ಗುರುವಾರ

ನಾನೇರಿದ ಎತ್ತರಕ್ಕೆ ನೀನೂ ಏರಬಲ್ಲೆಯಾ ?

ಹಿಮಾಲಯ ಸೇರ್ಬೇಕು ಅನ್ನೋ ಮನಸ್ಸಾಗಿದೆ ಕಣೋ , ಬೇಗ ಹಿಂದಿರುಗಿ ಬರುವ ಯೋಚನೆಯೂ ಇಲ್ಲಾ...ಆ ಮಂಜಿನಲ್ಲಿ ಬೆಚ್ಚಗೆ ಹೊದ್ದು ಕುಳಿತುಕೊಳ್ಳುವ ಇರಾದೆಯೇನು ಇಲ್ಲ. 25-30ಕ್ಕೆ ವಾನಪ್ರಸ್ಥವಾ ಎನ್ನಬೇಡ... ಆ ಬಿಳಿಯ ಹಿಮದಲ್ಲಿ ಮುಳುಗಿ ,ಭಾನುವಿನುದಯ ಕಾಯುತ್ತಾ ಕುಳಿತಿರಲೆಷ್ಟು ಮುದ.


ಜೀವ ಕೈಬೀಸಿ ಕರೆಯುತ್ತದಲ್ಲ? ತಲೆ ತುಂಬಾ ಹಿಮಸೋಕಿ ,ಮೈತುಂಬಾ ಹಿಮಗಾಳಿ ಆವರಿಸಿ 'ಮನೆಯೇ ದೇಗುಲ' ಅನ್ನುವ ಫೀಲ್ ಕೊಡುತ್ತದಲ್ಲ ,ಅಲ್ಲಿದೆ ಜೀವವನ್ನ ನೋಡುವ ಬಗೆ ...ಜೀವನವನ್ನ ಪ್ರೀತಿಸುವ ಕಲೆ . ಸುಯ್ಯೋ ಭರ್ರೋ...ಎಂದು ಬೀಸುವ ಗಾಳಿಯೇನಿರದೆಂದು ಭಾವಿಸಿದ್ದೆ .. ಆದರೆ ನಮ್ಮ ಮನೆಯಿದುರಿನ ಮಲ್ಲಿಗೆಯ,ಸಂಪಿಗೆಯ ಕಂಪು ಹೊತ್ತು ತರುವ ತಂಗಾಳಿಯಂತು ಅಲ್ಲ ಅದು ಬಿಡು. ಕೊರೆಯುವ ಚಳಿಯಲ್ಲಿ ಹೇಗಿರುವದೆನ್ನುವ ಚಿಂತೆ ಬಿಡು ...ಬೆಚ್ಚನೆ ಕೋಟುಗಳಿದ್ದಾವಲ್ಲ .. ತೊಟ್ಟ ನಿಲುವಂಗಿಗಿಂತ ಹೆಚ್ಚು ಬೆಚ್ಚಗಿಡುವ ಭಾವಗಳಿದ್ದಾವಲ್ಲ! ಉದ್ದನೆಯ ಬೆಚ್ಚನೆಯ ವಸ್ತ್ರ ತೊಟ್ಟು ಮೈ ಪೂರ್ತಿ ಅಂಗಿಯ ಒಳ ಹೊಕ್ಕಿಸಿ , ನಮಗೇ ಅರಿವಿಲ್ಲದಂತೆ ದಿವ್ಯಲೋಕದಲ್ಲ್ಲಿ ಮುಳುಗುವ ಬಗೆ ಅದು, ಮುಳುಗಬಾರದೆಂದು ಓಶೋ ಎಲ್ಲೋ ಒಂದು ಕಡೆ ಹೇಳುತ್ತಾರೆ ,ತೇಲಬೇಕಂತೆ .. (ನಶೆಯಿಂದಲೋ ,ಉಷೆಯಿಂದಲೋ ಅವರಿಗೇ ಗೊತ್ತು!)

(ಕೈಲಾಸಕ್ಕೆ ಹತ್ತಿರವಂತೆ , ಪಾರ್ವತೀ ಪರಮೇಶ್ವರರನ್ನ ಒಮ್ಮೆ ಭೇಟಿ ಮಾಡಬೇಕು , ಜಗತ್ತಿನ ತಂದೆ ತಾಯಿಯರಲ್ಲವ ,ಕೇಳಿದ್ದೆಲ್ಲ ಕೊಡುವ ಆ ಪರಶಿವಗೆ, ಶಿವೆಗೆ ನಮಿಸಬೇಕು ,ಯಾಕೆ ಗೊತ್ತಾ ಇಂತಹ ಚಳಿಯಲ್ಲೂ ಬೆಚ್ಚನೆಯ ಉಡುಗೆಯಿಲ್ಲದೇ ಇಷ್ಟು ದಿನ ‘ಅದು ಹ್ಯಾಗೆ ಇದ್ಯಪ್ಪ ಶಿವ’ ಎನ್ನುವ ತರದ ಒಂದು ಚಿಕ್ಕ ಸಂದರ್ಶನ ಮಾಡಿ ಕಾಪೀ ರೈಟ್ ನಿಂಗೆ ಕೊಡ್ತೀನಪ್ಪ...)

