಿವ ಮಳೆಗೊಂದು 'ರಿದಂ' -ತಾಳ,ಲಯ ಗತಿಗಳಿದ್ದಾವ,ಎಂಬ ಅಚ್ಚರಿಯ ಲೋಕದಲ್ಲಿ ನಾವು ತೇಲುವದು ದಿಟ. ಒಂದು ಸಾರೇ ಜೋರಾಗಿ,ಕ್ಷಣದಲ್ಲಿ ಮಂದ್ರಗತಿಗಿಳಿದು, ಜೀರುಂಡೆ,ಕಪ್ಪೆಗಳ ಕೂಗಾಟ, ಅರಚಾಟಗಳ ಮಧ್ಯೆ,ಮತ್ತೆ ತಾರಕಕ್ಕೇರಿ ಸುರಿಯ ತೊಡಗಿದರೆ, ನಿಮ್ಮೂರ ಕೊಳಚೆಯನ್ನಷ್ಟೇ ಅಲ್ಲ,ವಿಶಾಲ ಜಗವನ್ನೇ ಚೊಕ್ಕವಾಗಿಸಿ ಮಟ್ಟಸ ಮಾಡಿಬಿಡುತ್ತೇನೆ, ಎಂಬ ಮಳೆರಾಯನ ನಿರ್ಧಾರ ಮತ್ತೂ ಗಟ್ಟಿಯಾದಂತೆ ತೋರುತ್ತದೆ,ಜೀರುಂಡೆ,ಓಟರ್ಗಪ್ಪೆಗಳ ಅರಚಾಟ ಕ್ಷಣ, ಸಹ್ಯವೆನಿಸುವದಲ್ಲ?

ಹಂ ಹೌದು ಇದೆ ಜೋರು ಮಳೆಯಲ್ಲಿ ತೋಯ್ದು ತೊಪ್ಪೆಯಾದ ದನಕರುಗಳನ್ನ ಆ ದನಗಾಹಿ ಅಟ್ಟಿಸಿಕೊಂಡು ಹೋಗುತ್ತಿದ್ದಾನೆ,ಹಾದಿ ಬದಿಯ ಚಿಗುರನ್ನ ಕತ್ತರಿಸುತ್ತಾ, ಮೆಲಕು ಹಾಕುತ್ತ, ಸಾಗಿಹ ಆ ದನಕರುಗಳನ್ನು ನೋಡುವದೆಷ್ಟು ಚಂದ.! ಆ ಬಿಳಿಯ ಪುಟ್ಟ ಕರು ನೆಗೆಯುತ್ತಿದೆ,ಮಳೆ ಜೋರಾದಂತೆ ಅಮ್ಮನ ಹಿಂದೆ,ಪಕ್ಕದಲ್ಲಿ ಅಂಟಿಕೊಂಡೇ ಸಾಗುತ್ತಿರುವದನ್ನ ನೋಡಿದರೆ, ಪಾಪ! ಅದಕ್ಕೂ ಚಳಿ ಆಗೋಲ್ವಾ,ಎನ್ನುವ ಫೀಲ್ ಹುಟ್ಟಿಸಿ ಬಿಡುತ್ತದಲ್ಲ....?

ಹೊತ್ತು ಏರುತ್ತಿದೆ, ಪಕ್ಕದ ಮನೆಯ ಬಚ್ಚಲ ಮನೆಯಿಂದ,ಕಾರಖಾನೆಯ ಚಿಮಣಿ ಇಂದ ಹೊರಬರುವ ಹೊಗೆಯಂತೆ ಒಂದೇ ಸವನೇ ಹೊಗೆ ಬರುತ್ತಿದೆ.ಸೌದೆ ಒದ್ದೆಯಿರಬೇಕು.ಜೋರು ಮಳೆಗೆ ತಲೆಬಾಗದೆ,ತಲೆ ಎತ್ತಲೂ ಆಗದೆ ಅಲ್ಲೇ ಚೆಲ್ಲಾಪಿಲ್ಲಿ ಆಗುತ್ತಿದೆ.ಅಮ್ಮ ಮಾಡಿದ ಸಾಂಬಾರಿನ ಪರಿಮಳ,ಒಗ್ಗರಣೆಯ ಘಾಟು, ಸಾಸಿವೆಯ ಚಟಪಟ ಸದ್ದನೊಡಗೂಡಿ ಹಾಗೆಯೇ ತೇಲಿಬರುತ್ತಿದೆ.
ರಸ್ತೆಯ ತುದಿಯಲ್ಲಿ ಚಿಣ್ಣರ ದಂಡೇ ಕಾಣುತ್ತಿದೆ.ಓಹೋ ಮಧ್ಯಾನ್ಹದ ಊಟದ ಸಮಯವಾಯಿತಲ್ಲ.ಹೇಯ್! 'ನೀತಿ', ನನ್ನ ಹೊಸ ಚಪ್ಲಿ ನೋಡೇ,ಎಷ್ಟು ಚೆನಾಗಿ ನೀರು ಹಾರುತ್ತೆ,ಎನ್ನುತ್ತಾ ಪೋರನೊಬ್ಬ ಕಾಲಿನಿಂದ ಮಳೆ ನೀರನ್ನು ಬಡಿಯುತ್ತಿದ್ದಾನೆ.ಹಮ್ಮ್,ಕೆಸರು ನೀರು ತಲೆತುಂಬ ವ್ಯಾಪಿಸಿ,ಹಣೆಯ ಮೇಲಿಂದ,ಕಿವಿಯ ಪಕ್ಕದಲ್ಲಿ,ಬಿಳಿಯ ಸಮವಸ್ತ್ರ ದ ಮೇಲೆ,ಕೊನೆಗೆ ಮೈ ಎಲ್ಲ ತೋಯಿಸಿದೆ.ಮಳೆಯಲ್ಲಿ ನೆನೆಯಬೇಡ, ಎಂಬ ಅಮ್ಮನ ಕಿವಿನುಡಿ,ಗಾಳಿಯೊಟ್ಟಿಗೆ ಗಾಳಿಯಾಗಿ ಹಾರಿ ಹೋಗಿದೆ,ಮಳೆಯಂತೆ ನೆಲಕ್ಕೆ ಬಿದ್ದು ರಸ್ತೆಯಗಲ ಚದುರಿ ಹೋಗಿದೆ. ಆದರೂ,ಅಮ್ಮ 'ಬೈದು ಬಿಟ್ಟರೇ', ಎಂಬ ಚಿಕ್ಕ ಭಯ ಜೊತೆಯಲ್ಲಿಯೇ ಇದೆ.

ಪೆಟ್ಟಿಗೆಯಂತ ಕೋಣೆಯಲ್ಲಿ, (ತಗಡಿನ ಮೇಲ್ಚಾವಣಿ ಇದ್ದರೇ ಇನ್ನೂ ಒಳಿತು) ಕೇಳುವ, ಪರ್ವಿನ್ ಸುಲ್ತಾನರ ರಾಗ್ -ಮೇಘಮಲ್ಲಾರ್:ಮೋಡಗಳು ಓಡುತ್ತಿವೆ,ಹಾನ್ ಈಗ ಘರ್ಶಿಸುತ್ತಿವೆ ,ಶುರುವೇ ಆಯಿತು ಜಿಟಿ ಮಳೆ,ಮೊದಲು ಮಂದ್ರ,ನಂತರ ತಾರಸಪ್ತಕಕ್ಕೇರಿ, ತಲೆಯ ಮೇಲೆಯೇ ಮಳೆ ಸುರಿಯುತ್ತಿದೆಯೇನೋ ಎನ್ನುವ ಅನುಭವ ಕಟ್ಟಿಕೊಡುತ್ತದೆ.ಅದರೊಟ್ಟಿಗೆ ಕಾಳಿದಾಸ ಮಹಾಕವಿಯ 'ಮೇಘದೂತ'ವನ್ನ ಓದಲು ಮರೆಯದಿರಿ. ವಿಶಿಷ್ಟ ಕಲ್ಪನೆಯ ಮೇಘದೂತ ಓದುತ್ತಾ, ಓದುತ್ತಾ, ಮೇಘದೊಟ್ಟಿಗೆ ನೀವೂ ಮೇಘವಾಗಿ ಬಿಡುವಿರಿ.

ಹಾನ್, ಮಳೆನಿಂತ ಮೇಲೆ ಬಿದ್ದ ಕೊನೆ ಹನಿ,ಮನೆಯ ಮಾಡಿನಿಂದುರುಳಿ,ಮನೆ ಗೋಡೆಗೆ ಸಾದಿ ಬೆಳೆದ ಪೇರಳೆ ಮರದ ಚಿಗುರಿನ ಮಧ್ಯದಲ್ಲಿ ಸೇರಿ ಮುತ್ತಾಗ್ವ ಬಗೆ,ಎಲೆಯಿಂದ ಎಲೆಗೆ ಜಾರಿ ಕೊನೆಯಲ್ಲಿ ಧರೆ ಸೇರುವ ಬಗೆ, ಟಪ್ ಟಪ್, ಎಂದು ಹನಿ ಹನಿಯಾಗಿ ಬೀಳುವ ನೀರ ಶಬ್ದ ಎಲ್ಲವೂ ಮನದಲ್ಲಿ ದಾಖಲಾಗಿ ಬಿಡುತ್ತದೆ.
ಇವೆಲ್ಲವೂ ನಮ್ಮ ನಿಮ್ಮೆಲ್ಲರನ್ನ ಅತಿ ಅನನ್ಯ,ಅನೂಹ್ಯ ಎನಿಸುವ ಲೋಕದ (ನಾಕದ ) ಖಾಯಂ ನಿವಾಸಿಗಳನ್ನಾಗಿ ಮಾಡಿಬಿಡುತ್ತದೆಯೆಂದರೆ ಅಚ್ಚರಿಯೇನಿಲ್ಲವಲ್ಲ?

ಗುರುವಾರ

ನಾನೇರಿದ ಎತ್ತರಕ್ಕೆ ನೀನೂ ಏರಬಲ್ಲೆಯಾ ?

ಹಿಮಾಲಯ ಸೇರ್ಬೇಕು ಅನ್ನೋ ಮನಸ್ಸಾಗಿದೆ ಕಣೋ , ಬೇಗ ಹಿಂದಿರುಗಿ ಬರುವ ಯೋಚನೆಯೂ ಇಲ್ಲಾ...ಆ ಮಂಜಿನಲ್ಲಿ ಬೆಚ್ಚಗೆ ಹೊದ್ದು ಕುಳಿತುಕೊಳ್ಳುವ ಇರಾದೆಯೇನು ಇಲ್ಲ. 25-30ಕ್ಕೆ ವಾನಪ್ರಸ್ಥವಾ ಎನ್ನಬೇಡ... ಆ ಬಿಳಿಯ ಹಿಮದಲ್ಲಿ ಮುಳುಗಿ ,ಭಾನುವಿನುದಯ ಕಾಯುತ್ತಾ ಕುಳಿತಿರಲೆಷ್ಟು ಮುದ.


ಜೀವ ಕೈಬೀಸಿ ಕರೆಯುತ್ತದಲ್ಲ? ತಲೆ ತುಂಬಾ ಹಿಮಸೋಕಿ ,ಮೈತುಂಬಾ ಹಿಮಗಾಳಿ ಆವರಿಸಿ 'ಮನೆಯೇ ದೇಗುಲ' ಅನ್ನುವ ಫೀಲ್ ಕೊಡುತ್ತದಲ್ಲ ,ಅಲ್ಲಿದೆ ಜೀವವನ್ನ ನೋಡುವ ಬಗೆ ...ಜೀವನವನ್ನ ಪ್ರೀತಿಸುವ ಕಲೆ . ಸುಯ್ಯೋ ಭರ್ರೋ...ಎಂದು ಬೀಸುವ ಗಾಳಿಯೇನಿರದೆಂದು ಭಾವಿಸಿದ್ದೆ .. ಆದರೆ ನಮ್ಮ ಮನೆಯಿದುರಿನ ಮಲ್ಲಿಗೆಯ,ಸಂಪಿಗೆಯ ಕಂಪು ಹೊತ್ತು ತರುವ ತಂಗಾಳಿಯಂತು ಅಲ್ಲ ಅದು ಬಿಡು. ಕೊರೆಯುವ ಚಳಿಯಲ್ಲಿ ಹೇಗಿರುವದೆನ್ನುವ ಚಿಂತೆ ಬಿಡು ...ಬೆಚ್ಚನೆ ಕೋಟುಗಳಿದ್ದಾವಲ್ಲ .. ತೊಟ್ಟ ನಿಲುವಂಗಿಗಿಂತ ಹೆಚ್ಚು ಬೆಚ್ಚಗಿಡುವ ಭಾವಗಳಿದ್ದಾವಲ್ಲ! ಉದ್ದನೆಯ ಬೆಚ್ಚನೆಯ ವಸ್ತ್ರ ತೊಟ್ಟು ಮೈ ಪೂರ್ತಿ ಅಂಗಿಯ ಒಳ ಹೊಕ್ಕಿಸಿ , ನಮಗೇ ಅರಿವಿಲ್ಲದಂತೆ ದಿವ್ಯಲೋಕದಲ್ಲ್ಲಿ ಮುಳುಗುವ ಬಗೆ ಅದು, ಮುಳುಗಬಾರದೆಂದು ಓಶೋ ಎಲ್ಲೋ ಒಂದು ಕಡೆ ಹೇಳುತ್ತಾರೆ ,ತೇಲಬೇಕಂತೆ .. (ನಶೆಯಿಂದಲೋ ,ಉಷೆಯಿಂದಲೋ ಅವರಿಗೇ ಗೊತ್ತು!)

(ಕೈಲಾಸಕ್ಕೆ ಹತ್ತಿರವಂತೆ , ಪಾರ್ವತೀ ಪರಮೇಶ್ವರರನ್ನ ಒಮ್ಮೆ ಭೇಟಿ ಮಾಡಬೇಕು , ಜಗತ್ತಿನ ತಂದೆ ತಾಯಿಯರಲ್ಲವ ,ಕೇಳಿದ್ದೆಲ್ಲ ಕೊಡುವ ಆ ಪರಶಿವಗೆ, ಶಿವೆಗೆ ನಮಿಸಬೇಕು ,ಯಾಕೆ ಗೊತ್ತಾ ಇಂತಹ ಚಳಿಯಲ್ಲೂ ಬೆಚ್ಚನೆಯ ಉಡುಗೆಯಿಲ್ಲದೇ ಇಷ್ಟು ದಿನ ‘ಅದು ಹ್ಯಾಗೆ ಇದ್ಯಪ್ಪ ಶಿವ’ ಎನ್ನುವ ತರದ ಒಂದು ಚಿಕ್ಕ ಸಂದರ್ಶನ ಮಾಡಿ ಕಾಪೀ ರೈಟ್ ನಿಂಗೆ ಕೊಡ್ತೀನಪ್ಪ...)

ಬದುಕುವದಕ್ಕೊಂದು ಕೆಲಸ, ಕೆಲಸವಾದ ನಂತರ ಸಂಸಾರ ,ತಲೆಯ ಮೇಲೊಂದು ಸೂರು ,ಹಾಹಾ ... ಎಷ್ಟೋ ನನ್ನ ಸ್ನೇಹಿತರಿಗೆಲ್ಲ ಬರುವದು ಇಂತಹ ಸೆಟ್ಲ್ ಆಗುವಂತಹುದೇ ಉಪಾಯಗಳು ... ಓಹೋ ನೀನು ಭಿನ್ನಾನ ಅಂತ ಕೇಳ್ತೀಯಲ್ಲಾ, ಹಮ್...ಅಲ್ಲ. ಮನೆಯಾಯ್ತು ,ಮದುವೆ ಆಯ್ತು ಮಕ್ಕಳಾಯ್ತು ,ಇನ್ನೇನಪ್ಪ ನಿನ್ನ ಜೀವನ ಅಂತ ಮೊನ್ನೆ ಒಬ್ಬ ಸ್ನೇಹಿತ ಮತ್ತೊಬ್ಬ ಸ್ನೇಹಿತನಿಗೆ ಹೇಳುತ್ತಿದ್ದ,... ಅಲ್ಲೇ ಇದೆ ಉತ್ತರ ನೀನು ಹುಡುಕಿಕೊಳ್ಳಬೇಕಷ್ಟೇ . 'ಎಲ್ಲೋ ಹುಡುಕಿದೆ ಇಲ್ಲದ ದೇವರ, ಕಲ್ಲು ಮಣ್ಣಿನ ಗುಡಿಯೊಳಗೆ…' ಈ ಸ್ಥಿತಿಯಲ್ಲಿ ನಾವಿದ್ದೇವಲ್ಲ,ತೀರಾ ಸೆಂಟೀ ಎನ್ನಬೇಡ..

ಕಾಡು ಕರೆಯುವ ವಯಸ್ಸೇನೂ ಅಲ್ಲ,ಯಾಕೋ ಮನೆಯಿಂದ ಒಂದಿಷ್ಟು ದಿನದೂರವಿರ ಬೇಕೆನಿಸಿದೆ....ಗಿಜಗುಡುವ ಗಲಾಟೆಯಿಂದ ದೂರ ಸಾಗಬೇಕೆನಿಸಿದೆ. ತಣ್ಣನೆಯ ಗಾಳಿಯನ್ನ ಉಸಿರ ತುಂಬಾ ತುಂಬಿಸಿಕೊಳ್ಳಬೇಕೆನಿಸಿದೆ. ಜೀವಕ್ಕಾದ ತಲ್ಲಣ ತಣಿಸಬೇಕಿದೆ. ಹಾಂ, 'ನಾನೇರಿದ ಎತ್ತರಕ್ಕೆ ನೀನು ಏರಬಲ್ಲೆಯಾ?' ಎನ್ನುವ ಸವಾಲೊಡ್ಡಿ ಗಟ್ಟಿ ನಿಂತಿದೆಯಲ್ಲ ಹಿಮಾಲಯ,ಅದು ನಂಗೊಂದು ಸ್ಪೂರ್ತಿ .... ಆವತ್ತು ನೀನೂ ಹಾಗೆ ಹೇಳಿದ್ದೇಯಲ್ಲ, ಹ್ಮ್ ..ನಿನ್ನ ಮಟ್ಟಕ್ಕೆ ಏರುವಷ್ಟು ಸುಲಭವಲ್ಲವೆಂದು ಎಂದೋ ಗೊತ್ತಿತ್ತು ನನಗೆ .... ಪ್ರಯತ್ನಿಸುವದರಲ್ಲಿ ತಪ್ಪೇನೂ ಇಲ್ಲ ಅಲ್ಲವ? ನಾನು ನಿನಗಿಂತ ಚಿಕ್ಕವಳು ಎನ್ನುವ ಸಮಝಾಯಿಸಿ ಇದೆಯಲ್ಲ. ಒಬ್ಬಳೇ ಹೇಗೆ ನಿಭಾಯಿಸುತ್ತೇನೋ ಎನ್ನುವ ಭಯವ..?ಆ ಹಿಮಾಲಯದಲ್ಲಿ ನನ್ನಂತ ಹಲವು ಚಾರಣಿಗರಿದ್ದಾರಲ್ಲ.ಹಾಗೂ ಒಂದು ದಿನ ಆಗುವದೇ ಇಲ್ಲ ಎಂದು ಅನ್ನಿಸಿದ ದಿನ ತಿರುಗಿ ಬಂದು ಬಿಡುತ್ತೇನೆ... ಅಲ್ಲಿಯವರೆಗೆ ಮನೆಯ ಕಡೆ ಜೋಪಾನ..!

