ಮಾತು ಕೇಳೋ ಮನಸು ಬೇಕಿತ್ತಲ್ಲಾ ..
ಹೌದು ಎಲ್ಲರಿಗೂ ಹಾಗೆ ಅನ್ನಿಸಿರುತ್ತಲ್ಲ ಎಸ್ಟೋ ಸಾರೇ....
ಮೂಡ್ /ಮನಸ್ತಿತಿ ಕೈ ಕೊಡಲು ಕಾರಣಗಳೇನು ?
೧.ಅವಿಶ್ರಾಂತ ಜೀವನ ಶೈಲಿ
೨ .ಪೋಷಕ ಆಹಾರದ ಕೊರತೆ
೩ .ಅನಾರೋಗ್ಯಕರ ಜೀವನ ಕ್ರಮ
೪.ಬಿರುಕು ಬಿಡುತ್ತಿರುವ ಸಂಬಂಧಗಳು
೫.ಆಲಸ್ಯ
ವಿಶ್ರಾಂತಿ ಎಂದರೆ ೩-೪ ತಾಸು ನಿದ್ದೆ ಮಾಡುವದಲ್ಲ..೬-೭ ಗಾಢ ನಿದ್ರೆ ಬೇಕೇ ಬೇಕು .ಅದೆಲ್ಲ ಸರಿ ನಾನು ದಿನಕ್ಕೆ ೭ ಗಂಟೆ ನಿದ್ರಿಸುತ್ತೇನೆ ..ನೋ... ವಿಶ್ರಾಂತಿ ಅಂದರೆ ಮನಸ್ಸಿಗೆ ಸಮಾಧಾನ ಕೊಡುವದು ,ಏನನ್ನು ವಿಚಾರ ಮಾಡದ ಒಂದು ಸ್ಥಿತಿ .ಯೋಗ ನಿದ್ರೆ ಅಂದರು ತಪ್ಪಿಲ್ಲ.ಅತ್ತ ಇತ್ತ ನೋಡುವಲ್ಲಿ ವೇಸ್ಟ್ ಆಗುವ ನಮ್ಮ ಎನರ್ಜಿ ಯನ್ನು ಸೇವ್ ಮಾಡಿ ಒಂದು ಕಡೆ ಕೂಡಿಇಡುವದು .... ಧಾವಂತ ವಿಲ್ಲದ ಸಾವಧಾನದ ಬದುಕು ಇಂದು ನಮ್ಮಲ್ಲಿ ಎಸ್ಟು ಜನಕ್ಕಿದೆ?
ಆಗೆಲ್ಲ ನಮ್ಮ ಮೂಡ್ ಹೇಳುತ್ತೆ ,ನನಗೆ ರೆಸ್ಟ್ ಬೇಕು ...ನಾನು ಕೆಲಸ ಮಾಡೋಕೆ ರೆಡೀ ಇಲ್ಲಪ್ಪ
ಪೋಷಕ ಆಹಾರದ ಕೊರತೆ ಇದ್ದಾಗ ,ನಮ್ಮ ಬ್ರೈನ್ ಗೆ ಆಕ್ಸಿಜನ್ ಕೊರತೆ ಆಗಿದ್ದಾಗ ಎಲ್ಲ 'ಮೂಡ್' ಇಲ್ಲ ಎನ್ನುತ್ತೆ...ಪೋಷಕ ಆಹಾರದ ಲಿಸ್ಟ್ ನಲ್ಲಿ ಕುರ್ಕುರೆ,ಗೊಲ್‌ಗುಪ್ಪ ,ಪಾನಿಪೂರಿ,ನೂಡಲ್ಸ್ , ಬರ್ಗರ್ ...ಎಕ್ಸೆಟ್ರ , ದಂತಹ ಜಂಕ್ ಫುಡ್ ಬರೋದಿಲ್ಲ....ಗೊತ್ತಲ್ಲ....?
