ಪುಟಗಳು

ಬುಧವಾರ

 ಆದ್ರೂ ಬರೀಬೇಕು ಅನ್ನಿಸುತ್ತೆ ....

ಅಪ್ಪಾ...ನಾನು ಒಂದು ಬ್ಲೋಗ್ ಬರೆದಿದೆನೇ......

ಓಕೇ...ಯಾವ ವಿಷಯ? ....

ಗುಬ್ಬಚ್ಚಿ ಗೂಡಿನಲ್ಲಿ.... !


ಮಾಡೋಕೆ ಕೆಲ್ಸಾ ಇರ್ಲಿಲ್ವಾ?...

ಇತ್ತು ಅಪ್ಪ..

ಕಾಕ- ಗುಬ್ಬಚ್ಚಿ ಕತೆ ಬರ್ಯೋಕಾ ನೀನು ಬ್ಲೋಗ್ ಬರೆದಿರೋದು?

ಇಲ್ಲಪ್ಪ ,,,,ಅದ್ರಲ್ಲಿ ಗುಬ್ಬಿ ಅಳಿವಿನಂಚಲ್ಲಿ ಇದೆ ಎನ್ನೋ ಸಂದೇಶ ಇದೆ...

ನೀನು ಕೊಟ್ಟಿರೋ ಹೆಸರೇ ಹೇಳುತ್ತೆ ಅದು ಕಾಕ ಗುಬ್ಬಚ್ಚಿ ಕತೆ ಎಂದು .....

ಅಪ್ಪ ಒಂದು ಸಾರೇ ಓದಿ ನೋಡಪ್ಪ...ನನ್ನ ಸ್ನೇಹಿತರೆಲ್ಲಾ ಚೆನ್ನಾಗಿದೆ ಅಂತ ಹೇಳಿದಾರೆ....
ನೀನು ಒಂದೇ ಸಾರಿ ಓದಿ ನೋಡಪ್ಪ....ಪ್ಲೀಸ್ ..ಪ್ಲೀಸ್....

ಇಲ್ಲ ಪುಟ್ಟ.. ನೀನು ಯಾವಾಗ ಪ್ರಭುದ್ಧ ವಾಗಿ ,ನಿರರ್ಗಳವಾಗಿ ಬರೆಯುತ್ತೀಯೋ...ಅವತ್ತೇ ನಾನು ಓದೋದು .....
 

ಬರೆಯುದು ಅಂದ್ರೆ ಏನು ಎಂಬುದನ್ನ ಮೊದಲು ಕಲಿತುಕೊ ಪುಟ್ಟ...ಆಮೇಲೆ ಯಾಕೆ ಬರೀತೀನಿ ಅಂತ ಯೋಚ್ನೆ ಮಾಡು ... ನೀನು ಓದಿದ ಯಾವ ಪುಸ್ತಕವನ್ನಾದರೂ ತೆಗೆದುಕೊ ....ಅದರ ಸಾರಾಂಶವನ್ನಒಂದೆಡೆ ಕುಳಿತು ಬರೆದಿಡು ...ಮತ್ತೆ ಅದನ್ನ ನಾಳೆ ಓದು ,,ನಿನಗೆ ಗೊತ್ತಾಗುತ್ತದಲ್ಲ ಅದರ ಕ್ವಾಲಿಟೀ ಯ ಬಗ್ಗೆ.........ನಿನಗೆ ನೀನೆ ವಿಮರ್ಶಕ ನಾಗುವದನ್ನ ಕಲಿ...

ಕಥೆಯನ್ನ,ಲೇಖನವನ್ನ ಪಕ್ಕದಲ್ಲೇ ಆಗುತ್ತಿದೆಯೇನೋ ಅನ್ನೋ ತರ ಬರೀಬೇಕು ಮಗಳೆ.....Reader should feel it....
ಸರೀಪ್ಪ... ..
 
ಸ್ನೇಹಿತರೆ, ಇದು ನನ್ನ ಖಾಸ್ ಭಾತ್..
 
