ಗುರುವಾರ

ಖಾಲಿ



 A:ಯಾಕೋ ಸೋತು ಹೋದೆ ಅನ್ನೋ ಫೀಲಿಂಗು ಕಣೆ. ೩೦ ವರುಷಗಳ ವೃತ್ತಿ ಬದುಕಲ್ಲಿ ಹೀಗೆ ಅನ್ನಿಸಿದ್ದೇ ಇಲ್ಲ.

 B:ಹಮ್ ಅರ್ಥಾ ಆಗುತ್ತೆ.ನಿನಗೆ ಬೇಕಾದುದ್ದೆಲ್ಲ ಸಿಕ್ತು ಅದಿಕ್ಕೆ ಹಾಗಿರಬೇಕು.

A:ಈಗ ನನ್ನರಿವಿಗೆ ಬರುತ್ತಿಲ್ಲ,ಏನು ಬೇಕಾಗಿತ್ತು ನಂಗೆ?

B:ಇಲ್ನೋಡೆ,ಸ್ವಲ್ಪ ದಿನ ಅಷ್ಟೇ.ಈ ಒಂಟಿತನ ಇದೆಯಲ್ಲ,ಒಮ್ಮೆ ರೂಢಿ ಆಗಿ ಬಿಟ್ಟರೆ ಅಷ್ಟೆ ಮುಗೀತು,ಒಂಟಿತನವನ್ನ ನಾವು ಪ್ರೀತಿಸಲು ಶುರುಮಾಡಿ
ಬಿಡುತ್ತೇವೆ,ಹಾಗೆಯೇ ಒಂಟಿತನವೂ ಕೂಡ.

A:ಅದು ಹಾಗಲ್ಲ.

B:ಹಾಗೂ ಇಲ್ಲ ಹೀಗೂ ಇಲ್ಲ.ನಿನಗೆ ನೀನೆ.

A:ಹ್ಮ್ ನೀನಂದಿದ್ದು ಸರಿ,ಕಂಡವರಿಗೆಲ್ಲ ಅಣ್ಣ ತಮ್ಮ ಎಂದು ಮಾತಾಡಿಸುವ ನನಗೆ ಆವತ್ತು ಅನಿಸಿದ್ದು 'ನನಗೆ ಯಾರೂ ಇಲ್ಲ',ಯಾಕೋ ಗೊತ್ತಿಲ್ಲ,ಈ ಸಂಬಂಧಗಳೇ ಹಾಗೆ.ನಿನಗೆ ನೀನೇ ಅನ್ನುವದೊಂದು ಸತ್ಯ ಕೊನೆಯವರೆಗು ಉಳಿದು ಬಿಡುತ್ತದೆ. ಆದರೂ..
ಎಷ್ಟು ವಿಚಿತ್ರ ಗೊತ್ತ,ನಮ್ಮ ಮೊಬೈಲಿನಲ್ಲಿ ಸಾವಿರ ನಂಬರ್ ಗಳಿರಲಿ,ನಮಗೆ ಬೇಕಾದಾಗ ಮಾತಾಡಲಿಕ್ಕೆ ಯಾರೂ ಸಿಕ್ಕುವದೇ ಇಲ್ಲ.ಎಲ್ಲವೂ ಕಾರ್ಯನಿರತವಾಗಿರುತ್ತವೆ,ಇಲ್ಲಾ ಸದ್ದಿಲ್ಲದೆ ಎಲ್ಲೋ ಬಿದ್ದಿರುತ್ತವೆ ಜೀವ ಕಳೆದುಕೊಂಡು.

B:ಅದಿಕ್ಕೆ ಹೇಳಿದ್ದು,ಯಾರಿಗೋ ಕಾಯುವದರಲ್ಲಿ ಅರ್ಥವಿಲ್ಲ

A:ಅದು ಹಾಗಲ್ಲ,ಎಲ್ಲೋ ಒಂದುಕಡೆ ಸಣ್ಣ ಭರವಸೆ.

B:ಭರವಸೆ ಇರಬೇಕು ನಿಜ, ಆದರೆ ಬೇರೆಯವರ ಮೇಲಲ್ಲ,ನಮಗೆ ನಮ್ಮ ಮೇಲೆ.

