ನಾನೇರಿದ ಎತ್ತರಕ್ಕೆ ನೀನೂ ಏರಬಲ್ಲೆಯಾ ?
ಹಿಮಾಲಯ ಸೇರ್ಬೇಕು ಅನ್ನೋ ಮನಸ್ಸಾಗಿದೆ ಕಣೋ , ಬೇಗ ಹಿಂದಿರುಗಿ ಬರುವ ಯೋಚನೆಯೂ ಇಲ್ಲಾ...ಆ ಮಂಜಿನಲ್ಲಿ ಬೆಚ್ಚಗೆ ಹೊದ್ದು ಕುಳಿತುಕೊಳ್ಳುವ ಇರಾದೆಯೇನು ಇಲ್ಲ. 25-30ಕ್ಕೆ ವಾನಪ್ರಸ್ಥವಾ ಎನ್ನಬೇಡ... ಆ ಬಿಳಿಯ ಹಿಮದಲ್ಲಿ ಮುಳುಗಿ ,ಭಾನುವಿನುದಯ ಕಾಯುತ್ತಾ ಕುಳಿತಿರಲೆಷ್ಟು ಮುದ.
ಜೀವ ಕೈಬೀಸಿ ಕರೆಯುತ್ತದಲ್ಲ? ತಲೆ ತುಂಬಾ ಹಿಮಸೋಕಿ ,ಮೈತುಂಬಾ ಹಿಮಗಾಳಿ ಆವರಿಸಿ 'ಮನೆಯೇ ದೇಗುಲ' ಅನ್ನುವ ಫೀಲ್ ಕೊಡುತ್ತದಲ್ಲ ,ಅಲ್ಲಿದೆ ಜೀವವನ್ನ ನೋಡುವ ಬಗೆ ...ಜೀವನವನ್ನ ಪ್ರೀತಿಸುವ ಕಲೆ . ಸುಯ್ಯೋ ಭರ್ರೋ...ಎಂದು ಬೀಸುವ ಗಾಳಿಯೇನಿರದೆಂದು ಭಾವಿಸಿದ್ದೆ .. ಆದರೆ ನಮ್ಮ ಮನೆಯಿದುರಿನ ಮಲ್ಲಿಗೆಯ,ಸಂಪಿಗೆಯ ಕಂಪು ಹೊತ್ತು ತರುವ ತಂಗಾಳಿಯಂತು ಅಲ್ಲ ಅದು ಬಿಡು. ಕೊರೆಯುವ ಚಳಿಯಲ್ಲಿ ಹೇಗಿರುವದೆನ್ನುವ ಚಿಂತೆ ಬಿಡು ...ಬೆಚ್ಚನೆ ಕೋಟುಗಳಿದ್ದಾವಲ್ಲ .. ತೊಟ್ಟ ನಿಲುವಂಗಿಗಿಂತ ಹೆಚ್ಚು ಬೆಚ್ಚಗಿಡುವ ಭಾವಗಳಿದ್ದಾವಲ್ಲ! ಉದ್ದನೆಯ ಬೆಚ್ಚನೆಯ ವಸ್ತ್ರ ತೊಟ್ಟು ಮೈ ಪೂರ್ತಿ ಅಂಗಿಯ ಒಳ ಹೊಕ್ಕಿಸಿ , ನಮಗೇ ಅರಿವಿಲ್ಲದಂತೆ ದಿವ್ಯಲೋಕದಲ್ಲ್ಲಿ ಮುಳುಗುವ ಬಗೆ ಅದು, ಮುಳುಗಬಾರದೆಂದು ಓಶೋ ಎಲ್ಲೋ ಒಂದು ಕಡೆ ಹೇಳುತ್ತಾರೆ ,ತೇಲಬೇಕಂತೆ .. (ನಶೆಯಿಂದಲೋ ,ಉಷೆಯಿಂದಲೋ ಅವರಿಗೇ ಗೊತ್ತು!)