ಮಂಗಳವಾರ

ನನ್ನ ಅಮ್ಮನ ಹುಟ್ಟು ಹಬ್ಬ ಇವತ್ತು...

'ಸ್ಕೂಲ್ ಇಂದ ಬಂದ ಕೂಡಲೇ ಪಾಟಿಚೀಲ ಸರಿ ಇಡೊ, ನಾಳೆ ಹೋಪಕಾರೆ ,ಆ ಪುಸ್ತಕ ಎಲ್ಲಿ ,ಈ ಪಟ್ಟಿ ಎಲ್ಲಿ ಅಂದ್ರೆ ಸುಮ್ನೀರ್ತ್ನಿಲ್ಲೇ. ಯೂನಿಫಾರ್ಮ್ ತೆಗೆದು ಬೇರೆ ಅಂಗಿ ಹಾಕ್ಯ ..ಕೈಕಾಲು ತೊಳ್ಕ ಬಾ ಬೇಗ , ತಿಂಡಿ ತಿನ್ನಲಕ್ಕು. ರೂಮ್ ಸೇರಿಬಿಟ್ರೆ ಹಂದಾಡ್ಸಲೆ ಆಗ್ತಿಲ್ಲೆ.'( ಇದೆಲ್ಲ ನನಗೆ ಬೈದ ಹಾಗೆ)


ಅಮ್ಮಾ ,ನೀ ನಂಗೆ ಎಷ್ಟೆಲ್ಲಾ ಬೈತೆ ಅಲ್ದ..ಅಪ್ಪಾಂಗೆ ಹೇಳಿಕೊಡ್ತೆ ನೋಡು ..ಟೂ ಟೂ ನಿಂಗೆ ...ನಾ ಕಡಿಗೆ ತಿಂಡಿ ತಿನ್ತೆ ..ಈಗ ಬೇಡಾssssss

೨0 ವರ್ಷ ನಮ್ಮಮ್ಮ ಇದನ್ನೇ ಹೇಳಿದ್ದು , ನಾನು ಹೇಳಿದ್ದನ್ನ ಕೇಳಿಸಿಕೊಳ್ಳದೇ ಮತ್ತೆ ಅದನ್ನೇ ಮಾಡ್ತಾ ಇದ್ದಿದ್ದು..

ಇವತ್ತು ಮಾತ್ರ ಬೇಗ ಎದ್ದು ಅಮ್ಮಂಗೆ Happy birthday amma  ಎಂದಿದ್ದೆ....

ಅಮ್ಮ,ಎಂತಾರು ಸ್ವೀಟ್ ಮಾಡು ,ಹೊಸ ಡ್ರೆಸ್/ ಸೀರೆ ಹಾಕಿಕೊಂಡು ದೇವಸ್ಥಾನಕ್ಕೆ ಹೋಗು ,ವರ್ಷಕ್ಕೆ ಒಂದು ಸಾರೇಯಾದರು ದೇವ್ರಿಗೆ ಕೈ ಮುಗಿ ,etc………….

ಅಮ್ಮ ಹೇಳೋ ಎಲ್ಲ ಡೈಯಲೋಗ್ ಅಮ್ಮನ ತರ ನಾನೇ ಹೇಳಿ ಬಿಟ್ಟಿದ್ದೆ...

ಹಾಹಾ ಅಮ್ಮ ,ನಾನು ,ಅಪ್ಪ ಎಲ್ಲರೂ ಫುಲ್ ಕುಶ್!

Wish you a very happy birthday amma..Love you soomuch.

ಗುರುವಾರ

ಪರಿಮಳವೆಂದರೇ ವಾಸನೆ ಇಲ್ಲದ್ದು..!

ರಿಮಳವೆಂದರೆ ವಾಸನೆ ಇಲ್ಲದ್ದ ? ಹಾಂಗಂದರೆ ಉತ್ಪ್ರೇಕ್ಷೆ ಏನಿಲ್ಲವಲ್ಲ?ಏಕೆಂದರೆ ಪರಿಮಳೆವೆಂದರೆ ಹಿಗ್ಗುವ ಮೂಗಿನ ಹೊಳ್ಳೆ ,ವಾಸನೆ ಎಂದರೆ ಸಾರಾಸಗಟಾಗಿ ಬೇಡವೇ ಬೇಡ ಎಂದು ತಿರಸ್ಕರಿಸುವದು ಸುಳ್ಳಲ್ಲ... ಅಲ್ಲವ?
ಜಾಜಿ ಮಲ್ಲಿಗೆಯ ಕಂಪು ಇದು ,ಕೆಂಡ ಸಂಪಿಗೆಯ ಕಂಪು ಇದು ,ನೆಹ್ರು ಗುಲಾಬಿ ಇದು,ಇದು ಕೇದಿಗೆಯದೇ ಪರಿಮಳ ,ಕಣ್ಣು ಕಟ್ಟಿದರೂ ಸಲೀಸಾಗಿ ಹೇಳಿಬಿಡಬಹುದಲ್ಲ? ಮೂಗಿನ ಹತ್ತಿರ ಶ್ರೀ ಗಂಧದ ತುಂಡು ಹಿಡಿದು. ಇದು ಸಾಗುವಾನಿ ಎಂದೋ,ಬೀಟೆಯದೆಂದೋ ಹೇಳಿದರೆ ಸುಮ್ಮನೇ ಬಿಟ್ಟೀತೆ ನಿಮ್ಮ ಮೂಗು ?ನನಗೆ ಪರಿಮಳ ಪರಿಚಿತವೆನ್ನುತ್ತೆ...ಅಲ್ಲವ? ಪರಿಮಳ ವನ್ನು ಡಿಫೈನ್ ಮಾಡಬಹುದು,ಹಲವು ರೀತಿಯಲ್ಲಿ ವ್ಯಾಖ್ಯಾನಿಸಬಹುದು ,,, ಪರಿಮಳಕ್ಕೆ ಸುಗಂಧ ,ಸುವಾಸನೆ, ಕಂಪು ಎನ್ನುತ್ತದಲ್ಲ ಸಂಸ್ಕೃತ ,ಕನ್ನಡ ಭಾಷೆಗಳು ...! ಸು ಎಂದರೆ ಒಳ್ಳೆಯ,ಶುಭ,ಎಂದೆಲ್ಲ ಅರ್ಥವಿದೆ ಸಂಸ್ಕೃತದಲ್ಲಿ. ಆದರೆ ನನಗೆ ಈಗಲೇ ತೋರಿಸು ಪರಿಮಳವನ್ನ ಎಂದರೆ? ಪರಿಮಳವನ್ನ ತೋರಿಸೋಕಂತು ಆಗೋಲ್ಲ..(ಪರಿಚಿತರಲ್ಲೆಲ್ಲಾದರೂ ಪರಿಮಳ ಎನ್ನುವವರಿದ್ದರೆ ಅದು ಬೇರೆಯ ಪ್ರಶ್ನೆ!)ಅನುಭವಿಸಿಯೇ ಅರಿಯಬೇಕು ...

ಪಂಚೇಂದ್ರಿಯಗಳಾದ ,ಮೂಗು,ನಾಲಿಗೆ,ಕಣ್ಣು ,ಕಿವಿ, ಚರ್ಮ ಗಳ ನಡುವೆ ಒಂದು ಸಾರೇ ಶೀತಲ ಕಲಹವಾಯಿತಂತೆ, ಎಲ್ಲವಕ್ಕೂ ತಾನು ಮೇಲೆಂಬುದನ್ನು ತೋರ್ಪಡಿಸುವ ಹಮ್ಮು. ತೀರ್ಪುಗಾರರು ನಾರದ ಮುನಿ. ಯಾರು ವಿಜಯೀ ಆದರು ಎಂಬುದನ್ನ ಇಲ್ಲಿ ಪ್ರಸ್ತಾಪಿಸುವ ಅಗತ್ಯ ಇಲ್ಲ. ಆದರೆ ಆ ಸ್ಪರ್ಧೆಯಿಂದ ಅವು ಕಲಿತ ಪಾಠ ಮಾತ್ರ ಶ್ಲಾಘನೀಯ.. ಸ್ಪರ್ಧೆ ಮುಗಿದ ನಂತರ ಒಂದೊಂದು ಇಂದ್ರೀಯವೂ ಮುಖ್ಯವಾದುದು ಎಂಬುದು ನಾರದ ಮುನಿಗಳ ತೀರ್ಪಾಗಿತ್ತು..!
ಆದ್ದರಿಂದ ನಮ್ಮ ಪರಿಮಳ ವನ್ನ ಆಸ್ವಾದಿಸುವ ಮೂಗು ತನಗೆ ಸಿಕ್ಕ ಪ್ರಾಮುಖ್ಯತೆ ಇಂದ ಚೂರು ಕುರುಬಿದ್ದು ಸುಳ್ಳಲ್ಲ... ಷ್ಟೆಲ್ಲಾ ಉಪಮೆಗಳಿದ್ದಾವೆ ಪರಿಮಳವನ್ನ ಉದಾಹರಿಸಿ ..ಒಂದು ನನ್ನ ನೆನಪಿಗೆ ಬಂದಿದ್ದು ‘ಕತ್ತೆ ಬಲ್ಲುದೇ ಕಸ್ತೂರಿ ವಾಸನೆ’ ಎಂಬ ನುಡಿ .ಕೆಲವೊಂದು ಸಾರೇ ಪೂರ್ವಾಗ್ರಹ  ಪೀಡಿತರಾಗಿ ತಮ್ಮ ಮನಸಿಗೆ ತೋಚಿದ್ದನ್ನ ಬರೆಯುವವರಿಗೆ,ನುಡಿಯುವವರಿಗೆ,ವಸ್ತು ಒಂದರ ಪ್ರಾಮುಖ್ಯತೆ ಅರಿಯಲು ಶಕ್ತನಲ್ಲದವಗೆ ಈ ಉಪಮೆ ಉತ್ತಮ ಬಲಕೊಡುತ್ತದೆ..

ರಿಮಳ ಬೀರುವ ಕುಸುಮಗಳು ,ಮನಕ್ಕೆ ತಂಪನ್ನೀಯುವದಷ್ಟೆ ಅಲ್ಲ ಆರೋಗ್ಯವನ್ನು ಸುಧಾರಿಸುತ್ತದಲ್ಲ...?ಅದಕ್ಕೆಂದೇ ಪರಿಮಳ ಚಿಕಿತ್ಸೆ ಇದೆಯಲ್ಲಾ... ಅಂದಿನ ರಾಜರ ಕಾಲದಲ್ಲಿ ರಾಜ-ರಾಣಿಯರ ಸ್ನಾನದ ಕೊಳಗಳಿಗೆ ,ಮಲ್ಲಿಗೆ ,ಸಂಪಿಗೆ,ಜಾಜಿ,ಸುಗಂಧರಾಜಗಳಂತ ಪರಿಮಳ ಭರಿತ ಹೂಗಳನ್ನ ಹಾಕುತ್ತಿದ್ದರಂತೆ ,ದೇಹಕ್ಕಾದ ದಣಿವು ನಿವಾರಿಸಿ ,ಮನಕ್ಕೆ ಚೈತನ್ಯ ತುಂಬುವ ಶಕ್ತಿ ಇದೆ ಎಂಬುದು ಅವರ ಉದ್ದೇಶ . ದೇವರನ್ನ ನೆನೆಯುವ ಮನ ತಂಪಾಗಿರಲಿ ಎಂದು ಹಚ್ಚುವ ಆಗರ ಬತ್ತಿ,ಪೂಜಿಸಿದ ಮನ ಸದಾ ಸಂತಸದಿಂದ ಇರಲೆಂದು ಸೇವಿಸುವ ಪಚ್ಚಕರ್ಪೂರವನ್ನು ಹಾಕಿದ ತುಳಸಿಯ ತೀರ್ಥ. ಒಂದೆರಡು ದಿನ ಸ್ನಾನ  ಮಾಡದೇ ಇದ್ದರೂ ನಡೆದೀತೆಂದು ಉಪ್ಯೋಗಿಸುವ ಅತ್ತರು,ಪರ್ಫ್ಯೂಮ್ ,ಡಿಯೊ,....ಎಲ್ಲ ಪರಿಮಳದ ಉತ್ಪನ್ನಗಳೇ, ಎಲ್ಲವನು ವಿಷ್ವಲೈಸ್ (visualize ) ಮಾಡುವ ಇಂದಿನ ಯುಗದಲ್ಲಿ ಪರಿಮಳ ವೆಂದರೆ ರೆಕ್ಸೋನ,ಚಾರ್ಲಿ,ಎಂಬೆಲ್ಲಾ ತರಾವರಿ ಪರಿಮಳಗಳು , ವಾಸನೆ ಎಂದರೆ ಗಬ್ಬೆದ್ದು ನಾರುವ ಚರಂಡಿ ನೆನಪಿಗೆ ಬರುತ್ತಾವಲ್ಲ... ಯಾರಿಗಾದರೂ ಮಹಾಭಾರತದ ಯೋಜನಗಂಧಿ ನೆನಪಿಗೆ ಬರುತಾಳ? ಬಂದಿದ್ದರೆ, ನಿಜವಾಗ್ಲೂ ಗ್ರೇಟು ಕಣ್ರೀ ನೀವು .... ದುಡ್ಡಿಗೋ,ಒಡವೆಗೂ,ರಾಜ್ಯಕ್ಕೋ,ಹೆಣ್ಣಿಗೋ,ಹೊಟ್ಟೆಗೆಂದೋ ,ಯುದ್ದಗಳಾಗಿವೆ , ರಕ್ತಪಾತಗಳು ಆಗುತ್ತಲೇ ಇವೆ...,ಆದರೆ ಪರಿಮಳಕ್ಕಾಗಿ ಆಗಿಯೇ ಇಲ್ಲ ಎಂದು ನನ್ನೆಲ್ಲ ತಿಳುವಳಿಕೆಯನ್ನ ಒಟ್ಟಿಗಿತ್ತು ಹೇಳುತ್ತೇನೆ.. ಹಾಂ ವಾಸನೆಯಿಂದ ಆಗಿವೆ ಗೊತ್ತಲ್ಲ, ಕಾರ್ಬನ್ ಡೈಯಾಕ್ಸೈಡ್,ಕ್ಲೋರೋಫಾರ್ಮ್ ,ಸೈಯನೈಡ್ ಎಲ್ಲ ಬದಿಗಿಡಿ, ಪ್ರಾಣವನ್ನೇ ಕಿತ್ತಿದ್ದಾವೆ..

ಈಗ್ಲಾದ್ರೂ ಒಪ್ಕೋ ತೀರಾ? ಪರಿಮಳವೆಂದರೆ ವಾಸನೆ ಇಲ್ಲದ್ದು, ವಾಸನೆ ಅಲ್ಲದ್ದು…..ಪೋಲೀಸ್ ರ ನಾಯಿಯನ್ನ ಬಿಟ್ಟೇಬಿಟ್ಟಿದ್ದೆ..ಅದಕ್ಕೆ ಪರಿಮಳ ವಾಸನೆ ಎರಡೂ ಒಂದೇ! ಬಿಟ್ಟುಬಿಡಿ ಅದರಪಾಡಿಗದನ್ನ !!

ಸೋಮವಾರ

ನಾವು ಎಲ್ಲೋ ಕಳೆದು ಹೋಗ್ತೀವ?


When finally ,we reached the place,

We hardly knew why we were there

The trip had darkened every face..


'ಅಂತೂ ಇಂತೂ ನಮ್ಮ ಗುರಿ ತಲುಪಿದಾಗ,ನಮ್ಮ ಪ್ರಾಜೆಕ್ಟ್ ,ಯೋಜನೆ ಅಂತಹ ಮಹತ್ತರವಾದುದನ್ನೇನು ಸಾಧಿಸಿಲ್ಲ ಎಂಬುದು ಅರಿವಿಗೆ ಬಂದು ಎಲ್ಲರ ಮುಖ ಕಳೆಗುಂದಿರುತ್ತದೆ '.

