ಭಾನುವಾರ

ಮತ್ತೇನೂ ಹಾದಿಯಿಲ್ಲ ಎಂಬೆಡೆಗೆ ವಾಲಿದ್ದೇನೆ


ನನ್ನ ಆಫೀಸಿನ ೧೧ ನೆ ಮಹಡಿಯಲ್ಲಿ ಇರುವದು ನನ್ನ ಡೆಸ್ಕ್,ಒಟ್ಟು 10ಲಿಫ್ಟ್ ಗಳಿದ್ದಾವೆ ಅಲ್ಲಿ .ಬೆಳಿಗ್ಗೆ ೮ ಕ್ಕೆಲ್ಲ ಲಿಫ್ಟ್  ಸುಮಾರಾಗಿ ಖಾಲಿ ಇರುತ್ತದೆ.ಆದ್ದರಿಂದ ನಾನೇರಿದ ಲಿಫ್ಟ್, ಬೇರೆ ಮಹಡಿಗಳಲ್ಲಿ ನಿಲ್ಲದೆ,ಸೀದಾ ೧೧ ನೆ ಮಹಡಿ ತಲುಪಿಬಿಡುತ್ತದೆ.ಆಗಲೇ ನನಗೆ ಒಂದು ತರದ ಸಮಾಧಾನ,ಎಲ್ಲಾಮಹಡಿಗಳಲ್ಲಿ ನಿಲ್ಲುತ್ತಾ ಮೇಲೇರ ತೊಡಗಿದರೆ,ಯಾಕೋ ವಿಪರೀತ ಅಸಮಾಧಾನ.೫ ನಿಮಿಷಕ್ಕೆ ಬರಬೇಕಾದ್ದು,೭ ನಿಮಿಷ ತೆಗೆದುಕೊಂಡರೆ ಅದರ ಬಗ್ಗೆ ಕೆಟ್ಟ ಅಸಮಾಧಾನ.ಲಿಫ್ಟೆ ಇಲ್ಲದಿದ್ದರೆ ಎಂಬುದನ್ನ ಯೋಚಿಸುವದಕ್ಕೂ ಹೋಗುವದಿಲ್ಲ,ಆತುರತೆ 'ಆಧುನಿಕತೆಯ ಉಡುಗರೆಯ?ಇರಬೇಕು .ಜೀವನ ಸರಳವಾದಷ್ಟು ,ಸುಲಭವಾದಷ್ಟು ಮತ್ತೂ ಸುಲಭವಾಗಬೇಕು,ಸರಳವಾಗಬೇಕೆಂಬುದು ದುರಾಸೆ ಅಲ್ಲವ?(ಹ್ಮಮ್, ಇಂದಿನ ಎಲ್ಲಾ ನವನವೀನ ಆವಿಷ್ಕಾರಗಳಿಗೆ ,ಬರುತ್ತಿರುವ ಹೊಸ ಉದ್ಯಮಗಳಿಗೆ ಇದೇ ಮೂಲ)ನಾನೊಬ್ಬಳು ಹುಟ್ಟಾ ಆತುರಗಿತ್ತಿ,ದಡ್ ದಡ್ ಎಂದು ಎಲ್ಲಾ ಆಗಿಬಿಡಬೇಕು,ಕಣ್ಮುಚ್ಚಿ ತೆರೆಯುವಷ್ಟರಲ್ಲಿ ,ಇಲ್ಲದ್ದು ಬಂದುಬಿಡಬೇಕು (ಅದನ್ನು ನಾನು 'Effcient Way' ಅನ್ನುವದು )

