ನೀಲಿ ಬಣ್ಣದ ವಸ್ತ್ರದ ಅಲಂಕಾರ,ಅದರೊಳಗೆ ಚಿನ್ನದ ಬಣ್ಣದ ಇನ್ನೊಂದು ಅಂಗಿ, ಸಾಥ್ ಕೊಡಲಿಕ್ಕೆಂದೇ ಬಿಳಿಯ ಬಣ್ಣ, ಚಿಕ್ಕದು ,ದೊಡ್ಡದು,ಇನ್ನೂ ದೊಡ್ಡದು ,ಹೀಗೆ ತಹೇವಾರಿ ಗಾತ್ರಗಳಲ್ಲಿ.. ನೀಲಿ ಬಣ್ಣದ್ದು,ಬಂಗಾರದ ಬಣ್ಣದ್ದು
ಒಮ್ಮೆ ನೋಡಿದರೆ ಮತ್ತೆ ತಿರುಗದೆಯೆ ಹಾಗೆ ಹೋಗಲಿಕ್ಕಾಗುವದಿಲ್ಲ,ಅಂತಹ ಸೆಳೆತ ಆ ನೀಲಿ ಮಾಟಗಾತಿಯದು. ಸುಂದರಿ ಅನ್ನಲಿಕ್ಕಾಗದಿದ್ದರು ಸೆಳೆವ ಸ್ನಿಗ್ಧತೆ ಆ ನೀಲಿ ಮಾಟಗಾತಿಯಲ್ಲಿ ,ಅದೇಕೋ ಏನೋ ,ನೋಡುವವರು ಕುರುಬಿಯಾರೆಂದೋ ಏನೋ ಈ ಮಾಟಗಾತಿ ಯ ಬಣ್ಣ ಕಪ್ಪು- ಅಮ್ಮ ಹೇಳೋ ಹಾಗೆ, ಅದೇ ಕಾಫೀ ಕಲರ್ರು. 'ಕಬ್ಬು ಡೊಂಕಾದರೆ ಸಿಹಿ ಡೊಂಕೆ' ಅನ್ನುವ ಗಾದೆ ಇದೆಯಲ್ಲಾ,ಅದೇ ತರ ಓಡಳೊಳಗೆ ಮುಗಿಯಲಾರದಷ್ಟು ಸಿಹಿ ಹಾಂ..ಡಬ್ಬಿ ತುಂಬಿಸಿಡುವಷ್ಟು .
ಪುಟ್ಟಿ ನೀನು ಊಟ ಬೇಗ ಮಾಡ್ಬಿಟ್ರೆ, ಹೋಮ್ವರ್ಕ್ ಎಲ್ಲ ಬೇಗ ಮುಗ್ಸಿ ಬಿಟ್ರೆ, ಹಟ ಮಾಡದೇ ಇದ್ರೆ ...ಎನ್ನುವ ಎಲ್ಲ 'ಟ್ರೇ,ದ್ರೆ' ಗಳಿಗೆ ಪರಿಹಾರ ಆ ಮಾಟಗಿತ್ತಿಯೇ ...ನಂಗೂ ಅಮ್ಮಂಗೂ ಎಂದಿಗೂ ಗೊತ್ತಿದ್ದುದು.
ಇನ್ನೊಂದು ಮತ್ತೊಂದು ,ಈ ಕೈಗೊಂದು ಇನ್ನೊಂದು ಕೈಗೆ ಇನ್ನೊಂದು ...ಮುಗಿಯದ ಕತೆ ಎಂದು ಅಮ್ಮ ಅರಿತಾಗ, ನಾಳೆಗೆ ಮತ್ತೊಂದು ಎಂದು ಸಮಾಧಾನ ಮಾಡಿದ್ದು ಅಮ್ಮನ ಜಾಣ್ಮೆ.
4 ಕಾಮೆಂಟ್ಗಳು:
:):)modaligae nanage yenu yava matagati anta gotagalilla ....kadaegae gotaytu ...nice one
:):)modaligae nanage yenu yava matagati anta gotagalilla ....kadaegae gotaytu ...nice one
nanagu ishTa adu..
thank you...
chocolate yaarigishta illa. ellarigoo ishtaa.. chennagide nenapina baraha..
ಕಾಮೆಂಟ್ ಪೋಸ್ಟ್ ಮಾಡಿ