ಪುಟಗಳು

ಗುರುವಾರ

ಮೂಡಿಗೆರೆಯ ವಿಸ್ಮಯ!

ಆಗೆಲ್ಲ ನನಗೆ ೧೨-೧೩ ವರುಷಗಳು .ಆಗೆಲ್ಲ ನಮ್ಮ ಮನೆಗೆ ಹಳೆಯ ಪೇಪರ್ ಗಳನ್ನು (ರದ್ದಿ ಪೇಪರ್ )ಕೊಳ್ಳಲು 'ಕಾಫಿ ಸಾಬಣ್ಣ ' ಬರುತ್ತಿದ್ದ..ದೂರದ ದಕ್ಷಿಣ ಕನ್ನಡದಿಂದ ಇಲ್ಲಿಗೆ ಬಂದು ಕಾಫಿ ಬೀಜಗಳನ್ನು ಮಾರಿ ಇಲ್ಲಿಂದ ಹಳೆಯ ಪೇಪರ್ ಗಳನ್ನು ಒಟ್ಟುಗೂಡಿಸಿ ಒಯ್ಯುತ್ತಿದ್ದ.ಸುತ್ತಲಿನ ಮನೆಗಳಿಗೆಲ್ಲ ಹೋಗುವ ಮುಂಚೆ ಬರುತ್ತಿದ್ದುದೇ ನಮ್ಮಮನೆಗೆ.

ನನಗೆ ಆತನ ನೆನಪಾದಾಗಲೆಲ್ಲ ರವೀಂದ್ರರ 'ಕಾಬೂಲಿವಾಲ' ನೆನಪಿಗೆ ಬರುತ್ತಾನೆ .ನಮ್ಮ ಮನೆಯ ಮಕ್ಕಳೆಲ್ಲ ಸಾಬಣ್ಣ ಬರುತ್ತಾನೆ ಅಂದ್ರೆ ಸಾಕು ಅಂದು ಆಟ ಪಾಟಗಳೆಲ್ಲ ಬಂದು .ಆತ ಬರುತ್ತಿದ್ದುದೇ ವರ್ಷಕ್ಕೆರಡು ಸಾರೆ. ಬಂದೆ ಇಲ್ವಲ್ಲೋ ಸಾಬಣ್ಣ ಅಂದರೆ 'ಹಾದಿ ಕರ್ಚು ಹುಟ್ಟಬೇಕಲ್ಲ ಕೂಸೇ 'ಎಂದು ಸುಮ್ಮನಾಗುತ್ತಿದ್ದ..ಆತ ನಮಗೆ ಹೇಳುತ್ತಿದ್ದುದೆಲ್ಲ ಪೂರ್ಣ ಚಂದ್ರ ತೇಜಸ್ವಿಯವರ ಕತೆಗಳು.ಆತ ಅವರ ತೋಟಕ್ಕೆ ಕಾಫಿ ಬೀಜಕ್ಕಾಗಿ ಹೋಗುತ್ತಿದ್ದ .
ಮೀನು ಹಿಡಿಯುತ್ತ ಕೂತಿರುತ್ತಿದ್ದ ತೇಜಸ್ವಿ,ಹಾರುವ ಹಕ್ಕಿಗಾಗಿ ತಾಸುಗಟ್ಟಲೆ ಕುಳಿತು ಕಾದು ಪೋಟೋ ತೆಗೆಯುತ್ತಿದ್ದ ತೇಜಸ್ವಿ ,ನಮ್ಮ ಮನೆಯ ಮಕ್ಕಳಿಗೆಲ್ಲ ತೇಜಸ್ವಿ ಬಹು ಪರಿಚಿತರು .ಚಿರತೆ ಎಂದರೆ ಜಿಮ್ ಕಾರ್ಬೆಟ್ ,ಮಚಾನು , ಚಂದ್ರ ,ನಡೆಯುತ್ತಿದ್ದರೆ ನಿಮ್ಮನ್ನು ಹುದುಗಿಸಿಕೊಳ್ಳುವ ಮಾಯಾ ಮರಳು ,ಹಾರುವ ತಟ್ಟೆಗಳು ...,ಒಟ್ಟಾರೆ ಜಗತ್ತನ್ನು ನಾವು ನೋಡಿದ್ದೇ ತೇಜಸ್ವಿಯವರ ಕಣ್ಣುಗಳ ಮೂಲಕ. ಸಾಬಣ್ಣ ಹೇಳುತ್ತಿದ್ದ ಕತೆಗಳಲ್ಲಿನ ಕೈಗೆಲ್ಲ ಕಪ್ಪು ತಾಗಿಸಿಕೊಳ್ಳುತ್ತ ಮಿಕ್ಸರ್ ,ಗಾಡಿ ಗಳ ರೆಪೇರಿ ಮಾಡುತ್ತಿದ್ದ ,ಕಂಪ್ಯೂಟರ್ ಮುಂದೆ ಕುಳಿತು ಕನ್ನಡ ಸಾಫ್ಟವೇರ್ ಬಗ್ಗೆ ಹೋರಾಡುತ್ತಿದ್ದತೇಜಸ್ವಿ ,ಕಾಫಿ ಬೆಳೆಗಾರರಿಗಾಗಿ ಧ್ವನಿಯೆತ್ತಿದ್ದ ತೇಜಸ್ವಿ .....ಅವರ ಪ್ರೀತಿಯ ಕಾಫಿ ತೋಟ ,ನಾಯಿ ಎಲ್ಲ ಕತೆಗಳನ್ನ ನಮಗೆ ಸಾಬಣ್ಣ ಹೇಳುತ್ತಿದ್ದ. ಈ ಎಲ್ಲವುಗಳಿಂದ ತೇಜಸ್ವಿ ಒಂದು ವ್ಯಕ್ತಿಯಸ್ಟೇ ಆಗಿರದೇ ಶಕ್ತಿಯಾಗಿ ಕಂಡಿದ್ದರು .ವ್ಯಕ್ತಿ ಶಕ್ತಿ ಆಗುವದು ನಿಜಜೀವನದಲ್ಲಿ ಬಹು ಕಠಿಣ .