A:ಈ ಬೇಜಾರು,ನಿರೀಕ್ಷೆ ಗಳೆಲ್ಲ ಹಾಗೆ ಕಾಡುತ್ತವೆ, ಕಾಡಿಸುತ್ತವೆ.ಮಾಡಲಿಕ್ಕೆ ಕೆಲಸವಿಲ್ಲದಾಗ ನೆನಪಾಗುತ್ತವೆ.ಹಿಂದಿಲ್ಲ ಮುಂದಿಲ್ಲ,ಹೋಗಲಿ ಅರ್ಥವಾದರು ಇದೆಯ? ಅದೂ ಇಲ್ಲ.Just Like that…

B:ಯಾಕೆ ಅನ್ನಿಸುವದಿಲ್ಲ ಗೊತ್ತಾ, ಯಾರು ಆಪ್ತರಾಗುವದೇ ಇಲ್ಲ,ಎಲ್ಲರಿಗೂ ಧಾವಂತದ ಬದುಕಿನ ಹೋರಾಟ ದಿಕ್ಕೆಟ್ಟಿಸಿರುತ್ತದೆ.ಅವರವರ ಬದುಕು ಅವರವರಿಗೆ .

A:ಇಂದಿನ ಬದುಕೊಂದೇ ನಿಜ ಅಲ್ಲ ಅಲ್ಲವ, ನಾಳೆಯೂ ಬದುಕಬೇಕು,ಅದ್ಯಾಕೆ ಅರ್ಥವಾಗುವದಿಲ್ಲ?

B:ಅಯ್ಯೊ ಮಂಕೆ,ಇವತ್ತು ಬದುಕಿದರೆ, ನಾಳೆ ತಾನೆ? ಅಲ್ಲಿಯವರೆಗು ನಾಳೆಯ ಯೋಚನೆ ಯಾತಕ್ಕೆ.ಇವರೆಲ್ಲ ಜನಸಾಮಾನ್ಯರು ಕಣೆ,ಇಂದು ಮುಖ್ಯ.ಕಾಣದ ನಾಳೆಯಲ್ಲ.

A:ಹ್ಮ್ಮ್ ಆದರೂ ಕಾಣದ ನಾಳೆಯ ಬಗ್ಗೆ ಕನಸು ಕಟ್ಟಿದಾಗ,ಎಷ್ಟು ಕುಶಿಯಾಗುತ್ತದಲ್ಲ.

B:ನನ್ನ ಕತೆ ಕೇಳು

ಇಷ್ಟು ವರ್ಷ ಕೆಲಸ ಮಾಡಿ, ಒಂದೇ ಸಾರಿ ನಿನಗಿನ್ನು ವಯಸ್ಸಾಯಿತು ಮನೆಗೆ ಹೋಗು ಎಂದಾಗ,ಇವರಿಗು ನನಗೂ ಇನ್ನು ಏನು ಸಂಬಂಧ ಉಳಿದಿಲ್ಲ ಎಂದು.ಈ Retirement  ಹಾಗೆ.ಎಲ್ಲರಿಗೂ ವಯಸ್ಸಾಗುತ್ತದೆ,ಆದರೆ ಅದನ್ನ ಬೇರೆಯವರ ಬಾಯಿಯಿಂದ ಕೇಳಿದಾಗ , ನಿಜಕ್ಕೂ ನನಗೆ ವಯಸ್ಸಾಯಿತು ಅನ್ನಿಸಿಬಿಡುತ್ತದೆ.

A:ಹೌದು…ಅದು ಹಾಗೆ ಕಣೆ

B:ಅದು ನನ್ನದೇ ಕಂಪನಿ, ನಾ ಕಟ್ಟಿ ಬೆಳೆಸಿದ್ದು.ನನಗೆ ನಿನ್ನ ಸೇವೆ ಸಾಕು ಇನ್ನು ನೀನು ಹೋಗಿ ವಿಶ್ರಾಂತಿ ತೆಗದುಕೊ ಅಂದಾಗ, ಇದನ್ನ ಕಟ್ಟಲು ಪಟ್ಟ ಪಾಡೆಲ್ಲ ಕಣ್ಮುಂದೆ ಬಂದು,ಯಾಕೋ ನಾ ಬೇರೆಯವ,ಒಂಟಿ ಅನ್ನಿಸಿಬಿಡುತ್ತದೆ.ಇನ್ನು ಅವರ ಆಡಳಿತದಲ್ಲಿ ತಲೆ ಹಾಕಬಾರದಂತೆ.ಯುವಕರಿಗೆ ಅವಕಾಶ ಕೊಡಬೇಕಂತೆ.ಕಂಪನಿ ಬೆಳೆಯಿಸುತ್ತಾ,ಸಾವಿರ ಸಾವಿರ ಯುವಕರಿಗೆ ಕೆಲಸ ಕೊಟ್ಟಿದ್ದು ಕಾಣುವದೇ ಇಲ್ಲ.

