ಗುರುವಾರ

ಮಾತು ಕೇಳೋ ಮನಸು ಬೇಕಿತ್ತಲ್ಲಾ ..

ಹೌದು ಎಲ್ಲರಿಗೂ ಹಾಗೆ ಅನ್ನಿಸಿರುತ್ತಲ್ಲ ಎಸ್ಟೋ ಸಾರೇ....
ಮೂಡ್ /ಮನಸ್ತಿತಿ ಕೈ ಕೊಡಲು ಕಾರಣಗಳೇನು ?
೧.ಅವಿಶ್ರಾಂತ ಜೀವನ ಶೈಲಿ
೨ .ಪೋಷಕ ಆಹಾರದ ಕೊರತೆ
೩ .ಅನಾರೋಗ್ಯಕರ ಜೀವನ ಕ್ರಮ
೪.ಬಿರುಕು ಬಿಡುತ್ತಿರುವ ಸಂಬಂಧಗಳು
೫.ಆಲಸ್ಯ

ವಿಶ್ರಾಂತಿ ಎಂದರೆ ೩-೪ ತಾಸು ನಿದ್ದೆ ಮಾಡುವದಲ್ಲ..೬-೭ ಗಾಢ ನಿದ್ರೆ ಬೇಕೇ ಬೇಕು .ಅದೆಲ್ಲ ಸರಿ ನಾನು ದಿನಕ್ಕೆ ೭ ಗಂಟೆ ನಿದ್ರಿಸುತ್ತೇನೆ ..ನೋ... ವಿಶ್ರಾಂತಿ ಅಂದರೆ ಮನಸ್ಸಿಗೆ ಸಮಾಧಾನ ಕೊಡುವದು ,ಏನನ್ನು ವಿಚಾರ ಮಾಡದ ಒಂದು ಸ್ಥಿತಿ .ಯೋಗ ನಿದ್ರೆ ಅಂದರು ತಪ್ಪಿಲ್ಲ.ಅತ್ತ ಇತ್ತ ನೋಡುವಲ್ಲಿ ವೇಸ್ಟ್ ಆಗುವ ನಮ್ಮ ಎನರ್ಜಿ ಯನ್ನು ಸೇವ್ ಮಾಡಿ ಒಂದು ಕಡೆ ಕೂಡಿಇಡುವದು .... ಧಾವಂತ ವಿಲ್ಲದ ಸಾವಧಾನದ ಬದುಕು ಇಂದು ನಮ್ಮಲ್ಲಿ ಎಸ್ಟು ಜನಕ್ಕಿದೆ?
ಆಗೆಲ್ಲ ನಮ್ಮ ಮೂಡ್ ಹೇಳುತ್ತೆ ,ನನಗೆ ರೆಸ್ಟ್ ಬೇಕು ...ನಾನು ಕೆಲಸ ಮಾಡೋಕೆ ರೆಡೀ ಇಲ್ಲಪ್ಪ