ಇಂದಿನ ಹಾಗೆ ಏಪ್ರಿಲ್ ತಿಂಗಳು .ನನ್ನ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದೆ...ನ್ಯೂಸ್ ನೋಡುತ್ತಿದ್ದ ಅಪ್ಪ ಬಂದು ತೇಜಸ್ವಿಯವರು ಮರಣಿಸಿದ ವಾರ್ತೆ ತಿಳಿಸಿದಾಗ ..ಓಹ್ ಇದು ಸುಳ್ಳಾಗಬಾರದೆ ಎಂದು ಮರುಗಿದ್ದೆ .Attachment With Dettachment ಎಂಬ ನಂಬಿಕೆಯಿಟ್ಟು ಯಾರನ್ನು ಅಷ್ಟಾಗಿ ಹಚ್ಚಿಕೊಳ್ಳದ ನನಗೆ ತೇಜಸ್ವಿಯವರನ್ನು ಮರೆಯಾದ ಸುದ್ದಿ ಬಹಳ ದುಃಖ ತಂದಿತ್ತು.

ಸತ್ಯ ಒಪ್ಪಿಕೊಳ್ಳ ಬೇಕಿತ್ತು ಮತ್ತು ಜೀವನ ಸಾಗಿತ್ತು .

ಆ ವಿಸ್ಮಯ ವಿಶ್ವ ,ಕಾಡುಗಳು ,ಕಾಡುತ್ತಿದ್ದವು ...ಕೃಷ್ಣೆ ಗೌಡನ ಆನೆ ,ಮಂದಣ್ಣ ನೆನಪಾಗಿದ್ದರು ,ಮಚಾನು ಹತ್ತಿ ಚಿರತೆಗಾಗಿ ಕಾಯಬೇಕು ಅನ್ನಿಸುತ್ತಿತ್ತು ,ಬಿಸಿಲುಗಾಲದಲ್ಲಿ ಪಕ್ಕದಲ್ಲೇ ಹಾರುವ ತಟ್ಟೆ ಕಂಡಹಾಗೆ ಆಗುತ್ತಿತ್ತು ...ನನ್ನ ಸ್ನೇಹಿತರಲ್ಲಿ ಹೇಳುತ್ತಿದ್ದೆ ಜೀವನದ ಕೆಲವು ಗಳಿಗೆಗಳನ್ನು ಕಾಡಿನಲ್ಲಿ ಮನೆಮಾಡಿ ಅಲ್ಲೊಂದು ಕೊಳ ಕಟ್ಟಿ ಗಾಳ ಹಾಕುತ್ತ ಮೀನು ಹಿಡಿಯುತ್ತ ಕುಳಿತಿರಬೇಕು ಎಂದು .....ಹುಚ್ಚಾ ..!ಸಮಸ್ಯೆ ಇಲ್ಲದಲ್ಲಿ ಸಮಸ್ಯೆ ಹುಟ್ಟುಹಾಕಿ ಅದನ್ನು solve ಮಾಡುವ ಹುಚ್ಚೆ ನಿಂಗೆ ಎಂದು ಸ್ನೇಹಿತರೊಬ್ಬರು ಅಣಕಿಸಿದ್ದರು....ನಾನೂ ನನ್ನ ಸ್ನೇಹಿತೆ ಸೇರಿ ರೈಟೆಯ ಎಂಬ ಕೃತಿಯನ್ನು ಚಲನ ಚಿತ್ರವಾಗಿಸಬೇಕೆಂದು ಮಾತಾಡಿಕೊಂಡಿದ್ದೆವು . ಪಂಪ ಪ್ರಶಸ್ತಿ ಬಂದಾಗ ಹತ್ತಿರದ ಬನವಾಸಿಗೆ ಬರುವರಲ್ಲ ಎಂದು ಅಲ್ಲಿಗೆ ಹೋದರೆ ತಗೆದುಕೊಳ್ಳಲು ಬರಲೇ ಇಲ್ಲ...ನೇರ ನುಡಿಯ ನಿಗೂಢ ಮನುಷ್ಯ ನಮ್ಮ ಮೆಚ್ಚಿನ ತೇಜಸ್ವಿ .

