ಸೋಮವಾರ

ನಾವು ಎಲ್ಲೋ ಕಳೆದು ಹೋಗ್ತೀವ?


When finally ,we reached the place,

We hardly knew why we were there

The trip had darkened every face..


'ಅಂತೂ ಇಂತೂ ನಮ್ಮ ಗುರಿ ತಲುಪಿದಾಗ,ನಮ್ಮ ಪ್ರಾಜೆಕ್ಟ್ ,ಯೋಜನೆ ಅಂತಹ ಮಹತ್ತರವಾದುದನ್ನೇನು ಸಾಧಿಸಿಲ್ಲ ಎಂಬುದು ಅರಿವಿಗೆ ಬಂದು ಎಲ್ಲರ ಮುಖ ಕಳೆಗುಂದಿರುತ್ತದೆ '.

ಹೀಗೂ ಆಗುತ್ತದಲ್ಲ? ಏನೇನೋ ಪ್ಲಾನು ,ಏನೇನೋ ಉಪಾಯಗಳು ,....ಜೀವನದಲ್ಲಿ ಬೊಗಸೇ ತುಂಬಾ ಕತೆಗಳು ,ವಿಪರೀತ ಎನ್ನುವಸ್ಟು ಮಾತುಗಳು ,ಅಣ್ಣ, ತಮ್ಮ ,ಅಮ್ಮ ಅಪ್ಪನೆಂಬ ಹಲವಾರು ಸಂಬಂಧಗಳು , ನಾನೆಂಬ ಮಾಯೆ,ನಿನ್ನೆಯೆಂಬ ಕನಸು ,ನಾಳೆ ಎಂಬ ಸಚಿತ್ರ ,ನನ್ನದೆಂಬ ಮೋಹ, ಇದು ನನ್ನದಾಗಬೇಕು,ಈಸಾರೇ ಇಷ್ಟೇ % ಮೋಸಮಾಡಬೇಕು ಎಂಬ ದೊಡ್ಡವರ (!?)ವ್ಯವಹಾರಿಕ ನಿಯತ್ತು . ಇಂತಃ ಎಲ್ಲವುಗಳ ಮಧ್ಯ ಬದುಕುತ್ತಾ, ನಲಿಯುತ್ತಾ, (ನಮ್ಮ ಕರ್ಮಕ್ಕೆ ಕೆಲವೊಂದು ಸಾರೇ ಅದನ್ನು ಒಗ್ಗಿಸಿಕೊಳ್ಳುತ್ತ ) ? ಬ್ಲೋಗೆ ಗೆ ಒಂದು ಹೊಸ ಫೋಟೋ ಹಾಕ್ತಾ  (ಪ್ರೊಫೈಲ್ ಗೆ ಒಂದು ಫೋಟೋ ಹಾಕುವದು ನೀವು ಬದುಕಿದ್ದೀರಿ ಎಂಬುದಕ್ಕೆ ಒಂದು ಪ್ರೂಫ್ , ಬ್ಲೋಗ್ ನಂತಹ ಸೋಶಿಯಲ್ ನೆಟ್‌ವರ್ಕಿಂಗ್ ಟೂಲ್ ಗೆ ಮಾತ್ರ ಇದು ಅಪ್ಲಿಕಬಲ್, ಕಾರಣ ಏನಪ್ಪಾ ಅಂದ್ರೆ ಬ್ಲೋಗ್ ಒಂದು ಸೋಶಿಯಲ್ ನೆಟ್ವರ್ಕಿಂಗ್ ಟೂಲ್ ಆಗಿರೋದಕ್ಕೆ ಬ್ಲೋಗ್ ಬರೆಯೋರು ಎಲ್ಲರ ಮುಖವನ್ನ ನೋಡಿರೋದಿಲ್ಲ ,ನಿಜವಾದವರ ,ಇಲ್ಲವ ಎನ್ನುವ ಬಗ್ಗೆ ಒಂದು ಚಿಕ್ಕ ಕ್ಲೂ ಸಿಗಬಹುದು . Cyber ಕ್ರೈಮ್ ನ ತಡೆಗಟ್ಟುವಲ್ಲಿ ಕೊಂಚ ಉಪಯುಕ್ತ ಅಲ್ವಾ?  ಬಾಯೀ ತುಂಬಾ ನಕ್ಕು, ನಿನ್ನ ಯೋಗ್ಯತೆ ಇಷ್ಟೇ ಎಂದು ಹೇಳಿ ಬೈ ಎಂದರೆ .. ನಮಗಾಗಿ ಕಾಯೋಕೆ ನಮ್ಮ ಗುರಿ ಇದೆಯಲ್ಲಾ..we should reach our Aim alva? Han . ಹಾಂ Aim ಅನ್ನೋದಕ್ಕಿಂತ The Ultimate ಎನ್ನುವ ಶಬ್ಧ ಬಹಳ ಸೂಕ್ತ ಎನ್ನಿಸುತ್ತೆ The ultimate is nothing but Fact,Truth,Reality..! ನಾನೇನು ಮುಕ್ತಿಯ ಬಗ್ಗೆ ಮಾತನಾಡುತ್ತಿಲ್ಲ.. ಸತ್ಯ,ವಾಸ್ತವದ ಬಗ್ಗೆ ..ಸತ್ಯ ,ಮಿಥ್ಯ ಎಲ್ಲವೂ ಯಾರು ಹೇಳ್ತಾರೆ ಎನ್ನುವದರ ಮೇಲೆ ಮೇಲೆ ಡಿಪೆಂಡ್ ಆಗಿರುತ್ತೆ............ ಇವೆಲ್ಲವನ್ನ ಮೀರಿ ಬೆಳೆಯೋ ಹೊತ್ತಿಗೆ ನಾವು ಎಲ್ಲೋ ಕಳೆದು ಹೋಗ್ತೀವ?.......... ಮಾಡೋ ಕೆಲಸಾನ enjoy ಮಾಡಬೇಕು ,ಇಲ್ಲಾಂದ್ರೆ ಇಷ್ಟ ಇಲ್ದೇ ಇರೋದನ್ನ ಆನಂದಿಸುವ ಅಥ್ವಾ ಹಾಗಂತ ನಟಿಸುವ ಭರದಲ್ಲಿ –‘ಲೇ ,ನೀನ್ಯಾಕೆ ಹಿಂಗಾದೆ ? ‘ ಅಂತ ನಮ್ಮನ್ನ ನಾವು ಕೇಳುವ stage ಬರುತ್ತದಾ? ನಿಮಗೂ ಹೀಗೆ ಫೀಲ್ ಆಗಿರಬೇಕಲ್ಲ? ನಮ್ಮನ್ನ ನಾವು Prepare ಮಾಡೋ ಅಗತ್ಯ ಇದೆ..