ಅಪ್ಪ ನನ್ನ ಬೆಸ್ಟ್ ಫ್ರೆಂಡ್,ಗೈಡ್ ಫಿಲಾಸಫರ್ ..........ನನ್ನ ಅಪ್ಪ ಇನ್ನೂ ನನ್ನ ಬ್ಲೊಗನ್ನ್ ಓದಿಯೆ ಇಲ್ಲ..................ಅವರು ಎಕ್ಸ್‌ಪೆಕ್ಟ್ ಮಾಡಿದ ಬರಹ ನಾನು ಯಾವಾಗ ಬರೆಯುತ್ತೇನೋ ,ಬರೆಯದೇ ಇರುತ್ತೇನೋ ಗೊತ್ತಿಲ್ಲ...............ಅಂತಹ ಒಂದು ಒಳ್ಳೆಯ ಬರಹ ಬರೆದು ಅವರಿಗೆ ಒಂದು ಸಾರೇ ಓದಿಸ ಬೇಕು
 
ಅಪ್ಪನ ಹತ್ತಿರ ಮತ್ತೆ ಬ್ಲೋಗ್ ಬಗ್ಗೆ ಮತಾಡಿಲ್ಲ.........
 
ಬರೆದಿರೋದನ್ನ  ಎಡಿಟ್ ಮಾಡೋ ಹವ್ಯಾಸ ಇಲ್ಲ... ಡೈರೆಕ್ಟ್ ಆಗಿ ಬರೆದು ಹಂಗೆ ಪೋಸ್ಟ್ ಮಾಡೋ ಹೊತ್ತಿಗೆ ನನ್ನ ಲಂಚ್ ಬ್ರೇಕ್ ಮುಗಿದು ಹೋಗುತ್ತೆ.......ನನ್ನ ಮೌಸು ,ಟಕ ಟಕ ಎನ್ನುವ ಕೀ ಬೋರ್ಡು ,ದಿನದ ಕೊನೇ ಒಳಗೆ ಮುಗಿಸೆನ್ನುವ  ಈ ಮೈಲು ಗಳು ಜೊತೆಗೆ ಒಂದು ಟನ್ ಕೆಲಸ , ಕೀ ಕೀ ಎಂದು ಅರಚುತ್ತಿರುವ ಪಿಬಿಯೆಕ್ಸ್,,.............ಜೊತೆಗೆ ನಾನು ಓದುತ್ತಿರುವ ಎಂ ಎಸ್ ನ ಪರೀಕ್ಷೆಗಳು ......ಸಂಜೆಯಾಯಿತೆಂದರೆ ಹೊಟ್ಟೆಗೆ ಬೇಕಲ್ಲ ಎಂದು ಮಾಡುವ ಹದವಿಲ್ಲದಅಡುಗೆ......ಎಲ್ಲವೂ ನಾನು ಒಂದೆಡೆ ಕುಳಿತು ಬ್ಲೋಗ ಬರೆಯುವದಕ್ಕೆ ಅಡ್ಡಿ ಯಾಗಿವೆ...
ಆದ್ರೂ ಬರೀಬೇಕು ಅನ್ನಿಸುತ್ತೆ ....
ನೋಡೋಣ ಎಸ್ಟು ದಿನ ಹೀಗೆ ಸಾಗುತ್ತದೆ ಎಂದು ....

8 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

---ನೀನು ಓದಿದ ಯಾವ ಪುಸ್ತಕವನ್ನಾದರೂ ತೆಗೆದುಕೊ ....ಅದರ ಸಾರಾಂಶವನ್ನಒಂದೆಡೆ ಕುಳಿತು ಬರೆದಿಡು ...ಮತ್ತೆ ಅದನ್ನ ನಾಳೆ ಓದು ,,ನಿನಗೆ ಗೊತ್ತಾಗುತ್ತದಲ್ಲ ಅದರ ಕ್ವಾಲಿಟೀ ಯ ಬಗ್ಗೆ..---

ಹೌದು. ನಮ್ಮ ಗ್ರಹಿಕೆ, ಬರವಣಿಗೆಯ ಸಾಮರ್ಥ್ಯ, ಬರಹದ ಕ್ವಾಲಿಟಿ ಬಗ್ಗೆ ತಿಳಿಯಲು ಒಳ್ಳೇ ಉಪಾಯ ಇದು.