ಹತ್ತಿರದ ಮರ್ಕಡಕ್ಕೋ,ಕಾರ್ಕಳಕ್ಕೋ ಹೋದಾಗ ,ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ನೆನಪಾಗುತ್ತಿತ್ತು ,ತೇಜಸ್ವಿ ನೆನಪಪಾಗುತ್ತಿದ್ದರು ..ತಟ್ಟನೆ ಅವರಿಲ್ಲವಲ್ಲ ಎಂದು ನೆನಪಾಗುತ್ತಿತ್ತು ....ನದಿಮೂಲ ಹುಡುಕ ಹೊರಟ ಮಾಯಾಲೋಕ ,ಚಿದಂಬರ ರಹಸ್ಯ,ಜುಗಾರಿ ಕ್ರಾಸ್ ,ಓತಿಕ್ಯಾತ ದ ಹಿಂದೆ ಬಿದ್ದೆ ಕರ್ವಾಲೋ, ಮಿಲೆನಿಯಮ್ ಸಿರೀಸ್ ,ಅಣ್ಣನ ನೆನಪು ,ಪರಿಸರದ ಕತೆಗಳು ,ಹುಲಿಯೂರಿನ ಸರಹದ್ದು ,ಅಬಚೂರಿನ ಪೋಸ್ಟ್ ಆಫೀಸು ,ತಬರನ ಕತೆ ,ಕಾಡಿನ ಕತೆಗಳು ,ಗುಡುಗು ಹೇಳಿದ್ದೇನು,ರಹಸ್ಯ ವಿಶ್ವ,ನಿಗೂಢ ಮನುಷ್ಯರು ಸ್ವರೂಪ ....ಓದುತ್ತ ಓದುತ್ತ ಚಿರತೆ ಕೂಗಿದ ಹಾಗೆ ಆಗುತ್ತಿತ್ತು,ಗಯ್ಯಾಳಿಗಳು ಅಟ್ಟಿಸಿಕೊಂಡು ಬಂದ ಹಾಗೆ ಅನ್ನಿಸುತ್ತಿತ್ತು ,ಮೇಲೆ ನಡೆದರೆ ತನ್ನೊಳಗೆ ಹುದುಗಿಸಿಕೊಳ್ಳುವ ಮಾಯಾ ಮರಳಲ್ಲಿ ನಡೆದ ಹಾಗೆ ,ಮಲೆನಾಡಿನ ಅಪ್ಪಟ ಮಳೆಗಾಲದಲ್ಲಿ ಕಿಟಕಿಯ ಮುಂದೆ ಕುಳಿತು ಹಪ್ಪಳ ತಿನ್ನುತ್ತ ಕುಳಿತರೆ ವಿಶ್ವವೇ ನಿಗೂಢ ವಾಗಿ ,ನಾನೂ ನಿಗೂಢತೆಯ ಭಾಗವಾದಂತೆ ತೋರುತ್ತಿತ್ತು ....ತಿರುಗಿದಾಗ ತೇಜಸ್ವಿಯವರು ಪಕ್ಕದಲ್ಲೇ ಬಂದು ನಿಂತಂತೆ ಭಾಸವಾಗುತ್ತಿತ್ತು ,,ಆದರೆ ಅದು ಬರಿದೇ ಕೋಲ್ ಮಿಂಚು ..ಮಿಂಚುಳ್ಳಿಯಲ್ಲ ಎಂದರಿವಿಗೆ ಬಂದಾಗ ತುಸು ಸಂಕಟ ....

