ಶುಕ್ರವಾರ

ಜಸ್ಟ್  ಮಾತ್  ಮಾತಲ್ಲಿ........



ನಿನ್ನೆ ಸಂಜೆ ತುಂಬಾ ತುಂಬಾ ಚೆನ್ನಾಗಿತ್ತು. ರವಿ ಬೆಳಗೆರೆ,ಕನ್ನಡದ ಸುದೀಪ್ ,ಜಸ್ಟ್ ಮಾತ್ ಮಾತಲ್ಲಿ..ಎಂದು ಹಾಡುವ ರಘು ದೀಕ್ಷಿತ್, ಜೊತೆಗೆ ಕಾರ್ಯಕ್ರಮವನ್ನು ನಿರೂಪಿಸಲು ಬಂದ 'ಎವರ್ ಗ್ರೀನ್' ಅಪರ್ಣಾ..!ಎಲ್ಲ ನಮ್ಮ ಕಂಪನೀ ಯ ಆವರಣದಲ್ಲಿ ...!

ಕಾರಣ??
 ಐ ಟಿ ಆವರಣದಲ್ಲಿ ರವೀ ,ಸುದೀಪ್,ರಘು...
ನಮ್ಮಲ್ಲೂ ಕತೆ ,ಕವನ ಬರೆಯುವ ವರಿದ್ದಾರೆ ,ಒಳ್ಳೆಯ ಲೇಖಕರಿದ್ದಾರೆ ...ವೃತ್ತಿ ಬೇರೆ ಪ್ರವೃತ್ತಿ ಬೇರೆ ಅಷ್ಟೇ....
ವಿಸ್ಮಯ ಎನ್ನುವ ಕನ್ನಡ ಹಬ್ಬ ನಮ್ಮ ಕ್ಯಾಂಪಸ್ ನಲ್ಲಿ...

ನಿಜ ಹೇಳಲೇ ಬೇಕು ಎಂದರೆ ಹೇಳುತ್ತೇನೆ ಕೇಳಿ

ನಾನು ರವಿ ಯ ಓ ಮನಸೇಯಿಂದ (ನನ್ನ ಮೊದಲ ಉದ್ದನೆಯ ಲೇಖನ ಪ್ರಕಟ ವಾಗಿದ್ದು ಓ ಮನಸೇ ನಲ್ಲಿ !) ಆಗಾಗ ಒಳ್ಳೆಯ ಲೇಖನ ಗಳನ್ನ ಹೆಕ್ಕಿ ತೆಗೆದು ಓದುತ್ತಿದ್ದೆ.  ಆದರೆ ಬಹಳ ವರುಷಗಳಿಂದ ನನ್ನ ಪ್ರೀತಿಯ 'ಸುಧಾ' ಗೆ ಆತು ಕೊಂಡು ಬಿಟ್ಟಿದ್ದೆ. ಯಾಕೋ ಗೊತ್ತಿಲ್ಲ ಇಂದಿಗೂ ಬಿಟ್ಟಿಲ್ಲ.
ಮಯೂರ ,ಪ್ರಜಾವಾಣಿ ,ಡೆಕ್ಕನ್ ಹೆರಾಲ್ಡ್ ,ಸುಧಾ ,ವರ್ಷಕ್ಕೊಂದೆ ಬರುತ್ತಿದ್ದ ವಿಶೇಷ ಸಂಚಿಕೆ ಇವೆಲ್ಲ ನನ್ನ ಕನ್ನಡ್ಕ್ಕೊಂದು ಕ್ಲ್ಯಾಸಿಕ್ ಟಚ್ ಕೊಡುವಲ್ಲಿ ತುಂಬಾ ಸಹಾಯ  ಮಾಡಿದ್ದವು..ಬಂಡ್ಲ್ ಗಟ್ಟಲೆ ಸಣ್ಣ ಕತೆಗಳನ್ನ, ಬೇರೆ ಬೇರೆ ದೇಶದ ಕತೆಗಳನ್ನ ಟಾಲ್ ಸ್ಟಾಯ್ ನಂತಹ ಮಹಾನ್ ಲೇಖಕನ Anna Kerenina,'ವಾರ್ n ಪೀಸ್' ಕೃತಿಗಳನ್ನ ,'Just Lather That's All 'ಕತೆ  ಓದಿದ್ದು ಮಯೂರ ದಲ್ಲಿ .(ಮಯೂರ ದಲ್ಲಿ ಬರುತ್ತಿದ್ದ ಕ್ಲಾಸಿಕ್ ಶೈಲಿಯ ಸಣ್ಣ ಕತೆಗಳ ಅಭಿಮಾನಿ ನಾನು) ..,ಅಮೃತ ಪ್ರೀತಂ ರಂತ ಲೇಖಕಿಯರ ( ಲೇಖಕರ) ನಿವೇದನೆಗಳನ್ನ.,ರಾಮಾಯಣ,ಮಹಾಭಾರತ, ದಂತಹವನ್ನ 'B K S ವರ್ಮ' ರ ಚಿತ್ರಗಳ ಸಮೇತ ಧಾರಾವಾಹಿಯಾಗಿ ಬಂದಿದ್ದನ್ನ ಓದಿದ್ದೆ..ನನ್ನ ಕಣ್ಮುಂದೆಯೇ ಮಹಾಭಾರತ ನಡೆಯುತ್ತಿದೆಯೇನೋ ,ನನ್ನ ಕಣ್ಮುಂದೆಯೇ ಸೀತೆಯ ಅಪಹರಣನಡೆಯಿತೇನೋ ಎನ್ನುವ ಮಟ್ಟಿಗೆ ಆ ಧಾರಾವಾಹಿಗಳು ನಮ್ಮ ಮಹಾನ್ ಕೃತಿಗಳ ದರ್ಶನ ಮಾಡಿಸಿದ್ದವು ..ಕೃಷ್ಣನ ಗೀತೋಪದೇಶ ನನ್ನ ಕಣ್ಮುಂದೆ ಇಂದಿಗೂ ಇದೆ...