ಪೋಷಕ ಆಹಾರದ ಕೊರತೆ ಇದ್ದಾಗ ,ನಮ್ಮ ಬ್ರೈನ್ ಗೆ ಆಕ್ಸಿಜನ್ ಕೊರತೆ ಆಗಿದ್ದಾಗ ಎಲ್ಲ 'ಮೂಡ್' ಇಲ್ಲ ಎನ್ನುತ್ತೆ...ಪೋಷಕ ಆಹಾರದ ಲಿಸ್ಟ್ ನಲ್ಲಿ ಕುರ್ಕುರೆ,ಗೊಲ್‌ಗುಪ್ಪ ,ಪಾನಿಪೂರಿ,ನೂಡಲ್ಸ್ , ಬರ್ಗರ್ ...ಎಕ್ಸೆಟ್ರ , ದಂತಹ ಜಂಕ್ ಫುಡ್ ಬರೋದಿಲ್ಲ....ಗೊತ್ತಲ್ಲ....?
ಹಣ್ಣು ಹಂಪ್ಲು ಎಲ್ಲ ಚೆನ್ನಾಗಿ ತಿನ್ನಿ ,ಹೊಟ್ಟೆ ತುಂಬಾ ನೀರು ಕುಡೀರಿ ,ಚಿಕ್ಕದೊಂದು ವ್ಯಾಯಾಮ ಮಾಡಿ ,ಗಡ ಗಡನಡುಗುವ ಚಳಿಯಲ್ಲಿ ಬೆಚ್ಚಗೆ ಕೋಟ್ ಹಾಕಿಕೊಂಡು ವಾಕ್ ಮಾಡಿ .....ಆ............. ಎನ್ನುತ್ತಾ ಈಸ್ಟಗಲಕ್ಕೆ ಬಾಯಿತೆರೆದು ಹೊರಬರುವ ಸುರುಳಿ ಸುರುಳಿ ಹೊಗೆಯನ್ನು ನೋಡುತ್ತಾ ರಿಲ್ಯಾಕ್ಸ್ ಆಗಿ ,
ಅಲ್ಲಾರಿ ...,ಫಿಟ್ ಅಂಡ್ ಹೆಲ್ತ್ದಿ ಆಗಿದ್ರೆ ಮೂಡ್ ಡ್ಯಾನ್ಸ್ ಮಾಡದೇ ಎಲ್ಲಿಗೆ ಹೋಗುತ್ತೆ?

ರೈಟ್ ಲೈಫ್‌ಸ್ಟೈಲ್ ಜೊತೆಗೆಒಂದಿಸ್ತು ವ್ಯಾಯಾಮ ,ಹೊತ್ತು ಹೊತ್ತಿಗೆ ಬ್ರೇಕ್‌ಫಾಸ್ಟ್ ,ಲಂಚ್ ,ಡಿನ್ನರ್,ಇದೆಲ್ಲ ಇದ್ರೆ ಅನಾರೋಗ್ಯಕರ ಜೀವನಕ್ರಮ ಹೆಂಗಾಗುತ್ತೆ?
ನಿಜಕ್ಕೂ ನಿಮ್ ಜೀವ್ನದ್ ಮೇಲೆ ನಿಮ್ಗೆ ಪ್ರೀತಿ ಇದೆಯಲ್ವಾ ? ಪ್ರೂವ್ ಇಟ್! ಮೂಡ್ ಸಾತ್ ಕೊಡುತ್ತೆ ಕಣ್ರೀ...

ನಂದೇ ಒಂದು ಉದಾಹರಣೆ ಕೊಡ್ತೀನಿ ...ನಂದು ನ್ಯೂಕ್ಲಿಯರ್ ಫ್ಯಾಮಿಲೀ.,ಅಜ್ಜ ,ಅಜ್ಜಿ ಹೆಸ್ರು ಕೇಳಿದೀನಿ ..ಜೊತೆಗೆ ಅಕ್ಕ ತಂಗೀರು ಯಾರು ಇಲ್ಲ...ಮನೆಯಲ್ಲಿ ಒಂದು ಚೂರು ಹೆಚ್ಚು ಕೇರ್ ,ಕೇಳಿದ್ದೆಲ್ಲ ಬಂದು ಬಿಡತ್ತೆ,,,,,. ಯಾರ ಮೇಲೆಯೂ ಡಿಪೆಂಡ್ ಆಗುವ ಕಷ್ಟ ಇಲ್ಲ .....ಸೋ ಯಾರ್ಜೋತೆಗೂ ಅಡ್ಜಸ್ಟ್ ಆಗೋಕೆ ಬರೋಲ್ಲ...ಆವಾಗೆಲ್ಲ ನಂಗೆ ಮೂಡ್ ಹಾಳಾಗುತ್ತೆ..ನಾನು ಹೇಳಿದ್ದೆ ಆಗಬೇಕು ...ಇದು ನನ್ನ ಹಟ.......