ಹೀಗೂ ಆಗುತ್ತದಲ್ಲ? ಏನೇನೋ ಪ್ಲಾನು ,ಏನೇನೋ ಉಪಾಯಗಳು ,....ಜೀವನದಲ್ಲಿ ಬೊಗಸೇ ತುಂಬಾ ಕತೆಗಳು ,ವಿಪರೀತ ಎನ್ನುವಸ್ಟು ಮಾತುಗಳು ,ಅಣ್ಣ, ತಮ್ಮ ,ಅಮ್ಮ ಅಪ್ಪನೆಂಬ ಹಲವಾರು ಸಂಬಂಧಗಳು , ನಾನೆಂಬ ಮಾಯೆ,ನಿನ್ನೆಯೆಂಬ ಕನಸು ,ನಾಳೆ ಎಂಬ ಸಚಿತ್ರ ,ನನ್ನದೆಂಬ ಮೋಹ, ಇದು ನನ್ನದಾಗಬೇಕು,ಈಸಾರೇ ಇಷ್ಟೇ % ಮೋಸಮಾಡಬೇಕು ಎಂಬ ದೊಡ್ಡವರ (!?)ವ್ಯವಹಾರಿಕ ನಿಯತ್ತು . ಇಂತಃ ಎಲ್ಲವುಗಳ ಮಧ್ಯ ಬದುಕುತ್ತಾ, ನಲಿಯುತ್ತಾ, (ನಮ್ಮ ಕರ್ಮಕ್ಕೆ ಕೆಲವೊಂದು ಸಾರೇ ಅದನ್ನು ಒಗ್ಗಿಸಿಕೊಳ್ಳುತ್ತ ) ? ಬ್ಲೋಗೆ ಗೆ ಒಂದು ಹೊಸ ಫೋಟೋ ಹಾಕ್ತಾ  (ಪ್ರೊಫೈಲ್ ಗೆ ಒಂದು ಫೋಟೋ ಹಾಕುವದು ನೀವು ಬದುಕಿದ್ದೀರಿ ಎಂಬುದಕ್ಕೆ ಒಂದು ಪ್ರೂಫ್ , ಬ್ಲೋಗ್ ನಂತಹ ಸೋಶಿಯಲ್ ನೆಟ್‌ವರ್ಕಿಂಗ್ ಟೂಲ್ ಗೆ ಮಾತ್ರ ಇದು ಅಪ್ಲಿಕಬಲ್, ಕಾರಣ ಏನಪ್ಪಾ ಅಂದ್ರೆ ಬ್ಲೋಗ್ ಒಂದು ಸೋಶಿಯಲ್ ನೆಟ್ವರ್ಕಿಂಗ್ ಟೂಲ್ ಆಗಿರೋದಕ್ಕೆ ಬ್ಲೋಗ್ ಬರೆಯೋರು ಎಲ್ಲರ ಮುಖವನ್ನ ನೋಡಿರೋದಿಲ್ಲ ,ನಿಜವಾದವರ ,ಇಲ್ಲವ ಎನ್ನುವ ಬಗ್ಗೆ ಒಂದು ಚಿಕ್ಕ ಕ್ಲೂ ಸಿಗಬಹುದು . Cyber ಕ್ರೈಮ್ ನ ತಡೆಗಟ್ಟುವಲ್ಲಿ ಕೊಂಚ ಉಪಯುಕ್ತ ಅಲ್ವಾ?  ಬಾಯೀ ತುಂಬಾ ನಕ್ಕು, ನಿನ್ನ ಯೋಗ್ಯತೆ ಇಷ್ಟೇ ಎಂದು ಹೇಳಿ ಬೈ ಎಂದರೆ .. ನಮಗಾಗಿ ಕಾಯೋಕೆ ನಮ್ಮ ಗುರಿ ಇದೆಯಲ್ಲಾ..we should reach our Aim alva? Han . ಹಾಂ Aim ಅನ್ನೋದಕ್ಕಿಂತ The Ultimate ಎನ್ನುವ ಶಬ್ಧ ಬಹಳ ಸೂಕ್ತ ಎನ್ನಿಸುತ್ತೆ The ultimate is nothing but Fact,Truth,Reality..! ನಾನೇನು ಮುಕ್ತಿಯ ಬಗ್ಗೆ ಮಾತನಾಡುತ್ತಿಲ್ಲ.. ಸತ್ಯ,ವಾಸ್ತವದ ಬಗ್ಗೆ ..ಸತ್ಯ ,ಮಿಥ್ಯ ಎಲ್ಲವೂ ಯಾರು ಹೇಳ್ತಾರೆ ಎನ್ನುವದರ ಮೇಲೆ ಮೇಲೆ ಡಿಪೆಂಡ್ ಆಗಿರುತ್ತೆ............ ಇವೆಲ್ಲವನ್ನ ಮೀರಿ ಬೆಳೆಯೋ ಹೊತ್ತಿಗೆ ನಾವು ಎಲ್ಲೋ ಕಳೆದು ಹೋಗ್ತೀವ?.......... ಮಾಡೋ ಕೆಲಸಾನ enjoy ಮಾಡಬೇಕು ,ಇಲ್ಲಾಂದ್ರೆ ಇಷ್ಟ ಇಲ್ದೇ ಇರೋದನ್ನ ಆನಂದಿಸುವ ಅಥ್ವಾ ಹಾಗಂತ ನಟಿಸುವ ಭರದಲ್ಲಿ –‘ಲೇ ,ನೀನ್ಯಾಕೆ ಹಿಂಗಾದೆ ? ‘ ಅಂತ ನಮ್ಮನ್ನ ನಾವು ಕೇಳುವ stage ಬರುತ್ತದಾ? ನಿಮಗೂ ಹೀಗೆ ಫೀಲ್ ಆಗಿರಬೇಕಲ್ಲ? ನಮ್ಮನ್ನ ನಾವು Prepare ಮಾಡೋ ಅಗತ್ಯ ಇದೆ..

ಮೇಲಿನ ಪದ್ಯದ ಸಾಲುಗಳನ್ನ Nissim Ezekiel ಎಂಬ ‘finest’ Anglo- Indian ಕವಿಯ Enterprise ಎಂಬ ಪದ್ಯದಿಂದ ಆಯ್ದಿದ್ದೇನೆ.. Do you Prepare for realities? ಯಾವುದೇ ಪ್ರಾಜೆಕ್ಟ್ ನ್ನ ಶುರು ಮಾಡುವ ಮುಂಚೆ ನಮ್ಮನ್ನು ನಾವು ಕೇಳಿಕೊಳ್ಳ ಬೇಕಾದ ಪ್ರಶ್ನೆ ಇದು..

ಮುಂದಿನ ಒಂದು ವರುಷಕ್ಕೆ ಸರಿಯಾಗುವ ಪ್ರಾಜೆಕ್ಟ್ ಗಳಿದ್ದಾವೆ ನನ್ನ ಕೈಯಲ್ಲಿ , ಒಂದಿಷ್ಟು ಜಾಸ್ತಿ ಓದು ,ಒಂದು ಚೂರು ಬರಿಯೊದು...ಮಧ್ಯ wakeup call ಕೊಡೋ Exam ಗಳು ಸ್ನೇಹಿತರೊಬ್ಬರಿಗೆ ಕಮರ್ಶಿಯಲ್ website, ಪ್ರಶಾಂತ ಅಣ್ಣ ಗೆ ಎಂದು ಒಂದು ಫೋಟೋ ವೆಬ್ ಸೈಟ್ ಜೊತೆಗೆ ಆಫೀಸ್ ನ ಕೆಲಸ, ಸಂಭ್ರಮಿಸಲು ಮನೆ ಇತ್ಯಾದಿ ಇತ್ಯಾದಿ….


ಬುಧವಾರ

 ಆದ್ರೂ ಬರೀಬೇಕು ಅನ್ನಿಸುತ್ತೆ ....

ಅಪ್ಪಾ...ನಾನು ಒಂದು ಬ್ಲೋಗ್ ಬರೆದಿದೆನೇ......

ಓಕೇ...ಯಾವ ವಿಷಯ? ....

ಗುಬ್ಬಚ್ಚಿ ಗೂಡಿನಲ್ಲಿ.... !


ಮಾಡೋಕೆ ಕೆಲ್ಸಾ ಇರ್ಲಿಲ್ವಾ?...

ಇತ್ತು ಅಪ್ಪ..

ಕಾಕ- ಗುಬ್ಬಚ್ಚಿ ಕತೆ ಬರ್ಯೋಕಾ ನೀನು ಬ್ಲೋಗ್ ಬರೆದಿರೋದು?

ಇಲ್ಲಪ್ಪ ,,,,ಅದ್ರಲ್ಲಿ ಗುಬ್ಬಿ ಅಳಿವಿನಂಚಲ್ಲಿ ಇದೆ ಎನ್ನೋ ಸಂದೇಶ ಇದೆ...

ನೀನು ಕೊಟ್ಟಿರೋ ಹೆಸರೇ ಹೇಳುತ್ತೆ ಅದು ಕಾಕ ಗುಬ್ಬಚ್ಚಿ ಕತೆ ಎಂದು .....

ಅಪ್ಪ ಒಂದು ಸಾರೇ ಓದಿ ನೋಡಪ್ಪ...ನನ್ನ ಸ್ನೇಹಿತರೆಲ್ಲಾ ಚೆನ್ನಾಗಿದೆ ಅಂತ ಹೇಳಿದಾರೆ....
ನೀನು ಒಂದೇ ಸಾರಿ ಓದಿ ನೋಡಪ್ಪ....ಪ್ಲೀಸ್ ..ಪ್ಲೀಸ್....

ಇಲ್ಲ ಪುಟ್ಟ.. ನೀನು ಯಾವಾಗ ಪ್ರಭುದ್ಧ ವಾಗಿ ,ನಿರರ್ಗಳವಾಗಿ ಬರೆಯುತ್ತೀಯೋ...ಅವತ್ತೇ ನಾನು ಓದೋದು .....
 

ಬರೆಯುದು ಅಂದ್ರೆ ಏನು ಎಂಬುದನ್ನ ಮೊದಲು ಕಲಿತುಕೊ ಪುಟ್ಟ...ಆಮೇಲೆ ಯಾಕೆ ಬರೀತೀನಿ ಅಂತ ಯೋಚ್ನೆ ಮಾಡು ... ನೀನು ಓದಿದ ಯಾವ ಪುಸ್ತಕವನ್ನಾದರೂ ತೆಗೆದುಕೊ ....ಅದರ ಸಾರಾಂಶವನ್ನಒಂದೆಡೆ ಕುಳಿತು ಬರೆದಿಡು ...ಮತ್ತೆ ಅದನ್ನ ನಾಳೆ ಓದು ,,ನಿನಗೆ ಗೊತ್ತಾಗುತ್ತದಲ್ಲ ಅದರ ಕ್ವಾಲಿಟೀ ಯ ಬಗ್ಗೆ.........ನಿನಗೆ ನೀನೆ ವಿಮರ್ಶಕ ನಾಗುವದನ್ನ ಕಲಿ...

ಕಥೆಯನ್ನ,ಲೇಖನವನ್ನ ಪಕ್ಕದಲ್ಲೇ ಆಗುತ್ತಿದೆಯೇನೋ ಅನ್ನೋ ತರ ಬರೀಬೇಕು ಮಗಳೆ.....Reader should feel it....
ಸರೀಪ್ಪ... ..
 
ಸ್ನೇಹಿತರೆ, ಇದು ನನ್ನ ಖಾಸ್ ಭಾತ್..
 
ಅಪ್ಪ ನನ್ನ ಬೆಸ್ಟ್ ಫ್ರೆಂಡ್,ಗೈಡ್ ಫಿಲಾಸಫರ್ ..........ನನ್ನ ಅಪ್ಪ ಇನ್ನೂ ನನ್ನ ಬ್ಲೊಗನ್ನ್ ಓದಿಯೆ ಇಲ್ಲ..................ಅವರು ಎಕ್ಸ್‌ಪೆಕ್ಟ್ ಮಾಡಿದ ಬರಹ ನಾನು ಯಾವಾಗ ಬರೆಯುತ್ತೇನೋ ,ಬರೆಯದೇ ಇರುತ್ತೇನೋ ಗೊತ್ತಿಲ್ಲ...............ಅಂತಹ ಒಂದು ಒಳ್ಳೆಯ ಬರಹ ಬರೆದು ಅವರಿಗೆ ಒಂದು ಸಾರೇ ಓದಿಸ ಬೇಕು
 
ಅಪ್ಪನ ಹತ್ತಿರ ಮತ್ತೆ ಬ್ಲೋಗ್ ಬಗ್ಗೆ ಮತಾಡಿಲ್ಲ.........
 
ಬರೆದಿರೋದನ್ನ  ಎಡಿಟ್ ಮಾಡೋ ಹವ್ಯಾಸ ಇಲ್ಲ... ಡೈರೆಕ್ಟ್ ಆಗಿ ಬರೆದು ಹಂಗೆ ಪೋಸ್ಟ್ ಮಾಡೋ ಹೊತ್ತಿಗೆ ನನ್ನ ಲಂಚ್ ಬ್ರೇಕ್ ಮುಗಿದು ಹೋಗುತ್ತೆ.......ನನ್ನ ಮೌಸು ,ಟಕ ಟಕ ಎನ್ನುವ ಕೀ ಬೋರ್ಡು ,ದಿನದ ಕೊನೇ ಒಳಗೆ ಮುಗಿಸೆನ್ನುವ  ಈ ಮೈಲು ಗಳು ಜೊತೆಗೆ ಒಂದು ಟನ್ ಕೆಲಸ , ಕೀ ಕೀ ಎಂದು ಅರಚುತ್ತಿರುವ ಪಿಬಿಯೆಕ್ಸ್,,.............ಜೊತೆಗೆ ನಾನು ಓದುತ್ತಿರುವ ಎಂ ಎಸ್ ನ ಪರೀಕ್ಷೆಗಳು ......ಸಂಜೆಯಾಯಿತೆಂದರೆ ಹೊಟ್ಟೆಗೆ ಬೇಕಲ್ಲ ಎಂದು ಮಾಡುವ ಹದವಿಲ್ಲದಅಡುಗೆ......ಎಲ್ಲವೂ ನಾನು ಒಂದೆಡೆ ಕುಳಿತು ಬ್ಲೋಗ ಬರೆಯುವದಕ್ಕೆ ಅಡ್ಡಿ ಯಾಗಿವೆ...
ಆದ್ರೂ ಬರೀಬೇಕು ಅನ್ನಿಸುತ್ತೆ ....
ನೋಡೋಣ ಎಸ್ಟು ದಿನ ಹೀಗೆ ಸಾಗುತ್ತದೆ ಎಂದು ....

ಶುಕ್ರವಾರ

[This poem was nominated by UN as the best poem Written by an African Kid]

ನಾನು ಚಿಕ್ಕ ಮಗುವಿನ ಭಾವನೆಯನ್ನ ಅನುವಾದ ಮಾಡಿದ್ದೇನಷ್ಟೇ.
-ಶ್ವೇತಾ



ಯೋಚಿಸಿ ..

ಅಪ್ಪ ಅಮ್ಮ ನ ಪ್ರೀತಿಯ ಮಗಳಾಗಿ ಹುಟ್ಟುವಾಗಲೂ ಕಪ್ಪಗಿದ್ದೆ.

ಅಮ್ಮನ ಕೈ ತುತ್ತು ತಿಂದು ದೊಡ್ಡವನಾಗಿ ಬೆಳೆದಂತೆಲ್ಲ ಕಪ್ಪಗೆ ಇದ್ದೆ

ಬೆಳ್ಳಗಿನ ಸೂರ್ಯನ ಮೈ ಸುಡುವ ಬಿಸಿಲಿನಲ್ಲಿ ನಡೆದಾಗಲು ಕಪ್ಪಗೆ ಇದ್ದೇ..

ಪುಟ್ಟ ಹೃದಯ ದಭ್ ಡಬ್ ಎಂದು ಹೊಡೆದುಕೊಂಡು ಭೀತನಾಗಿ  ನಡುಗಿದಾಗಲು ಕಪ್ಪಗೆ

ಸೌಖ್ಯವಿಲ್ಲದೇ ಒದ್ದಾಡುವಾಗಲೂ ನಾ ಕಪ್ಪಗೇ ಇದ್ದಿದ್ದೆ..

ಹಮ್‍ಮ್ ..  ಇನ್ನು ನಾನು ಸತ್ತು ಮಣ್ಣಲ್ಲಿ ಮಣ್ಣಾಗುವಾಗ ಆಗಲೂ ಕಪ್ಪು.

ಆದರೆ, ನೀವು ಬಿಳಿಯ ಸಜ್ಜನರು .....


ಹುಟ್ಟಿದಾಗ ಗುಲಾಬಿ ,

ಬೆಳೆದಂತೆಲ್ಲ ಬೆಳ್ಳಗೆ ,ಸೂರ್ಯನ ಬಿಸಿಲಲ್ಲಿ ಕೆಂಪಗೆ ,

ಭಯಭೀತನಾದಾಗ ಬಣ್ಣ ಗೆಟ್ಟ ಹಳದಿ ,

ಹೆಚ್ಚು ತಂಪಾದರೆ ನೀಲಿ , ಅಪ್ಪಿತಪ್ಪಿ ಹಸಿರು ಅನಾರೋಗ್ಯದಿಂದ ,

ಮಣ್ಣಲ್ಲಿ ಮಣ್ಣಾಗುವಾಗ?
 
ನೀವು ಬೂದು ...


ಹೀಗಿದ್ದಾಗಲು ,ನೀವು ನನ್ನನ್ನು ಕರೆಯುವದು ವರ್ಣೀಯನೆಂದೆ?

ಗುರುವಾರ

ಮೂಡಿಗೆರೆಯ ವಿಸ್ಮಯ!

ಆಗೆಲ್ಲ ನನಗೆ ೧೨-೧೩ ವರುಷಗಳು .ಆಗೆಲ್ಲ ನಮ್ಮ ಮನೆಗೆ ಹಳೆಯ ಪೇಪರ್ ಗಳನ್ನು (ರದ್ದಿ ಪೇಪರ್ )ಕೊಳ್ಳಲು 'ಕಾಫಿ ಸಾಬಣ್ಣ ' ಬರುತ್ತಿದ್ದ..ದೂರದ ದಕ್ಷಿಣ ಕನ್ನಡದಿಂದ ಇಲ್ಲಿಗೆ ಬಂದು ಕಾಫಿ ಬೀಜಗಳನ್ನು ಮಾರಿ ಇಲ್ಲಿಂದ ಹಳೆಯ ಪೇಪರ್ ಗಳನ್ನು ಒಟ್ಟುಗೂಡಿಸಿ ಒಯ್ಯುತ್ತಿದ್ದ.ಸುತ್ತಲಿನ ಮನೆಗಳಿಗೆಲ್ಲ ಹೋಗುವ ಮುಂಚೆ ಬರುತ್ತಿದ್ದುದೇ ನಮ್ಮಮನೆಗೆ.