  ಬನ್ನoಜೆ ಗೋವಿಂದಾಚಾರ್ಯ, ಕೃಷ್ಣ ಶಾಸ್ತ್ರಿ, ಜೊತೆಯಲ್ಲಿ ವಂಶೀ, ತುಶ್ವಿನು ,ನನ್ನ ಪಕ್ಕದ ಊರು ಸಾಗರದ ನಾಡಿಸೋಜ, ಮುಂತಾದವರೆಲ್ಲ ಜಗತ್ತು ನೋಡಲು ಶುರು ಮಾಡಿದ್ದ ನನಗೆ ಸಾತ್ ಕೊಟ್ಟಿದ್ದವು ..ನಾಡಿಸೋಜ ರಿಂದ (ಈಗರ್ಜಿಯ ಸುತ್ತಲಿನ ಹತ್ತು ಮನೆಗಳು etc) Christian ರ ಸಮಾಜದ ಆಗು ಹೋಗುಗಳ ಬಗ್ಗೆ , ಡ್ಯಾಮ್ ಕಟ್ಟಿ ಮುಳುಗಿಸಿದಾಗ ಅಲ್ಲಿನ ಜನರಿಗೆ ಬಂದೆರಗಿದ್ದ ಆಪತ್ತು ಗಳು ,ಅವರ ಜೀವದ ತುಮುಲಗಳು, ಮುಳುಗಡೆಯ ಭೀತಿ ,ಶರಾವತಿ ಹಿನ್ನೀರಿನ ಜನರ ಪಾಡು,ಕ್ಷಣ ಕ್ಷಣಕ್ಕೂ ಬದಲಾಗುವ ಅಲ್ಲಿನ ಜನರ ಕಾರ್ಪಣ್ಯಗಳು  ಇವೆಲ್ಲವನ್ನ  ಅರುಂಧತಿ ರಾಯ್ ರ 'ಗ್ರೇಟರ್ ಕಾಮನ್ ಗುಡ್ '  ಗಿಂತಲೂ ಚೆನ್ನಾಗಿ ಅರ್ಥ ಮಾಡಿಸಿದ್ದು ನಾಡಿಸೋಜ  .........ನನಗೆ ದಕ್ಷಿಣ ಕನ್ನಡ ದ ಬಂಟ್ಸ್ ಸಮಾಜ ದ ಬಗ್ಗೆ ,ಜಗತ್ತಿನ ಎಲ್ಲ ಆಗುಹೋಗುಗಳ ಬಗ್ಗೆ, ವೀರಪ್ಪನ್ ,ಕ್ರಪಾಕರ ಸೇನಾನಿ ಇವರೆಲ್ಲರನ್ನು ನನಗೆ ಪರಿಚಯಿಸಿದ್ದು 'ಸುಧಾ'.. .....ಫಾಂಟಮ್ ನಂತಹ ಎಂದು ಮುಗಿಯದ ಚಿತ್ರಕತೆಗಳು, ತಲೆ ಗೊಂಚುರು ಕಾಟ ಕೊಡುವ ಪಧಬಂಧ.,ಮಕ್ಕಳ ಪುಟಗಳು etc etc ..