ಚೇಂಜ್ ಅನ್ನೋದು ಮೂಡ್ ಗೆ ತುಂಬಾ ಹೆಲ್ಪ್ ಮಾಡುತ್ತೆ ..... ಹೊಂದಾಣಿಕೆ ಜೀವನಕ್ಕೆ ಒಂದು ಜೀವ ಕೊಡುತ್ತಂತೆ ...(ನಂಗೆ ಗೊತ್ತಿಲ್ಲ ಬಿಡಿ ) ಫ್ರೆಂಡ್ಸ್ ಜೊತೆ ಶೋಪಿಂಗ್ ಹೋಗೋದು ,ಮಾರ್ಕೆಟ್ ಗೆ ಹೋಗಿ ತರಕಾರಿ ತರೋದು (ಅತ್ತೆಗೆ, ಗಂಡನಿಗೆ ಅಡುಗೆ ಬರುತ್ತಲ್ಲ ,ಜೀವ್ನಾ ತುಂಬಾ ಸಿಂಪಲ್.!) ನಾದಿನಿಯ ಮಗುವಿನ ನಾಮಕರಣಕ್ಕೆ ಹೋಗಿ ಅಲ್ಲಿ ಎಲ್ಲರ ಜೊತೆ ಬೇರೆಯೋದು ...ಮುಖ್ಯವಾಗಿ ನಾವು ಸಮಾಜ ಜೀವಿ ಎಂಬ ಸತ್ಯ ವನ್ನು ಮರೆಯದೇ ಇದ್ಬಿಟ್ರೆ ಮೂಡ್ ಗು ಚೇಂಜ್ ಸಿಕ್ಕುತ್ತೆ, ಸಂಬಂಧಗಳು ಸುಧಾರಿಸುತ್ತೆ ಅಲ್ವಾ?ಮಾಡುವದನ್ನ ಹ್ಯಾಪೀ ಆಗಿ ಮಾಡಿ ಅಸ್ಟೆ

ಕಳ್ಳ ಬೀಳೊ ಮನಸಿಗೆ ನನ್ ಹತ್ರ ಯಾವ ಮೆಡಿಸಿನ್ ಇಲ್ಲಪ್ಪ....ನಿಮ್ಮ ಮೂಡ್ ಗೆ ಹೇಳಿ ,ಹೇ ನಾನು ಹೇಳಿದ್ದನ್ನ ಚೂರು ಕೇಳಪ್ಪ
ಜಾಣ ... ...
ಹೌದಲ್ವಾ ..ಮಾತು ಕೇಳೋ ಮನಸು ಬೇಕಿತ್ತಲ್ಲ.....?!!

7 ಕಾಮೆಂಟ್‌ಗಳು:

ದಿನಕರ ಮೊಗೇರ ಹೇಳಿದರು...

ಶ್ವೇತ ಮೇಡಂ,
ನಿಮ್ಮ ಬ್ಲಾಗ್ ಗೆ ಬರ್ತಾ ಇರೋದು ಮೊದಲನೇ ಸಾರಿ..... ಕೊನೆಯ ಎರಡು ಪೋಸ್ಟ್ ಓದಿದೆ.... ತುಂಬಾ ಚೆನ್ನಾಗಿವೆ.... ನನ್ನ ಹೆಂಡತಿ ಯಾವಾಗಲು, ಮೂಡ ಇಲ್ಲ ಇಲ್ಲ ಅಂತಾ ಇರ್ತಾಳೆ..... ಅವಳಿಗೂ ಓದಲು ಹೇಳಿದೆ..... ಓದಿದ ನಂತರ '' ಹೌದಲ್ಲಾ'' ಅಂದಳು..... ತುಂಬಾ ಚೆನ್ನಾಗಿದೆ... ನೀವು ಮನಶ್ಯಾಸ್ತ್ರದಡಾಕ್ಟರಾ.....