ನನಗೆ ಆತನ ನೆನಪಾದಾಗಲೆಲ್ಲ ರವೀಂದ್ರರ 'ಕಾಬೂಲಿವಾಲ' ನೆನಪಿಗೆ ಬರುತ್ತಾನೆ .ನಮ್ಮ ಮನೆಯ ಮಕ್ಕಳೆಲ್ಲ ಸಾಬಣ್ಣ ಬರುತ್ತಾನೆ ಅಂದ್ರೆ ಸಾಕು ಅಂದು ಆಟ ಪಾಟಗಳೆಲ್ಲ ಬಂದು .ಆತ ಬರುತ್ತಿದ್ದುದೇ ವರ್ಷಕ್ಕೆರಡು ಸಾರೆ. ಬಂದೆ ಇಲ್ವಲ್ಲೋ ಸಾಬಣ್ಣ ಅಂದರೆ 'ಹಾದಿ ಕರ್ಚು ಹುಟ್ಟಬೇಕಲ್ಲ ಕೂಸೇ 'ಎಂದು ಸುಮ್ಮನಾಗುತ್ತಿದ್ದ..ಆತ ನಮಗೆ ಹೇಳುತ್ತಿದ್ದುದೆಲ್ಲ ಪೂರ್ಣ ಚಂದ್ರ ತೇಜಸ್ವಿಯವರ ಕತೆಗಳು.ಆತ ಅವರ ತೋಟಕ್ಕೆ ಕಾಫಿ ಬೀಜಕ್ಕಾಗಿ ಹೋಗುತ್ತಿದ್ದ .
ಮೀನು ಹಿಡಿಯುತ್ತ ಕೂತಿರುತ್ತಿದ್ದ ತೇಜಸ್ವಿ,ಹಾರುವ ಹಕ್ಕಿಗಾಗಿ ತಾಸುಗಟ್ಟಲೆ ಕುಳಿತು ಕಾದು ಪೋಟೋ ತೆಗೆಯುತ್ತಿದ್ದ ತೇಜಸ್ವಿ ,ನಮ್ಮ ಮನೆಯ ಮಕ್ಕಳಿಗೆಲ್ಲ ತೇಜಸ್ವಿ ಬಹು ಪರಿಚಿತರು .ಚಿರತೆ ಎಂದರೆ ಜಿಮ್ ಕಾರ್ಬೆಟ್ ,ಮಚಾನು , ಚಂದ್ರ ,ನಡೆಯುತ್ತಿದ್ದರೆ ನಿಮ್ಮನ್ನು ಹುದುಗಿಸಿಕೊಳ್ಳುವ ಮಾಯಾ ಮರಳು ,ಹಾರುವ ತಟ್ಟೆಗಳು ...,ಒಟ್ಟಾರೆ ಜಗತ್ತನ್ನು ನಾವು ನೋಡಿದ್ದೇ ತೇಜಸ್ವಿಯವರ ಕಣ್ಣುಗಳ ಮೂಲಕ. ಸಾಬಣ್ಣ ಹೇಳುತ್ತಿದ್ದ ಕತೆಗಳಲ್ಲಿನ ಕೈಗೆಲ್ಲ ಕಪ್ಪು ತಾಗಿಸಿಕೊಳ್ಳುತ್ತ ಮಿಕ್ಸರ್ ,ಗಾಡಿ ಗಳ ರೆಪೇರಿ ಮಾಡುತ್ತಿದ್ದ ,ಕಂಪ್ಯೂಟರ್ ಮುಂದೆ ಕುಳಿತು ಕನ್ನಡ ಸಾಫ್ಟವೇರ್ ಬಗ್ಗೆ ಹೋರಾಡುತ್ತಿದ್ದತೇಜಸ್ವಿ ,ಕಾಫಿ ಬೆಳೆಗಾರರಿಗಾಗಿ ಧ್ವನಿಯೆತ್ತಿದ್ದ ತೇಜಸ್ವಿ .....ಅವರ ಪ್ರೀತಿಯ ಕಾಫಿ ತೋಟ ,ನಾಯಿ ಎಲ್ಲ ಕತೆಗಳನ್ನ ನಮಗೆ ಸಾಬಣ್ಣ ಹೇಳುತ್ತಿದ್ದ. ಈ ಎಲ್ಲವುಗಳಿಂದ ತೇಜಸ್ವಿ ಒಂದು ವ್ಯಕ್ತಿಯಸ್ಟೇ ಆಗಿರದೇ ಶಕ್ತಿಯಾಗಿ ಕಂಡಿದ್ದರು .ವ್ಯಕ್ತಿ ಶಕ್ತಿ ಆಗುವದು ನಿಜಜೀವನದಲ್ಲಿ ಬಹು ಕಠಿಣ .

ಇಂದಿನ ಹಾಗೆ ಏಪ್ರಿಲ್ ತಿಂಗಳು .ನನ್ನ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದೆ...ನ್ಯೂಸ್ ನೋಡುತ್ತಿದ್ದ ಅಪ್ಪ ಬಂದು ತೇಜಸ್ವಿಯವರು ಮರಣಿಸಿದ ವಾರ್ತೆ ತಿಳಿಸಿದಾಗ ..ಓಹ್ ಇದು ಸುಳ್ಳಾಗಬಾರದೆ ಎಂದು ಮರುಗಿದ್ದೆ .Attachment With Dettachment ಎಂಬ ನಂಬಿಕೆಯಿಟ್ಟು ಯಾರನ್ನು ಅಷ್ಟಾಗಿ ಹಚ್ಚಿಕೊಳ್ಳದ ನನಗೆ ತೇಜಸ್ವಿಯವರನ್ನು ಮರೆಯಾದ ಸುದ್ದಿ ಬಹಳ ದುಃಖ ತಂದಿತ್ತು.

ಸತ್ಯ ಒಪ್ಪಿಕೊಳ್ಳ ಬೇಕಿತ್ತು ಮತ್ತು ಜೀವನ ಸಾಗಿತ್ತು .

ಆ ವಿಸ್ಮಯ ವಿಶ್ವ ,ಕಾಡುಗಳು ,ಕಾಡುತ್ತಿದ್ದವು ...ಕೃಷ್ಣೆ ಗೌಡನ ಆನೆ ,ಮಂದಣ್ಣ ನೆನಪಾಗಿದ್ದರು ,ಮಚಾನು ಹತ್ತಿ ಚಿರತೆಗಾಗಿ ಕಾಯಬೇಕು ಅನ್ನಿಸುತ್ತಿತ್ತು ,ಬಿಸಿಲುಗಾಲದಲ್ಲಿ ಪಕ್ಕದಲ್ಲೇ ಹಾರುವ ತಟ್ಟೆ ಕಂಡಹಾಗೆ ಆಗುತ್ತಿತ್ತು ...ನನ್ನ ಸ್ನೇಹಿತರಲ್ಲಿ ಹೇಳುತ್ತಿದ್ದೆ ಜೀವನದ ಕೆಲವು ಗಳಿಗೆಗಳನ್ನು ಕಾಡಿನಲ್ಲಿ ಮನೆಮಾಡಿ ಅಲ್ಲೊಂದು ಕೊಳ ಕಟ್ಟಿ ಗಾಳ ಹಾಕುತ್ತ ಮೀನು ಹಿಡಿಯುತ್ತ ಕುಳಿತಿರಬೇಕು ಎಂದು .....ಹುಚ್ಚಾ ..!ಸಮಸ್ಯೆ ಇಲ್ಲದಲ್ಲಿ ಸಮಸ್ಯೆ ಹುಟ್ಟುಹಾಕಿ ಅದನ್ನು solve ಮಾಡುವ ಹುಚ್ಚೆ ನಿಂಗೆ ಎಂದು ಸ್ನೇಹಿತರೊಬ್ಬರು ಅಣಕಿಸಿದ್ದರು....ನಾನೂ ನನ್ನ ಸ್ನೇಹಿತೆ ಸೇರಿ ರೈಟೆಯ ಎಂಬ ಕೃತಿಯನ್ನು ಚಲನ ಚಿತ್ರವಾಗಿಸಬೇಕೆಂದು ಮಾತಾಡಿಕೊಂಡಿದ್ದೆವು . ಪಂಪ ಪ್ರಶಸ್ತಿ ಬಂದಾಗ ಹತ್ತಿರದ ಬನವಾಸಿಗೆ ಬರುವರಲ್ಲ ಎಂದು ಅಲ್ಲಿಗೆ ಹೋದರೆ ತಗೆದುಕೊಳ್ಳಲು ಬರಲೇ ಇಲ್ಲ...ನೇರ ನುಡಿಯ ನಿಗೂಢ ಮನುಷ್ಯ ನಮ್ಮ ಮೆಚ್ಚಿನ ತೇಜಸ್ವಿ .

ಹತ್ತಿರದ ಮರ್ಕಡಕ್ಕೋ,ಕಾರ್ಕಳಕ್ಕೋ ಹೋದಾಗ ,ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ನೆನಪಾಗುತ್ತಿತ್ತು ,ತೇಜಸ್ವಿ ನೆನಪಪಾಗುತ್ತಿದ್ದರು ..ತಟ್ಟನೆ ಅವರಿಲ್ಲವಲ್ಲ ಎಂದು ನೆನಪಾಗುತ್ತಿತ್ತು ....ನದಿಮೂಲ ಹುಡುಕ ಹೊರಟ ಮಾಯಾಲೋಕ ,ಚಿದಂಬರ ರಹಸ್ಯ,ಜುಗಾರಿ ಕ್ರಾಸ್ ,ಓತಿಕ್ಯಾತ ದ ಹಿಂದೆ ಬಿದ್ದೆ ಕರ್ವಾಲೋ, ಮಿಲೆನಿಯಮ್ ಸಿರೀಸ್ ,ಅಣ್ಣನ ನೆನಪು ,ಪರಿಸರದ ಕತೆಗಳು ,ಹುಲಿಯೂರಿನ ಸರಹದ್ದು ,ಅಬಚೂರಿನ ಪೋಸ್ಟ್ ಆಫೀಸು ,ತಬರನ ಕತೆ ,ಕಾಡಿನ ಕತೆಗಳು ,ಗುಡುಗು ಹೇಳಿದ್ದೇನು,ರಹಸ್ಯ ವಿಶ್ವ,ನಿಗೂಢ ಮನುಷ್ಯರು ಸ್ವರೂಪ ....ಓದುತ್ತ ಓದುತ್ತ ಚಿರತೆ ಕೂಗಿದ ಹಾಗೆ ಆಗುತ್ತಿತ್ತು,ಗಯ್ಯಾಳಿಗಳು ಅಟ್ಟಿಸಿಕೊಂಡು ಬಂದ ಹಾಗೆ ಅನ್ನಿಸುತ್ತಿತ್ತು ,ಮೇಲೆ ನಡೆದರೆ ತನ್ನೊಳಗೆ ಹುದುಗಿಸಿಕೊಳ್ಳುವ ಮಾಯಾ ಮರಳಲ್ಲಿ ನಡೆದ ಹಾಗೆ ,ಮಲೆನಾಡಿನ ಅಪ್ಪಟ ಮಳೆಗಾಲದಲ್ಲಿ ಕಿಟಕಿಯ ಮುಂದೆ ಕುಳಿತು ಹಪ್ಪಳ ತಿನ್ನುತ್ತ ಕುಳಿತರೆ ವಿಶ್ವವೇ ನಿಗೂಢ ವಾಗಿ ,ನಾನೂ ನಿಗೂಢತೆಯ ಭಾಗವಾದಂತೆ ತೋರುತ್ತಿತ್ತು ....ತಿರುಗಿದಾಗ ತೇಜಸ್ವಿಯವರು ಪಕ್ಕದಲ್ಲೇ ಬಂದು ನಿಂತಂತೆ ಭಾಸವಾಗುತ್ತಿತ್ತು ,,ಆದರೆ ಅದು ಬರಿದೇ ಕೋಲ್ ಮಿಂಚು ..ಮಿಂಚುಳ್ಳಿಯಲ್ಲ ಎಂದರಿವಿಗೆ ಬಂದಾಗ ತುಸು ಸಂಕಟ ....

ಮೊನ್ನೆ ಏಪ್ರಿಲ್ ೫ ಕ್ಕೆ ಅವರಿಲ್ಲವಾಗಿ ವರ್ಷಗಳೆರಡು ಕಳೆಯುತ್ತಿದೆ ....ಅಂದೇ ಬರೆಯಬೇಕೆಂದು ಕೊಂಡಿದ್ದೆ ಆದರೆ ಕೆಲಸದ ಒತ್ತಡ ದಿಂದಾಗಿ ಬರೆಯಲಿಕ್ಕಾಗಲಿಲ್ಲ.. ಹಠಕ್ಕೆ ಬಿದ್ದು ಬರೆಯುತ್ತಿದ್ದೇನೆ ..ನನಗೆ ಗೊತ್ತು ಇಂದು ನನ್ನ ಕೆಲಸ ಹಿಂದೆ ಬೀಳುತ್ತದೆ ಎಂದು.ಆದರೆ ನಾನು ಇಸ್ಟು ಮುಂದೆ ಬರಲು ಕಾರಣರದವರಿಗಾಗಿ ಇಸ್ಟೂ ಮಾಡಲಾರೆನೆ???

ನನ್ನ ಒಂದು ನುಡಿ ನಮನ...............
ಇತ್ತೀಚಿಗೆ ಕಾಫೀ ಸಾಬಣ್ಣನೂ ಬರುತ್ತಿಲ್ಲ ,ವಯಸ್ಸಾಯಿತಲ್ಲ ..ಪರಾವಲಂಭಿ ಆಗಿದ್ದಾನಂತೆ.....ನಾವು ಮಕ್ಕಳೆಲ್ಲ ರೆಕ್ಕೆ ಕಟ್ಟಿಕೊಂಡು ಗೂಡಿನಿಂದ ಹಾರಿ ಬಂದಿದ್ದೇವೆ .... ಜೀವನ ಸಾಗುತ್ತಲಿದೆ .....

ತೇಜಸ್ವಿಯವರ ಪತ್ನಿ ರಾಜೇಶ್ವರಿ ಕೆಂಡಸಂಪಿಗೆ ಯಲ್ಲಿ ತಮ್ಮ ನೆನಪುಗಳನ್ನು ತುಂಬ ಚೆನ್ನಾಗಿ ಹಂಚಿಕೊಂಡಿದ್ದಾರೆ ....


ಸ್ನೇಹಿತರೆ,



ಇದು ನನ್ನ ಮೆಚ್ಚಿನ ಹಳೆಯದೊಂದು ಬ್ಲೋಗ್ ..ಬಹಳ ದಿನಗಳ ಹಿಂದೆ ಬರೆದಿದ್ದೆ ,ಹಲವಾರು ಕಾರಣಗಳಿಂದ ನನ್ನ ನೆನಪಲಿ ಬಹಳ ದಿನ ಉಳಿದಿದೆ ಈ ಲೇಖನ ...ಯಾಕೋ ಮತ್ತೆ ಹೊಸ ಬ್ಲೋಗ್ ಮನೆಯಲ್ಲಿ ಹಾಕಬೇಕು ಅನ್ನಿಸಿತು ,ಮತ್ತೆ ಈ ಬ್ಲೋಗಿನಲ್ಲಿ ಮಾರ್ಪಡಿಸದೆಯೇ ಹಾಕಿದ್ದೇನೆ.........ನಿಮ್ಮ ಅಭಿಪ್ರಾಯಗಳ ನಿರೀಕ್ಷೆಯಲ್ಲಿ ........

ಶುಕ್ರವಾರ

ಕಷ್ಟ ನಷ್ಟ ವಿಚಾರಿಸದ ವಿಶಾಲವಾದ ಬದುಕಿದೆ!!!..

ಆಕೆ ನಗುನಗುತ್ತಾ ಮಾತನಾಡುತ್ತಾ ಳೆ ,ಬೆಳಿಗ್ಗೆ ನಾನು ಆಫೀಸ್ ಗೆ ಹೊರಡುವಾಗ ದಾರಿಯ ಬದಿಯಲ್ಲಿ ಕುಳಿತು ,ಗುಡ್ ಮಾರ್ನಿಂಗ್ ಅಕ್ಕ ಎನ್ನುತ್ತಾಳೆ, ಸಂಜೆ ಮನೆಗೆ ಬರುವಾಗ ,ಅಕ್ಕ ಇವತ್ತು ಪಪ್ಪಾಯ ಹಣ್ಣು ಸಿಹಿಯಾಗಿದೆ ,ಪಡುವಲ ಕಾಯಿ ಫ್ರೆಶ್ ಆಗಿ ಬಂದಿದೆ ಎನ್ನುತ್ತಾಳೆ,ಹಣ್ಣು ತೆಗೆದು ಕೊಳ್ಳಲು ಹೋದರೆ , ಇದು ನೋಡಿ,ಸ್ವೀಟ್ ಆಗಿದೆ ಎಂದು ೪ ದ್ರಾಕ್ಷಿ ತೆಗೆದು ಕೈಯಲ್ಲಿ ಇಡುತ್ತಾಳೆ ,ಸೇಬು ತೆಗೆದು ಕೊಳ್ಳಲು ಹೋದರೆ ,ಒಂದು ಬಾಳೆ ಹಣ್ಣು ,ಒಂದು ಕಿತ್ತಳೆ ತೆಗೆದು ನಿಮ್ಮ ಕೈಚೀಲದೊಳಕ್ಕೆ ಹಾಕುತ್ತಾಳೆ ,ಹಣ್ಣು ಸಿಹಿ ಇಲ್ಲವಾದರೆ ಈಗಲೇ ವಾಪಾಸು ತಂದುಕೊಡಿ ಅನ್ನುತ್ತಾಳೆ....ಸೇಬು ತೆಗೆದು ಕೊಳ್ಳಲು ಹೋದ ನನಗೆ ಆಕೆ ಬಾಳೆಹಣ್ಣು , ಹೀರೇಕಾಯಿ ,ಸೌತೆಕಾಯಿ ಕೊಳ್ಳು ವ ಹಾಗೆ ಮಾಡುತ್ತಾಳೆ.......

ಯಾರೀಕೆ? ಎಲ್ಲಿಂದ ಕಲಿತಳು ಕಸ್ಟಮರ್ ಸ್ಯಾಟಿಸ್ಫ್ಯಾಕ್ಶನ್ ,ಮಾರ್ಕೆಟಿಂಗ್ ಉಪಾಯಗಳ ನ್ನ ?B school ನಲ್ಲಿ ಓದಿದ್ದಾಳ ? ಐ ಟಿ ಯಲ್ಲಿ ಕೆಲಸ ಮಾಡುತ್ತಿದ್ದಾಳ, ದೇಶ ದೇಶ ತಿರುಗಿದ್ದಾಳಾ ? ,ಹೋಗಲಿ ಕೋಶ ಓದಿದ್ದಾಳಾ?? ನೋಡೋಕೆ ವಿಶ್ವ ಸುಂದರಿಯಾ?! ಇಲ್ಲಾ.!!.ಇಲ್ಲಾ....!!!

ಗ್ರಾಹಕರಿಗೆ ಸಂತೋಷ ವಾಗುವಂತೆ ಹೇಗೆ ಮಾತನಾಡಬೇಕು ,ಹೇಗೆ ಉತ್ತಮ ಕ್ವಾಲಿಟಿಯನ್ನ ಉಳಿಸಿಕೊಳ್ಳ ಬೇಕು ,ಒಮ್ಮೆ ಬಂದ ಗ್ರಾಹಕನನ್ನ ಮತ್ತೊಮ್ಮೆ ಬರುವ ಹಾಗೆ ಕೆಲಸವನ್ನ ಹೇಗೆ ಮಾಡಬೇಕು ಎಲ್ಲ ವನ್ನ ಕಲಿಯಲಿಕ್ಕೆ ವಿಶೇಷ ತರಬೇತಿಗಳಿವೆ ,ಒಳ್ಳೆಯ ವಿಡಿಯೋ ,ಆಡಿಯೋ ಗಳಿವೆ ,ಕಲಿಸಲು ಗುರುಗಳು ಇದ್ದಾರೆ (fecilitators .. ಎನ್ನಬೇಕು trainers ಅಲ್ಲ.) ನಮ್ಮಂತಾ ಸೊಫ್ಟೆeರಿಗಳಿ ಗೆ ಅದಕ್ಕೊಂದು ಟ್ರೈನಿಂಗ್ ,ಕಲಿಸೋಕೆ ಗುರುಗಳು ಇರುತ್ತಾರೆ ,


ಈಕೆಗೆ?? ......  ಯಾರೂ ಇಲ್ಲ,.