ಹಣ್ಣು ಹಂಪ್ಲು ಎಲ್ಲ ಚೆನ್ನಾಗಿ ತಿನ್ನಿ ,ಹೊಟ್ಟೆ ತುಂಬಾ ನೀರು ಕುಡೀರಿ ,ಚಿಕ್ಕದೊಂದು ವ್ಯಾಯಾಮ ಮಾಡಿ ,ಗಡ ಗಡನಡುಗುವ ಚಳಿಯಲ್ಲಿ ಬೆಚ್ಚಗೆ ಕೋಟ್ ಹಾಕಿಕೊಂಡು ವಾಕ್ ಮಾಡಿ .....ಆ............. ಎನ್ನುತ್ತಾ ಈಸ್ಟಗಲಕ್ಕೆ ಬಾಯಿತೆರೆದು ಹೊರಬರುವ ಸುರುಳಿ ಸುರುಳಿ ಹೊಗೆಯನ್ನು ನೋಡುತ್ತಾ ರಿಲ್ಯಾಕ್ಸ್ ಆಗಿ ,
ಅಲ್ಲಾರಿ ...,ಫಿಟ್ ಅಂಡ್ ಹೆಲ್ತ್ದಿ ಆಗಿದ್ರೆ ಮೂಡ್ ಡ್ಯಾನ್ಸ್ ಮಾಡದೇ ಎಲ್ಲಿಗೆ ಹೋಗುತ್ತೆ?
ರೈಟ್ ಲೈಫ್‌ಸ್ಟೈಲ್ ಜೊತೆಗೆಒಂದಿಸ್ತು ವ್ಯಾಯಾಮ ,ಹೊತ್ತು ಹೊತ್ತಿಗೆ ಬ್ರೇಕ್‌ಫಾಸ್ಟ್ ,ಲಂಚ್ ,ಡಿನ್ನರ್,ಇದೆಲ್ಲ ಇದ್ರೆ ಅನಾರೋಗ್ಯಕರ ಜೀವನಕ್ರಮ ಹೆಂಗಾಗುತ್ತೆ?
ನಿಜಕ್ಕೂ ನಿಮ್ ಜೀವ್ನದ್ ಮೇಲೆ ನಿಮ್ಗೆ ಪ್ರೀತಿ ಇದೆಯಲ್ವಾ ? ಪ್ರೂವ್ ಇಟ್! ಮೂಡ್ ಸಾತ್ ಕೊಡುತ್ತೆ ಕಣ್ರೀ...
ನಂದೇ ಒಂದು ಉದಾಹರಣೆ ಕೊಡ್ತೀನಿ ...ನಂದು ನ್ಯೂಕ್ಲಿಯರ್ ಫ್ಯಾಮಿಲೀ.,ಅಜ್ಜ ,ಅಜ್ಜಿ ಹೆಸ್ರು ಕೇಳಿದೀನಿ ..ಜೊತೆಗೆ ಅಕ್ಕ ತಂಗೀರು ಯಾರು ಇಲ್ಲ...ಮನೆಯಲ್ಲಿ ಒಂದು ಚೂರು ಹೆಚ್ಚು ಕೇರ್ ,ಕೇಳಿದ್ದೆಲ್ಲ ಬಂದು ಬಿಡತ್ತೆ,,,,,. ಯಾರ ಮೇಲೆಯೂ ಡಿಪೆಂಡ್ ಆಗುವ ಕಷ್ಟ ಇಲ್ಲ .....ಸೋ ಯಾರ್ಜೋತೆಗೂ ಅಡ್ಜಸ್ಟ್ ಆಗೋಕೆ ಬರೋಲ್ಲ...ಆವಾಗೆಲ್ಲ ನಂಗೆ ಮೂಡ್ ಹಾಳಾಗುತ್ತೆ..ನಾನು ಹೇಳಿದ್ದೆ ಆಗಬೇಕು ...ಇದು ನನ್ನ ಹಟ.......