(ಕೈಲಾಸಕ್ಕೆ ಹತ್ತಿರವಂತೆ , ಪಾರ್ವತೀ ಪರಮೇಶ್ವರರನ್ನ ಒಮ್ಮೆ ಭೇಟಿ ಮಾಡಬೇಕು , ಜಗತ್ತಿನ ತಂದೆ ತಾಯಿಯರಲ್ಲವ ,ಕೇಳಿದ್ದೆಲ್ಲ ಕೊಡುವ ಆ ಪರಶಿವಗೆ, ಶಿವೆಗೆ ನಮಿಸಬೇಕು ,ಯಾಕೆ ಗೊತ್ತಾ ಇಂತಹ ಚಳಿಯಲ್ಲೂ ಬೆಚ್ಚನೆಯ ಉಡುಗೆಯಿಲ್ಲದೇ ಇಷ್ಟು ದಿನ ‘ಅದು ಹ್ಯಾಗೆ ಇದ್ಯಪ್ಪ ಶಿವ’ ಎನ್ನುವ ತರದ ಒಂದು ಚಿಕ್ಕ ಸಂದರ್ಶನ ಮಾಡಿ ಕಾಪೀ ರೈಟ್ ನಿಂಗೆ ಕೊಡ್ತೀನಪ್ಪ...)
ಬದುಕುವದಕ್ಕೊಂದು ಕೆಲಸ, ಕೆಲಸವಾದ ನಂತರ ಸಂಸಾರ ,ತಲೆಯ ಮೇಲೊಂದು ಸೂರು ,ಹಾಹಾ ... ಎಷ್ಟೋ ನನ್ನ ಸ್ನೇಹಿತರಿಗೆಲ್ಲ ಬರುವದು ಇಂತಹ ಸೆಟ್ಲ್ ಆಗುವಂತಹುದೇ ಉಪಾಯಗಳು ... ಓಹೋ ನೀನು ಭಿನ್ನಾನ ಅಂತ ಕೇಳ್ತೀಯಲ್ಲಾ, ಹಮ್...ಅಲ್ಲ. ಮನೆಯಾಯ್ತು ,ಮದುವೆ ಆಯ್ತು ಮಕ್ಕಳಾಯ್ತು ,ಇನ್ನೇನಪ್ಪ ನಿನ್ನ ಜೀವನ ಅಂತ ಮೊನ್ನೆ ಒಬ್ಬ ಸ್ನೇಹಿತ ಮತ್ತೊಬ್ಬ ಸ್ನೇಹಿತನಿಗೆ ಹೇಳುತ್ತಿದ್ದ,... ಅಲ್ಲೇ ಇದೆ ಉತ್ತರ ನೀನು ಹುಡುಕಿಕೊಳ್ಳಬೇಕಷ್ಟೇ . 'ಎಲ್ಲೋ ಹುಡುಕಿದೆ ಇಲ್ಲದ ದೇವರ, ಕಲ್ಲು ಮಣ್ಣಿನ ಗುಡಿಯೊಳಗೆ…' ಈ ಸ್ಥಿತಿಯಲ್ಲಿ ನಾವಿದ್ದೇವಲ್ಲ,ತೀರಾ ಸೆಂಟೀ ಎನ್ನಬೇಡ..
