ಪುಟಗಳು

ಮಂಗಳವಾರ

ಮನಸಿಗೊಂದು ಅನಲಿಸಿಸ್ ಬೇಕಾ?

ಮನಸಿಗೊಂದು ಅನಲಿಸಿಸ್ ಬೇಕಾ?

ಜೀವನದಲ್ಲಿ ನೋಡೋಕೆ ಇನ್ನೇನು ಉಳಿದಿದೆ ಎನ್ನುವ ತರಹದ ಬೇಸರ

ಕುಳಿತಲ್ಲಿ ಕುಳಿತೆ ಇರುವದು ಅಸಾಧ್ಯ ,ಪಕ್ಕದ ಮನೆಯ ಹುಡುಗಿ ಒಂದು ಚಿಕ್ಕ ಸ್ಮೈಲ್ ಕೊಟ್ಟು ಅಕ್ಕ, ಊಟ ಆಯ್ತ ಎಂದು ಕೇಳಿದಾಗ ,ಮನೆಯ ಬಾಗಿಲು ತೆಗೆದ ಸಂಕಟಕ್ಕೆ ,ಹ್ಮ್ ಈವಾಗ ತಾನೇ ಆಯ್ತಮ್ಮ ,ನೀ ಏನು ಅಡುಗೆ ಮಾಡಿದ್ದೆ ? ಎನ್ನುವ ಮರು ಪ್ರಶ್ನೆ ಹಾಕಿ ಅಲ್ಲಿಂದ ನಿಧಾನಕ್ಕೆ ತಪ್ಪಿಸಿಕೊಂಡು ಬಂದರೆ ಅದೇನೋ ಒಂದು ರೀತಿಯ ತೃಪ್ತಿ ..ಹಾಂಗಂತ ಮನೆಯಲ್ಲಿ ಮಾಡೋಕೆ ಟನ್ಗಟ್ಟಲೆ ಕೆಲ್ಸ ಇದೆಯಂತಲ್ಲ.. ಆದರೂ...ಕಾರಣ ನಂಗೆ ಮೂಡ್ ಇಲ್ಲ!

ಮೂಡ್ ' ನನ್ನೊಡನೆ ಈಸ್ಟೆಲ್ಲಾ ಆಟ ಆಡುತ್ತಾ ? ಎಂದು ಒಮ್ಮೊಮ್ಮೆ ನಿಜಕ್ಕೂ ಅಚ್ಚರಿ ..
ಊಟ ಮಾಡು ಪ್ಲೀಸ್ - ನಂಗೆ ಮೂಡ್ ಇಲ್ಲ
(ಅಸಲು ಹಸಿವಿಲ್ಲ!)
ಹೋಗ್ಲಿ ನಿದ್ದೇನಾದ್ರೂ ಮಾಡು - ಹೂಂ ...ಮೂಡ್ ಇಲ್ಲ !

ಈ ಮೂಡ್ ಅನ್ನೋದು ಈ ಲೆವೆಲ್ ಗೆ ಕೈ ಕೊಡುತ್ತಾ?


ಯಾಕೆ ಹೀಗೆ ಎಂದೆಲ್ಲ ಒಂದು ಚಿಕ್ಕ ಅನಲಿಸಿಸ್ ಮಾಡಬೇಕ? ಅಥವ ಸುಮ್ಮನೆ ಬಾಯಿ ಮುಚ್ಚಿಕೊಂದು ತೆಪ್ಪಗೊಂದು ಬದಿಯಲ್ಲಿ ಸಾದಿ ಕುಳಿತಿರಲ?...ಹ್ಮಂ ಒಮ್ಮೊಮ್ಮೆ ಈ ಲೆವೆಲ್ ಗೆ ಬೇಸರ ವಾಗುತ್ತೆ .ಕಾರಣ ಗೊತ್ತೇ ಇರೋದಿಲ್ಲ..ಆಗೆಲ್ಲ ಹಿಮಾಲಯದತ್ತ ಸಾಗೋಣ ಎಂದು ನನ್ನ ಮನಸಿಗೊಂದು ಪ್ರಶ್ನೆ ಇಡುತ್ತೇನೆ..ಆ ಎತ್ತರದ ಹಿಮಾಲಯ ನನಗೆ ಯಾವತ್ತು ಒಂದು ಸವಾಲಾಗಿ ಕಂಡಿದೆ..ಯಾಕೋ ಗೊತ್ತಿಲ್ಲ.ನನ್ನ ಸ್ನೇಹಿತರೆಲ್ಲ ಹಿಮಾಲಯ ಪ್ರವಾಸ ಮುಗಿಸಿ ಬಂದಾಗ ನನಗೆ ಹಿಮಾಲಯ ಬಹುವೆ ಕಾಡಿದ್ದು ಸುಳ್ಳಲ್ಲ.....
ಮೂಡ್ ಮಾಯೆ ಎಂದರೆ ಇದೆ ಅಲ್ವಾ? ನಿಮಗೂ ಫೀಲ್ ಆಗಿರಬಹುದು.
ಯಾರೋ ಹೇಳಿದ ಒಂದು ಚಿಕ್ಕ ಮಾತು , ಯಾರೋ ಕಳುಹಿದ ಒಂದು ಈಮೈಲ್,ಉಪ್ಪು ಖಾರ ರುಚಿ ಹದವಿರದ ಒಂದು ಊಟ,ತೀರಾ ಹಚ್ಚಿಕೊಂಡ ಫ್ರೆಂಡು ,ಪಕ್ಕದ ಮನೆಯ ಅಜ್ಜ ಅಜ್ಜಿಯ ಗಲಾಟೆ