ಚೇಂಜ್ ಅನ್ನೋದು ಮೂಡ್ ಗೆ ತುಂಬಾ ಹೆಲ್ಪ್ ಮಾಡುತ್ತೆ ..... ಹೊಂದಾಣಿಕೆ ಜೀವನಕ್ಕೆ ಒಂದು ಜೀವ ಕೊಡುತ್ತಂತೆ ...(ನಂಗೆ ಗೊತ್ತಿಲ್ಲ ಬಿಡಿ ) ಫ್ರೆಂಡ್ಸ್ ಜೊತೆ ಶೋಪಿಂಗ್ ಹೋಗೋದು ,ಮಾರ್ಕೆಟ್ ಗೆ ಹೋಗಿ ತರಕಾರಿ ತರೋದು (ಅತ್ತೆಗೆ, ಗಂಡನಿಗೆ ಅಡುಗೆ ಬರುತ್ತಲ್ಲ ,ಜೀವ್ನಾ ತುಂಬಾ ಸಿಂಪಲ್.!) ನಾದಿನಿಯ ಮಗುವಿನ ನಾಮಕರಣಕ್ಕೆ ಹೋಗಿ ಅಲ್ಲಿ ಎಲ್ಲರ ಜೊತೆ ಬೇರೆಯೋದು ...ಮುಖ್ಯವಾಗಿ ನಾವು ಸಮಾಜ ಜೀವಿ ಎಂಬ ಸತ್ಯ ವನ್ನು ಮರೆಯದೇ ಇದ್ಬಿಟ್ರೆ ಮೂಡ್ ಗು ಚೇಂಜ್ ಸಿಕ್ಕುತ್ತೆ, ಸಂಬಂಧಗಳು ಸುಧಾರಿಸುತ್ತೆ ಅಲ್ವಾ?ಮಾಡುವದನ್ನ ಹ್ಯಾಪೀ ಆಗಿ ಮಾಡಿ ಅಸ್ಟೆ
ಕಳ್ಳ ಬೀಳೊ ಮನಸಿಗೆ ನನ್ ಹತ್ರ ಯಾವ ಮೆಡಿಸಿನ್ ಇಲ್ಲಪ್ಪ....ನಿಮ್ಮ ಮೂಡ್ ಗೆ ಹೇಳಿ ,ಹೇ ನಾನು ಹೇಳಿದ್ದನ್ನ ಚೂರು ಕೇಳಪ್ಪ
ಜಾಣ ... ...
ಹೌದಲ್ವಾ ..ಮಾತು ಕೇಳೋ ಮನಸು ಬೇಕಿತ್ತಲ್ಲ.....?!!
ಗುರುವಾರ
ಮಂಗಳವಾರ
ಮನಸಿಗೊಂದು ಅನಲಿಸಿಸ್ ಬೇಕಾ?
ಮನಸಿಗೊಂದು ಅನಲಿಸಿಸ್ ಬೇಕಾ?
ಜೀವನದಲ್ಲಿ ನೋಡೋಕೆ ಇನ್ನೇನು ಉಳಿದಿದೆ ಎನ್ನುವ ತರಹದ ಬೇಸರ
ಕುಳಿತಲ್ಲಿ ಕುಳಿತೆ ಇರುವದು ಅಸಾಧ್ಯ ,ಪಕ್ಕದ ಮನೆಯ ಹುಡುಗಿ ಒಂದು ಚಿಕ್ಕ ಸ್ಮೈಲ್ ಕೊಟ್ಟು ಅಕ್ಕ, ಊಟ ಆಯ್ತ ಎಂದು ಕೇಳಿದಾಗ ,ಮನೆಯ ಬಾಗಿಲು ತೆಗೆದ ಸಂಕಟಕ್ಕೆ ,ಹ್ಮ್ ಈವಾಗ ತಾನೇ ಆಯ್ತಮ್ಮ ,ನೀ ಏನು ಅಡುಗೆ ಮಾಡಿದ್ದೆ ? ಎನ್ನುವ ಮರು ಪ್ರಶ್ನೆ ಹಾಕಿ ಅಲ್ಲಿಂದ ನಿಧಾನಕ್ಕೆ ತಪ್ಪಿಸಿಕೊಂಡು ಬಂದರೆ ಅದೇನೋ ಒಂದು ರೀತಿಯ ತೃಪ್ತಿ ..ಹಾಂಗಂತ ಮನೆಯಲ್ಲಿ ಮಾಡೋಕೆ ಟನ್ಗಟ್ಟಲೆ ಕೆಲ್ಸ ಇದೆಯಂತಲ್ಲ.. ಆದರೂ...ಕಾರಣ ನಂಗೆ ಮೂಡ್ ಇಲ್ಲ!