ಕಾಡು ಕರೆಯುವ ವಯಸ್ಸೇನೂ ಅಲ್ಲ,ಯಾಕೋ ಮನೆಯಿಂದ ಒಂದಿಷ್ಟು ದಿನದೂರವಿರ ಬೇಕೆನಿಸಿದೆ....ಗಿಜಗುಡುವ ಗಲಾಟೆಯಿಂದ ದೂರ ಸಾಗಬೇಕೆನಿಸಿದೆ. ತಣ್ಣನೆಯ ಗಾಳಿಯನ್ನ ಉಸಿರ ತುಂಬಾ ತುಂಬಿಸಿಕೊಳ್ಳಬೇಕೆನಿಸಿದೆ. ಜೀವಕ್ಕಾದ ತಲ್ಲಣ ತಣಿಸಬೇಕಿದೆ. ಹಾಂ, 'ನಾನೇರಿದ ಎತ್ತರಕ್ಕೆ ನೀನು ಏರಬಲ್ಲೆಯಾ?' ಎನ್ನುವ ಸವಾಲೊಡ್ಡಿ ಗಟ್ಟಿ ನಿಂತಿದೆಯಲ್ಲ ಹಿಮಾಲಯ,ಅದು ನಂಗೊಂದು ಸ್ಪೂರ್ತಿ .... ಆವತ್ತು ನೀನೂ ಹಾಗೆ ಹೇಳಿದ್ದೇಯಲ್ಲ, ಹ್ಮ್ ..ನಿನ್ನ ಮಟ್ಟಕ್ಕೆ ಏರುವಷ್ಟು ಸುಲಭವಲ್ಲವೆಂದು ಎಂದೋ ಗೊತ್ತಿತ್ತು ನನಗೆ .... ಪ್ರಯತ್ನಿಸುವದರಲ್ಲಿ ತಪ್ಪೇನೂ ಇಲ್ಲ ಅಲ್ಲವ? ನಾನು ನಿನಗಿಂತ ಚಿಕ್ಕವಳು ಎನ್ನುವ ಸಮಝಾಯಿಸಿ ಇದೆಯಲ್ಲ. ಒಬ್ಬಳೇ ಹೇಗೆ ನಿಭಾಯಿಸುತ್ತೇನೋ ಎನ್ನುವ ಭಯವ..?ಆ ಹಿಮಾಲಯದಲ್ಲಿ ನನ್ನಂತ ಹಲವು ಚಾರಣಿಗರಿದ್ದಾರಲ್ಲ.ಹಾಗೂ ಒಂದು ದಿನ ಆಗುವದೇ ಇಲ್ಲ ಎಂದು ಅನ್ನಿಸಿದ ದಿನ ತಿರುಗಿ ಬಂದು ಬಿಡುತ್ತೇನೆ... ಅಲ್ಲಿಯವರೆಗೆ ಮನೆಯ ಕಡೆ ಜೋಪಾನ..!
ಗುರುವಾರ
ಮಂಗಳವಾರ
ನನ್ನ ಅಮ್ಮನ ಹುಟ್ಟು ಹಬ್ಬ ಇವತ್ತು...
'ಸ್ಕೂಲ್ ಇಂದ ಬಂದ ಕೂಡಲೇ ಪಾಟಿಚೀಲ ಸರಿ ಇಡೊ, ನಾಳೆ ಹೋಪಕಾರೆ ,ಆ ಪುಸ್ತಕ ಎಲ್ಲಿ ,ಈ ಪಟ್ಟಿ ಎಲ್ಲಿ ಅಂದ್ರೆ ಸುಮ್ನೀರ್ತ್ನಿಲ್ಲೇ. ಯೂನಿಫಾರ್ಮ್ ತೆಗೆದು ಬೇರೆ ಅಂಗಿ ಹಾಕ್ಯ ..ಕೈಕಾಲು ತೊಳ್ಕ ಬಾ ಬೇಗ , ತಿಂಡಿ ತಿನ್ನಲಕ್ಕು. ರೂಮ್ ಸೇರಿಬಿಟ್ರೆ ಹಂದಾಡ್ಸಲೆ ಆಗ್ತಿಲ್ಲೆ.'( ಇದೆಲ್ಲ ನನಗೆ ಬೈದ ಹಾಗೆ)
ಅಮ್ಮಾ ,ನೀ ನಂಗೆ ಎಷ್ಟೆಲ್ಲಾ ಬೈತೆ ಅಲ್ದ..ಅಪ್ಪಾಂಗೆ ಹೇಳಿಕೊಡ್ತೆ ನೋಡು ..ಟೂ ಟೂ ನಿಂಗೆ ...ನಾ ಕಡಿಗೆ ತಿಂಡಿ ತಿನ್ತೆ ..ಈಗ ಬೇಡಾssssss
೨0 ವರ್ಷ ನಮ್ಮಮ್ಮ ಇದನ್ನೇ ಹೇಳಿದ್ದು , ನಾನು ಹೇಳಿದ್ದನ್ನ ಕೇಳಿಸಿಕೊಳ್ಳದೇ ಮತ್ತೆ ಅದನ್ನೇ ಮಾಡ್ತಾ ಇದ್ದಿದ್ದು..