ಮೇಲಿನ ಪದ್ಯದ ಸಾಲುಗಳನ್ನ Nissim Ezekiel ಎಂಬ ‘finest’ Anglo- Indian ಕವಿಯ Enterprise ಎಂಬ ಪದ್ಯದಿಂದ ಆಯ್ದಿದ್ದೇನೆ.. Do you Prepare for realities? ಯಾವುದೇ ಪ್ರಾಜೆಕ್ಟ್ ನ್ನ ಶುರು ಮಾಡುವ ಮುಂಚೆ ನಮ್ಮನ್ನು ನಾವು ಕೇಳಿಕೊಳ್ಳ ಬೇಕಾದ ಪ್ರಶ್ನೆ ಇದು..

ಮುಂದಿನ ಒಂದು ವರುಷಕ್ಕೆ ಸರಿಯಾಗುವ ಪ್ರಾಜೆಕ್ಟ್ ಗಳಿದ್ದಾವೆ ನನ್ನ ಕೈಯಲ್ಲಿ , ಒಂದಿಷ್ಟು ಜಾಸ್ತಿ ಓದು ,ಒಂದು ಚೂರು ಬರಿಯೊದು...ಮಧ್ಯ wakeup call ಕೊಡೋ Exam ಗಳು ಸ್ನೇಹಿತರೊಬ್ಬರಿಗೆ ಕಮರ್ಶಿಯಲ್ website, ಪ್ರಶಾಂತ ಅಣ್ಣ ಗೆ ಎಂದು ಒಂದು ಫೋಟೋ ವೆಬ್ ಸೈಟ್ ಜೊತೆಗೆ ಆಫೀಸ್ ನ ಕೆಲಸ, ಸಂಭ್ರಮಿಸಲು ಮನೆ ಇತ್ಯಾದಿ ಇತ್ಯಾದಿ….