ಮೂಡ್ ' ನನ್ನೊಡನೆ ಈಸ್ಟೆಲ್ಲಾ ಆಟ ಆಡುತ್ತಾ ? ಎಂದು ಒಮ್ಮೊಮ್ಮೆ ನಿಜಕ್ಕೂ ಅಚ್ಚರಿ ..
ಊಟ ಮಾಡು ಪ್ಲೀಸ್ - ನಂಗೆ ಮೂಡ್ ಇಲ್ಲ
(ಅಸಲು ಹಸಿವಿಲ್ಲ!)
ಹೋಗ್ಲಿ ನಿದ್ದೇನಾದ್ರೂ ಮಾಡು - ಹೂಂ ...ಮೂಡ್ ಇಲ್ಲ !
ಈ ಮೂಡ್ ಅನ್ನೋದು ಈ ಲೆವೆಲ್ ಗೆ ಕೈ ಕೊಡುತ್ತಾ?
ಯಾಕೆ ಹೀಗೆ ಎಂದೆಲ್ಲ ಒಂದು ಚಿಕ್ಕ ಅನಲಿಸಿಸ್ ಮಾಡಬೇಕ? ಅಥವ ಸುಮ್ಮನೆ ಬಾಯಿ ಮುಚ್ಚಿಕೊಂದು ತೆಪ್ಪಗೊಂದು ಬದಿಯಲ್ಲಿ ಸಾದಿ ಕುಳಿತಿರಲ?...ಹ್ಮಂ ಒಮ್ಮೊಮ್ಮೆ ಈ ಲೆವೆಲ್ ಗೆ ಬೇಸರ ವಾಗುತ್ತೆ .ಕಾರಣ ಗೊತ್ತೇ ಇರೋದಿಲ್ಲ..ಆಗೆಲ್ಲ ಹಿಮಾಲಯದತ್ತ ಸಾಗೋಣ ಎಂದು ನನ್ನ ಮನಸಿಗೊಂದು ಪ್ರಶ್ನೆ ಇಡುತ್ತೇನೆ..ಆ ಎತ್ತರದ ಹಿಮಾಲಯ ನನಗೆ ಯಾವತ್ತು ಒಂದು ಸವಾಲಾಗಿ ಕಂಡಿದೆ..ಯಾಕೋ ಗೊತ್ತಿಲ್ಲ.ನನ್ನ ಸ್ನೇಹಿತರೆಲ್ಲ ಹಿಮಾಲಯ ಪ್ರವಾಸ ಮುಗಿಸಿ ಬಂದಾಗ ನನಗೆ ಹಿಮಾಲಯ ಬಹುವೆ ಕಾಡಿದ್ದು ಸುಳ್ಳಲ್ಲ.....
ಮೂಡ್ ಮಾಯೆ ಎಂದರೆ ಇದೆ ಅಲ್ವಾ? ನಿಮಗೂ ಫೀಲ್ ಆಗಿರಬಹುದು.
ಯಾರೋ ಹೇಳಿದ ಒಂದು ಚಿಕ್ಕ ಮಾತು , ಯಾರೋ ಕಳುಹಿದ ಒಂದು ಈಮೈಲ್,ಉಪ್ಪು ಖಾರ ರುಚಿ ಹದವಿರದ ಒಂದು ಊಟ,ತೀರಾ ಹಚ್ಚಿಕೊಂಡ ಫ್ರೆಂಡು ,ಪಕ್ಕದ ಮನೆಯ ಅಜ್ಜ ಅಜ್ಜಿಯ ಗಲಾಟೆ
ಎದುರು ಮನೆಯ ಚಿಕ್ಕ ಗುಡಿಸಲಲ್ಲಿ ಮುದುಡಿ ಮಲಗಿದ ಪುಟ್ಟ ಮಕ್ಕಳು , ಹೀಗೆ ಏನೇನೋ ಕಾರಣಗಳು ....
ನಿಜಕ್ಕೂ ಈ ಮನಸು ಮೂಡ್ ಇಲ್ಲ ಎಂದು ಹೇಳಿ ಎಲ್ಲದರಿಂದ ತಪ್ಪಿಸಿಕೊಳ್ಳುವದು ಏತಕ್ಕೆ?