ಆದರೂ,ಇತ್ತೀಚಿಗೆ ನನ್ನ ಆತುರ ಪ್ರವ್ರತ್ತಿಗೆ ಕಡಿವಾಣ ಬಿದ್ದಿದೆ (ಮತ್ತೇನು ಹಾದಿಯಿಲ್ಲ ಎಂಬೆಡೆಗೆ ವಾಲಿದ್ದೇನೆ:ಕೊನೆಯಲ್ಲಿ ಅದರ ಬಗ್ಗೆ ಬರೋಣ.)ತುಂಬಿದ ಲಿಫ್ಟ್ ನ ಕನ್ನಡಿಯಲ್ಲಿ ತನ್ನ ಅಲಂಕಾರ ಸರಿಯಾಗಿದೆಯೋ ಇಲ್ಲವೋ ಎಂದು ಪದೇ ಪದೇ   ಕನ್ನಡಿಯತ್ತ ನೋಡುತ್ತಿರುವ ಆ ನೀರೆಯ ನಾಜೂಕು, ಬಿಗಿದುಕೊಂಡ ಕೊರಳ ಪಟ್ಟಿ (ಟೈ ) ಸರಿಪಡಿಸಿಕೊಳ್ಳುವ ಮಹಾನುಭಾವ ,ಕಾಪಿಚಿನೋ ಕೈಯಲ್ಲಿ ಹಿಡಿದು,ಕಣ್ಣು ಕಣ್ಣು ಬಿಡುತ್ತಿರುವ ಚೀನಿ ಯುವಕ,ಯುವತಿ,ಜಗತ್ತೇ ತಲೆಯ ಮೇಲಿದೆಯೇನೋ ಎಂಬ ಮುಖಮಾಡಿ ಕೈಯಲ್ಲಿನ ಬೆರ್ರಿ ಯಲ್ಲಿ ಇ-ಮೇಲ್ ಓದುತ್ತಿರುವ ಗಂಭೀರ ಮುಸುಡಿಯ ಮ್ಯಾನೇಜರ್ ,ತನ್ನದೇ ಫೋಟೋವನ್ನು ಫ್ರೇಮು ಹಾಕಿ ಕುತ್ತಿಗೆಗೆ ನೇತುಹಾಕಿಕೊಂಡಿರುವ ಆತಾ, ಆಕೆ .....ಅಯ್ಯೋ ಇಷ್ಟು ದಿನ ಎಷ್ಟೆಲ್ಲಾ ಮಿಸ್ ಮಾಡಿಕೊಂಡಿದ್ದೆನಲ್ಲ  ಅಂತ ಮೊನ್ನೆ ಅನಿಸಿತ್ತು.

ಮನೆಗೆ ಬಂದು ಬಾಗಿಲು ತೆರೆಯಲು ಐಡಿ ಕಾರ್ಡ್ ಹಿಡಿಯುವದು , ಮಾತಿನಲ್ಲಿ ನೂರುಬಾರಿ 'Issue' ಎಂಬ ಪದ ಬಳಸುವದು ಇವೆಲ್ಲ ವ್ರತ್ತಿ ಕೊಟ್ಟ ವರ.
                              * **** ******* **** **** **** ***
ನಾನು ಮೊದಲೇ ಪ್ರಾಮಿಸ್ ಮಾಡಿದಂತೆ, ಚಿತ್ರಾ ದಿವಾಕರುಣಿ ಯವರ 'One Amazing Thing ' ಕಾದಂಬರಿಯ ಕತೆ ಹೇಳಿಬಿಡುತ್ತೇನೆ;

೯ ಜನರ ತಂಡವೊಂದು, ಅಮೇರಿಕದ ನಗರವೊಂದರಲ್ಲಾದ ಭೂಕಂಪದಿಂದಾಗಿ,ವೀಸಾ ಆಫೀಸ್ ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ:ಉಮಾ (ಅಮೇರಿಕಾದಲ್ಲಿ ಬೆಳೆದ ಭಾರತೀಯ ಕೂಸು) ,ತಾರಿಕ್ (ಬದಲಾದ ಅಮೇರಿಕಾದ ಬಗ್ಗೆ ಕೋಪವುಳ್ಳ ಮುಸ್ಲಿಂ ಯುವಕ), ಮತ್ತೊಬ್ಬ ಮಾಜಿ ಸೈನಿಕ ,ವೀಸಾ ಕಚೇರಿಯ ಅಧಿಕಾರಿ ,ಚೈನೀಸ್ - ಇಂಡಿಯನ್  ಮಹಿಳೆ ಮತ್ತೂ ಆಕೆಯ ಮಗಳು ಲಿಲಿ ,ವಯಸ್ಸಾದ ಬಿಳಿಯ ದಂಪತಿಗಳು, ಇವರೆಲ್ಲ ಕಾದಂಬರಿಯ ಪಾತ್ರಗಳು. ತಮ್ಮನ್ನು ರಕ್ಷಿಸಲು ಬರುವ  ಸಹಾಯ ತಂಡಕ್ಕಾಗಿ ಕಾದುಕುಳಿತಿರುವಾಗ, ಸಮಯ ಕಳೆಯಲು ತಮ್ಮ ಜೀವನದ ಅತಿ ಅದ್ಭುತ ಅನಿಸುವ,
ಅದುವರೆಗೂ ಯಾರಿಗೂ ಹೇಳಿರದ ಘಟನೆಗಳನ್ನು ಹಂಚಿಕೊಳ್ಳುತ್ತಾರೆ.