ನಾನು ಓದಿದ್ದ ಮೊದಲ ಕಾದಂಬರಿ 'ದೌಲತ್' (ಆಗ ನಾನು ನಾಲ್ಕನೇಯದೋ  ,೫ದನೇಯದೋ  ತರಗತಿ ಯಲ್ಲಿದ್ದೆ.) ಇತಿಹಾಸಿಕ ಘಟನೆಗಳನ್ನ ಒಳಗೊಂಡ ಟಿಪ್ಪು,ಹೈದರಾಲಿ ಯರ ಕುರಿತಾದ ಒಳ್ಳೆಯ ಕಾದಂಬರಿ ... ಮಗುವಾಗಿ ಹಾವು ಹುಟ್ಟು ವ (ಮಹಿಳೆಯ ಹೊಟ್ಟೆಯಿಂದ ಹಾವು ತೆಗೆದದ್ದು ನಾನು ನೋಡಿದ್ದೇನೆ, ನಮ್ಮೂರಿನ ಸರಕಾರಿ ಆಸ್ಪತ್ರೆಯಲ್ಲಿ ಇನ್ನೂ ಇದೆ,ಹಾವಿನ ಮೊಟ್ಟೇ ಹೊಟ್ಟೆಯೊಳಕ್ಕೆ ಸೇರಿ.. ) ಒಂದು ರೀತಿಯ ಕತೆ, ಸಿನೆಮಾ ಜೀವನ(movie 'ಫ್ಯಾಶನ್' ಗೆ ಹೋಲುವಂತ್ ದೇ ಒಂದು ಕತೆ ಯ ಎಳೆ ) ಕಿತ್ತೂರಿನ ಚನ್ನಮ್ಮಳ ಕತೆ, ಎಲ್ಲವೂ ನಾನು ಓದಿದ್ದು ಸುಧಾ ದಲ್ಲಿ..,       ನೇಮಿಚಂದ್ರರ ಹ್ಯಾನ ,ಅನೇಕ ಥ್ರಿಲಿಂಗ್ ಅನ್ನಿಸುವ ಪತ್ತೇದಾರಿ ಕತೆಗಳು (ಗುಪ್ತಚರ ವಿಭಾಗಕ್ಕೆ ಸಂಬಂಧಿಸಿದ್ದು ),ಡಬ್ಲ್ ಕ್ರಾಸ್ ಎನ್ನುವ ಶಬ್ಧ ಪರಿಚಯ ವಾಗಿದ್ದೆ ಅಲ್ಲಿಂದ..
ಈಗ ಕೆ ಎನ್ ಗಣೇಶಯ್ಯ.. ಇತ್ತೀಚೆಗೆ ಬರುತ್ತಿರುವ ಕೆ ಎನ್ ಗಣೇಶಯ್ಯನವರ ಇತಿಹಾಸಿಕ, ತಾರ್ಕಿಕ ಕಾದಂಬರಿಗಳು ....ವಾವ್ ...ನಿಜಕ್ಕೂ ನನಗೆ ಸ್ವಾಮಿ ವೆಂಕಟೇಶ್ವರನಲ್ಲಿ ಬುದ್ಧಕಾಣುತ್ತಿದ್ದಾನೆ..
ಅದ್ಭುತ ಎನ್ನಬಹುದಾದ ಕ್ಲಾಸಿಕ್ ಗಳು ಅವು ..ನಿಜಕ್ಕೂ ಅಲ್ಲಿನ ತರ್ಕಗಳು ನಮ್ಮ ಧೀ ಶಕ್ತಿಗೆ ಒಳ್ಳೆಯ ಕಸರತ್ತು ಕೊಡುತ್ತಿದೆ..ಥ್ಯಾಂಕ್ ಯೂ ಗಣೇಶಯ್ಯನವರೇ..