ಮೊನ್ನೆ ಏಪ್ರಿಲ್ ೫ ಕ್ಕೆ ಅವರಿಲ್ಲವಾಗಿ ವರ್ಷಗಳೆರಡು ಕಳೆಯುತ್ತಿದೆ ....ಅಂದೇ ಬರೆಯಬೇಕೆಂದು ಕೊಂಡಿದ್ದೆ ಆದರೆ ಕೆಲಸದ ಒತ್ತಡ ದಿಂದಾಗಿ ಬರೆಯಲಿಕ್ಕಾಗಲಿಲ್ಲ.. ಹಠಕ್ಕೆ ಬಿದ್ದು ಬರೆಯುತ್ತಿದ್ದೇನೆ ..ನನಗೆ ಗೊತ್ತು ಇಂದು ನನ್ನ ಕೆಲಸ ಹಿಂದೆ ಬೀಳುತ್ತದೆ ಎಂದು.ಆದರೆ ನಾನು ಇಸ್ಟು ಮುಂದೆ ಬರಲು ಕಾರಣರದವರಿಗಾಗಿ ಇಸ್ಟೂ ಮಾಡಲಾರೆನೆ???

ನನ್ನ ಒಂದು ನುಡಿ ನಮನ...............
ಇತ್ತೀಚಿಗೆ ಕಾಫೀ ಸಾಬಣ್ಣನೂ ಬರುತ್ತಿಲ್ಲ ,ವಯಸ್ಸಾಯಿತಲ್ಲ ..ಪರಾವಲಂಭಿ ಆಗಿದ್ದಾನಂತೆ.....ನಾವು ಮಕ್ಕಳೆಲ್ಲ ರೆಕ್ಕೆ ಕಟ್ಟಿಕೊಂಡು ಗೂಡಿನಿಂದ ಹಾರಿ ಬಂದಿದ್ದೇವೆ .... ಜೀವನ ಸಾಗುತ್ತಲಿದೆ .....

ತೇಜಸ್ವಿಯವರ ಪತ್ನಿ ರಾಜೇಶ್ವರಿ ಕೆಂಡಸಂಪಿಗೆ ಯಲ್ಲಿ ತಮ್ಮ ನೆನಪುಗಳನ್ನು ತುಂಬ ಚೆನ್ನಾಗಿ ಹಂಚಿಕೊಂಡಿದ್ದಾರೆ ....


ಸ್ನೇಹಿತರೆ,ಇದು ನನ್ನ ಮೆಚ್ಚಿನ ಹಳೆಯದೊಂದು ಬ್ಲೋಗ್ ..ಬಹಳ ದಿನಗಳ ಹಿಂದೆ ಬರೆದಿದ್ದೆ ,ಹಲವಾರು ಕಾರಣಗಳಿಂದ ನನ್ನ ನೆನಪಲಿ ಬಹಳ ದಿನ ಉಳಿದಿದೆ ಈ ಲೇಖನ ...ಯಾಕೋ ಮತ್ತೆ ಹೊಸ ಬ್ಲೋಗ್ ಮನೆಯಲ್ಲಿ ಹಾಕಬೇಕು ಅನ್ನಿಸಿತು ,ಮತ್ತೆ ಈ ಬ್ಲೋಗಿನಲ್ಲಿ ಮಾರ್ಪಡಿಸದೆಯೇ ಹಾಕಿದ್ದೇನೆ.........ನಿಮ್ಮ ಅಭಿಪ್ರಾಯಗಳ ನಿರೀಕ್ಷೆಯಲ್ಲಿ ........