ಇವತ್ತು ಮಾತ್ರ ಬೇಗ ಎದ್ದು ಅಮ್ಮಂಗೆ Happy birthday amma ಎಂದಿದ್ದೆ....
ಅಮ್ಮ,ಎಂತಾರು ಸ್ವೀಟ್ ಮಾಡು ,ಹೊಸ ಡ್ರೆಸ್/ ಸೀರೆ ಹಾಕಿಕೊಂಡು ದೇವಸ್ಥಾನಕ್ಕೆ ಹೋಗು ,ವರ್ಷಕ್ಕೆ ಒಂದು ಸಾರೇಯಾದರು ದೇವ್ರಿಗೆ ಕೈ ಮುಗಿ ,etc………….
ಅಮ್ಮ ಹೇಳೋ ಎಲ್ಲ ಡೈಯಲೋಗ್ ಅಮ್ಮನ ತರ ನಾನೇ ಹೇಳಿ ಬಿಟ್ಟಿದ್ದೆ...
ಹಾಹಾ ಅಮ್ಮ ,ನಾನು ,ಅಪ್ಪ ಎಲ್ಲರೂ ಫುಲ್ ಕುಶ್!
Wish you a very happy birthday amma..Love you soomuch.

ಪರಿಮಳವೆಂದರೇ ವಾಸನೆ ಇಲ್ಲದ್ದು..!
ಪರಿಮಳವೆಂದರೆ ವಾಸನೆ ಇಲ್ಲದ್ದ ? ಹಾಂಗಂದರೆ ಉತ್ಪ್ರೇಕ್ಷೆ ಏನಿಲ್ಲವಲ್ಲ?ಏಕೆಂದರೆ ಪರಿಮಳೆವೆಂದರೆ ಹಿಗ್ಗುವ ಮೂಗಿನ ಹೊಳ್ಳೆ ,ವಾಸನೆ ಎಂದರೆ ಸಾರಾಸಗಟಾಗಿ ಬೇಡವೇ ಬೇಡ ಎಂದು ತಿರಸ್ಕರಿಸುವದು ಸುಳ್ಳಲ್ಲ... ಅಲ್ಲವ?
ಜಾಜಿ ಮಲ್ಲಿಗೆಯ ಕಂಪು ಇದು ,ಕೆಂಡ ಸಂಪಿಗೆಯ ಕಂಪು ಇದು ,ನೆಹ್ರು ಗುಲಾಬಿ ಇದು,ಇದು ಕೇದಿಗೆಯದೇ ಪರಿಮಳ ,ಕಣ್ಣು ಕಟ್ಟಿದರೂ ಸಲೀಸಾಗಿ ಹೇಳಿಬಿಡಬಹುದಲ್ಲ? ಮೂಗಿನ ಹತ್ತಿರ ಶ್ರೀ ಗಂಧದ ತುಂಡು ಹಿಡಿದು. ಇದು ಸಾಗುವಾನಿ ಎಂದೋ,ಬೀಟೆಯದೆಂದೋ ಹೇಳಿದರೆ ಸುಮ್ಮನೇ ಬಿಟ್ಟೀತೆ ನಿಮ್ಮ ಮೂಗು ?ನನಗೆ ಪರಿಮಳ ಪರಿಚಿತವೆನ್ನುತ್ತೆ...