ಆದರೇ ,. ತೊಂದರೆ ಕೊಡಲು, ಪಾಠ ಹೇಳಲು ಬದುಕಿದೆ.!! ಕಷ್ಟ ನಷ್ಟ ವಿಚಾರಿಸದ ವಿಶಾಲವಾದ ಬದುಕಿದೆ.

ಕೆ ಒಬ್ಬ ಸಾಮಾನ್ಯ ಹೆಂಗಸು,ಕುಡುಕ ಗಂಡ, ೩ ಪುಟ್ಟ ಮಕ್ಕಳನ್ನ ಕಟ್ಟಿಕೊಂಡು ಹೆಣಗುತ್ತಿರುವವಳು ,
ಆದರೆ ಆಕೆಗೆ ಹಸಿವು ಗೊತ್ತು ,ಮಕ್ಕಳ ಪುಟ್ಟ ಹೊಟ್ಟೆ ತುಂಬಿಸುವ ಜವಾಬ್ದಾರಿ ಗೊತ್ತು .ಕುಡುಕ ಗಂಡನನ್ನ ಸಂಭಾಳಿಸುವ ಮನಸ್ಸು ಗೊತ್ತು .ನನ್ನ ಮನೆಯ ಪಕ್ಕದಲ್ಲಿ ತಳ್ಳುವ ಗಾಡಿಯಲ್ಲಿ ಹಣ್ಣು, ತರಕಾರಿ ಮಾರುತ್ತ ಜೀವನಸಾಗಿಸುತ್ತಿರುವವಳು.

ಆಕೆಯ ಅದ್ಭುತ ಅನ್ನಿಸುವ ಕಪಟ ಇಲ್ಲದ ವ್ಯಾಪಾರೀ ಶೈಲಿಗೆ ಖಂಡಿತವಾಗಿ ನಾನು ಮರುಳಾಗಿದ್ದೆನೆ..ವ್ಯಾಪಾರವೇ ಕಪಟತನದ್ದು ಎನ್ನಬೇಡಿ ಪ್ಲೀಸ್ .ಏಕೆಂದರೆ ಅದು ಅವರ ಹೊಟ್ಟೆ ಪಾಡು .ನಾವು ತಿನ್ನುವದ ರಲ್ಲಿ ಆಕೆಗೊಂದು ಚೂರು ಕೊಡೋಣ ಅಷ್ಟೇ...

ಹ್ಯಾಟ್ಸ್ ಓಫ್ ಅನ್ನೋಣವೇ? ಬದುಕು ಎಲ್ಲವನ್ನ ಕಲಿಸುತ್ತೆ .ವ್ಯಾಪಾರ ಎನ್ನುವದು ಒಂದು ಕಲೆ ,ಅದಕ್ಕೆ ನಿಮ್ಮ ಆಟಿಟ್ಯೂಡ್ ಒಂದೇ ಸಾಕು, ಬೇರಾವ ಕಲಿಕೆಯೂ ಬೇಡ. ಸಾಫ್ಟ್ವೇರ್ ಕಂಪನಿಯ ಒಡೆಯನಿಗೆ ಜಾವಾ ಪ್ರೋಗ್ರಾಮ್ ,ಸೀ ಪ್ರೋಗ್ರಾಮ್ ಕಲಿಯುವ ಅಗತ್ಯವಿಲ್ಲ  ,ಜನರಿಂದ ಕೆಲಸ ತೆಗೆಯುವ ಕಲೆ ಗೊತ್ತಿದ್ದರೆ ಸಾಕು .

ಈಕೆಯೊಂದು ಉದಾಹರಣೆಯಷ್ಟೇ ,ಇಂತಹ ಹಲವು ಮಹಿಳೆಯರಿದ್ದಾರೆ ,ಚಿಕ್ಕ ಪುಟ್ಟ ಗೂಡಂಗಡಿಗಳಿಂದ ತಮ್ಮ ಬದುಕು ನಿರ್ವಹಿಸುತ್ತಿದ್ದಾರೆ..ಸೂಪರ್ ಮಾರ್ಕೆಟ್ ಗಳು ಧಾಳಿ ಇಟ್ಟಾಗ ಬೀದಿ ಬದಿಯ ವ್ಯಾಪಾರಿಗಳೆಲ್ಲ ಕಂಗಾಲಾಗಿದ್ದು ಹಳೆಯ ಕತೆ .ವ್ಯವಹಾರ ಕಡಿಮೆ ಆಗಿರಬಹುದು ,ಆದರೆ ವ್ಯವಹಾರ ಪೂರ್ಣ ಮುಳುಗಿಲ್ಲ.ಎಲ್ಲ ಸೂಪರ್ ಮಾರ್ಕೆಟ್ ಗಳಿಂದ ತಮ್ಮನ್ನ ಸುರಕ್ಷಿತವಾಗಿಸಿಕೊಂಡವರಿದ್ದಾರೆ ,ಹಿಂದಿನ ಹಾಗೆ ಶೆಟ್ಟರ  ದಿನಸಿ ಅಂಗಡಿ ಇಂದಿಗೂ ನಡೆಯುತ್ತಿದೆ.

ಎಲ್ಲರಿಗೂ ನನ್ನದೊಂದು ಸಲಾಮ್!..
ಜಸ್ಟ್  ಮಾತ್  ಮಾತಲ್ಲಿ........



ನಿನ್ನೆ ಸಂಜೆ ತುಂಬಾ ತುಂಬಾ ಚೆನ್ನಾಗಿತ್ತು. ರವಿ ಬೆಳಗೆರೆ,ಕನ್ನಡದ ಸುದೀಪ್ ,ಜಸ್ಟ್ ಮಾತ್ ಮಾತಲ್ಲಿ..ಎಂದು ಹಾಡುವ ರಘು ದೀಕ್ಷಿತ್, ಜೊತೆಗೆ ಕಾರ್ಯಕ್ರಮವನ್ನು ನಿರೂಪಿಸಲು ಬಂದ 'ಎವರ್ ಗ್ರೀನ್' ಅಪರ್ಣಾ..!ಎಲ್ಲ ನಮ್ಮ ಕಂಪನೀ ಯ ಆವರಣದಲ್ಲಿ ...!

ಕಾರಣ??
 ಐ ಟಿ ಆವರಣದಲ್ಲಿ ರವೀ ,ಸುದೀಪ್,ರಘು...
ನಮ್ಮಲ್ಲೂ ಕತೆ ,ಕವನ ಬರೆಯುವ ವರಿದ್ದಾರೆ ,ಒಳ್ಳೆಯ ಲೇಖಕರಿದ್ದಾರೆ ...ವೃತ್ತಿ ಬೇರೆ ಪ್ರವೃತ್ತಿ ಬೇರೆ ಅಷ್ಟೇ....
ವಿಸ್ಮಯ ಎನ್ನುವ ಕನ್ನಡ ಹಬ್ಬ ನಮ್ಮ ಕ್ಯಾಂಪಸ್ ನಲ್ಲಿ...

ನಿಜ ಹೇಳಲೇ ಬೇಕು ಎಂದರೆ ಹೇಳುತ್ತೇನೆ ಕೇಳಿ

ನಾನು ರವಿ ಯ ಓ ಮನಸೇಯಿಂದ (ನನ್ನ ಮೊದಲ ಉದ್ದನೆಯ ಲೇಖನ ಪ್ರಕಟ ವಾಗಿದ್ದು ಓ ಮನಸೇ ನಲ್ಲಿ !) ಆಗಾಗ ಒಳ್ಳೆಯ ಲೇಖನ ಗಳನ್ನ ಹೆಕ್ಕಿ ತೆಗೆದು ಓದುತ್ತಿದ್ದೆ.  ಆದರೆ ಬಹಳ ವರುಷಗಳಿಂದ ನನ್ನ ಪ್ರೀತಿಯ 'ಸುಧಾ' ಗೆ ಆತು ಕೊಂಡು ಬಿಟ್ಟಿದ್ದೆ. ಯಾಕೋ ಗೊತ್ತಿಲ್ಲ ಇಂದಿಗೂ ಬಿಟ್ಟಿಲ್ಲ.
ಮಯೂರ ,ಪ್ರಜಾವಾಣಿ ,ಡೆಕ್ಕನ್ ಹೆರಾಲ್ಡ್ ,ಸುಧಾ ,ವರ್ಷಕ್ಕೊಂದೆ ಬರುತ್ತಿದ್ದ ವಿಶೇಷ ಸಂಚಿಕೆ ಇವೆಲ್ಲ ನನ್ನ ಕನ್ನಡ್ಕ್ಕೊಂದು ಕ್ಲ್ಯಾಸಿಕ್ ಟಚ್ ಕೊಡುವಲ್ಲಿ ತುಂಬಾ ಸಹಾಯ  ಮಾಡಿದ್ದವು..ಬಂಡ್ಲ್ ಗಟ್ಟಲೆ ಸಣ್ಣ ಕತೆಗಳನ್ನ, ಬೇರೆ ಬೇರೆ ದೇಶದ ಕತೆಗಳನ್ನ ಟಾಲ್ ಸ್ಟಾಯ್ ನಂತಹ ಮಹಾನ್ ಲೇಖಕನ Anna Kerenina,'ವಾರ್ n ಪೀಸ್' ಕೃತಿಗಳನ್ನ ,'Just Lather That's All 'ಕತೆ  ಓದಿದ್ದು ಮಯೂರ ದಲ್ಲಿ .(ಮಯೂರ ದಲ್ಲಿ ಬರುತ್ತಿದ್ದ ಕ್ಲಾಸಿಕ್ ಶೈಲಿಯ ಸಣ್ಣ ಕತೆಗಳ ಅಭಿಮಾನಿ ನಾನು) ..,ಅಮೃತ ಪ್ರೀತಂ ರಂತ ಲೇಖಕಿಯರ ( ಲೇಖಕರ) ನಿವೇದನೆಗಳನ್ನ.,ರಾಮಾಯಣ,ಮಹಾಭಾರತ, ದಂತಹವನ್ನ 'B K S ವರ್ಮ' ರ ಚಿತ್ರಗಳ ಸಮೇತ ಧಾರಾವಾಹಿಯಾಗಿ ಬಂದಿದ್ದನ್ನ ಓದಿದ್ದೆ..ನನ್ನ ಕಣ್ಮುಂದೆಯೇ ಮಹಾಭಾರತ ನಡೆಯುತ್ತಿದೆಯೇನೋ ,ನನ್ನ ಕಣ್ಮುಂದೆಯೇ ಸೀತೆಯ ಅಪಹರಣನಡೆಯಿತೇನೋ ಎನ್ನುವ ಮಟ್ಟಿಗೆ ಆ ಧಾರಾವಾಹಿಗಳು ನಮ್ಮ ಮಹಾನ್ ಕೃತಿಗಳ ದರ್ಶನ ಮಾಡಿಸಿದ್ದವು ..ಕೃಷ್ಣನ ಗೀತೋಪದೇಶ ನನ್ನ ಕಣ್ಮುಂದೆ ಇಂದಿಗೂ ಇದೆ...

  ಬನ್ನoಜೆ ಗೋವಿಂದಾಚಾರ್ಯ, ಕೃಷ್ಣ ಶಾಸ್ತ್ರಿ, ಜೊತೆಯಲ್ಲಿ ವಂಶೀ, ತುಶ್ವಿನು ,ನನ್ನ ಪಕ್ಕದ ಊರು ಸಾಗರದ ನಾಡಿಸೋಜ, ಮುಂತಾದವರೆಲ್ಲ ಜಗತ್ತು ನೋಡಲು ಶುರು ಮಾಡಿದ್ದ ನನಗೆ ಸಾತ್ ಕೊಟ್ಟಿದ್ದವು ..ನಾಡಿಸೋಜ ರಿಂದ (ಈಗರ್ಜಿಯ ಸುತ್ತಲಿನ ಹತ್ತು ಮನೆಗಳು etc) Christian ರ ಸಮಾಜದ ಆಗು ಹೋಗುಗಳ ಬಗ್ಗೆ , ಡ್ಯಾಮ್ ಕಟ್ಟಿ ಮುಳುಗಿಸಿದಾಗ ಅಲ್ಲಿನ ಜನರಿಗೆ ಬಂದೆರಗಿದ್ದ ಆಪತ್ತು ಗಳು ,ಅವರ ಜೀವದ ತುಮುಲಗಳು, ಮುಳುಗಡೆಯ ಭೀತಿ ,ಶರಾವತಿ ಹಿನ್ನೀರಿನ ಜನರ ಪಾಡು,ಕ್ಷಣ ಕ್ಷಣಕ್ಕೂ ಬದಲಾಗುವ ಅಲ್ಲಿನ ಜನರ ಕಾರ್ಪಣ್ಯಗಳು  ಇವೆಲ್ಲವನ್ನ  ಅರುಂಧತಿ ರಾಯ್ ರ 'ಗ್ರೇಟರ್ ಕಾಮನ್ ಗುಡ್ '  ಗಿಂತಲೂ ಚೆನ್ನಾಗಿ ಅರ್ಥ ಮಾಡಿಸಿದ್ದು ನಾಡಿಸೋಜ  .........ನನಗೆ ದಕ್ಷಿಣ ಕನ್ನಡ ದ ಬಂಟ್ಸ್ ಸಮಾಜ ದ ಬಗ್ಗೆ ,ಜಗತ್ತಿನ ಎಲ್ಲ ಆಗುಹೋಗುಗಳ ಬಗ್ಗೆ, ವೀರಪ್ಪನ್ ,ಕ್ರಪಾಕರ ಸೇನಾನಿ ಇವರೆಲ್ಲರನ್ನು ನನಗೆ ಪರಿಚಯಿಸಿದ್ದು 'ಸುಧಾ'.. .....ಫಾಂಟಮ್ ನಂತಹ ಎಂದು ಮುಗಿಯದ ಚಿತ್ರಕತೆಗಳು, ತಲೆ ಗೊಂಚುರು ಕಾಟ ಕೊಡುವ ಪಧಬಂಧ.,ಮಕ್ಕಳ ಪುಟಗಳು etc etc ..

ನಾನು ಓದಿದ್ದ ಮೊದಲ ಕಾದಂಬರಿ 'ದೌಲತ್' (ಆಗ ನಾನು ನಾಲ್ಕನೇಯದೋ  ,೫ದನೇಯದೋ  ತರಗತಿ ಯಲ್ಲಿದ್ದೆ.) ಇತಿಹಾಸಿಕ ಘಟನೆಗಳನ್ನ ಒಳಗೊಂಡ ಟಿಪ್ಪು,ಹೈದರಾಲಿ ಯರ ಕುರಿತಾದ ಒಳ್ಳೆಯ ಕಾದಂಬರಿ ... ಮಗುವಾಗಿ ಹಾವು ಹುಟ್ಟು ವ (ಮಹಿಳೆಯ ಹೊಟ್ಟೆಯಿಂದ ಹಾವು ತೆಗೆದದ್ದು ನಾನು ನೋಡಿದ್ದೇನೆ, ನಮ್ಮೂರಿನ ಸರಕಾರಿ ಆಸ್ಪತ್ರೆಯಲ್ಲಿ ಇನ್ನೂ ಇದೆ,ಹಾವಿನ ಮೊಟ್ಟೇ ಹೊಟ್ಟೆಯೊಳಕ್ಕೆ ಸೇರಿ.. ) ಒಂದು ರೀತಿಯ ಕತೆ, ಸಿನೆಮಾ ಜೀವನ(movie 'ಫ್ಯಾಶನ್' ಗೆ ಹೋಲುವಂತ್ ದೇ ಒಂದು ಕತೆ ಯ ಎಳೆ ) ಕಿತ್ತೂರಿನ ಚನ್ನಮ್ಮಳ ಕತೆ, ಎಲ್ಲವೂ ನಾನು ಓದಿದ್ದು ಸುಧಾ ದಲ್ಲಿ..,       ನೇಮಿಚಂದ್ರರ ಹ್ಯಾನ ,ಅನೇಕ ಥ್ರಿಲಿಂಗ್ ಅನ್ನಿಸುವ ಪತ್ತೇದಾರಿ ಕತೆಗಳು (ಗುಪ್ತಚರ ವಿಭಾಗಕ್ಕೆ ಸಂಬಂಧಿಸಿದ್ದು ),ಡಬ್ಲ್ ಕ್ರಾಸ್ ಎನ್ನುವ ಶಬ್ಧ ಪರಿಚಯ ವಾಗಿದ್ದೆ ಅಲ್ಲಿಂದ..
ಈಗ ಕೆ ಎನ್ ಗಣೇಶಯ್ಯ.. ಇತ್ತೀಚೆಗೆ ಬರುತ್ತಿರುವ ಕೆ ಎನ್ ಗಣೇಶಯ್ಯನವರ ಇತಿಹಾಸಿಕ, ತಾರ್ಕಿಕ ಕಾದಂಬರಿಗಳು ....ವಾವ್ ...ನಿಜಕ್ಕೂ ನನಗೆ ಸ್ವಾಮಿ ವೆಂಕಟೇಶ್ವರನಲ್ಲಿ ಬುದ್ಧಕಾಣುತ್ತಿದ್ದಾನೆ..
ಅದ್ಭುತ ಎನ್ನಬಹುದಾದ ಕ್ಲಾಸಿಕ್ ಗಳು ಅವು ..ನಿಜಕ್ಕೂ ಅಲ್ಲಿನ ತರ್ಕಗಳು ನಮ್ಮ ಧೀ ಶಕ್ತಿಗೆ ಒಳ್ಳೆಯ ಕಸರತ್ತು ಕೊಡುತ್ತಿದೆ..ಥ್ಯಾಂಕ್ ಯೂ ಗಣೇಶಯ್ಯನವರೇ..

ಓಹ್ ತುಂಬಾ ಸುದ್ದಿ ಹೇಳಿಬಿಟ್ಟೆ ಅಲ್ಲವ?.............'ಓ ಮನಸೆಯನ್ನ' ನೆನಪು ಮಾಡಿಕೊಂಡಾಗ ಇವೆಲ್ಲ ನನ್ನ ಮನದಲ್ಲಿ ಹಾಗೆ ತೇಲಿ ಬಂದಿದ್ದು  ಸುಳ್ಳಲ್ಲ.