ದಿನಕರ ಮೊಗೇರ ಹೇಳಿದರು...

ಶ್ವೇತ ಮೇಡಂ,
ನಿಮ್ಮ ಬ್ಲಾಗ್ ಗೆ ಬರ್ತಾ ಇರೋದು ಮೊದಲನೇ ಸಾರಿ..... ಕೊನೆಯ ಎರಡು ಪೋಸ್ಟ್ ಓದಿದೆ.... ತುಂಬಾ ಚೆನ್ನಾಗಿವೆ.... ನನ್ನ ಹೆಂಡತಿ ಯಾವಾಗಲು, ಮೂಡ ಇಲ್ಲ ಇಲ್ಲ ಅಂತಾ ಇರ್ತಾಳೆ..... ಅವಳಿಗೂ ಓದಲು ಹೇಳಿದೆ..... ಓದಿದ ನಂತರ '' ಹೌದಲ್ಲಾ'' ಅಂದಳು..... ತುಂಬಾ ಚೆನ್ನಾಗಿದೆ... ನೀವು ಮನಶ್ಯಾಸ್ತ್ರದಡಾಕ್ಟರಾ.....

Shweta ಹೇಳಿದರು...

ಧನ್ಯವಾದಗಳು ಸರ್ ,,,
ಏನೋ ನನಗೆ ತೋಚಿದ್ದನ್ನ ಬರೆದೆ ಅಸ್ಟೆ ,ನಾನು ಯಾವ ಮನಸ್ಸಿನ ವೈದ್ಯನು ಅಲ್ಲ... ವ್ರತ್ತಿ ಇಂದ ಸಾಫ್ಟ್ವೇರ್ ಇಂಜೀನಿಯರ್..
ಮನಸ್ಸು ನನ್ನ ಮೆಚ್ಚಿನ ವಿಷಯ..
ಹೀಗೆ ಬರುತ್ತ ಇರಿ ಬ್ಲೋಗ್ ಗೆ ....

Uma Bhat ಹೇಳಿದರು...

ನಿಮ್ಮ ಬರೆಯುವ ಹವ್ಯಾಸಕ್ಕೆ ನನ್ನ ಮೆಚ್ಚಿಕೆಯೂ ಇದೆ.

ವಿದ್ಯಾ ದದಾತಿ 'ವಿನಯಂ' !! ಹೇಳಿದರು...

Chennagi barediddeeri Shwetha. Ishta aaytu.

-Vinay.

ಜಲನಯನ ಹೇಳಿದರು...

ಶ್ವೇತ...ಸಾಫ್ಟಿಗಳು ಸಾಫ್ಟ್ ಆಗಿ ಬರೀತಾರಂತೆ ಹೌದೇ ಅಂತ ಯಾರೋ ಕೇಳಿದ್ರು..? ಅದಕ್ಕೆ ಉದಾಹರಣೆ ಅಂತ ನಿಮ್ಮ ಬ್ಲಾಗ್ ತೋರಿಸ್ಲೇ...ಹಹಹ....‘ನನ್ನಾK‘ ಬರೀತಿದ್ದ ರಾಜ್ ಸಹಾ ಹೀಗೇನೇ... ತುಂಬಾ ಚನ್ನಗಿ ಬರೆದಿದ್ದೀರಿ...ಮುಂದುವರೀಲಿ ನಿಮ್ಮ ಲೇಖನದ ಅಭಿಯಾನ. ಹಾಗೇ ನನ್ನ ಬ್ಲಾಗ್ ಗೆ ಬೇಟಿ ನೀಡಿ. www.jalanayana.blogspot.com

ಮನಮುಕ್ತಾ ಹೇಳಿದರು...

ಚೆನ್ನಾಗಿ ಬರೀತೀರ ಶ್ವೇತಾ ಅವರೆ,
ನಿಮ್ಮ ಬರಹ ಹಿಡಿಸಿತು..
ಬರೆಯುತ್ತಿರಿ.

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...