ಸೋಮವಾರ

ಒಂದು ಹಳೆಯ ಯೋಚನೆಗೆ ಹೊಸ ಓಘ

Ping the IP, Follow The Packet, Leave the Rest!



ಮೊನ್ನೆ ನನ್ನ ಚಿಕ್ಕಪ್ಪನೊಬ್ಬ ಕರೆ ಮಾಡಿ ಬೆಂಗಳೂರಿನ ಬಗ್ಗೆ ಬಹಳ ವಿಚಾರಿಸುತ್ತಿದ್ದ. ...

ಬೆಂಗಳೂರಲ್ಲಿ ಮನುಷ್ಯರು ಇದ್ದಾರೋ ?

ನನಗೆ ಸಿಕ್ಕಾಪಟ್ಟೆ ನಗು ಬಂತು , ಇದ್ಯೇನಪ್ಪ ಬುಡಕ್ಕೆ ಕತ್ತರಿಯಲ್ಲ ಎಂದು .
ನಾನು ಇಲ್ಲೇ ಇದ್ದೇನಪ್ಪ ಎಂದು ಸುಮ್ಮನಾದೆ..
ಏನಮ್ಮಾ ಅಲ್ಲಿನ ಜನರು ಊರುಹೇಗೆ?.
ಈ ಊರಿನ ವಿಶೇಷವೇನೆಂದರೆ, ಇಲ್ಲಿನವರಿಗೆ ಇಂಗ್ಲೀಷು ಗೊತ್ತು :)
ಅದೇ ,ಡೆಡ್ ಎಂಡ್ ,ರೈಟು,ಲೆಫ್ಟು,ಫ್ಲಾಟು,ಡಿಸ್ಕೌಂಟು,
ಅಲ್ಲಮ್ಮ ಅಲ್ಲಿಯೂ ಬದುಕು ಸಾಗುತ್ತಲ್ಲ?
ಹಾಹಾ ಹೆಹೆ .. ಇಲ್ಲಿ ಬದುಕು ಓಡುತ್ತೆ. ನಿಲ್ಲದೆಯೇ, ಹಿಂದಿನ ನೆನಪಿಲ್ಲದೆಯೇ, ನಿನ್ನೆಯ ಹಂಗಿಲ್ಲದೇ,ಯಾರಿಗೂ ಕಾಣದೆಯೇ; ಹಾಂ.ಅಲ್ಲ ಚಿಕ್ಕಪ್ಪ .....ಹೊಗೆ,ಗಿಜಿಗುಡುವ ರಸ್ತೆ,ನಿಲುಕದ ಗಲಾಟೆ, ಅಯ್ಯಪ್ಪ!...ಸಾಕು ಇದರ ಸಹವಾಸ , ಎನ್ನುವಷ್ಟು ನನ್ನ ನೆಮ್ಮದಿ ಕೆಡಿಸಿದೆ.
ಇರ್‍ಲಿ ಬಿಡಮ್ಮ ಅದು ಮುಗಿಯದ ಕತೆ.ಹ್ಮ್.
ಚಿಕ್ಕಪ್ಪ ನಿಂಗೊತ್ತಾ?
'ಉನ್ನತವಾದ ಶಿಖರ ಗಳು ನಿರ್ಮಾನುಷ ವಾದುದು', ಧನ,ಜ್ಞಾನ,ಇವೆರಡೂ ಅಥವಾ ಜ್ಞಾನ ಧನ ಸಂಚಾಯವಾದಂತೆ ಮನುಷ್ಯ ಸಾಮಾನ್ಯರಿಂದ ದೂರವಾಗುತ್ತಾ ಹೋಗುತ್ತಾನಂತೆ! ಅಸಲು, ಆತನಿಗೆ ಮೂಡ್ ಇರೋದಿಲ್ಲ :)!

ಈ ನುಡಿ ನನ್ನನ್ನು ತುಸು ಕೆಣಕಿದ್ದು ನಿಜ. ಜೀವನದಲ್ಲಿ ಮಾನಸಿಕ ಔನತ್ಯ ತಾಳ್ಮೆ ಯನ್ನು ನಿರೀಕ್ಷಿಸಿದಂತೆ, ಬೌದ್ಧಿಕತೆ ವಾಸ್ತವದ ಚಿತ್ರಣ ಕೊಡುತ್ತೆ. ಅಲ್ಲವ?
ಮಾನಸಿಕ ಔನತ್ಯ ಬುದ್ಧಿಯ ಭ್ರಮೆ ಸರಿದಾಗ ಬಹು ನಿಚ್ಚಳ. ಆಗ ಮನಕ್ಕೆ ಸಿಗುವ ಕುಶಿ, ವೌ ವಾವ್....Mega Martu ಕೊಡೋಲ್ಲ, Brand Factoryಲು ಸಿಗೋಲ್ಲ...

ನನ್ನ ಸ್ನೇಹಿತರೊಬ್ಬರು 'ಮಾಫಲೇಷು ಕದಾಚನ'ಕ್ಕೆ ಒಂದು ಟೆಕ್ನಿಕಲ್ ಡೆಫಿನೇಶನ್ ಕೊಟ್ಟಿದ್ದರು ;Ping the IP,Follow The Packet, Leave the Rest ....IP,Ping,Packet etc ಕಂಪ್ಯೂಟರ್ ನೆಟ್‌ವರ್ಕ್ನಲ್ಲಿ ಬರುವ ಕಾನ್ಸೆಪ್ಟ್ ಗಳು ಇವೆಲ್ಲ...

Because, Life is the Way you see it!!