ಬದುಕುವದಕ್ಕೊಂದು ಕೆಲಸ, ಕೆಲಸವಾದ ನಂತರ ಸಂಸಾರ ,ತಲೆಯ ಮೇಲೊಂದು ಸೂರು ,ಹಾಹಾ ... ಎಷ್ಟೋ ನನ್ನ ಸ್ನೇಹಿತರಿಗೆಲ್ಲ ಬರುವದು ಇಂತಹ ಸೆಟ್ಲ್ ಆಗುವಂತಹುದೇ ಉಪಾಯಗಳು ... ಓಹೋ ನೀನು ಭಿನ್ನಾನ ಅಂತ ಕೇಳ್ತೀಯಲ್ಲಾ, ಹಮ್...ಅಲ್ಲ. ಮನೆಯಾಯ್ತು ,ಮದುವೆ ಆಯ್ತು ಮಕ್ಕಳಾಯ್ತು ,ಇನ್ನೇನಪ್ಪ ನಿನ್ನ ಜೀವನ ಅಂತ ಮೊನ್ನೆ ಒಬ್ಬ ಸ್ನೇಹಿತ ಮತ್ತೊಬ್ಬ ಸ್ನೇಹಿತನಿಗೆ ಹೇಳುತ್ತಿದ್ದ,... ಅಲ್ಲೇ ಇದೆ ಉತ್ತರ ನೀನು ಹುಡುಕಿಕೊಳ್ಳಬೇಕಷ್ಟೇ . 'ಎಲ್ಲೋ ಹುಡುಕಿದೆ ಇಲ್ಲದ ದೇವರ, ಕಲ್ಲು ಮಣ್ಣಿನ ಗುಡಿಯೊಳಗೆ…' ಈ ಸ್ಥಿತಿಯಲ್ಲಿ ನಾವಿದ್ದೇವಲ್ಲ,ತೀರಾ ಸೆಂಟೀ ಎನ್ನಬೇಡ..

ಕಾಡು ಕರೆಯುವ ವಯಸ್ಸೇನೂ ಅಲ್ಲ,ಯಾಕೋ ಮನೆಯಿಂದ ಒಂದಿಷ್ಟು ದಿನದೂರವಿರ ಬೇಕೆನಿಸಿದೆ....ಗಿಜಗುಡುವ ಗಲಾಟೆಯಿಂದ ದೂರ ಸಾಗಬೇಕೆನಿಸಿದೆ. ತಣ್ಣನೆಯ ಗಾಳಿಯನ್ನ ಉಸಿರ ತುಂಬಾ ತುಂಬಿಸಿಕೊಳ್ಳಬೇಕೆನಿಸಿದೆ. ಜೀವಕ್ಕಾದ ತಲ್ಲಣ ತಣಿಸಬೇಕಿದೆ. ಹಾಂ, 'ನಾನೇರಿದ ಎತ್ತರಕ್ಕೆ ನೀನು ಏರಬಲ್ಲೆಯಾ?' ಎನ್ನುವ ಸವಾಲೊಡ್ಡಿ ಗಟ್ಟಿ ನಿಂತಿದೆಯಲ್ಲ ಹಿಮಾಲಯ,ಅದು ನಂಗೊಂದು ಸ್ಪೂರ್ತಿ .... ಆವತ್ತು ನೀನೂ ಹಾಗೆ ಹೇಳಿದ್ದೇಯಲ್ಲ, ಹ್ಮ್ ..ನಿನ್ನ ಮಟ್ಟಕ್ಕೆ ಏರುವಷ್ಟು ಸುಲಭವಲ್ಲವೆಂದು ಎಂದೋ ಗೊತ್ತಿತ್ತು ನನಗೆ .... ಪ್ರಯತ್ನಿಸುವದರಲ್ಲಿ ತಪ್ಪೇನೂ ಇಲ್ಲ ಅಲ್ಲವ? ನಾನು ನಿನಗಿಂತ ಚಿಕ್ಕವಳು ಎನ್ನುವ ಸಮಝಾಯಿಸಿ ಇದೆಯಲ್ಲ. ಒಬ್ಬಳೇ ಹೇಗೆ ನಿಭಾಯಿಸುತ್ತೇನೋ ಎನ್ನುವ ಭಯವ..?ಆ ಹಿಮಾಲಯದಲ್ಲಿ ನನ್ನಂತ ಹಲವು ಚಾರಣಿಗರಿದ್ದಾರಲ್ಲ.ಹಾಗೂ ಒಂದು ದಿನ ಆಗುವದೇ ಇಲ್ಲ ಎಂದು ಅನ್ನಿಸಿದ ದಿನ ತಿರುಗಿ ಬಂದು ಬಿಡುತ್ತೇನೆ... ಅಲ್ಲಿಯವರೆಗೆ ಮನೆಯ ಕಡೆ ಜೋಪಾನ..!