ಅಲ್ಲವ? ಪರಿಮಳ ವನ್ನು ಡಿಫೈನ್ ಮಾಡಬಹುದು,ಹಲವು ರೀತಿಯಲ್ಲಿ ವ್ಯಾಖ್ಯಾನಿಸಬಹುದು ,,, ಪರಿಮಳಕ್ಕೆ ಸುಗಂಧ ,ಸುವಾಸನೆ, ಕಂಪು ಎನ್ನುತ್ತದಲ್ಲ ಸಂಸ್ಕೃತ ,ಕನ್ನಡ ಭಾಷೆಗಳು ...! ಸು ಎಂದರೆ ಒಳ್ಳೆಯ,ಶುಭ,ಎಂದೆಲ್ಲ ಅರ್ಥವಿದೆ ಸಂಸ್ಕೃತದಲ್ಲಿ. ಆದರೆ ನನಗೆ ಈಗಲೇ ತೋರಿಸು ಪರಿಮಳವನ್ನ ಎಂದರೆ? ಪರಿಮಳವನ್ನ ತೋರಿಸೋಕಂತು ಆಗೋಲ್ಲ..(ಪರಿಚಿತರಲ್ಲೆಲ್ಲಾದರೂ ಪರಿಮಳ ಎನ್ನುವವರಿದ್ದರೆ ಅದು ಬೇರೆಯ ಪ್ರಶ್ನೆ!)ಅನುಭವಿಸಿಯೇ ಅರಿಯಬೇಕು ...
ಪಂಚೇಂದ್ರಿಯಗಳಾದ ,ಮೂಗು,ನಾಲಿಗೆ,ಕಣ್ಣು ,ಕಿವಿ, ಚರ್ಮ ಗಳ ನಡುವೆ ಒಂದು ಸಾರೇ ಶೀತಲ ಕಲಹವಾಯಿತಂತೆ, ಎಲ್ಲವಕ್ಕೂ ತಾನು ಮೇಲೆಂಬುದನ್ನು ತೋರ್ಪಡಿಸುವ ಹಮ್ಮು. ತೀರ್ಪುಗಾರರು ನಾರದ ಮುನಿ. ಯಾರು ವಿಜಯೀ ಆದರು ಎಂಬುದನ್ನ ಇಲ್ಲಿ ಪ್ರಸ್ತಾಪಿಸುವ ಅಗತ್ಯ ಇಲ್ಲ. ಆದರೆ ಆ ಸ್ಪರ್ಧೆಯಿಂದ ಅವು ಕಲಿತ ಪಾಠ ಮಾತ್ರ ಶ್ಲಾಘನೀಯ.. ಸ್ಪರ್ಧೆ ಮುಗಿದ ನಂತರ ಒಂದೊಂದು ಇಂದ್ರೀಯವೂ ಮುಖ್ಯವಾದುದು ಎಂಬುದು ನಾರದ ಮುನಿಗಳ ತೀರ್ಪಾಗಿತ್ತು..!
ಆದ್ದರಿಂದ ನಮ್ಮ ಪರಿಮಳ ವನ್ನ ಆಸ್ವಾದಿಸುವ ಮೂಗು ತನಗೆ ಸಿಕ್ಕ ಪ್ರಾಮುಖ್ಯತೆ ಇಂದ ಚೂರು ಕುರುಬಿದ್ದು ಸುಳ್ಳಲ್ಲ... ಎಷ್ಟೆಲ್ಲಾ ಉಪಮೆಗಳಿದ್ದಾವೆ ಪರಿಮಳವನ್ನ ಉದಾಹರಿಸಿ ..ಒಂದು ನನ್ನ ನೆನಪಿಗೆ ಬಂದಿದ್ದು ‘ಕತ್ತೆ ಬಲ್ಲುದೇ ಕಸ್ತೂರಿ ವಾಸನೆ’ ಎಂಬ ನುಡಿ .ಕೆಲವೊಂದು ಸಾರೇ ಪೂರ್ವಾಗ್ರಹ ಪೀಡಿತರಾಗಿ ತಮ್ಮ ಮನಸಿಗೆ ತೋಚಿದ್ದನ್ನ ಬರೆಯುವವರಿಗೆ,ನುಡಿಯುವವರಿಗೆ,ವಸ್ತು ಒಂದರ ಪ್ರಾಮುಖ್ಯತೆ ಅರಿಯಲು ಶಕ್ತನಲ್ಲದವಗೆ ಈ ಉಪಮೆ ಉತ್ತಮ ಬಲಕೊಡುತ್ತದೆ..