ಓಹ್ ತುಂಬಾ ಸುದ್ದಿ ಹೇಳಿಬಿಟ್ಟೆ ಅಲ್ಲವ?.............'ಓ ಮನಸೆಯನ್ನ' ನೆನಪು ಮಾಡಿಕೊಂಡಾಗ ಇವೆಲ್ಲ ನನ್ನ ಮನದಲ್ಲಿ ಹಾಗೆ ತೇಲಿ ಬಂದಿದ್ದು  ಸುಳ್ಳಲ್ಲ.

ನಾನು, ಪಾಚು ಪ್ರಪಂಚ ಬ್ಲೋಗಿನ ಪಾಚು ಅಣ್ಣ , ಮಲೆನಾದ ಕರಾವಳಿ ಬ್ಲೋಗಿನ ಭಟ್ಟ, ಹುಡುಕಾಟದ ಯಜ್ಞೇಶ್ ಮತ್ತು ಹಲವಾರು ಸೇರಿ ಒಂದೆಡೆ ಕುಳಿತು ವಿಸ್ಮಯ ಕಾರ್ಯ ಕ್ರಮ ನೋಡಿದ್ದು ಒಂದು ವಿಶೇಷ..ಕನ್ನಡ ದ ಒಳ್ಳೆಯ ನಟ 'ಸುದೀಪ್' ತುಂಬಾ ಚೆನ್ನಾಗಿ ಹಾಡು ಹೇಳಿ ,ಚಿಂತನಾಶೀಲ, ಸಮಯೋಚಿತ ಮಾತುಗಳನ್ನು ಆಡಿದ್ದರು.. ನಾನು ಕೇವಲ ೧.೫ ಘಂಟೆ ಮಾತ್ರ ಇದ್ದೇ.. ಮೀಟಿಂಗ್ ಮಿಸ್ ಮಾಡುವಂತೆ ಇರಲಿಲ್ಲ ,ಸುದೀಪ್,ರವೀ ಎದ್ದು ಹೊರಟ ಮೇಲೆ ನನ್ನ ಡೆಸ್ಕ್ ಗೆ ಬಂದು  'ಜಸ್ಟ್ ಮಾತ್ ಮಾತಲ್ಲಿ' ಎಂದು ಹಾಡಿಕೊಳ್ಳುತ್ತ ಮತ್ತೆ ಕೆಲಸ ಶುರು ಮಾಡಿಕೊಂಡೆ....

ಚಿತ್ರ ಕೃಪೆ;ಅಂತರ್ಜಾಲ

8 ಕಾಮೆಂಟ್‌ಗಳು:

Sri ಹೇಳಿದರು...

ಕನ್ನಡದ ಅಮಿತಾಭ್ ಖ್ಯಾತಿಯ ಸುದೀಪ್ ????
Excuse me ... !!! ???? !!!!

Shweta ಹೇಳಿದರು...

Srigaaru ,
Ravi belagere has introduced him to us saying ಕನ್ನಡದ ಅಮಿತಾಭ್...reason why I have mentioned ..

thanks for reading !!:):)

Sri ಹೇಳಿದರು...

ಓತಿಕೇತಕ್ಕೆ ಬೇಲಿ ಸಾಕ್ಷಿನ .. ಸರಿ ಹೋಯ್ತು

Shweta ಹೇಳಿದರು...