12 ಕಾಮೆಂಟ್‌ಗಳು:

ಪಾಚು-ಪ್ರಪಂಚ ಹೇಳಿದರು...

Hey Shwetha,

Good write up, adashtu bega hintirugi baaa, nanna photo blog mugste heLi promise madidde nenpirli :-)

Regards
Pachu Anna

ಕ್ಷಣ... ಚಿಂತನೆ... ಹೇಳಿದರು...

ಚೆನ್ನಾಗಿದೆ..ಆಲೋಚನೆ...

ಮನಸಿನಮನೆಯವನು ಹೇಳಿದರು...

Shweta,

ತುಂಬಾ ಸುಂದರವಾಗಿದೆ..
ಅಲ್ಲರೀ,ಅಂತ ಚಳಿಲಿ ಶಿವ ಹೇಗಿದ್ದ ಅಂತ ಶಿವೆ ಇರುವುದ ನೋಡಿಯೂ ತಿಳೀಲಿಲ್ವ..
ಸರಿ ಕೇಳಿ ಆದ್ರೆ ಆಕೆ ಇರುವಾಗ ಕೇಳಬೇಡಿ ತುಂಬಾ ನಾಚ್ಕೊತಾಳೆ..

shridhar ಹೇಳಿದರು...

ಶ್ವೇತಾ,
ಹಿಮಾಲಯಕ್ಕೆ ಏರ ಬೇಕು ಅನಿಸ್ತಾ ಇದೆ ಕಣೋ ಅನ್ನುತ್ತಾ ಊರ ಕಡೆ ಹೆಜ್ಜೆ ಹಾಕಿದ ಹಾಗೆ ಇದೆ.
ಮಜಾ ಮಾಡು ಊರಲ್ಲಿ. ಬಂದಮೇಲೆ ಎನಾದ್ರು ಹೊಸ ವಿಷ್ಯ ಇದ್ರೆ ಬ್ಲೊಗ್ ಗೆ ಹಾಕಮ್ಮಾ . :)

ಬರಹ ಚೆನ್ನಾಗಿದೆ.

Raghu ಹೇಳಿದರು...

I do like trekking..come back with nice article...
Nimmava,
Raaghu.

Shweta ಹೇಳಿದರು...

ಹಾಹಾ...ಥ್ಯಾಂಕ್ ಯೂ ಪಾಚು ಅಣ್ಣ...

ಇಲ್ಲೇ ನಿನ್ ಪೋಟೋ ಸೈಟ್ ಮುಗಿಸಲಿಕ್ಕೇ ಬೇಕು ....ಮತ್ತದೇ ಕೆಲಸ ಮತ್ತದೇ ಗೌಜು ,ಮತ್ತದೇ ಬೆಂಗಳೂರು...ಅಂದಹಾಗೆ ,ತಿರುಗಿ ಬಂದು ಬಿಟ್ಟೆ ಮರಾಯ..

Shweta ಹೇಳಿದರು...

ಪ್ರತಿಕ್ರಿಯಿಸಿದ ತಮಗೆಲ್ಲರಿಗೂ ಕೃತಜ್ಞತೆಗಳು ...
ಹಿಮಾಲಯದ ಚಾರಣಕ್ಕೆ himalaya expedition ಎಂದು ಕರೆದರೆ ಸೂಕ್ತ ಅಲ್ಲವ?

ಜಲನಯನ ಹೇಳಿದರು...

ಶ್ವೇತಾ ಇದು ನನ್ನ ಮೊದಲ ಭೇಟಿನಾ...ಹೌದು ಹೇಗೆ ಮಿಸ್ ಆಯ್ತು ನಿಮ್ಮ ಬ್ಲಾಗ್...ಸೈಂಟಿಸ್ಟ್ ಅಲ್ವಾ..ಮರೆಗುಳಿತನ ಬಿಟ್ಟದ್ದೇ ಪ್ರೊಫೆಸರ್ ಮತ್ತೆ ನಮಗೆ..ಹಹಹ.....ಚನ್ನಾಗಿದೆ..ಲೇಖನ....

Shweta ಹೇಳಿದರು...

Azad sir,
illa neevu modalella bandiddeeri ..

dhanyavaadagalu .
nimma blog nalli comment maadalu aguttilla..settings annu svalpa change maadutteera?

ವಾಣಿಶ್ರೀ ಭಟ್ ಹೇಳಿದರು...

good writing

pls visit

www.vanishrihs.blogspot.com

Prashanth ಹೇಳಿದರು...

ನಿಮ್ಮ ಕನ್ನಡ ಭಾಷೆಯ ಶೈಲಿ ಅತ್ಯಂತ ಅತ್ಮೀಯವೆನಿಸುವಂತಿದೆ. ಉತ್ತಮ ಬರವಣಿಗೆ!

ಯಜ್ಞೇಶ್ (yajnesh) ಹೇಳಿದರು...

ಶ್ವೇತ,

ಚೆನ್ನಾಗಿ ಬರೆದಿದ್ದೀಯಾ. ಒಳ್ಳೆಯ ಲೇಖನ. ಹೀಗೆ ಬರಿತಾಯಿರು

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...