ಪರಿಮಳ ಬೀರುವ ಕುಸುಮಗಳು ,ಮನಕ್ಕೆ ತಂಪನ್ನೀಯುವದಷ್ಟೆ ಅಲ್ಲ ಆರೋಗ್ಯವನ್ನು ಸುಧಾರಿಸುತ್ತದಲ್ಲ...?ಅದಕ್ಕೆಂದೇ ಪರಿಮಳ ಚಿಕಿತ್ಸೆ ಇದೆಯಲ್ಲಾ... ಅಂದಿನ ರಾಜರ ಕಾಲದಲ್ಲಿ ರಾಜ-ರಾಣಿಯರ ಸ್ನಾನದ ಕೊಳಗಳಿಗೆ ,ಮಲ್ಲಿಗೆ ,ಸಂಪಿಗೆ,ಜಾಜಿ,ಸುಗಂಧರಾಜಗಳಂತ ಪರಿಮಳ ಭರಿತ ಹೂಗಳನ್ನ ಹಾಕುತ್ತಿದ್ದರಂತೆ ,ದೇಹಕ್ಕಾದ ದಣಿವು ನಿವಾರಿಸಿ ,ಮನಕ್ಕೆ ಚೈತನ್ಯ ತುಂಬುವ ಶಕ್ತಿ ಇದೆ ಎಂಬುದು ಅವರ ಉದ್ದೇಶ . ದೇವರನ್ನ ನೆನೆಯುವ ಮನ ತಂಪಾಗಿರಲಿ ಎಂದು ಹಚ್ಚುವ ಆಗರ ಬತ್ತಿ,ಪೂಜಿಸಿದ ಮನ ಸದಾ ಸಂತಸದಿಂದ ಇರಲೆಂದು ಸೇವಿಸುವ ಪಚ್ಚಕರ್ಪೂರವನ್ನು ಹಾಕಿದ ತುಳಸಿಯ ತೀರ್ಥ. ಒಂದೆರಡು ದಿನ ಸ್ನಾನ ಮಾಡದೇ ಇದ್ದರೂ ನಡೆದೀತೆಂದು ಉಪ್ಯೋಗಿಸುವ ಅತ್ತರು,ಪರ್ಫ್ಯೂಮ್ ,ಡಿಯೊ,....ಎಲ್ಲ ಪರಿಮಳದ ಉತ್ಪನ್ನಗಳೇ, ಎಲ್ಲವನು ವಿಷ್ವಲೈಸ್ (visualize ) ಮಾಡುವ ಇಂದಿನ ಯುಗದಲ್ಲಿ ಪರಿಮಳ ವೆಂದರೆ ರೆಕ್ಸೋನ,ಚಾರ್ಲಿ,ಎಂಬೆಲ್ಲಾ ತರಾವರಿ ಪರಿಮಳಗಳು , ವಾಸನೆ ಎಂದರೆ ಗಬ್ಬೆದ್ದು ನಾರುವ ಚರಂಡಿ ನೆನಪಿಗೆ ಬರುತ್ತಾವಲ್ಲ... ಯಾರಿಗಾದರೂ ಮಹಾಭಾರತದ ಯೋಜನಗಂಧಿ ನೆನಪಿಗೆ ಬರುತಾಳ? ಬಂದಿದ್ದರೆ, ನಿಜವಾಗ್ಲೂ ಗ್ರೇಟು ಕಣ್ರೀ ನೀವು .... ದುಡ್ಡಿಗೋ,ಒಡವೆಗೂ,ರಾಜ್ಯಕ್ಕೋ,ಹೆಣ್ಣಿಗೋ,ಹೊಟ್ಟೆಗೆಂದೋ ,ಯುದ್ದಗಳಾಗಿವೆ , ರಕ್ತಪಾತಗಳು ಆಗುತ್ತಲೇ ಇವೆ...,ಆದರೆ ಪರಿಮಳಕ್ಕಾಗಿ ಆಗಿಯೇ ಇಲ್ಲ ಎಂದು ನನ್ನೆಲ್ಲ ತಿಳುವಳಿಕೆಯನ್ನ ಒಟ್ಟಿಗಿತ್ತು ಹೇಳುತ್ತೇನೆ.. ಹಾಂ ವಾಸನೆಯಿಂದ ಆಗಿವೆ ಗೊತ್ತಲ್ಲ, ಕಾರ್ಬನ್ ಡೈಯಾಕ್ಸೈಡ್,ಕ್ಲೋರೋಫಾರ್ಮ್ ,ಸೈಯನೈಡ್ ಎಲ್ಲ ಬದಿಗಿಡಿ, ಪ್ರಾಣವನ್ನೇ ಕಿತ್ತಿದ್ದಾವೆ..
ಈಗ್ಲಾದ್ರೂ ಒಪ್ಕೋ ತೀರಾ? ಪರಿಮಳವೆಂದರೆ ವಾಸನೆ ಇಲ್ಲದ್ದು, ವಾಸನೆ ಅಲ್ಲದ್ದು…..ಪೋಲೀಸ್ ರ ನಾಯಿಯನ್ನ ಬಿಟ್ಟೇಬಿಟ್ಟಿದ್ದೆ..ಅದಕ್ಕೆ ಪರಿಮಳ ವಾಸನೆ ಎರಡೂ ಒಂದೇ! ಬಿಟ್ಟುಬಿಡಿ ಅದರಪಾಡಿಗದನ್ನ !!

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಯಾಕ ಮಾಡುತಿ ಲೋಕದ ಚಿಂತಿ?
ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...
-
ಆಗೆಲ್ಲ ನನಗೆ ೧೨-೧೩ ವರುಷಗಳು .ಆಗೆಲ್ಲ ನಮ್ಮ ಮನೆಗೆ ಹಳೆಯ ಪೇಪರ್ ಗಳನ್ನು (ರದ್ದಿ ಪೇಪರ್ )ಕೊಳ್ಳಲು 'ಕಾಫಿ ಸಾಬಣ್ಣ ' ಬರುತ್ತಿದ್ದ..ದೂರದ ದಕ್ಷಿಣ ಕನ್ನಡದಿ...
-
ಕಳೆದದ್ದು ಸಿಕ್ಕಿಲ್ಲಾ ಬ್ರಾಹ್ಮಣ ಯಾರು? ಕೋಟಿ ತೀರ್ಥದ ಕಟ್ಟೆಯ ಮೇಲೆ ಕುಳಿತು ಶ್ರಾಧ್ಧ ಮಾಡುವಾಗ ಭಟ್ಟರು ಯೊಚಿಸುತ್ತಿದ್ದದು ಇದನ್ನೇ.. ಅವರ ಅಪ್ಪನ ಶ್ರಾಧ್ಧ ಮಾಡುವ...
-
ಮಳೆಗಾಲದ ಸಂಜೆ , ಸಮುದ್ರ ನೋಡುವ ಮನಸಾಗಿತ್ತು . ಅಪ್ಪಳಿಸುವ ಅಬ್ಬರದ ಅಲೆಗಳಿಲ್ಲ, ಅಲೆಗಳ ಅಳಲ ಕೇಳುವ ಬಂಡೆಗಳೂ ಇಲ್ಲ ತೇಲುವ ಹಡಗಿನ ಲಂಗರುಗಳಿಲ...