ಎದುರು ಮನೆಯ ಚಿಕ್ಕ ಗುಡಿಸಲಲ್ಲಿ ಮುದುಡಿ ಮಲಗಿದ ಪುಟ್ಟ ಮಕ್ಕಳು , ಹೀಗೆ ಏನೇನೋ ಕಾರಣಗಳು ....

ನಿಜಕ್ಕೂ ಈ ಮನಸು ಮೂಡ್ ಇಲ್ಲ ಎಂದು ಹೇಳಿ ಎಲ್ಲದರಿಂದ ತಪ್ಪಿಸಿಕೊಳ್ಳುವದು ಏತಕ್ಕೆ?
ನಿಜಕ್ಕೂ ಮನಸಿನ ಆರೋಗ್ಯ ಸರಿ ಇಲ್ಲ ,ಒಂದು ಚೂರು ನೆಮ್ಮದಿ ಬೇಕು ,ನನ್ನ ಪಾಡಿಗೆ ಬಿಟ್ಟುಬಿಡಿ ಎನ್ನೋಕ?
ಕಾರಣ ಗಳು ಏನಾಗಿರಬಹುದು ?
ಮನಸಿಗೊಂದು ಅನಲಿಸಿಸ್ ಬೇಕಾ?
ಮುಂದಿನ ಭಾಗದಲ್ಲಿ ! ....

6 ಕಾಮೆಂಟ್‌ಗಳು:

Sri ಹೇಳಿದರು...

ನನ್ನ ಸ್ನೇಹಿತರೆಲ್ಲ ಹಿಮಾಲಯ ಪ್ರವಾಸ ಮುಗಿಸಿ ಬಂದಾಗ ನನಗೆ ಹಿಮಾಲಯ ಬಹುವೆ ಕಾಡಿದ್ದು ಸುಳ್ಳಲ್ಲ..... Yaava snehitarugalu ????

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ನನಗೂ ನಿಮ್ಮ ಹಾಗೆ ಬಹಳ ಬಾರಿ ಅನ್ನಿಸಿದ್ದಿದೆ...

ನಿಮ್ಮ ವಿಶ್ಲೇಷಣೆ ಚೆನ್ನಾಗಿದೆ...
ಮುಂದುವರೆಸಿ... ಅಭಿನಂದನೆಗಳು...

ಕ್ಷಣ... ಚಿಂತನೆ... bhchandru ಹೇಳಿದರು...

ಶ್ವೇತಾ ಅವರೆ,

ಮನಸಿನ ವಿಶ್ಲೇಷಣೆ ಚೆನ್ನಾಗಿದೆ. Bertrand Russel ಅವರ ಆನಾಲಿಸಿಸ್ ಆಫ್ ಮೈಂಡ್ ಎಂಬ ಪುಸ್ತಕವೂ ಇದೆ. ತುಂಬ ಹಳೆಯದು ಅದು. ಇದರಲ್ಲಿ ಫಿಲಾಸಫಿಯೂ ಸೇರಿದೆ ಎಂದು ನನ್ನ ಅನಿಸಿಕೆ. ಲೇಖನ ಮುಂದುವರೆಸಿ...

ಅಭಿನಂದನೆಗಳು.

ಚುಕ್ಕಿಚಿತ್ತಾರ ಹೇಳಿದರು...

ಮನಸ್ತಿತಿ ’ಮೂಡ್’ ಬಗ್ಗೆ ಬರೆದಿದ್ದು ಚೆನ್ನಾಗಿದೆ. ಬರೆಯಿರಿ ಹೀಗೆ.. ಇನ್ನಷ್ಟು..
ಅಭಿನಂದನೆಗಳು...

Shweta ಹೇಳಿದರು...

ಪ್ರಕಾಶ್ ಅಣ್ಣ,ಚಂದ್ರು ಸರ್ ,ನಿಮಗೆಲ್ಲ ತುಂಬಾ ಧನ್ಯವಾದಗಳು .....ಚಂದ್ರು ಸರ್ ನೀವು ಹೇಳಿದ ಪುಸ್ತಕ ಹುಡುಕಿ ಓದುತ್ತೇನೆ...interesting one.

ಹೀಗೆಯೇ ಬರುತ್ತಿರಿ ..

Shweta ಹೇಳಿದರು...

ಚುಕ್ಕಿ ಚಿತ್ತಾರ ..ನಿಮ್ಮ ಬ್ಲೋಗ್ ನ ಹೆಸರು ತುಂಬಾ ಚೆನ್ನಾಗಿದೆ... ಹೀಗೆಯೇ ಬರುತ್ತಿರಿ ...