Raghu ಹೇಳಿದರು...

ಹೀಗೆ ಬರೀತಾ ಇರಿ.. ಚೆನ್ನಾಗಿದೆ...
ನಿಮ್ಮವ,
ರಾಘು.

ಪಾಚು-ಪ್ರಪಂಚ ಹೇಳಿದರು...

ಶ್ವೇತ,

ಹಾಡಿ ಹಾಡಿ ರಾಗ ಅಂದ ಹಂಗೇ, ನಾವು ಬರೆದಷ್ಟೂ ನಮ್ಮ ಬರವಣಿಗೆ ಪಕ್ವ ಆಗ್ತು. ನಿನ್ನ ಭಾವನೆಗಳನ್ನ ಮನಸ್ಸಲ್ಲಿ ಹಿಡಿದಿಟ್ಟು ವಿಭಿನ್ನ ಶೈಲಿಯಲ್ಲಿ ಬರಿ.

-ಪ್ರಶಾಂತ್ ಭಟ್

ಕ್ಷಣ... ಚಿಂತನೆ... bhchandru ಹೇಳಿದರು...

ಬರೆಯಿರಿ. ಇನ್ನಷ್ಟು ಬರೆಯಿರಿ. ಮತ್ತಷ್ಟು ಬರೆಯಿರಿ.

ಸೀತಾರಾಮ. ಕೆ. ಹೇಳಿದರು...

ಚೆನ್ನಾಗಿದೆ ತಮ್ಮ ಬ್ಲೊಗ್-ಬರಹದ ಕಥೆ. ಮು೦ದುವರಿಯಲಿ. ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿ೦ತೆ ಅ೦ತಾ ಹಾಡುವ ಗಾಯಕನ ಪರಿ ಸಾಗಲಿ ಬರವಣಿಗೆ. ತಮ್ಮ ತ೦ದೆ ನಿಮ್ಮ ಬ್ಲೊಗ್ ಮೆಚ್ಚೊ ದಿನಗಳು ದೂರವಿಲ್ಲ... ನಿಮಗೆ ಗೊತ್ತಾಗದ ಹಾಗೇ ಅವರು ಗಮನಿಸುತ್ತಿರಬಹುದು ಜೊತೆಗೆ ತಮ್ಮಿ೦ದ ಹೆಚ್ಚಿನದನ್ನು ಹೊರಹಾಕಲು ಈ ಆಟ ಹೂಡಿರಬಹುದು.

Shweta ಹೇಳಿದರು...

ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ನಿಮಗೆಲ್ಲರಿಗೂ ನನ್ನ ಕೃತಜ್ಞತೆಗಳು
ಸೀತಾರಾಮ ಸರ್ , ನಮ್ಮಪ್ಪನ ಹತ್ರ ಹಾಗೆಲ್ಲಾ ಓದ್ಸೋಕೆ ನಂ ಕೈಲಿ ಆಗೋಲ್ಲ....ಇನ್‌ಫ್ಯಾಕ್ಟ್ ಆವ್ರು ಓದಿರೋಸ್ಟು ಬುಕ್ಸ್ ಹೆಸ್ರು ನಂಗೊತ್ತಿಲ್ಲ..ನಾನು ಅದ್ರಲ್ಲಿ ಕಾಲು ಪೇರ್ಸೆಂಟು ಓದಿಲ್ಲ...ಧನ್ಯವಾದಗಳು ...

Narasimha ಹೇಳಿದರು...

Hello, Myself Narasimha,I am new to this blogging. Just found ur blogs frm rajesh naik's blogs list...
Really Felt Very Simple & Powerful knowledge of kannada in your article...& some were very funny like ur abt dad's...& computer related ur explanations... congrats..all the best.

Shweta ಹೇಳಿದರು...

Hi Narasimha,
Cheers! And welcome to the blogging world. It's a great way to send our thoughts out into the world.

Thanks for reading my blogs.Keep reading(not only my blogs but all blogs)Reading keeps us updated.

Thanks,
Shweta