4 ಕಾಮೆಂಟ್‌ಗಳು:

ಕ್ಷಣ... ಚಿಂತನೆ... ಹೇಳಿದರು...

ಶ್ವೇತಾ ಅವರೆ,
ಬರಹ ಚೆನ್ನಾಗಿದೆ. ಹೌದು, ನಾವು ನಿಜಕ್ಕೂ ಎಲ್ಲೋ ಕಳೆದುಹೋಗುತ್ತಿದ್ದೇವೆ ಅನಿಸುತ್ತದೆ. ಒಟ್ಟಿನಲ್ಲಿ ಎಲ್ಲ ರೀತಿಯ ಪ್ರಶ್ನೆಗಳನ್ನೂ ಕೇಳಿಕೊಳ್ಳುವಂತಿದೆ ಬರಹ.

ಬ್ಲಾಗ್ ಪದಕ್ಕೆ ಕನ್ನಡದ್ದೇ ಒಂದು ಪರ್ಯಾಯ ಪದವನ್ನು ಹುಡುಕಬೇಕಿದೆ. ಪ್ರಯತ್ನಿಸೋಣ..

ಸ್ನೇಹದಿಂದ,

Shweta ಹೇಳಿದರು...

ಚಂದ್ರು ಸರ್, ನಾವು ಏನನ್ನೋ ಹುಡುಕುತ್ತಾ, ಎಲ್ಲೆಲ್ಲೋ ಅಲೆಯುತ್ತಾ...ಏನು ಬೇಕು ಅನ್ನೋದನ್ನೇ ಮರೆತು ಹೋಗ್ತೀವಿ...ಅಲ್ವಾ? ಆವಾಗೆಲ್ಲ ಜೀವ್ನಾ ವಿಚಿತ್ರ ಅನ್ನಿಸುತ್ತೆ...ನಾವೇ ಒಂದು ವಿಚಿತ್ರ ಎನ್ನೋದು ಅರಿವಿಗೆ ಬರೋಲ್ಲ...thank you.

ಮನಸಿನಮನೆಯವನು ಹೇಳಿದರು...

Shwetha-

ಹೌದು..
ಈ ಬ್ಲಾಗೆಂಬ ಸುಂದರ ಲೋಕಕ್ಕೆ ಕನ್ನಡ ನಾಮಕರಣ ಆದಷ್ಟು ಬೇಗ ಆಗಬೇಕು..

ನಿಮ್ಮದೇ ನಿರೀಕ್ಷೆಯಲ್ಲಿ..: http://manasinamane.blogspot.com/

ಕುಂದಗನ್ನಡ ಕಲಿ ಹೇಳಿದರು...

ಫೋಟೋ, ಪ್ರಾಜೆಕ್ಟ್, ಪ್ರೊಫೈಲ್, ಸೋಶಿಯಲ್ ನೆಟ್‌ವರ್ಕಿಂಗ್, ಸೋಶಿಯಲ್ ನೆಟ್ವರ್ಕಿಂಗ್ ಟೂಲ್, Cyber ಕ್ರೈಮ್, ಕಮರ್ಶಿಯಲ್ website ಎಲ್ಲವಕ್ಕೂ ಕನ್ನಡ ಶಬ್ದ ಇದೆ ಕಣ್ರಿ. ಮೊದ್ಲು ಇದ್ದಿರೋದನ್ನ ಬಳಸಿಲಿಕ್ಕೆ ಕಲಿರಿ. ನಂತರ ಹೊಸ ಶಬ್ದ ಸಂಶೋಧನೆ ಮಾಡಿ. ಅದ್ನೂ ನಿಮ್ಮಂತ ಮಾಹಿತಿ ತಂತ್ರಜ್ಞರು ಬಳಸಲ್ಲ.

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...