A:ಹುರುಳಿಲ್ಲದ್ದು ಕಣೆ.ಸಂಜೆ ಆಗ್ತ ಇದೆ ಮನೆಗೆ ಹೋಗಬೇಕಲ್ಲಾ.ಅಲ್ಲಾ ನೀ ಅದೆನೋ ಹೊಸ ಕಂಪನಿ ಕಟ್ಟುತ್ತೀಯಂತೆ?

B :ಹ್ಮ್ ,ಸುಮ್ಮನೆ ಮನೆಯಲ್ಲಿ ಕುತಿರ್ಲಾ? ಶುದ್ಧ ಸೋಂಬೇರಿಯಾಗಿ?

A: ಯಾಕಾಗಬಾರ್ದು? ಒಂದಷ್ಟು ದಿನ ಹಾಗೆ,ಖಾಲಿ,ಏನನ್ನೂ ಯೋಚಿಸದೇ.ಪಾರ್ಕಿಗೆ ಬಾ ,ಸುತ್ತಲಿದನ್ನು ನೋಡು,ಬೇರೆಯದೇ ಲೋಕ.ಹೊಸ ಹೊಸ ವಿಚಾರಗಳು ಬಂದಪ್ಪಳಿಸಿಯಾವು.

B: Let me try Out..


ಖಾಲಿತನ(Emptiness) ಎಲ್ಲರಿಗು ದಕ್ಕುವದಿಲ್ಲ,ಅದು ಹಾಗೇ.ಕೆಲವರಿಗೆ ಸುಮ್ಮನೆ ಕೂತಲ್ಲಿ ಕೂಡಲಿಕ್ಕಾಗುವದಿಲ್ಲ, ನಿಂತಲ್ಲಿ ನಿಲ್ಲಲ್ಲಿಕ್ಕಾಗುವದಿಲ್ಲ,ಒಂದು ತರ ಓಡುತ್ತಲೇ ಇರುತ್ತಾರೆ, ಕೊನೆಯವರೆಗೂ.

ಖಾಲಿತನ ಅನುಭವಿಸಿದವರಿಗಷ್ಟೆ ಗೊತ್ತು,ಖಾಲಿತನಕ್ಕಾಗಿ ಜನರಿಲ್ಲದ ಪ್ರದೇಶವೇ ಆಗಬೇಕಿಲ್ಲ,ನೀವೆಲ್ಲಿದ್ದೀರೋ ಅಲ್ಲೇ ದಕ್ಕಬಹುದು.
ತ್ವಮೇವ ಕರ್ತಾಸಿಯಿಂದ 'ಅವನೇ ನಾನು'  ವರೆಗೂ.

10 ಕಾಮೆಂಟ್‌ಗಳು:

ತೇಜಸ್ವಿನಿ ಹೆಗಡೆ ಹೇಳಿದರು...

"ಎಷ್ಟು ವಿಚಿತ್ರ ಗೊತ್ತ,ನಮ್ಮ ಮೊಬೈಲಿನಲ್ಲಿ ಸಾವಿರ ನಂಬರ್ ಗಳಿರಲಿ,ನಮಗೆ ಬೇಕಾದಾಗ ಮಾತಾಡಲಿಕ್ಕೆ ಯಾರೂ ಸಿಕ್ಕುವದೇ ಇಲ್ಲ.ಎಲ್ಲವೂ ಕಾರ್ಯನಿರತವಾಗಿರುತ್ತವೆ,ಇಲ್ಲಾ ಸದ್ದಿಲ್ಲದೆ ಎಲ್ಲೋ ಬಿದ್ದಿರುತ್ತವೆ ಜೀವ ಕಳೆದುಕೊಂಡು."

ನನಗೂ ಹೀಗೇ ಅನುಸುತ್ತಿರುತ್ತದೆ ಸದಾ... ಮೂವತ್ತು ವರುಷ ವಯಸ್ಸಿಗೇ! :) ತುಂಬಾ ಚೆನ್ನಾಗಿದೆ... ರಿಟೈರ್‌ಮೆಂಟ್ ಮೊದಲೇ ಈಗಿನವರಿಗೆ ಇಂತಹ ಭಾವ ಕಾಡುವುದು ಸಾಮಾನ್ಯವಾಗಿ ಹೋಗಿದೆ. ಖಾಲಿತನದ ಸುಖ/ದುಃಖ ಅನುಭವಿಸಿದವರಿಗಷ್ಟೇ ಗೊತ್ತು... ಖಾಲಿತನಕ್ಕೂ ವಯಸ್ಸಿಗೂ ಏನೊಂದೂ ಸಂಬಂಧವಿಲ್ಲ ಅಲ್ಲವೇ? :)

ಕ್ಷಣ... ಚಿಂತನೆ... ಹೇಳಿದರು...

