ಶುಕ್ರವಾರ

[This poem was nominated by UN as the best poem Written by an African Kid]

ನಾನು ಚಿಕ್ಕ ಮಗುವಿನ ಭಾವನೆಯನ್ನ ಅನುವಾದ ಮಾಡಿದ್ದೇನಷ್ಟೇ.
-ಶ್ವೇತಾ



ಯೋಚಿಸಿ ..

ಅಪ್ಪ ಅಮ್ಮ ನ ಪ್ರೀತಿಯ ಮಗಳಾಗಿ ಹುಟ್ಟುವಾಗಲೂ ಕಪ್ಪಗಿದ್ದೆ.

ಅಮ್ಮನ ಕೈ ತುತ್ತು ತಿಂದು ದೊಡ್ಡವನಾಗಿ ಬೆಳೆದಂತೆಲ್ಲ ಕಪ್ಪಗೆ ಇದ್ದೆ

ಬೆಳ್ಳಗಿನ ಸೂರ್ಯನ ಮೈ ಸುಡುವ ಬಿಸಿಲಿನಲ್ಲಿ ನಡೆದಾಗಲು ಕಪ್ಪಗೆ ಇದ್ದೇ..

ಪುಟ್ಟ ಹೃದಯ ದಭ್ ಡಬ್ ಎಂದು ಹೊಡೆದುಕೊಂಡು ಭೀತನಾಗಿ  ನಡುಗಿದಾಗಲು ಕಪ್ಪಗೆ

ಸೌಖ್ಯವಿಲ್ಲದೇ ಒದ್ದಾಡುವಾಗಲೂ ನಾ ಕಪ್ಪಗೇ ಇದ್ದಿದ್ದೆ..

ಹಮ್‍ಮ್ ..  ಇನ್ನು ನಾನು ಸತ್ತು ಮಣ್ಣಲ್ಲಿ ಮಣ್ಣಾಗುವಾಗ ಆಗಲೂ ಕಪ್ಪು.

ಆದರೆ, ನೀವು ಬಿಳಿಯ ಸಜ್ಜನರು .....


ಹುಟ್ಟಿದಾಗ ಗುಲಾಬಿ ,

ಬೆಳೆದಂತೆಲ್ಲ ಬೆಳ್ಳಗೆ ,ಸೂರ್ಯನ ಬಿಸಿಲಲ್ಲಿ ಕೆಂಪಗೆ ,

ಭಯಭೀತನಾದಾಗ ಬಣ್ಣ ಗೆಟ್ಟ ಹಳದಿ ,

ಹೆಚ್ಚು ತಂಪಾದರೆ ನೀಲಿ , ಅಪ್ಪಿತಪ್ಪಿ ಹಸಿರು ಅನಾರೋಗ್ಯದಿಂದ ,

ಮಣ್ಣಲ್ಲಿ ಮಣ್ಣಾಗುವಾಗ?
 
ನೀವು ಬೂದು ...


ಹೀಗಿದ್ದಾಗಲು ,ನೀವು ನನ್ನನ್ನು ಕರೆಯುವದು ವರ್ಣೀಯನೆಂದೆ?

5 ಕಾಮೆಂಟ್‌ಗಳು:

ಕ್ಷಣ... ಚಿಂತನೆ... ಹೇಳಿದರು...

ಶ್ವೇತಾರವರೆ,
ಕವಿತೆಯ ಅನುವಾದ ಚೆನ್ನಾಗಿದೆ. ಕೊನೆಯಲ್ಲಿನ ಪ್ರಶ್ನೆ ವರ್ಣನಾತೀತ ಅನ್ನಿಸಿತು.

ಮತ್ತಷ್ಟು ಅನುವಾದಿತ ಕೃತಿಗಳು ಬರಲಿ...

Shweta ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Shweta ಹೇಳಿದರು...

ಚಂದ್ರು ಸರ್, ನನಗೆ ಅಷ್ಟು ಸರಿಯಾಗಿ ಅನುವಾದಿಸಲು ಆಗಿಲ್ಲವೇನೋ ಅನ್ನಿಸಿದೆ.. ಕೊನೆಯ ಸಾಲನ್ನ ಇನ್ನೂ ಹೆಚ್ಚು Effective ಆಗಿ ಅನುವಾದ ಮಾಡಿಲ್ಲ ಅನ್ನಿಸಿದೆ.. ಹೀಗಿದೆ ನೋಡಿ ಆ ಪದ್ಯ..

When I born, I black
When I grow up, I black


When I go in Sun, I black
When I scared, I black
When I sick, I black
And when I die, I still black
And you white fellow
When you born, you pink
When you grow up, you white
When you go in sun, you red
When you cold, you blue
When you scared, you yellow
When you sick, you green
And when you die, you gray
And you calling me colored?

ಜಲನಯನ ಹೇಳಿದರು...

ಶ್ವೇತಾ...ಇಲ್ಲಿ verbatim ಅನುವಾದ ಬೇಕಿಲ್ಲ ಆ ಪುಟ್ಟ ಹೃದಯದ ಮನೋವೇದಿತ ಭಾವ...ಅದನ್ನು ಬಹಳ ಚನ್ನಾಗಿ ಪ್ರಸ್ತುತ ಪಡಿಸಿದ್ದೀರಿ....
ನಿಜ ವರ್ಣಭೇದ ಮಾಡುವವರ ಕಪ್ಪು ಮನಸಿನ ಕಪ್ಪು ಭಾವನೆ ಪ್ರಕಟವಾಗಿದೆ..

Shweta ಹೇಳಿದರು...

Thank you Azad sir...

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...