16 ಕಾಮೆಂಟ್‌ಗಳು:

ಗೌತಮ್ ಹೆಗಡೆ ಹೇಳಿದರು...

nanu kooda tejaswi avara bhakta:)

ಗೌತಮ್ ಹೆಗಡೆ ಹೇಳಿದರು...

ನಾನು ಕೂಡ ತೇಜಸ್ವಿ ಅವರ ಪರಮ ಭಕ್ತ.:)

ಚುಕ್ಕಿಚಿತ್ತಾರ ಹೇಳಿದರು...

nimma bhaavanegalannu tumbaa chennaagi heliddeeri..

tejasviya barahagalalli maantrikatheyide....!

ಅನಾಮಧೇಯ ಹೇಳಿದರು...

nice writings...
-alemari

Raghu ಹೇಳಿದರು...

ನಿಮ್ಮ article ಓದ್ತಾ ಓದ್ತಾ ನಮ್ಮೂರು ನೆನಪಾಯಿತು...ಮಳೆಗಾಲದಲ್ಲಿ ಕಿಟಕಿ ಮುಂದೆ ಹಪ್ಪಳ ಹಿಡ್ಕೊಂಡು ತಿನ್ನೋ ಮಜಾನೇ ಬೇರೆ...! ಒಳ್ಳೆ ನೆನಪು...
ನಿಮ್ಮವ,
ರಾಘು.

ಗುರು-ದೆಸೆ !! ಹೇಳಿದರು...

'Shwetha ' ಅವ್ರೆ..,

'ಕರ್ವಾಲೋ' ಅವ್ರ ಬಗ್ಗೆ ತುಸು ತಿಳಿಸುತ್ತದೆ ಅಲ್ಲವೇ..

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com (ಮಾರ್ಚ್ 15 ರಂದು ನವೀಕರಿಸಲಾಗಿದೆ)

ಜಲನಯನ ಹೇಳಿದರು...

ಗುರು, ಹಾಡಿತು ಕೋಗಿಲೆ ಮಾಮರ ತಂಪಿನೆರಳಲಿ....
ಬೇವಿನ ಎಲೆಯುಲಿಯಿತು ನಾಸೇರುವೆ ಮಧು ಬಂಧವ
ಕಬ್ಬು ಕೆನೆದು ರಸಎಸೆದು ಗಡುಸಾಯಿತು ವರ್ಷಕೆ ಶುಭಕೋರಲು.....
ಶುಭಾಷಯಗಳು

ಶ್ವೇತಾ..ನಿಮ್ಮ ನುಡಿಬಗ್ಗೆ ಅಭಿಮಾನ ಮತ್ತು ತಿಳಿದುಕೊಂಡಿರುವ ವಿಷಯಗಳ ಗಹನತೆ ..ವಾವ್ ಎನ್ನುವಂತಿದೆ...ಸಾಫ್ಟಿಗೆ ಲಾಫ್ಟಿ ಎತ್ತರಗಳು,,,,ಅಭಿನಂದನೆ...

Shweta ಹೇಳಿದರು...

ಥ್ಯಾಂಕ್ ಯೂ ಗೌತಮ್..ತೇಜಸ್ವಿ ಯವರೇ ಹಾಗೆ.....
ಧನ್ಯವಾದಗಳು ..
ನಿಮ್ಮ ಲೇಖನಗಳು ತುಂಬಾ ಚೆನ್ನಾಗಿವೆ ...

Shweta ಹೇಳಿದರು...

@ಚುಕ್ಕಿ ಚಿತ್ತಾರ ,
ಥ್ಯಾಂಕ್ ಯೂ ಮೇಡಮ್...ಹೀಗೆ ಬರುತ್ತ ಇರಿ ,,ನಿಮ್ಮ ಬ್ಲೊಗುಗಳನ್ನು ಓದಿದ್ದೇನೆ..ತುಂಬಾ ಚೆನ್ನಾಗಿವೆ..
@Alemari
Thank you .