ನಾನು, ಪಾಚು ಪ್ರಪಂಚ ಬ್ಲೋಗಿನ ಪಾಚು ಅಣ್ಣ , ಮಲೆನಾದ ಕರಾವಳಿ ಬ್ಲೋಗಿನ ಭಟ್ಟ, ಹುಡುಕಾಟದ ಯಜ್ಞೇಶ್ ಮತ್ತು ಹಲವಾರು ಸೇರಿ ಒಂದೆಡೆ ಕುಳಿತು ವಿಸ್ಮಯ ಕಾರ್ಯ ಕ್ರಮ ನೋಡಿದ್ದು ಒಂದು ವಿಶೇಷ..ಕನ್ನಡ ದ ಒಳ್ಳೆಯ ನಟ 'ಸುದೀಪ್' ತುಂಬಾ ಚೆನ್ನಾಗಿ ಹಾಡು ಹೇಳಿ ,ಚಿಂತನಾಶೀಲ, ಸಮಯೋಚಿತ ಮಾತುಗಳನ್ನು ಆಡಿದ್ದರು.. ನಾನು ಕೇವಲ ೧.೫ ಘಂಟೆ ಮಾತ್ರ ಇದ್ದೇ.. ಮೀಟಿಂಗ್ ಮಿಸ್ ಮಾಡುವಂತೆ ಇರಲಿಲ್ಲ ,ಸುದೀಪ್,ರವೀ ಎದ್ದು ಹೊರಟ ಮೇಲೆ ನನ್ನ ಡೆಸ್ಕ್ ಗೆ ಬಂದು  'ಜಸ್ಟ್ ಮಾತ್ ಮಾತಲ್ಲಿ' ಎಂದು ಹಾಡಿಕೊಳ್ಳುತ್ತ ಮತ್ತೆ ಕೆಲಸ ಶುರು ಮಾಡಿಕೊಂಡೆ....

ಚಿತ್ರ ಕೃಪೆ;ಅಂತರ್ಜಾಲ

ಗುಬ್ಬಚ್ಚಿ ಗೂಡಿನಲ್ಲಿ ಕಣ್ಣು ಮುಚ್ಚಿ ..........


(pic-internet )
ಒಂದು ಊರಲ್ಲಿ ಒಂದು ಗುಬ್ಬಚ್ಚಿ ಇತ್ತಡ ,ಅದಕ್ಕೆ ಚಿಕ್ಕ ರೆಕ್ಕೆ ,ರೆಕ್ಕೆ ಮೇಲೆಲ್ಲಾ ಕಪ್ಪು ಬಣ್ಣದ ಗೆರೆಗಳು ...ನೀನು ಟೀವಿನಲ್ಲಿ ನೋಡಿದ್ಯಲ್ಲ ಮೊನ್ನೆ ಹಂಗೆ ಇರುತ್ತೆ ಕಂದಾ. ಈಗ ಆ ಅನ್ನು.. ಜಾಣ ಅಲ್ಲಾ ನೀನು ..ಸ್ವಲ್ಪ ತಿಂದು ಬಿಡು ...ದೋಸೆನಾ.....ಅಮ್ಮಾ, ನಂಗು ತೋಚು ಗುಬ್ಬಿನಾ ....ನಾಳೆ ಟೀವಿನಲ್ಲಿ ತೊರ್ಸ್ತಿನೋ ಪ್ಲೀಸ್.. ಇದು ಲಾಸ್ಟ್ ಬೈಟ್ ,ತಿನ್ನು ಜಾಣ ಮರಿ ನೀನು ....ಅಕ್ಕ, ಪುಟ್ಟ ಮಗನಿಗೆ ದೋಸೆ ತಿನ್ನಿಸಲು ಮಾಡಿದ ಸರ್ಕಸ್ಸು ನೋಡಿ ನಗು ಬರುತ್ತಿತ್ತು.


ನಾವೆಲ್ಲಾ ಚಿಕ್ಕವರಿದ್ದಾಗ ಅಮ್ಮಂದಿರು ತಿಂಡಿ ತಿನ್ನಿಸುತ್ತಿದ್ದ ಬಗೆಯೇ ಬೇರೆ ತೆರನಾದುದು.ಪುಟ್ಟ ನೀ ತಿನ್ನದೆ ಹೋದ್ರೆ ಅಲ್ಲೋಡು ಗುಬ್ಬಿ ಬರತ್ತ ಇದೆ ಅದಿಕ್ಕೆ ಕೊಟ್ಟುಬಿಡ್ತೀನಿ ..ಬೇಗಾ ತಿನ್ನು ..ಇನ್ನು ಸ್ವಲ್ಪ ತಿನ್ನದೆ ಇದ್ರೆ ನೀನು ಆ ಗುಬ್ಬಿ ಹಾಗೆ ಚಿಕ್ಕದಾಗಿ ಬಿಡುವೆ ... ಗುಬ್ಬಿ ನೋಡುತ್ತಾ ,ಗುಬ್ಬಿಯಂತೆ ಚಿಕ್ಕದಾಗಿ ಬಿಡುವ ಭಯಕ್ಕೆ ಎಲ್ಲವನ್ನು ಖಾಲಿ ಮಾಡಿದುದಾಗಿತ್ತು.(ನಮಗೆಲ್ಲ ದೊಡ್ಡ ಬಾಲದ ಎತ್ತರದ ಹನುಮಂತನೇ ಆದರ್ಶ ).ಶಕ್ತಿವಂತ ಹುನುಮನ ಹಾಗೆ ಆಗ್ಬೇಕು ಎನ್ನುವ ಆಸೆಗೆ ಎಲ್ಲವನ್ನು ಖಾಲಿ ಮಾಡಿದ್ದಾಗಿತ್ತು..ಜೊತೆಗೆ ಗುಬ್ಬಿಗೆ ಕೊಡಬಾರದೆಂಬ ಸಿಟ್ಟಿಗೆ ತುತ್ತು ಅನ್ನ ನಮ್ಮ ಹೊಟ್ಟೆಗೆ ಇಳಿಯುತ್ತಿದ್ದದು ನಿಜ...

ಹಾಗೆಯೇ ಕೈತುತ್ತು ತಿಂದು ಬೆಳೆದ ಅಕ್ಕ ತನ್ನ ಮಗನಿಗೆ ಗುಬ್ಬಿ ಯನ್ನು ದೂರದರ್ಶನದಲ್ಲಿ ತೋರಿಸುವದನ್ನು ನೋಡಿ ವ್ಯಥೆ ಆಯಿತು.ಇಂದು ಅಳಿವಿನ ಅಂಚಿನಲ್ಲಿರುವ ಪಕ್ಷಿಗಳಲ್ಲಿ ಗುಬ್ಬಿಯು ಒಂದು .ನಮ್ಮ ಮನೆಯಂಗಳದಲ್ಲಿ ಕುಣಿದು ಕುಪ್ಪಳಿಸುತ್ತ ಹುಳು ಹುಪ್ಪಡಿ ,ಕಾಳು ,ತಿನ್ನುತ್ತಾ ,ಅಲ್ಲೇ ಒಂದು ಚಿಕ್ಕ ಬೆಚ್ಚನೆಯ ಗೂಡು ಕಟ್ಟಿ ತನ್ನ ಕುಟುಂಬ ಕಟ್ಟುತ್ತ ,ಇನ್ನೇನು ತಲೆಯ ಮೇಲೆ ಕುಳಿತು ಕೊಳ್ಳುವದೇನೋ ಎಮ್ಬಸ್ಟು ಹತ್ತಿರದಿಂದ ಹಾರುತ್ತ ..ನಿರ್ಭಯದಿಂದ ,ಸ್ವಚ್ಚಂದವಾಗಿ ಹಾರಿಕೊಂಡಿದ್ದ ಗುಬ್ಬಿ .......?


ಬಹುಷಃ ಮಲೆನಾಡಿನ ಭಾಗದಿಂದ ಬಂದವರಿಗೆ ಗುಬ್ಬಚ್ಚಿ (ಗುಬ್ಬಿ-House sparrow )ಎಂಬ ಪುಟ್ಟ ಹಕ್ಕಿ ತೀರ ಅಪರಿಚಿತವಾಗಿರಲಾರದು.ನಾನು ಬಹುವೇ ಇಸ್ಟ ಪಡುವ ಹಕ್ಕಿಗಳಲ್ಲಿ ಗುಬ್ಬಿಯು ಒಂದು.ಮನೆಯ ಎದುರಿನ ಪೇರಲೆಯ ಮರಕ್ಕೆ ಸದಾ ಆತು ಕೊಂಡಿರುತ್ತಿದ್ದ ಜುಟ್ಟ ಪಿಕಳಾರ,ಆಗಾಗ ಅತಿಥಿಯಂತೆ ಭೇಟಿ ಕೊಡುತ್ತಿದ್ದ ಮರಕುಟಿಗ, ಪ್ರೀತಿಯ ಹೋರ್ನಬಿಲ್ (ನೋಡಿದರೇನು ಪ್ರೀತಿ ಉಕ್ಕದು ),ನಮ್ಮ ಮನೆಯ ಎದುರಿನ ( ಆಲದ ಮರದ ಎಲೆಗಳ ಮರೆಯಲ್ಲಿ ಕುಳಿತು ಹಾಡುತ್ತಿದ್ದ (ಕಕೂ) ಕೋಗಿಲೆ.ಬೆಳಕಾಯಿತೆಂದು ಸಾರಲು ಬರುವ ಕಪ್ಪು ಕಾಗೆ ,ತನ್ನ ಪುಟ್ಟ ಚೊಂಚಿನಿಂದ ಮಕರಂದ ಹೀರಲು ಬರುವ ಪುಟ್ಟ ಹಕ್ಕಿ ..ಅದಕ್ಕೆ ಇರಬೇಕು ಬೆಳಕು ಹರಿಯುವ ಮುನ್ನ (ಚಿತ್ರ ಕೃಪೆ -ಅಂತರ್ಜಾಲ )ಏಳಬೇಕೆಂದು ಹಿರಿಯರು ಹೇಳುವದು.ಆದರೆ ಪ್ರೀತಿಯ ಗುಬ್ಬಿ ಮಾತ್ರ ಹಗಲಿಡಿ ಮನರಂಜಿಸುವ ಪಕ್ಷಿ .ಅಲ್ಲಲ್ಲೇ ಕುಪ್ಪಳಿಸುತ್ತ ,ಚಿವ್ ಚಿವ್ ಎನ್ನುತ್ತಾ ತಾನು ತನ್ನವರೆಂದು ಬಳಗವನ್ನೆಲ್ಲ ಕರೆದು ಮನೆಬಾಗಿಲಲ್ಲಿ ಅಕ್ಕಿ ಬಿದ್ದಿದ್ದರೆ ಅದನ್ನು ಪುಟ್ಟ ಚೊಂಚಿನಿಂದ ಆರಿಸಿ ತಿನ್ನುತ್ತಾ ತನ್ನ ಪಾಡಿಗೆ ಬದುಕುವ ನಿರುಪದ್ರವಿ ಜೀವಿ.ಸದಾ ಏನಾದರೊಂದನ್ನು ತಿನ್ನುತ್ತಲೇ ಇರುವ ಈ ಹಕ್ಕಿ ಮನೆಯ ಮಕ್ಕಳಿಗೆ ಎಸ್ಟೋ ಸಾರೆ ಉದಾಹರಣೆ ಆದುದು ಉಂಟು. .ಒಂದು ಕಾಲದಲ್ಲಿ ಮನೆಯ ಬಾಗಿಲಿಗೆ ಹಾಕಿರುತ್ತಿದ್ದ ದೇವರ ಫೋಟೋಗಳ ಮರೆಯಲ್ಲಿ ತನ್ನ ಪುಟ್ಟ ಗೂಡು ಕಟ್ಟಿ ಮನೆಯಲ್ಲೆಲ್ಲ ಗದ್ದಲ ಎಬ್ಬಿಸುತ್ತಿದ್ದ ಗುಬ್ಬಿ ಈಗ ಎಲ್ಲಿದೆ?

ವರದಿಗಳ ಪ್ರಕಾರ ಗುಬ್ಬಿಯ ಅಳಿವಿಗೆ ,ತೋಟ ಗದ್ದೆಗಳಿಗೆ ಈಗ ಬಳಸುವ ಕೀಟನಾಶಕ ಗಳು ,ರಾಸಾಯನಿಕಗಳು ವಂಶವಾಹಿಗಳ ಮೇಲೆ ತಮ್ಮ ಪ್ರಭಾವ ಬೀರಿ ಗುಬ್ಬಿಗಳ ಸಂತತಿ ವ್ರಧ್ಧಿ ಆಗದಂತೆ ಪರಿಣಮಿಸಿದೆ.ಅಲ್ಲದೆ ಅವುಗಳಿಗೆ ವಾಸಸ್ಥಾನ ,ತಿನ್ನಲು ಆಹಾರ ಎಲ್ಲವು ಕ್ರಮವಾಗಿ ದೊರಕುತ್ತಿಲ್ಲ..ಮನೆಯಲ್ಲಿ ಗುಬ್ಬಿಗೆಂದು ಕಾಳು ಹಾಕುವ, ಅಕ್ಕಿಯನ್ನು ಅಂಗಳದಲ್ಲಿ ಚೆಲ್ಲಲು ,ಆ ಖುಷಿಯನ್ನು ಆನಂದಿಸಲು ಯಾರಬಳಿಯೂ ವೇಳೆ ಉಳಿದಿಲ್ಲ .ಹಮ್...ಕಾಳು ಹಾಕಲು ಅಂಗಳವು ಉಳಿದಿಲ್ಲ...... ಅಮೇರಿಕಾದಂತಹ ದೇಶಗಳಲ್ಲಿ ಬರ್ಡ್ ಫೀಡಿಂಗ್ ಎನ್ನುವದು ಮುಖ್ಯವಾದ ಸ್ಥಾನ ಪಡೆದಿದೆ.,ಕಾರಣವಿಸ್ಟೆ ನಮ್ಮಲ್ಲಿನ ಹಾಗೆ ನೈಸರ್ಗಿಕ ಕಾಳುಗಳು ಅಲ್ಲಿನ ಪಕ್ಷಿಗಳಿಗೆ ದೊರೆಯುವದಿಲ್ಲ,ಎಲ್ಲವೂ ಹಿಮದರಾಶಿಯಲ್ಲಿ ಮುಚ್ಚಿರುತ್ತವೆ.ಮೈ ಕೊರೆಯುವ ಹಿಮಗಾಳಿಯ ನಡುವೆ ಚಿಕ್ಕಪುಟ್ಟ ಪಕ್ಷಿಗಳು ಹೇಗಾದರು ಹೊಟ್ಟೆ ತುಂಬಿಸಿ ಕೊಂಡಾವು ? ಅದಕ್ಕೆಂದೇ ಮಿಲಿಯನ್ ಗಟ್ಟಲೆ ಹಣವನ್ನು ತೊಡಗಿಸುತ್ತಾರೆ ಅಮೆರಿಕನ್ನರು .ವ್ಯವಸ್ಥೆಯನ್ನು ಮೆಚ್ಚಲೇ ಬೇಕಲ್ಲವೇ?

ಗುಬ್ಬಿಗಳನ್ನು ಉಳಿಸಲೇ ಬೇಕಾಗಿದೆ ,ಅದಕ್ಕಾಗಿ ಒಂದು ವ್ಯವಸ್ತಿತ ಪ್ರಯತ್ನ ನಡೆಯಬೇಕಾಗಿದೆ.



ಗುಬ್ಬಚ್ಚಿ ಗೂಡಿನಲ್ಲಿ ಬೆಚ್ಚಗೆ ಮಲಗಿ ನಿದ್ದೆ ಮುಗಿಸಿ ಕಣ್ಣು ತೆರೆಯುವ ಕಲ್ಪನೆಯೇ ಬಹಳ ಖುಷಿ ಕೊಡುವಂತದ್ದು.(ಗುಬ್ಬಚ್ಚಿ ಗೂಡು - ಗುಬ್ಬಿಗಳು ಕಟ್ಟುವ ಗೂಡು ಚಿಕ್ಕದಾಗಿ ಬೆಚ್ಚಗಿರುತ್ತದೆ ಎನ್ನುವ ಭಾವದಿಂದ ಆಪ್ತತೆ ಯನ್ನು ಉದಾಹರಿಸಲು ಬಳಸುತ್ತಾರೆ )ಗುಬ್ಬಚ್ಚಿ ಗೂಡು ಕೊಡುವ ಬೆಚ್ಚನೆಯ ಅನುಭವ,ಆಪ್ತ ಭಾವ ನಮ್ಮ ಮುಂದಿನ ಪೀಳಿಗೆ ಕಂಡೀತೆ ? ನಾವೆಲ್ಲರೂ ಎಚ್ಚೆತ್ತುಕೊಳ್ಳದಿದ್ದರೆ ಖಂಡಿತವಾಗಿಯೂ ಇಲ್ಲ..

"ಗುಬ್ಬಚ್ಚಿ ಗೂಡಿನಲ್ಲಿ ಕಣ್ಣು ಮುಚ್ಚಿ .........."

ಹಳೆಯದೊಂದು ಲೇಖನ ಹೊಸ ಮನೆಗೆ ಬಂದಿದೆ ...ಅಲ್ಲಿನ ಎಲ್ಲ ಕೊಮೆಂಟುಗಳನ್ನು ಇಲ್ಲಿ ಸೇರಿಸಿದ್ದೇನೆ...
14 Comments - Show Original Post

Collapse comments


Aravind Hegde said...


different topic and very good writing!! Its time we start Save Gubbi campaign like Save Tiger !!

Monday, July 27, 2009

ಸಿಮೆಂಟು ಮರಳಿನ ಮಧ್ಯೆsaid...

ಶ್ವೇತಾ...
ನಿಜಕ್ಕೂ ಈ ಪಕ್ಷಿಗಳ ಬಗ್ಗೆ ತುಂಬಾ ಬೇಜಾರಾಗುತ್ತದೆ....

ಆದರೆ ನಮ್ಮಲ್ಲಿ ಒಂದು ಗುಬ್ಬಚ್ಚಿ ಸಂಸಾರ ಬಂದು ಗೂಡು ಕಟ್ಟಿದೆ...

ಅದೂ ಈ ಬೆಂಗಳೂರಲ್ಲಿ...!!

ನನ್ನ ಮಗನಿಗೆ ಅವಗಳಿಗೆ ಅಕ್ಕಿ ಕಾಳು ಹಾಕುವದೇ ಸಂಭ್ರಮ...
ಎಷ್ಟು ಮಜಾ ಅಂದ್ರೆ ತಾಯಿ ಗುಬ್ಬಚ್ಚಿ ತನ್ನ ಮರಿಗೆ ತಿಂಡಿ ತಿನ್ನಿಸುವದು...!

ಚಿಂವ್.. ಚಿಂವ್ ಅನ್ನುತ್ತ ತನ್ನ ಮರಿಗೆ ತಿನ್ನಿಸುವದನ್ನು ನೋಡಲು ಬಹಳ ಖುಷಿ ಆಗ್ತದೆ

ಆ ಪುಟ್ಟ ಮರಿ ತನಗೆ ಬೇಡ ಅಂತ ಓಡಿ ಹೋಗುವದು...! ವಾಹ್...