ನಿಜಕ್ಕೂ ಮನಸಿನ ಆರೋಗ್ಯ ಸರಿ ಇಲ್ಲ ,ಒಂದು ಚೂರು ನೆಮ್ಮದಿ ಬೇಕು ,ನನ್ನ ಪಾಡಿಗೆ ಬಿಟ್ಟುಬಿಡಿ ಎನ್ನೋಕ?
ಕಾರಣ ಗಳು ಏನಾಗಿರಬಹುದು ?
ಮನಸಿಗೊಂದು ಅನಲಿಸಿಸ್ ಬೇಕಾ?
ಮುಂದಿನ ಭಾಗದಲ್ಲಿ ! ....

ಪುಟಗಳು ತೇಲಿ ಬಂದಿದ್ದು ಹೀಗೆ .....
ಮನಸ್ಸು ರಿಲ್ಯಾಕ್ಸ್ ಆಗಲು ಕಂಡುಕೊಂಡ ಹಾದಿ ಬರಹ.
ನೋಡಿದ್ದು ,ಕೇಳಿದ್ದು ,ಗಾಳಿಯಲ್ಲಿ ತೇಲಿ ಬಂದದ್ದು ,ಈಮೇಲ್ ನಲ್ಲಿ ಸ್ನೇಹಿತೆ ಕಳುಹಿಸಿದ್ದ ಚಿಕ್ಕ ಹೈಕು ,ಸಣ್ಣ ಕಥೆ ,ಅಮ್ಮ ಫೋನ್ ನಲ್ಲಿ ಹೇಳಿದ್ದ ಸುದ್ದಿ ,ಎಲ್ಲವಕ್ಕೂ ಒಂದು ಹೊಸ ಟಚ್ ಕೊಟ್ಟು ,ನನ್ನ ಮನಸು ಹೇಳಿದ್ದನ್ನ ಕೇಳಿ ,ಇದನ್ನು 'ಆಕೆ ' ಯಾವಾಗ ಹೇಳಿರಬಹುದು ಎಂದು ಒಂದು ಚಿಕ್ಕ ಗೆಸ್ ವರ್ಕ್ ಮಾಡಿ ,ಎಲ್ಲ ಕೂಡಿಸಿ,ಕಳೆದು ಕಟ್ಟಿ ,ಒಂದು ಹೊಸ ತೆರನಾದ ಲೋಕಕ್ಕೆ ಕರೆದೊಯ್ಯುವ ಪ್ರಯತ್ನ ..
ನನ್ನ ಮೊದಲ ಬ್ಲೋಗನ್ನು ೩ ವರುಷಗಳ ಹಿಂದೆಯೇ ಆರಂಭಿಸಿದ್ದೆ ..ಆಗೊಂದು ಈಗೊಂದು ಜಲನಯನ ಸರ್ ಹೇಳಿದ ಹಾಗೆ ಮಿಸ್ಸೈಲ್ ನಂತೆ ಒಂದೊಂದನ್ನು ಬರೆಯುತ್ತಿದ್ದೆ . ..ಕನ್ನಡ ಮತ್ತು ಆಂಗ್ಲ ಮಿಶ್ರಿತ ಲೇಖನ ಗಳನ್ನು ಬರೆಯಬೇಕೆನಿಸಿದಾಗ ಬರೆದು ಬಿಟ್ಟೆ ...ಆದರೆ ಯಾಕೋ ಗೊತ್ತಿಲ್ಲ ಸಮಾಧಾನವೇ ಆಗಿರಲಿಲ್ಲ... ಕನ್ನಡ ವನ್ನು ಬೇರೆಯದೇ ಬ್ಲೋಗಿನಲ್ಲಿ ಬರೆಯೋಣ ಅನ್ನಿಸಿತ್ತು ,,,ಇಂದು ಅದನ್ನು ಆರಂಭಿಸಿಬಿಟ್ಟಿದ್ದೇನೆ...