@ಗುರು-ದೆಸೆ..
ಓಕೇ ಸರ್ ನಿಮ್ಮ ಬ್ಲೋಗೂ ಓದಿದ್ದೇನೆ ...ಚೆನ್ನಾಗಿದೆ ..

Shweta ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Shweta ಹೇಳಿದರು...

@ರಘು ,
ಹೌದು ,ಮಳೆಗಾಲದಲ್ಲಿ ಕಿಡಿಕಿಯಂಚಲ್ಲ್ಲಿ ಕುಳಿತು ಹಪ್ಪಳಾ ತಿನ್ನುವ ಮಜಾನೇ ಬೇರೆ.

Shweta ಹೇಳಿದರು...

ಆಜಾದ್ ಸರ್
ತುಂಬಾ ಹೊಗಳುತ್ತಿದ್ದೀರಿ..ಇಲ್ಲೇ ಹುಟ್ಟಿ ಬೆಳೆದ ಮೇಲೆ ಇಷ್ಟೂ ಅಭಿಮಾನ ಇಲ್ಲದಿದ್ದರೆ ಹೇಗೆ? ನಿಜ ಏನು ಗೊತ್ತಾ ,ನಿಮ್ಮ ಮತ್ತು ಪ್ರಕಾಶ ಅಣ್ಣ ನ ಪ್ರೋತ್ಸಾಹದಿಂದ ನಾನು ಕನ್ನಡ ದಲ್ಲಿ ಬರೆಯುತ್ತಿರುವದು ..
ನಾನು ,ನಿಮಗಿಂತ ಬಹಳ ಚಿಕ್ಕವಳು .ಇನ್ನೂ ಮಾಡೋಕೆ ,ಓದೋಕೆ ತುಂಬಾ ಇದೆ.ನಿಮ್ಮ ಶುಭ ಹಾರೈಕೆಗಳಿದ್ದರೆ ಇನ್ನೂ ಹೆಚ್ಚು ಒಳ್ಳೆಯ ಪ್ರಯೋಗ ಮಾಡಬಹುದು .

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ಶ್ವೇತಾ...

ಮೂಡಿಗೆರೆಯ ಮೋಡಿಗಾರನ ಅಭಿಮಾನಿ ನಾನೂ ಕೂಡ...

ಅವರ ನೆನಪಿನಲ್ಲಿ ಏನಾದರೂ ಆಗಬೇಕಿತ್ತು...
ನಮ್ಮ ನಂತರದ ಪೀಳಿಗೆಯವರಿಗೆ ಅವರನ್ನು ನೆನಪಿಸಿಕೊಳ್ಳುವಂಥಹ ಕೆಲಸ ಅತ್ಯಗತ್ಯವಾಗಿ ಆಗಬೇಕಿದೆ... ಅಲ್ಲವೆ?

ಚಂದದ ಬರಹ... ಅಭಿನಂದನೆಗಳು....

ದಿನಕರ ಮೊಗೇರ.. ಹೇಳಿದರು...

ಶ್ವೇತಾ ಮೇಡಂ,
ತೇಜಸ್ವಿ ಎಂದರೆ ನನಗೆ ನೆನಪಾಗುವುದು ಅವರ ಕಾಡಿನ, ಪಕ್ಷಿ, ಪ್ರಾಣಿಗಳ ಬಗ್ಗೆ ಬರೆದ ಪುಸ್ತಕಗಳು.... ತುಂಬಾ ಚೆಂದದ ನಿಮ್ಮ ಬರಹ ಅದೆಲ್ಲಾ ನೆನಪಿಗೆ ತರಿಸಿತು...... ಧನ್ಯವಾದ....

Shweta ಹೇಳಿದರು...

@Dinakar sir,

Thank you sir...nimma mangaloralle allava?

Shweta ಹೇಳಿದರು...

ಪ್ರಕಾಶಣ್ಣ ,
ನೀವು ವಿಸ್ಮಯ ವೆಬ್‌ಸೈಟ್ ನೋಡಿರಬೇಕಲ್ಲ? ಏನೋ ಮಾಡುತ್ತಿದ್ದಾರೆ ತೇಜಸ್ವಿಯವರ ನೆನಪಿಗೆಂದು ...
ಥ್ಯಾಂಕ್ ಯೂ ...