??????!!!!

Sri ಹೇಳಿದರು...

ನಿಮ್ಮ ಪ್ರಶ್ನಾರ್ಥಕ ಚಿಹ್ನೆಗಳ ಅರ್ಥ ಸ್ವಲ್ಪ ಸ್ಪಷ್ತೀಕರಿಸುತ್ತೀರಾ ಪ್ಲೀಸ್ ...

Shweta ಹೇಳಿದರು...

ಅರ್ಥ ಈಸ್ಟೇ ,ಅಭಿಪ್ರಾಯಗಳಿಗೆ ಸ್ವಾಗತ ..ಆದರೆ ಇವೆಲ್ಲ ಅವರವರ ಭಾವಕ್ಕೆ ಭಕುತಿಗೆ ಬಿಟ್ಟಿದ್ದು...
ಸುದೀಪ್ ಒಳ್ಳೆಯ ನಟ ನೆನ್ನುವದರಲ್ಲಿ ಸಂದೇಹವೇ ಇಲ್ಲ.In fact I like his acting .

Sri ಹೇಳಿದರು...

ಒಪ್ಪಿದೆ. ಅವರವರ ಭಾವಕ್ಕೆ ಬಿಡುವುದು ಸೂಕ್ತ. ಹಾಗಾಗಿಯೇ ನನ್ನ ಅನಿಸಿಕೆ - ಈ ರೀತಿ ನಮ್ಮ ಭಾವನೆ ಗಳನ್ನ ಇನ್ನೊಬ್ಬರ ಮೇಲೆ ಹೇರುವುದು ಸೂಕ್ತವಲ್ಲ.
ಭಾವನೆಗಳು ಹಂಚಿಕೊಂಡಳಲ್ಲಿ ಮಧುರ. ಹೇರಿಸಿಕೊಂಡಲ್ಲಿ ಬರ್ಬರ :)
ಅಲ್ಲವೇ

ಜಲನಯನ ಹೇಳಿದರು...

ಶ್ವೇತ, ನಿಮ್ಮ ಮಯೂರ, ಸುಧಾ, ವಿಶೇಷಾಂಕ ಮುಂತಾದುವುಗಳ ಅಭಿರುಚಿ ಥೇಟ್ ನನ್ನ ಥರದ್ದೇ...ನಮ್ಮದು ಹಳ್ಳಿಯಲ್ಲಿ ದಿನಸಿ ಅಂಗಡಿ ಇತ್ತು, ಸಾಮಾನು ಸರಂಜಾಮು ಪೊಟ್ಟಣ ಕಟ್ಟಲು ಬೀಳುತ್ತಿದ್ದ ರಾಶಿ ಹಳೇ ಪೇಪರ್ ಮತ್ತು ಮ್ಯಾಗಜಿನ್ಸ್ ಕೊಡವಿಕೊಂಡು ರವಿವಾರದ ಪ್ರಜಾವಾಣಿ, ಸುಧಾ, ಮಯೂರ ಎಲ್ಲ ಕಥೆಗಲನ್ನ ಜಾಲಾಡುತ್ತಿದ್ದೆ...ಹಹಹ...ನೆನಪಿನ ಪುಟ ತಿರುವಿಹಾಕುವಂತೆ ಮಾದಿದೆ ನಿಮ್ಮ ಲೇಖನ.....
ವ್ರ‍ಿತ್ತಿ ಬೇರೆ ಪ್ರವೃತ್ತಿ ಬೇರೆ...ನಿಜ ..ನಾನು aquatic animal scientist, ಮನೆಯಲ್ಲಿ ಮತ್ತು ಮಾತೃಭಾಷೆ ಉರ್ದು...ಆದರೂ ನನ್ನ ಹುಟ್ಟಿದಂದಿನಿಂದ ಕನ್ನಡದ ನಂಟು-ನೆಂಟು.. ಮುಂದವರಿಯಲಿ ನಿಮ್ಮ ಲೇಖನ ಕೃಷಿ..

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...