ನಮ್ಮನ್ನು ನಾನು ಈಜಲು ಬಿಡಬಾರದು , We should float !!ಲೈಫ್ ನಲ್ಲಿರೋ ಕುಶಿ ಆವಾಗ ಕಾಣಸಿಗುತ್ತೆ..ಹಾಂ ಕಾಣೋಕೆ ಎಲ್ಲೂ ಹುಡುಕೋ ಅವಶ್ಯಕತೆ ಇಲ್ಲ.ನಮ್ಮಲ್ಲೇ ಇರುತ್ತೆ...ಅದನ್ನ ಹುಡುಕೋದೇ ಜೀವ್ನವಾ

11 ಕಾಮೆಂಟ್‌ಗಳು:

ಮನಮುಕ್ತಾ ಹೇಳಿದರು...

''Life is the way you see it.'' .
ವಾಕ್ಯ ತು೦ಬಾ ಹಿಡಿಸಿತು.ಬರಹ ಚೆನ್ನಾಗಿದೆ.

ಕ್ಷಣ... ಚಿಂತನೆ... ಹೇಳಿದರು...

ಕೊನೆಯಲ್ಲಿ ಬರೆದಿರುವ ಆಂಗ್ಲ ವಾಕ್ಯ ಅನೇಕಾರ್ಥದಿಂದ ಕೂಡಿದೆ. ಪ್ರತಿಯೊಬ್ಬರಿಗೂ ಒಂದೊಂದು ವಿಧದಲ್ಲಿ ಜೀವನದ ಹಾದಿಯಿದೆ....

ಲೇಖನ ಚೆನ್ನಾಗಿದೆ.

ಗೌತಮ್ ಹೆಗಡೆ ಹೇಳಿದರು...

kelavu kade nimma bhaasheya prayoga athava padagala balake tumbaa chennagide. e lekhanada vishaya kooda chennagide.saralavaagi kandaroo aalavaada vichara illide..:)

ಜಲನಯನ ಹೇಳಿದರು...

ಶ್ವೇತಾ...ನಿಮ್ಮ ಲೇಖನ ನೋಡಿ...ನನ್ನ ಸ್ನೇಹಿತನೊಬ್ಬ ಸಮುದ್ರಶಾಸ್ತ್ರದ ವಿದ್ಯಾರ್ಥಿಗಳ ಸೆಮಿನಾರ್ ಕೊಡುವಾಗ ಕನ್ನಡದಲ್ಲಿ ಕೊಡ್ತೀನಿ ಅಂತ ಪ್ರಾರಂಭಿಸಿ...ಒಂದೇ ನಿಮಿಷದಲ್ಲಿ ಇಂಗ್ಲೀಷಿಗೆ ಬಂದಿದ್ದ...
ಈ ದಿನ ನಾನು ಓಶ್ಯಾನಿಕ್ ಕರೆಂಟ್ಸ್ ಬಗ್ಗೆ ನಿಮ್ಮ ಮುಂದೆ ಪ್ರೆಸಂಟೇಶನ್ ಮಂಡಿಸ್ತಾ ಇದ್ದೀನಿ...ನಮ್ಮ ಪ್ಲಾನೆಟ್ ಸುಮಾರು ೭೦ ಪರ್ಸೆಂಟು ನೀರಿಂದ ಕೂಡಿದೆ..ಅದರಲ್ಲಿ ಸಾಲ್ಟ್ ವಾಟರ್...ಹೀಗೆ.......
ಚನ್ನಾಗಿದೆ ನಿಮ್ಮ ಲೇಖನ

Shweta ಹೇಳಿದರು...

@ಮನಮುಕ್ತಾ..ಥ್ಯಾಂಕ್ ಯೂ ಮನಮುಕ್ತಾ.....ನಿಮ್ಮ ಬ್ಲೋಗಿನ ಹೆಸರು ತುಂಬಾ ಚೆನ್ನಾಗಿದೆ....

Shweta ಹೇಳಿದರು...

@ಚಂದ್ರು ಸರ್,
ಧನ್ಯವಾದಗಳು ,ನಿಮ್ಮ ಸಲಹೆ ,ಪ್ರೋತ್ಸಾಹ ತುಂಬಾ ಅಗತ್ಯ...

Shweta ಹೇಳಿದರು...

@ಗೌತಮ್
ಥ್ಯಾಂಕ್ ಯೂ ಗೌತಮ್,ಇನ್ನೂ ಹೆಚ್ಚು ಅದೇ ತೆರನಾದ ಶುದ್ದ ಪದಗಳ ಬಳಕೆ ಮಾಡಿದರೆ ಹೇಗೆ?

Shweta ಹೇಳಿದರು...

@ಜಲನಯನ ಸರ್,

ನಿಮ್ಮ ಬಗ್ಗೆ ನೋ ಕೊಮೆಂಟ್ಸ್...
ನಿಮ್ಮ Sense Of Humour ಬಗ್ಗೆ ನನಗೆ ತುಂಬಾ ಮೆಚ್ಚುಗೆ ಇದೆ..ನಿಮ್ಮ ಎಲ್ಲ ಬ್ಲೋಗನ್ನು ನಾನು ಓದಿದ್ದೇನೆ .ಕೊಮೆಂಟಿಸುವ ಹವ್ಯಾಸ ಸ್ವಲ್ಪ ಕಡಿಮೆ...:)
ಧನ್ಯವಾದಗಳುಸರ್...

Sri ಹೇಳಿದರು...

Hmmm - Because ,Life is the Way you see it!! gud gud

Unknown ಹೇಳಿದರು...

Hi shweta,
your article is very simple but effective..
I like it.
Keep it up.

Shweta ಹೇಳಿದರು...

Hi Vinuta,
Thank you ..are you from Kolagi?

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...