ಅಮೇರಿಕಾದ 'Houston Univercity' ಯಲ್ಲಿ ಪ್ರೊಫೆಸರ್ ಆಗಿರುವ ಈಕೆಯ ಹಲವು ಸಂದರ್ಶನಗಳನ್ನು ಓದಿದ್ದೇನೆ, ಆಕೆಯಿಂದ ಹಲವು ಮಾರ್ಗದರ್ಶನಗಳನ್ನೂ ಪಡೆದಿದ್ದೇನೆ. ಆಕೆಯ ಬರವಣಿಗೆಯ ಶೈಲಿಯಲ್ಲಿ,ವಸ್ತು ವರ್ಣನೆಯಲ್ಲಿ ಸೂಕ್ಷ್ಮತೆಯನ್ನು ಕಾಣಬಹುದು.ಆಕೆಯ ಸರಳ ಬರಹ ನನಗೆ ತುಂಬಾ ಇಷ್ಟವಾದದ್ದು. ಮುಖ್ಯವಾಗಿ ಅನಿವಾಸಿಗಳ ಜೀವನದ ತುಮುಲಗಳು,ಮಹಿಳೆ, ಆಕೆಯ ಬರಹದ ವಿಷಯಗಳು. ಆಕೆಯ 'Palace Of Illusions'ಇನ್ನೊಂದು ಇಷ್ಟವಾದ ಕೃತಿ(ದ್ರೌಪದಿ ಮತ್ತು ಕರ್ಣನ ಕುರಿತಾದದ್ದು)

                                                    ****************
ಕೊನೆಯದೊಂದು ಪ್ರಶ್ನೆ :

- ನನ್ನ ಮೊದಲಿನ ಜೀವನಕ್ಕೆ ಹಿಂತಿರುಗಲು ಹಾದಿಗಳಿಲ್ಲ- ಕೂಡಿಸುವ ಸೇತುವೆಗಳು ಮುರಿದಿವೆ ;ಅಷ್ಟೇ ಅಲ್ಲ ,ನನಗೆ ನನ್ನಿದುರು ಯಾವ ಹಾದಿಗಳು ಕಾಣುತ್ತಿಲ್ಲ.

ಅವರು ಹೇಳಿದ್ದು :
ಯಾವುದು ಇಲ್ಲ, 'ಹಾದಿ'ಎನ್ನುವದು ನಿನ್ನ ಮನದ ಭ್ರಮೆ.ಮನಸ್ಸಿದೆಯಲ್ಲ, ಅದು ತನ್ನ ಗುರಿಸಾಧಿಸಲು, ಆಸೆ ಪೂರೈಸಿಕೊಳ್ಳಲು ಕನಸುಗಳನ್ನು ಕಾಣುತ್ತಲೇ ಸಾಗುತ್ತದೆ. ಮನಸ್ಸಿನ ಈ ವ್ಯವಹಾರಗಳ ಛಾಯೆಯೇ 'ಹಾದಿ '.ಮೊದಲು ಏನೋ ಬೇಕೆಂದುಕೊಳ್ಳುತ್ತೀಯ,ಸಹಜವಾಗಿ ಅದು ಬೇಕು,ಇದು ಬೇಕು,ಇತ್ಯಾದಿ 'ಬೇಕು'ಗಳ ವ್ಯವಹಾರ ಭವಿಷ್ಯತ್ತಿಗೆ ಸಂಬಂಧಿಸಿದ್ದು.ಭವಿಷ್ಯತ್ ವರ್ತಮಾನದಲ್ಲಿಲ್ಲ, ಹಾಗಂದ ಮೇಲೆ ನಮ್ಮ ಬಳಿ ಇರುವ ಇವತ್ತಿಗೂ, ಇನ್ನೂ ಬಾರದ ನಾಳೆಗೂ ಸೇತುವೆ ಕಟ್ಟಿದೆ ಅನ್ನಿಸಿದರೆ ಅದು ನಿನ್ನ ಕಲ್ಪನೆ,ಭ್ರಮೆ .