ನೀವು ಓದಿ ,ಮನಸಿಗೆ ಖುಷಿ ಅನಿಸಿದರೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ ,ಸಲಹೆ ,ಪ್ರೋತ್ಸಾಹ ನಿಮ್ಮಿಂದ ತೇಲಿ ಬರುತ್ತಿರಲಿ ಎಂಬುದು ನನ್ನ ಚಿಕ್ಕ ಆಶಯ....
ಬರೆಯಲೇಬೇಕೆನ್ನುವ ಹಟವಲ್ಲ, ಬರೆದರೆ ನಾನು ಪ್ರಖ್ಯಾತಿ ಪಡೆಯಬಲ್ಲೆ ಎಂಬ ಹಮ್ಮೂ ಇಲ್ಲ ಯಾಕೆ ಗೊತ್ತಾ ? ನಾನೊಬ್ಬ ಮನಸ್ಸಿನ ಮಾತು ಕೇಳುವವ ...ಮನಕ್ಕೆ ಸರಿ ಅನ್ನಿಸಿದ್ದನ್ನು ಯಾರ ಹಂಗು ಇಲ್ಲದೇ ಕಾರ್ಯರೂಪಕ್ಕೆ ಇಳಿಸುವವ. ನನಗೆ ವಾರಕ್ಕೊಂದು ಬರೆಯಲೇ ಬೇಕೆಂಬ ಹಟವಿಲ್ಲ .ಒಂದು ದಿನ ಒಂದು ಸಂಜೆ ಮನೆಯ ತೆರೆಸಿನ ಮೇಲೆ ಹತ್ತಿ ಕುಳಿತಾಗ ಯಾಕೋ ಬರೆಯ ಬೇಕೆನ್ನಿಸುತ್ತದೆ ,ಓದುತ್ತಿರುವ ಮೋಡ ನೋಡುತ್ತಾ ಕುಳಿತಿದ್ದಾಗ ಯಾವಾಗಲೋ ಒಮ್ಮೆ ಈಗ ಬರೆಯುವೆ ಎಂಬ ಉಲ್ಲಾಸ ಮನೆಮಾಡಿಬಿಡುತ್ತೆ ,ಆಗ ನಾನು ಬರೆಯುವದನ್ನ ಯಾರೂ ತಪ್ಪಿಸಲಾಗುವದಿಲ್ಲ...

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಯಾಕ ಮಾಡುತಿ ಲೋಕದ ಚಿಂತಿ?
ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...
-
ಕಳೆದದ್ದು ಸಿಕ್ಕಿಲ್ಲಾ ಬ್ರಾಹ್ಮಣ ಯಾರು? ಕೋಟಿ ತೀರ್ಥದ ಕಟ್ಟೆಯ ಮೇಲೆ ಕುಳಿತು ಶ್ರಾಧ್ಧ ಮಾಡುವಾಗ ಭಟ್ಟರು ಯೊಚಿಸುತ್ತಿದ್ದದು ಇದನ್ನೇ.. ಅವರ ಅಪ್ಪನ ಶ್ರಾಧ್ಧ ಮಾಡುವ...
-
ಆಗೆಲ್ಲ ನನಗೆ ೧೨-೧೩ ವರುಷಗಳು .ಆಗೆಲ್ಲ ನಮ್ಮ ಮನೆಗೆ ಹಳೆಯ ಪೇಪರ್ ಗಳನ್ನು (ರದ್ದಿ ಪೇಪರ್ )ಕೊಳ್ಳಲು 'ಕಾಫಿ ಸಾಬಣ್ಣ ' ಬರುತ್ತಿದ್ದ..ದೂರದ ದಕ್ಷಿಣ ಕನ್ನಡದಿ...
-
ನಾನೇರಿದ ಎತ್ತರಕ್ಕೆ ನೀನೂ ಏರಬಲ್ಲೆಯಾ ? ಹಿಮಾಲಯ ಸೇರ್ಬೇಕು ಅನ್ನೋ ಮನಸ್ಸಾಗಿದೆ ಕಣೋ , ಬೇಗ ಹಿಂದಿರುಗಿ ಬರುವ ಯೋಚನೆಯೂ ಇಲ್ಲಾ...ಆ ಮಂಜಿನಲ್ಲಿ ಬೆಚ್ಚಗೆ ಹೊದ್ದು ಕು...