ದಯವಿಟ್ಟು ಕನ್ನಡದಲ್ಲೇ ಬರೆಯಿರಿ...

ನಿಮ್ಮ ಬರವಣಿಗೆ ಸುಂದರವಾಗಿದೆ...

ಖುಷಿಯಾಗುತ್ತದೆ...
ಅಭಿನಂದನೆಗಳು...
Monday, July 27, 2009

ಪಾಚು-ಪ್ರಪಂಚ said...

Shwetha,

Nammaneli Gubbacchi kutumbada ondu bhagane agittu..!

"Kakanna-gubbanna" kathe ella chikka makkaligoo gottirtu alda..!!

ashtu aapta namma jeevanadalli.

chandada lekhana, tumbane ishta aatu, sumaaru dinagala nantra matte kannadadalle baradde. continue..!

Monday, July 27, 2009

ಚಿತ್ರಾ said...

ಶ್ವೇತಾ ,

ನಿಮ್ಮ ಬ್ಲಾಗಿಗೆ ಮೊದಲ ಬಾರಿ ಬಂದಿದ್ದೇನೆ.

ಗುಬ್ಬಿಯ ಬಗ್ಗೆ ಚಂದದ ಬರಹ. ನನಗೂ ಕೂಡ ಗುಬ್ಬಿ ಎಂದರೆ ಬಹಳ ಪ್ರೀತಿ. ನನ್ನ ಹಳೆ ಮನೆಯ ಕಟ್ಟೆಯ ಮೇಲೆ ದಿನಾ ಬೆಳಿಗ್ಗೆ ಒಂದು ಮುಷ್ಟಿ ಅಕ್ಕಿ ಗುಬ್ಬಿಗಳಿಗಾಗಿ ! ೭.೩೦ ಯ ಸುಮಾರಿಗೆ ಅಲ್ಲಿ ಅಕ್ಕಿ ಇರಲಿಲ್ಲವೆಂದರೆ ಕಟ್ಟೆಯ ಮೇಲೆ ಕುಳಿತು ಅವು ಗಲಾಟೆ ಮಾಡುತ್ತಾ ಕರೆಯುವುದನ್ನು ನೋಡಲು ತಮಾಷೆಯೆನಿಸುತ್ತಿತ್ತು. ಈಗ ಹೊಸ ಮನೆಯಲ್ಲಿ ಒಂದು ಗುಬ್ಬಿಯೂ ಬರುವುದಿಲ್ಲ ! ಮುಖ್ಯ ರಸ್ತೆಯ ಪಕ್ಕಕ್ಕಿರುವುದರಿಂದಲೋ ಏನೋ ವಾಹನಗಳ ಗದ್ದಲದಲ್ಲಿ ಗುಬ್ಬಿಗಳ ಚಿಲಿಪಿಲಿ ಕೇಳಿ ಬರುತ್ತಿಲ್ಲ ! ಅದೇ ನನಗೆ ತುಂಬಾ ಬೇಜಾರು !
Monday, July 27, 2009

ಕ್ಷಣ... ಚಿಂತನೆ... Think a while said...

ಶ್ವೇತಾ ಅವರೆ, ಪ್ರಕಾಶ ಹೆಗ್ಡೆಯವರ ಬ್ಲಾಗಿನಿಂದ ನಿಮ್ಮ ಬ್ಲಾಗಿಗೆ ಬಂದೆ. ಗುಬ್ಬಚ್ಚಿಯ ಲೇಖನ ಮತ್ತು ಚಿತ್ರ ನೋಡಿ ಸಂತಸ + ಬೇಸರವಾಯಿತು. ಬೇಸರ ಏಕೆಂದರೆ, ಈ ಗುಬ್ಬಚ್ಚಿಗಳನ್ನು ನಾವು ಚಿಕ್ಕವರಿದ್ದಾಗ ಬಹಳವಾಗಿ ನೋಡಿದ್ದೆವು. ಇಂದು ನಗರಗಳಲ್ಲಿ ಇವುಗಳ ಸಂಖ್ಯೆ... ಇಲ್ಲವೇ ಇಲ್ಲ ಎನಿಸುತ್ತದೆ. ಇವುಗಳ ಹಾರಾಟ, ಕೂಗು ಇವುಗಳೆಲ್ಲ ನೆನಪಿಸಿಕೊಳ್ಳಬೇಕಷ್ಟೆ. ಹಳ್ಳಿಗಳಲ್ಲಿಯೂ ಇವುಗಳ ಸಂತತಿ ಕ್ಷೀಣಿಸಿರಬಹುದು.
ಧನ್ಯವಾದಗಳು,
ಚಂದ್ರಶೇಖರ ಬಿಎಚ್.
Monday, July 27, 2009

shivu said...

ಶ್ವೇತ ಮೇಡಮ್,
ಗುಬ್ಬಚ್ಚಿ ಬಗ್ಗೆ ನೀವು ಬರೆದಿರುವ ಲೇಖನ ತುಂಬಾ ಚೆನ್ನಾಗಿದೆ. ಅವುಗಳ ಸದ್ಯದ ಪರಿಸ್ಥಿತಿಯನ್ನು ಚೆನ್ನಾಗಿ ವಿವರಿಸಿದ್ದೀರಿ..

ಸದ್ಯ ಬೆಂಗಳೂರಲ್ಲಿ ಗುಬ್ಬಚ್ಚಿ ಕಾಣಲು ಸಿಗದು. ಆದ್ರೆ ನಮ್ಮ ಊರಿಗೆ ಹೋದರೆ ದಾರಾಳ ಸಿಗುತ್ತವೆ.
ಅಮೇರಿಕಾದಲ್ಲಿ ಗುಬ್ಬಚ್ಚಿ ಪಕ್ಷಿಗಳ ಬಗೆಗಿನ ಕಾಳಜಿಯನ್ನು ನಮ್ಮವರು ನೋಡಿ ಕಲಿಯಬೇಕು.
ಚಿತ್ರಸಹಿತ ಲೇಖನವನ್ನು ಮಾಹಿತಿಯುಕ್ತವಾಗಿ ಬರೆದಿದ್ದೀರಿ..ಧನ್ಯವಾದಗಳು.

Monday, July 27, 2009

Shweta Bhat said...

@Aravind Hegde,

Thanks Aravind,
Not only Gubbi but also Jackle included in the list.AS per the reports Jackle also one of the birds under extinct
Tuesday, July 28, 2009

Shweta Bhat said...

ಪ್ರಕಾಶಣ್ಣ ,

ಅಂತೂ ಗುಬ್ಬಿ ಇನ್ನು ಕಾಣಲಿಕ್ಕೆ ಉಳಿದಿದೆ ಎಂದಾಯಿತು.ನಾನು ಗುಬ್ಬಿಯನ್ನು ನೋಡಿ ವರ್ಷಗಳೇ ಕಳೆದಿದೆ..

ಕನ್ನಡದಲ್ಲಿ ಟೈಪ್ ಮಾಡುವದು ಬಹಳ ಕಷ್ಟ .ಅದಿಕ್ಕೆ ಇಂಗ್ಲೀಷಿನಲ್ಲಿ ಬರೆಯುತ್ತಿದ್ದೆ.. ಅಲ್ಲದೆ ನನ್ನ ವೃತ್ತಿ ಪ್ರವೃತ್ತಿ ಎರಡೂ ಬೇರೆ ಬೇರೆ ಎಲ್ಲರ ಹಾಗೆ .

ಮುಂದೆ ಕನ್ನಡದಲ್ಲಿಯೂ ಬರೆಯುತ್ತೇನೆ...

ನಿಮ್ಮ ಬ್ಲೋಗು ನನ್ನ ಮೆಚ್ಚಿನ ಬ್ಲೋಗುಗಲ್ಲಿ ಒಂದು .ನನ್ನ ಸ್ನೇಹಿತರಿಗೆಲ್ಲ ಲಿಂಕನ್ನು ಕಳುಹಿಸಿದ್ದೇನೆ.

ಹೀಗೆ ಬರುತ್ತಿರಿ.ತುಂಬಾ ಧನ್ಯವಾದಗಳು.

ಹಳೆಯದೊಂದು ಲೇಖನ ಹೊಸ ಮನೆಗೆ ಬಂದಿದೆ ...ಅಲ್ಲಿನ ಎಲ್ಲ ಕೊಮೆಂಟುಗಳನ್ನು ಇಲ್ಲಿ ಸೇರಿಸಿದ್ದೇನೆ...

Tuesday, July 28, 2009

Shweta Bhat said...

@paapu prapancha,

ಥ್ಯಾಂಕ್ಸ್ ಪ್ರಶಾಂತ್,

ಹೌದು ಊರಲ್ಲೆಲ್ಲ ಹಾಗೆ ಅಲ್ದಾ? ಆದ್ರೆ ಈಗ ಎಲ್ಲೂ ಕಾಣಲೇ ಸಿಕ್ತಾ ಇಲ್ಲೆ ಗುಬ್ಬಿ...ಅದೇ ಗತಿ ಹದ್ದಿಗು ಬಂಜು...ಗುಬ್ಬಿ ಮತ್ತು ಹದ್ದು ಎರಡು ಅಳಿವಿನ ಅಂಚಿನಲ್ಲಿರುವ ಪಕ್ಷಿಗಳ ಲ್ಲಿಸ್ಟ್ ಗೆ ಸೇರಿದ್ದ.....

Tuesday, July 28, 2009

Shweta Bhat said...

ಥ್ಯಾಂಕ್ಸ್ ಚಿತ್ರಾ....

ನನ್ನ ಪುಟ್ಟ ಬ್ಲಾಗಿಗೆ ಸ್ವಾಗತ....

ನಮ್ಮ ಊರುಗಳಲ್ಲಿದ್ದ ಹಾಗೆ ಗಿಡಮರಗಳು ಇಲ್ಲ ,ಸಹಜವಾಗಿ ವೈವಿಧ್ಯಮಯ ಹಕ್ಕಿ ಗಳು ಮಾಯವಾಗುತ್ತಿವೆ.ನೆನೆಸಿಕೊಂಡರೆ ತುಂಬಾ ಬೇಜಾರಾಗುತ್ತದೆ..ಮುಂದಿನ ಮಕ್ಕಳಿಗೆಲ್ಲ ಗುಬ್ಬಿಯಂತ ಹಕ್ಕಿಗಳನ್ನು ಚಿತ್ರದಲ್ಲಿ ಮಾತ್ರ ತೋರಿಸುವ ಸ್ಥಿತಿ ಬಂತಲ್ಲ ಎಂದು.

ನಿಮ್ಮ ಬ್ಲಾಗಿಗೂ ಭೇಟಿ ಕೊಟ್ಟಿದ್ದೆ ..ತುಂಬಾ ಚೆನ್ನಾಗಿದೆ.ಮಳೆಯಾ ಆರ್ಭಟ ಓದಿ ಕಂಗಾಲಾದೆ.

ಹೀಗೆ ಬರುತ್ತಾ ಇರಿ ....

Tuesday, July 28, 2009

Shweta Bhat said...

@ಚಂದ್ರಶೇಖರ್,

ತುಂಬಾ ಧನ್ಯವಾದಗಳು ಸರ್. ಹೀಗೆ ಬರುತ್ತಾ ಇರಿ. ...ಹಳ್ಳಿ ಗಳಲ್ಲಿಯೂ ಈಗೀಗ ಬಣ್ಣ ಬಣ್ಣದ ಹಕ್ಕಿಗಳು ಮಾಯವಾಗುತ್ತಿದೆ.

ನಮ್ಮ ಮನೆಯ ಅಂಗಳದಲ್ಲಿ ಒಂದು ಪೇರಳೆಯಾ ಮರವಿತ್ತು .ಅದಿಕ್ಕೆ ಬಣ್ಣ ಬಣ್ಣದ ಹಕ್ಕಿಗಳೆಲ್ಲ ಬರುತ್ತಿದ್ದವು ,ಈಗ ಮಂಗಗಳ ಹಾವಳಿ ತಡೆಯಲಾರದೆ ಆ ಮರವನ್ನೇ ಕತ್ತರಿಸಿ ಬಿಟ್ಟಿದ್ದಾರೆ . ಹೀಗೆ ಬೇರೆಡೆಯೂ ಏನೇನೋ ಕಾರಣ ಗಳಿಂದ ಹಕ್ಕಿಗಳು ತಮ್ಮ ನೆಲೆ ಕಳೆದುಕೊಳ್ಳುತ್ತಿವೆ.ಕಣ್ಮರೆ ಆಗುತ್ತಿವೆ..ನಿಜಕ್ಕೂ ಖೇದನೀಯ ವಿಚಾರ.
Tuesday, July 28, 2009

Shweta Bhat said...

@ಶಿವೂ ಸರ್ ,

ನಮ್ಮೂರಲ್ಲಿ ಅಂತು ಗುಬ್ಬಿ ಕಾಣಸಿಗದು ..

ನಮ್ಮ ದೇಶದಲ್ಲಿ ಮನುಷ್ಯ ಜೀವಕ್ಕೆ ಬೆಲೆಯಿಲ್ಲ ಇನ್ನು ಹಕ್ಕಿಗಳ ಬಗೆಗಿನ ಕಾಳಜಿ ಕನಸಿನ ಮಾತು...ಸಲಿಂ ಅಲಿ ಯಂತಹ ಪಕ್ಷಿ ಪ್ರೇಮಿಗಳು ಅಲ್ಲಲಿ ಸಿಗುತ್ತಾರೆ ಆದರೆ ವ್ಯವಸ್ತಿತ ಸಂಘಟನೆ ಆಗದ ಹೊರತು ಪಕ್ಷಿಗಳ ಸಂರಕ್ಷಣೆ ನನಸಾಗದು.
ಹೀಗೆ ಬರುತ್ತಾ ಇರಿ ,..ಧನ್ಯವಾದಗಳು.
Tuesday, July 28, 2009


ಜಿ.ಎಸ್.ಬಿ. ಅಗ್ನಿಹೋತ್ರಿ said...

ಶ್ವೇತಾ

ನಿಮ್ಮ ಗುಬ್ಬಚ್ಚಿ ಕತೆ ಓದಿ ತುಂಬಾ ಬೇಸರ ಆಯಿತು. ಒಂದು ದುರದೃಸ್ಟದ ಸಂಗತಿ ಎಂದರೆ ಈ ಗುಬ್ಬಚ್ಚಿ ಇಂದು ಅವಸಾನದ ಅಂಚಿನಲ್ಲಿದೆ. ನನ್ನ ಆಯಿ(ಅಮ್ಮ) ನಾನು ಸಣ್ಣಕಿರಕಾದ್ರೆ ಗುಬ್ಬಚ್ಚಿ ತೋರಿಸ್ತಾನೆ ಊಟ ಮಾಡಿಸ್ತಿತ್ತು. ಆದ್ರೆ ಇಂದಿನ ಮಕ್ಕಳಿಗೆ ಈ ಯೋಗ ಇಲ್ಲ. ಮೊಬೈಲ್ ತರಂಗಗಳಿಗೆ ಗುಬ್ಬಚ್ಚಿ ಇಂದು ಊರು ಬಿಡುತ್ತಿವೆ. ಸಂತಾನ ಯೋಗವನ್ನು ಕಳೆದುಕೊಳ್ಳುತ್ತಿವೆ. ಹೀಗಾಗಿಯೇ ತೀರ ಅಪರೂಪವಾಗುತ್ತಿವೆ. ಮೊಬೈಲ್ ತರಂಗಗಳು ಎಲ್ಲಿಲ್ಲವೂ ಅಲ್ಲಿಗೆ ಹೋಗಿ ಬದುಕು ಕಾಣಲು ಪ್ರಯತ್ನಿಸುತ್ತಿವೆ.

ನೀವು ಕೋಟ್ ಮಾಡಿದಂತೆ "ತೋಟ ಗದ್ದೆಗಳಿಗೆ ಈಗ ಬಳಸುವ ಕೀಟನಾಶಕ ಗಳು ,ರಾಸಾಯನಿಕಗಳು ವಂಶವಾಹಿಗಳ ಮೇಲೆ ತಮ್ಮ ಪ್ರಭಾವ ಬೀರಿ ಗುಬ್ಬಿಗಳ ಸಂತತಿ ವ್ರಧ್ಧಿ ಆಗದಂತೆ ಪರಿಣಮಿಸಿದೆ....." ಇದೂ ಒಂದು ಕಾರಣ.

ಆದರೆ ನನ್ನ ಪ್ರಕಾರ ಅವೆಲ್ಲಕ್ಕಿಂತ ಇಂದಿನ ಮೊಬೈಲ್ ತರಂಗಗಳು ಸಾಕಸ್ಟು ಪರಿಣಾಮ ಬೀರುತ್ತಿವೆ. ಸಾಮಾನ್ಯವಾಗಿ ನನ್ನು ಭೇಟಿ ನೀಡುವ ಊರಲ್ಲಿ ಈ ವಿಚಾರವಾಗಿ ಅದ್ಯನ ನಡೆಸಿದ್ದೇನೆ. ನನಗೆ ಪ್ರಮುಖವಾಗಿ ಕಾಣಿಸಿದ್ದು ಇದೆ. ಒಮ್ಮೆ ಯೋಚಿಸಿ ಮೊಬೈಲ್ ಬರುವುದಕ್ಕೂ ಪೂರ್ವದಲ್ಲಿ (ಅಂದರೆ ಹತ್ತನ್ನೆರಡು ವರ್ಷಗಳ ಹಿಂದೆ) ಗುಬ್ಬಚ್ಚಿ ನಮಗೆ ಅದೆಸ್ಟೂ ಮನೆಗಳಲ್ಲೂ ಕಾಣುತ್ತಿತ್ತು. ಆದರೆ ಈಗ ಅಲ್ಲೂ ಇಲ್ಲ. ಮೊಬೈಲ್ ಬರುವುದಕ್ಕೂ ಮೊದಲೂ ಕೀಟನಾಶಕ ಗಳು , ರಾಸಾಯನಿಕಗಳು ಬಳಕೆಯಲ್ಲಿದ್ದವು ಅಲ್ಲವೇ?



ಕೇವಲ ಗುಬ್ಬಚ್ಚಿಯಸ್ಟೇ ಅಲ್ಲ....