"ಖಾಲಿ" ಲಘು ಲೇಖನ ಓದುತ್ತಾ ಹೋದಂತೆ, ಅಲ್ಲಿ `ಖಾಲಿ' ಎಂಬುದಿಲ್ಲ 'ಅದರ ಬದಲಾಗಿ' ಮತ್ತೊಂದು 'ಹೊಸತು' ಹೊಂಚಿ ಕುಳಿತಿದೆ ಅನಿಸುತ್ತದೆ.

ಇಂದಿನ ಧಾವಂತದ ಜೀವನ ಶೈಲಿಯಲ್ಲಿನ ಚಿತ್ರಣವನ್ನು ಮನಮುಟ್ಟುವಂತೆ ಕೊಟ್ಟಿದ್ದೀರಿ.
ಧನ್ಯವಾದಗಳು.

ಮನದಾಳದಿಂದ............ ಹೇಳಿದರು...

ಯಾಕೋ ಏನೋ ಒಂತರ ಗೊಂದಲ ಆಗ್ತಿದೆ!
ಖಾಲಿ ಖಾಲಿ ಭಾವ...............!

Shweta ಹೇಳಿದರು...

ಥಾಂಕ್ಯು ತೇಜಕ್ಕ,

@ಚಂದ್ರು ಸರ್,
ಖಾಲಿ ಆದಷ್ಟು ಹೊಸದಕ್ಕೆ ಜಾಗ ಸಿಗುತ್ತೆ.

@ಮನದಾಳದಿಂದ,
ಗೊಂದಲ ಯಾತಕ್ಕೆ? ಖಾಲಿ ಭಾವ ದಕ್ಕುವದು ಗೊಂದಲದಿಂದ ಹೊರಬಂದಾಗ ಮಾತ್ರ.

Shweta ಹೇಳಿದರು...

ಥಾಂಕ್ಯು ತೇಜಕ್ಕ,

@ಚಂದ್ರು ಸರ್,
ಖಾಲಿ ಆದಷ್ಟು ಹೊಸದಕ್ಕೆ ಜಾಗ ಸಿಗುತ್ತೆ.

@ಮನದಾಳದಿಂದ,
ಗೊಂದಲ ಯಾತಕ್ಕೆ? ಖಾಲಿ ಭಾವ ದಕ್ಕುವದು ಗೊಂದಲದಿಂದ ಹೊರಬಂದಾಗ ಮಾತ್ರ.

Shweta ಹೇಳಿದರು...

ಥಾಂಕ್ಯು ತೇಜಕ್ಕ,

@ಚಂದ್ರು ಸರ್,
ಖಾಲಿ ಆದಷ್ಟು ಹೊಸದಕ್ಕೆ ಜಾಗ ಸಿಗುತ್ತೆ.

@ಮನದಾಳದಿಂದ,
ಗೊಂದಲ ಯಾತಕ್ಕೆ? ಖಾಲಿ ಭಾವ ದಕ್ಕುವದು ಗೊಂದಲದಿಂದ ಹೊರಬಂದಾಗ ಮಾತ್ರ.

Shweta ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Shweta ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Chaithrika ಹೇಳಿದರು...

ಬರಹ ಚೆನ್ನಾಗಿದೆ...

ಬ್ಲಾಗ್ ನ ಬಣ್ಣದಿಂದ (ಮರೂನ್ ಮೇಲೆ ಹಳದಿ ಅಕ್ಷರ) ಕಣ್ಣಿಗೆ ಬಹಳ ತ್ರಾಸವಾಗಿ ಹೆಚ್ಚು ಓದಲು ಸಾಧ್ಯವಾಗುತ್ತಿಲ್ಲ.

Chaithrika ಹೇಳಿದರು...

ಬರಹ ಚೆನ್ನಾಗಿದೆ...

ಬ್ಲಾಗ್ ನ ಬಣ್ಣದಿಂದ (ಮರೂನ್ ಮೇಲೆ ಹಳದಿ ಅಕ್ಷರ) ಕಣ್ಣಿಗೆ ಬಹಳ ತ್ರಾಸವಾಗಿ ಹೆಚ್ಚು ಓದಲು ಸಾಧ್ಯವಾಗುತ್ತಿಲ್ಲ.

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...