ಎಲ್ಲ ಕಡೆ ಕತ್ತಲು, ಆಕಾಶದಲ್ಲೆಲ್ಲ ಕರಿಮೋಡ, ಜಿಟಿ ಜಿಟಿ ಮಳೆ ಥೇಟ್ ನಮ್ಮೂರಂತೆಯೇ ಇದೆ ಈದಿನ .
ಮಳೆಗಾಲಕ್ಕೆ ಮಳೆಗಾಲವೇ ಸಮ.
ಸುಮ್ಮಗೆ ನನ್ನ
ಪಾಡಿಗೆ ಕೂತಿದ್ದೆ ನೋಡಿ ಎಲ್ಲಿತ್ತೋ ಆ ಮಳೆಯ ಮೋಡಗಳ ಗಮನ, ಥಟ್ಟನೇ ನಮ್ಮ ಮನೆಯ ಸುತ್ತ ಇಣುಕಿ ನೋಡಿದ್ದೇ ನನ್ನ
ಈಗಿನ ಖುಷಿಗೆ ಕಾರಣ.
ಮಳೆ ಒಂದು
ವಿಸ್ಮಯ. ಮಳೆ ಮೊದಲ, ಮೋಡ ಮೊದಲ ಅನ್ನುವ
ಪ್ರಶ್ನೆಯನ್ನೂ ಹುಟ್ಟು ಹಾಕೀತು, ಮೊದಲ ನೋಟಕ್ಕೆ ಮೋಡ
ಮೊದಲೆನ್ನಿಸಿದರೂ, ಮಳೆಯ ನೀರಿಂದಲೇ ಅಲ್ಲವ ಮೋಡ. ಆ ಕರಿಮೋಡ ಬೇಧಿಸಿ,ದೊಡ್ಡ ಹನಿಯೊಂದು ಭುವಿ ಸೇರುವ ಹೊತ್ತಿಗೆ ಹಲವು
ಹನಿಗಳಾಗಿ, ಮಳೆಯ ಮುತ್ತುಗಳಾಗಿ,
ಬಿಸಿಯ ಬೇಗೆಯಲ್ಲಿ
ಬೇಯುತ್ತಿರುವ ಈ ಭುವಿಯನ್ನ ಚುಂಬಿಸಿದ್ದು. ಅಷ್ಟೇ ಅಲ್ಲದೇ, ಬಾಯ್ ತೆರೆದು ಕಾಯುತ್ತಿದ್ದ ಆ ಚಿಪ್ಪಿನಲ್ಲಿ ಸೇರಿ
ಸ್ವಾತಿಯ ಮುತ್ತಾಗಿದ್ದು? ಏನೇ ಇರಲಿ, ಸುಮ್ಮಗೆ ತಣ್ಣಗೆ
ಕೂತು ಸೆಖೆಯಿಂದ ಬೇಯುತ್ತಿರುವಾಗ, ಬಿರು ಬೇಸಿಗೆಯ
ಶುರುವಿಗೆ ಬಂದ ಈ ಮಳೆಯಿದೆಯಲ್ಲ ಅದೊಂದು ಅದ್ಭುತ ಲೋಕ ಕಟ್ಟಿಕೊಟ್ಟಿದೆ. ಕಿಟಕಿಯ ಪಕ್ಕದಲ್ಲಿ ಕೂತು ಮಳೆಹನಿಗಳ ಲೆಕ್ಕ
ಬರೆಯುತ್ತಿದ್ದೇನೆ.
ನನ್ನ ಮಟ್ಟಿಗೆ
ಮಳೆಗಾಲವೆಂಬುದು ಒಂದು ಸುಂದರ ಅನುಭವ. ನಿಮ್ಮ ದಣಿವನ್ನ ಅಳಿಸಿಹಾಕುವ ತಾಕತ್ತಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