ಹೌದು ಮೊಬೈಲ್ ತರಂಗಗಳಿಂದ ಸಂತಾನೋತ್ಪತ್ತಿಯ ಸೌಭಾಗ್ಯ ಕಳೆದು ಕೊಂಡಿರುವು ಗುಬ್ಬಚ್ಚಿ ಮಾತ್ರ ಅಲ್ಲ. ಮನುಷ್ಯ ಕೂಡ. ಮೊಬೈಲ್ ತರಂಗಗಳಿಂದ ವೀರ್ಯ ಉತ್ಪಾದನೆ ಕ್ಷಿಣಿಸುತ್ತೆ ಅನ್ನೋದನ್ನು ವೈದ್ಯರು ಈಗಾಗಲೇ ಖಾತ್ರಿ ಪಡಿಸಿದ್ದಾರೆ.(ಇದಕ್ಕೆ ಕೆಲವರ ಪ್ರತಿವಾದವು ಇದೆ. ಇಲ್ಲ ಎನ್ನುವುದಿಲ್ಲ...) ವೈದ್ಯರು ಹೇಳಿದ್ದು ಸರಿ ಎನಿಸಿದೆ. ಹಾಗೇ ವನ್ಯಜೀವಿಗಳಲ್ಲೂ ಈ ಬದಲಾವಣೆ ಆಗಿದೆ. ಆಗುತ್ತಿವೆ.

ಗುಬ್ಬಚ್ಚಿ ಜಾತಿಗೆ ಸೇರುವ ಅನೇಕ ಚಿಕ್ಕ ಚಿಕ್ಕ ಹಕ್ಕಿಗಳು ಇಂದು ಈ ಸಮಸ್ಯೆಯ ಸುಳಿಗೆ ಸಿಕ್ಕಿದೆ.



Shweta Bhat said...


@ಅಗ್ನಿಹೋತ್ರಿ ಸರ್
ನೀವು ಹೇಳಿದ್ದು ಸರಿ ....ನಾನು ಬರೆಯುವಾಗ ಅದನ್ನು ಮರೆತು ಬಿಟ್ಟಿದ್ದೆ.ನೆನಪಿಸಿದ್ದಕ್ಕೆ ತುಂಬಾ ಧನ್ಯವಾದಗಳು..

ಎಲೆಕ್ಟ್ರೋ ಮ್ಯಾಗ್ನೆಟಿಕ್ ಸ್ಪೆಕ್ಟ್ರುಂ ನ Radio Frequency Radiation (RFR) ಭಾಗದ ಮೈಕ್ರೋ ತರಂಗಗಳು(Microwaves Radiation) ತುಂಬಾ ಕೆಟ್ಟ ಪರಿಣಾಮ ಬೀರುತ್ತಿವೆ..ಈ ಪಟ್ಟಣದಲ್ಲಂತೂ ಮನುಷ್ಯರ ಮನೆಗಳೇ ಚಿಕ್ಕ ಗುಬ್ಬಚ್ಚಿ ಗೂಡ ಹಾಗೆ ಇದ್ದು ಇನ್ನು ಗುಬ್ಬಿಗಳಿಗೆ ಗೂಡಿನ ಮಾತು ಕನಸೇ ಸರಿ.

ತಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು.
Tuesday, July 28, 2009

ಸೋಮವಾರ

ಒಂದು ಹಳೆಯ ಯೋಚನೆಗೆ ಹೊಸ ಓಘ

Ping the IP, Follow The Packet, Leave the Rest!



ಮೊನ್ನೆ ನನ್ನ ಚಿಕ್ಕಪ್ಪನೊಬ್ಬ ಕರೆ ಮಾಡಿ ಬೆಂಗಳೂರಿನ ಬಗ್ಗೆ ಬಹಳ ವಿಚಾರಿಸುತ್ತಿದ್ದ. ...

ಬೆಂಗಳೂರಲ್ಲಿ ಮನುಷ್ಯರು ಇದ್ದಾರೋ ?

ನನಗೆ ಸಿಕ್ಕಾಪಟ್ಟೆ ನಗು ಬಂತು , ಇದ್ಯೇನಪ್ಪ ಬುಡಕ್ಕೆ ಕತ್ತರಿಯಲ್ಲ ಎಂದು .
ನಾನು ಇಲ್ಲೇ ಇದ್ದೇನಪ್ಪ ಎಂದು ಸುಮ್ಮನಾದೆ..
ಏನಮ್ಮಾ ಅಲ್ಲಿನ ಜನರು ಊರುಹೇಗೆ?.
ಈ ಊರಿನ ವಿಶೇಷವೇನೆಂದರೆ, ಇಲ್ಲಿನವರಿಗೆ ಇಂಗ್ಲೀಷು ಗೊತ್ತು :)
ಅದೇ ,ಡೆಡ್ ಎಂಡ್ ,ರೈಟು,ಲೆಫ್ಟು,ಫ್ಲಾಟು,ಡಿಸ್ಕೌಂಟು,
ಅಲ್ಲಮ್ಮ ಅಲ್ಲಿಯೂ ಬದುಕು ಸಾಗುತ್ತಲ್ಲ?
ಹಾಹಾ ಹೆಹೆ .. ಇಲ್ಲಿ ಬದುಕು ಓಡುತ್ತೆ. ನಿಲ್ಲದೆಯೇ, ಹಿಂದಿನ ನೆನಪಿಲ್ಲದೆಯೇ, ನಿನ್ನೆಯ ಹಂಗಿಲ್ಲದೇ,ಯಾರಿಗೂ ಕಾಣದೆಯೇ; ಹಾಂ.ಅಲ್ಲ ಚಿಕ್ಕಪ್ಪ .....ಹೊಗೆ,ಗಿಜಿಗುಡುವ ರಸ್ತೆ,ನಿಲುಕದ ಗಲಾಟೆ, ಅಯ್ಯಪ್ಪ!...ಸಾಕು ಇದರ ಸಹವಾಸ , ಎನ್ನುವಷ್ಟು ನನ್ನ ನೆಮ್ಮದಿ ಕೆಡಿಸಿದೆ.
ಇರ್‍ಲಿ ಬಿಡಮ್ಮ ಅದು ಮುಗಿಯದ ಕತೆ.ಹ್ಮ್.
ಚಿಕ್ಕಪ್ಪ ನಿಂಗೊತ್ತಾ?
'ಉನ್ನತವಾದ ಶಿಖರ ಗಳು ನಿರ್ಮಾನುಷ ವಾದುದು', ಧನ,ಜ್ಞಾನ,ಇವೆರಡೂ ಅಥವಾ ಜ್ಞಾನ ಧನ ಸಂಚಾಯವಾದಂತೆ ಮನುಷ್ಯ ಸಾಮಾನ್ಯರಿಂದ ದೂರವಾಗುತ್ತಾ ಹೋಗುತ್ತಾನಂತೆ! ಅಸಲು, ಆತನಿಗೆ ಮೂಡ್ ಇರೋದಿಲ್ಲ :)!

ಈ ನುಡಿ ನನ್ನನ್ನು ತುಸು ಕೆಣಕಿದ್ದು ನಿಜ. ಜೀವನದಲ್ಲಿ ಮಾನಸಿಕ ಔನತ್ಯ ತಾಳ್ಮೆ ಯನ್ನು ನಿರೀಕ್ಷಿಸಿದಂತೆ, ಬೌದ್ಧಿಕತೆ ವಾಸ್ತವದ ಚಿತ್ರಣ ಕೊಡುತ್ತೆ. ಅಲ್ಲವ?
ಮಾನಸಿಕ ಔನತ್ಯ ಬುದ್ಧಿಯ ಭ್ರಮೆ ಸರಿದಾಗ ಬಹು ನಿಚ್ಚಳ. ಆಗ ಮನಕ್ಕೆ ಸಿಗುವ ಕುಶಿ, ವೌ ವಾವ್....Mega Martu ಕೊಡೋಲ್ಲ, Brand Factoryಲು ಸಿಗೋಲ್ಲ...

ನನ್ನ ಸ್ನೇಹಿತರೊಬ್ಬರು 'ಮಾಫಲೇಷು ಕದಾಚನ'ಕ್ಕೆ ಒಂದು ಟೆಕ್ನಿಕಲ್ ಡೆಫಿನೇಶನ್ ಕೊಟ್ಟಿದ್ದರು ;Ping the IP,Follow The Packet, Leave the Rest ....IP,Ping,Packet etc ಕಂಪ್ಯೂಟರ್ ನೆಟ್‌ವರ್ಕ್ನಲ್ಲಿ ಬರುವ ಕಾನ್ಸೆಪ್ಟ್ ಗಳು ಇವೆಲ್ಲ...

Because, Life is the Way you see it!!


ನಮ್ಮನ್ನು ನಾನು ಈಜಲು ಬಿಡಬಾರದು , We should float !!ಲೈಫ್ ನಲ್ಲಿರೋ ಕುಶಿ ಆವಾಗ ಕಾಣಸಿಗುತ್ತೆ..ಹಾಂ ಕಾಣೋಕೆ ಎಲ್ಲೂ ಹುಡುಕೋ ಅವಶ್ಯಕತೆ ಇಲ್ಲ.ನಮ್ಮಲ್ಲೇ ಇರುತ್ತೆ...ಅದನ್ನ ಹುಡುಕೋದೇ ಜೀವ್ನವಾ

ಗುರುವಾರ

ಮಾತು ಕೇಳೋ ಮನಸು ಬೇಕಿತ್ತಲ್ಲಾ ..

ಹೌದು ಎಲ್ಲರಿಗೂ ಹಾಗೆ ಅನ್ನಿಸಿರುತ್ತಲ್ಲ ಎಸ್ಟೋ ಸಾರೇ....
ಮೂಡ್ /ಮನಸ್ತಿತಿ ಕೈ ಕೊಡಲು ಕಾರಣಗಳೇನು ?
೧.ಅವಿಶ್ರಾಂತ ಜೀವನ ಶೈಲಿ
೨ .ಪೋಷಕ ಆಹಾರದ ಕೊರತೆ
೩ .ಅನಾರೋಗ್ಯಕರ ಜೀವನ ಕ್ರಮ
೪.ಬಿರುಕು ಬಿಡುತ್ತಿರುವ ಸಂಬಂಧಗಳು
೫.ಆಲಸ್ಯ

ವಿಶ್ರಾಂತಿ ಎಂದರೆ ೩-೪ ತಾಸು ನಿದ್ದೆ ಮಾಡುವದಲ್ಲ..೬-೭ ಗಾಢ ನಿದ್ರೆ ಬೇಕೇ ಬೇಕು .ಅದೆಲ್ಲ ಸರಿ ನಾನು ದಿನಕ್ಕೆ ೭ ಗಂಟೆ ನಿದ್ರಿಸುತ್ತೇನೆ ..ನೋ... ವಿಶ್ರಾಂತಿ ಅಂದರೆ ಮನಸ್ಸಿಗೆ ಸಮಾಧಾನ ಕೊಡುವದು ,ಏನನ್ನು ವಿಚಾರ ಮಾಡದ ಒಂದು ಸ್ಥಿತಿ .ಯೋಗ ನಿದ್ರೆ ಅಂದರು ತಪ್ಪಿಲ್ಲ.ಅತ್ತ ಇತ್ತ ನೋಡುವಲ್ಲಿ ವೇಸ್ಟ್ ಆಗುವ ನಮ್ಮ ಎನರ್ಜಿ ಯನ್ನು ಸೇವ್ ಮಾಡಿ ಒಂದು ಕಡೆ ಕೂಡಿಇಡುವದು .... ಧಾವಂತ ವಿಲ್ಲದ ಸಾವಧಾನದ ಬದುಕು ಇಂದು ನಮ್ಮಲ್ಲಿ ಎಸ್ಟು ಜನಕ್ಕಿದೆ?
ಆಗೆಲ್ಲ ನಮ್ಮ ಮೂಡ್ ಹೇಳುತ್ತೆ ,ನನಗೆ ರೆಸ್ಟ್ ಬೇಕು ...ನಾನು ಕೆಲಸ ಮಾಡೋಕೆ ರೆಡೀ ಇಲ್ಲಪ್ಪ

ಪೋಷಕ ಆಹಾರದ ಕೊರತೆ ಇದ್ದಾಗ ,ನಮ್ಮ ಬ್ರೈನ್ ಗೆ ಆಕ್ಸಿಜನ್ ಕೊರತೆ ಆಗಿದ್ದಾಗ ಎಲ್ಲ 'ಮೂಡ್' ಇಲ್ಲ ಎನ್ನುತ್ತೆ...ಪೋಷಕ ಆಹಾರದ ಲಿಸ್ಟ್ ನಲ್ಲಿ ಕುರ್ಕುರೆ,ಗೊಲ್‌ಗುಪ್ಪ ,ಪಾನಿಪೂರಿ,ನೂಡಲ್ಸ್ , ಬರ್ಗರ್ ...ಎಕ್ಸೆಟ್ರ , ದಂತಹ ಜಂಕ್ ಫುಡ್ ಬರೋದಿಲ್ಲ....ಗೊತ್ತಲ್ಲ....?
ಹಣ್ಣು ಹಂಪ್ಲು ಎಲ್ಲ ಚೆನ್ನಾಗಿ ತಿನ್ನಿ ,ಹೊಟ್ಟೆ ತುಂಬಾ ನೀರು ಕುಡೀರಿ ,ಚಿಕ್ಕದೊಂದು ವ್ಯಾಯಾಮ ಮಾಡಿ ,ಗಡ ಗಡನಡುಗುವ ಚಳಿಯಲ್ಲಿ ಬೆಚ್ಚಗೆ ಕೋಟ್ ಹಾಕಿಕೊಂಡು ವಾಕ್ ಮಾಡಿ .....ಆ............. ಎನ್ನುತ್ತಾ ಈಸ್ಟಗಲಕ್ಕೆ ಬಾಯಿತೆರೆದು ಹೊರಬರುವ ಸುರುಳಿ ಸುರುಳಿ ಹೊಗೆಯನ್ನು ನೋಡುತ್ತಾ ರಿಲ್ಯಾಕ್ಸ್ ಆಗಿ ,
ಅಲ್ಲಾರಿ ...,ಫಿಟ್ ಅಂಡ್ ಹೆಲ್ತ್ದಿ ಆಗಿದ್ರೆ ಮೂಡ್ ಡ್ಯಾನ್ಸ್ ಮಾಡದೇ ಎಲ್ಲಿಗೆ ಹೋಗುತ್ತೆ?

ರೈಟ್ ಲೈಫ್‌ಸ್ಟೈಲ್ ಜೊತೆಗೆಒಂದಿಸ್ತು ವ್ಯಾಯಾಮ ,ಹೊತ್ತು ಹೊತ್ತಿಗೆ ಬ್ರೇಕ್‌ಫಾಸ್ಟ್ ,ಲಂಚ್ ,ಡಿನ್ನರ್,ಇದೆಲ್ಲ ಇದ್ರೆ ಅನಾರೋಗ್ಯಕರ ಜೀವನಕ್ರಮ ಹೆಂಗಾಗುತ್ತೆ?
ನಿಜಕ್ಕೂ ನಿಮ್ ಜೀವ್ನದ್ ಮೇಲೆ ನಿಮ್ಗೆ ಪ್ರೀತಿ ಇದೆಯಲ್ವಾ ? ಪ್ರೂವ್ ಇಟ್! ಮೂಡ್ ಸಾತ್ ಕೊಡುತ್ತೆ ಕಣ್ರೀ...

ನಂದೇ ಒಂದು ಉದಾಹರಣೆ ಕೊಡ್ತೀನಿ ...ನಂದು ನ್ಯೂಕ್ಲಿಯರ್ ಫ್ಯಾಮಿಲೀ.,ಅಜ್ಜ ,ಅಜ್ಜಿ ಹೆಸ್ರು ಕೇಳಿದೀನಿ ..ಜೊತೆಗೆ ಅಕ್ಕ ತಂಗೀರು ಯಾರು ಇಲ್ಲ...ಮನೆಯಲ್ಲಿ ಒಂದು ಚೂರು ಹೆಚ್ಚು ಕೇರ್ ,ಕೇಳಿದ್ದೆಲ್ಲ ಬಂದು ಬಿಡತ್ತೆ,,,,,. ಯಾರ ಮೇಲೆಯೂ ಡಿಪೆಂಡ್ ಆಗುವ ಕಷ್ಟ ಇಲ್ಲ .....ಸೋ ಯಾರ್ಜೋತೆಗೂ ಅಡ್ಜಸ್ಟ್ ಆಗೋಕೆ ಬರೋಲ್ಲ...ಆವಾಗೆಲ್ಲ ನಂಗೆ ಮೂಡ್ ಹಾಳಾಗುತ್ತೆ..ನಾನು ಹೇಳಿದ್ದೆ ಆಗಬೇಕು ...ಇದು ನನ್ನ ಹಟ.......

ಚೇಂಜ್ ಅನ್ನೋದು ಮೂಡ್ ಗೆ ತುಂಬಾ ಹೆಲ್ಪ್ ಮಾಡುತ್ತೆ ..... ಹೊಂದಾಣಿಕೆ ಜೀವನಕ್ಕೆ ಒಂದು ಜೀವ ಕೊಡುತ್ತಂತೆ ...(ನಂಗೆ ಗೊತ್ತಿಲ್ಲ ಬಿಡಿ ) ಫ್ರೆಂಡ್ಸ್ ಜೊತೆ ಶೋಪಿಂಗ್ ಹೋಗೋದು ,ಮಾರ್ಕೆಟ್ ಗೆ ಹೋಗಿ ತರಕಾರಿ ತರೋದು (ಅತ್ತೆಗೆ, ಗಂಡನಿಗೆ ಅಡುಗೆ ಬರುತ್ತಲ್ಲ ,ಜೀವ್ನಾ ತುಂಬಾ ಸಿಂಪಲ್.!) ನಾದಿನಿಯ ಮಗುವಿನ ನಾಮಕರಣಕ್ಕೆ ಹೋಗಿ ಅಲ್ಲಿ ಎಲ್ಲರ ಜೊತೆ ಬೇರೆಯೋದು ...ಮುಖ್ಯವಾಗಿ ನಾವು ಸಮಾಜ ಜೀವಿ ಎಂಬ ಸತ್ಯ ವನ್ನು ಮರೆಯದೇ ಇದ್ಬಿಟ್ರೆ ಮೂಡ್ ಗು ಚೇಂಜ್ ಸಿಕ್ಕುತ್ತೆ, ಸಂಬಂಧಗಳು ಸುಧಾರಿಸುತ್ತೆ ಅಲ್ವಾ?ಮಾಡುವದನ್ನ ಹ್ಯಾಪೀ ಆಗಿ ಮಾಡಿ ಅಸ್ಟೆ

ಕಳ್ಳ ಬೀಳೊ ಮನಸಿಗೆ ನನ್ ಹತ್ರ ಯಾವ ಮೆಡಿಸಿನ್ ಇಲ್ಲಪ್ಪ....ನಿಮ್ಮ ಮೂಡ್ ಗೆ ಹೇಳಿ ,ಹೇ ನಾನು ಹೇಳಿದ್ದನ್ನ ಚೂರು ಕೇಳಪ್ಪ
ಜಾಣ ... ...
ಹೌದಲ್ವಾ ..ಮಾತು ಕೇಳೋ ಮನಸು ಬೇಕಿತ್ತಲ್ಲ.....?!!

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...