ನಿನಗೆ ಎಲ್ಲೂ ಹೋಗುವದಕ್ಕಿಲ್ಲ, ನೀನು ಎಲ್ಲಿ ಹೋಗಬೇ ಕೆಂದಿರುವೆಯೋ ಅಲ್ಲಿಯೇ ಇದ್ದೀಯ,ಅದು ನೀನು ಸಾಧಿಸಿದ್ದಲ್ಲ, ನಿನಗೆ ದಕ್ಕಿದ್ದು .

ಸ್ನೇಹಿತರೇ , ಇವತ್ತು ನನಗೆ ದಕ್ಕಿದ ಸಮಯ ಇಷ್ಟೇ.ಪ್ರೋತ್ಸಾಹಿಸುತ್ತಿರುವ ನಿಮಗೆಲ್ಲರಿಗೂ ಅನಂತ ಕೃತಜ್ಞತೆಗಳು

6 ಕಾಮೆಂಟ್‌ಗಳು:

ಕ್ಷಣ... ಚಿಂತನೆ... ಹೇಳಿದರು...

ಮೇಡಂ, ಕಾದಂಬರಿಯ ಪರಿಚಯ ಸರಳವಾಗಿ ಮಾಡಿದ್ದೀರಿ. ಓದಬೇಕೆಂದು ಅನಿಸಿದೆ.
ಧನ್ಯವಾದಗಳು.

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ ಹೇಳಿದರು...

ಆತುರತೆ 'ಆಧುನಿಕತೆಯ ಉಡುಗರೆಯ? e salu tumba channagi balake madidira ...koneya salugalu "avaru heliddu" tumba channagide.

ಮನಸಿನಮನೆಯವನು ಹೇಳಿದರು...

.....//

ಸಾಗರಿ.. ಹೇಳಿದರು...

ಶ್ವೇತಾ ಹೆರ್ಲೇಕರ್ರಾ ನೀವು???? ಲೇಖನ ಮತ್ತು ಕಾದಂಬರಿಯ ಪರಿಚಯ ಚೆನ್ನಾಗಿದೆ

ಚಿನ್ಮಯ ಭಟ್ ಹೇಳಿದರು...

ಕೆಲಸ ನಮ್ಮನ್ನು ಬದಲಾಯಿಸಿತೋ ಅಥವಾ ಕೆಲಸಕ್ಕಾಗಿ ನಾವು ನಮ್ಮನ್ನೇ ಬದಲಾಯಿಸಿಕೊಂಡೆವೋ ತಿಳಿಯದು.. ಎನಂತೀರಿ?
(ನನಗನಿಸಿದುದನ್ನು ಹೆಳಿದೆ,ತಪ್ಪಾದರೆ ಮುಲಾಜಿಲ್ದೇ ಬೈರಿ... )

Shweta ಹೇಳಿದರು...

ತುಂಬಾ ಧನ್ಯವಾದಗಳು ನಿಮ್ಮೆಲ್ಲರ ಅಭಿಪ್ರಾಯಗಳಿಗೆ .
@ಸಾಗರಿ : ನಾನು ಹೆರ್ಲೆಕರ್ ಅಲ್ಲ ...ನೀವು ನಮ್ಮೂರಲ್ಲೂ ಓದಿದ ಹಾಗಿದೆ,(ಆರ್ ಪಿ ಹೆಗಡೆ ಯವರ ಬಗ್ಗೆ ಬರೆದಿದ್ದಾರಲ್ಲಾ..)


ಬದಲಾವಣೆ ಜಗದ ನಿಯಮ ಏನಂತೀರಿ ಚಿನ್ಮಯ್ ...ನಿಮಗನ್ನಿಸಿದ್ದನ್ನ ಹೇಳೋಕೆ ಯಾಕೆ ಚಿಂತೆ? ಅಭಿಪ್ರಾಯ,ಸಲಹೆಗಳಿಗೆ ಯಾವತ್ತೂ ಸ್ವಾಗತವಿದೆ.

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...